ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತೋಳು ತೋಳು ರಂಗ ತೋಳನ್ನಾಡೈ | ಪುರಂದರ ವಿಠಲ | Tolu Tolu Ranga Tolannadai | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ತೋಳು ತೋಳು ತೋಳು ರಂಗ ತೋಳನ್ನಾಡೈ
ನೀಲವರ್ಣದ ಬಾಲಕೃಷ್ಣನೇ ತೋಳನ್ನಾಡೈ ||ಪ||

ಹುಲಿಯುಗುರು ಅರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
ಘಳಿರು ಘಳಿರೆಂಬ ಗೆಜ್ಜೆಲಿ ನಲಿಯುತಾ ತೋಳನ್ನಾಡೈ
ನಿಲುವಿಗೆ ನಿಲುಕದ ಓರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
ಚೆಲುವ ಮಕ್ಕಳ ಮುದ್ದು ಮಣಿಕ್ಯವೇ ತೋಳನ್ನಾಡೈ ||೧||

ಪೂತನಿ ಎಂಬುವಳ ಅಸುವನೆ ಹೀರಿದಾ ತೋಳನ್ನಾಡೈ ಸ್ವಾಮಿ
ಮಾತೆಯ ಪಿತನ ಅಣುಗನ ಮಡುಹಿದಾ ತೋಳನ್ನಾಡೈ
ಮಾತಿಗೆ ಶಿಶುಪಾಲನ ಶಿರ ತರಿದಾ ತೋಳನ್ನಾಡೈ ಸ್ವಾಮಿ
ಶ್ರೀ ತುಳಸಿಯ ಪ್ರಿಯ ನಿತ್ಯ ವಿನೋದಿ ತೋಳನ್ನಾಡೈ ||೨||

ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
ಅರ್ಜುನನ ರಥ ಸಾರಥ್ಯ ಮಾಡಿದ ತೋಳನ್ನಾಡೈ
ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ
ವಜ್ರಪಂಜರ ಪಾಂಡವ ಪ್ರಿಯ ತೋಳನ್ನಾಡೈ ||೩||

ದಟ್ಟಡಿಯಿಡುತಲಿ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ
ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ
ಬಟ್ಟಲಲುಣುವಿಸೆ ನಗುವಾತನೆ ತೋಳನ್ನಾಡೈ  ||೪||

ನಖದಿಂದ ಹಿರಣ್ಯಕನ ಉದರವ ಸೀಳಿದಾ ತೋಳನ್ನಾಡೈ ಸ್ವಾಮಿ
ಸುಖವನಿತ್ತು ಪ್ರಹ್ಲಾದನ ಕಾಯ್ದ ತೋಳನ್ನಾಡೈ
ವಿಕಳಿತಗೆಡಿಸಿದ ಗೋಪಿಯರೆಲ್ಲರ ತೋಳನ್ನಾಡೈ ಸ್ವಾಮಿ
ಸುಖತೀರ್ಥರ ಪತಿ ಪುರಂದರ ವಿಠಲನೆ ತೋಳನ್ನಾಡೈ ||೫||

tOLu tOLu tOLu raMga tOLannADai
nIlavarNada bAlakRuShNanE tOLannADai ||pa||
 
huliyuguru araLele mAgAyigaLaniTTa toLannADai svAmi
GaLiru GaLireMba gejjeli naliyutA tOLannADai
niluvige nilukada OraLa taMdiTTa tOLannADai svAmi
celuva makkaLa muddu maNikyavE tOLannADai ||1||
 
pUtani eMbuvaLa asuvane hIridA toLannADai svAmi
mAteya pitana aNugana maDuhidA tOLannADai
mAtige SiSupAlana Sira taridA tOLannADai svAmi
SrI tuLasiya priya nitya vinOdi toLannADai ||2||
 
sajjana satyake dharmava naDesida tOLannADai svAmi
arjunana ratha sArathya mADida tOLannADai 
lajjegIDAda draupadi kAyda tOLannADai svAmi
vajrapaMjara pAMDava priya tOLannADai ||3||

daTTaDiyiDuthali dharmava naDesida thoLannaaDai svaami
kaTTida karaDiya karuvemdeLeda thoLannaaDai
baTTala haala ollemdu kaaDida thoLannaaDai svaami
baTTalaluNuvise naguvaathane thoLannaaDai ||4||

naKadiMda hiraNyakana udarava sILidA tOLannADai svAmi
suKavanittu prahlAdana kAyda tOLannADai
vikaLitageDisida gOpiyarellara tOLannADai svAmi
suKatIrthara pati puraMdara viThalane tOLannADai ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru