ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಾದಿರಾಜರ ಶ್ರೀಕೇಶವ ಪಂಚರತ್ನ ಕೀರ್ತನೆ | ಕೇಶವ ಜಗದೀಶ | Keshava Jagadeesha | Pancharatna Keerthane | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಶ್ರೀ ಕೇಶವ ಪಂಚರತ್ನ ಕೀರ್ತನೆ 

ಕೇಶವ ಜಗದೀಶ ಸಾಸಿರ ಭಾಸುರಕೋಟಿ ಸಂಕಾಶ 
ವಾಸವಾದಿಗಳ ವಂದ್ಯ ಸೀತಾಪತೆ || ೧ ||

ನಾರಾಯಣ ಸಕಲವೇದ ಪಾರಾಯಣ ಕೃಷ್ಣ |
ನಾರದಾದಿಗಳ ವಂದ್ಯ ಸೀತಾಪತೆ || ೨ ||

ಮಾಧವ ಮಂಗಳಗಾತ್ರ ವೇದವನ್ನೆ ಕದ್ದು ಒಯ್ದ| 
ಆ ಖಳನ ಕೊಂದೆ ಸೀತಾಪತೆ || ೩ ||

ಗೋವಿಂದ ಗೋಕುಲಬಾಲ ಗೋಪಿಯರ ಮನೋಹರ |
ಆದಿ ಕೂರ್ಮಾವತಾರ ಸೀತಾಪತೆ || ೪ ||

ವಿಷ್ಣುವೆ ಯತಿಗಳ ವಂದ್ಯ ಅಷ್ಟಲಕ್ಷ್ಮಿಯರ ನಾಥ |
ದಿಟ್ಟ ವರಾಹರೂಪನಾದ ಸೀತಾಪತೆ || ೫ ||

ಮಧುಸೂದನ ಮಾವನ ವೈರಿ ಯದುಕುಲಕ್ಕೆ ತಿಲಕನಾದ |
ಚೆಲುವನಾದ ಹರಿ ನೀನೆ ಸೀತಾಪತೆ || ೬ ||

ತ್ರಿವಿಕ್ರಮರೂಪನಾಗಿ ತ್ರಿಜಗವನ್ನೆ ಪಾಲಿಸಿದ | 
ವಾಮನರೂಪಿ ನೀನೆ ಸೀತಾಪತೆ || ೭ ||

ವಾಮನರೂಪವ ತಾಳಿ ಆ ಮಹಾಬಲಿಯನ್ನೆ ತುಳಿದು|
ನೇಮದಿ ಕ್ಷತ್ರೇರ ಕೊಂದ ಸೀತಾಪತೆ || ೮ ||

ಶ್ರೀಧರ ನೀನೆಂದೆನಿಸಿ ಶೋಷಿಸಿ ಖಳರನೆಲ್ಲ |
ಜಾನಕಿಯ ತಂದ ರಾಮ ಸೀತಾಪತೆ || ೯ ||

ಹೃಷಿಕೇಶ ನೀನೆಂದು ಋಷಿಗಳು ಸ್ತುತಿಯ ಮಾಡಿ|
ವಸುದೇವಸುತ ಕೃಷ್ಣ ಸೀತಾಪತೆ || ೧೦ ||

ಪದ್ಮನಾಭನೆಂದು ವೇದ ಸಿದ್ಧವಾಗಿ ಪೊಗಳುತಿದೆ |
ಬುದ್ಧಾವತಾರ ಕೃಷ್ಣ ಸೀತಾಪತೆ || ೧೧ ||

ದಾಮೋದರನೆಂದು ನಿಮ್ಮ ದೇವತೆಗಳೆಲ್ಲ ಕರೆಯೆ|
ಆ ಮಹಾಕಲ್ಕ್ಯನಾದ ಸೀತಾಪತೆ || ೧೨ ||

ಸಂಕರುಷಣದೇವ ನಿಮ್ಮ ಕಿಂಕರರು ನಾವೆಲ್ಲರಯ್ಯ |
ಪಂಕಜಾಸನವಂದ್ಯ ರಾಮ ಸೀತಾಪತೆ || ೧೩ ||

ವಾಸುದೇವ ನಿಮ್ಮ ಪಾದಕ್ಕೆ ವಂದನೆಯ ಮಾಡುವೆನಯ್ಯ | 
ದೋಷರಾಶಿ ನಾಶಮಾಡು ಸೀತಾಪತೆ || ೧೪ ||

ಪ್ರದ್ಯುಮ್ನನೆಂದು ಸುರರು ಎದ್ದು ನಿನ್ನ ಪೊಗಳುತ್ತಿರೆ |
ಉದ್ಧಾರಮಾಡಿದ ದೇವಸೀತಾಪತೆ || ೧೫ ||

ಅನಿರುದ್ಧನೆ ಗತಿಯೆಂದು ಅನುದಿನ ನಿನ್ನ ಕರೆಯೆ |
ಅನಿಮಿತ್ತಬಂಧು ಕೃಷ್ಣ ಸೀತಾಪತೆ || ೧೬ ||

ಪುರುಷೋತ್ತಮ ಪುಣ್ಯನಾಮ ಸ್ಮರಿಸುವ ಜನರ | 
ಮನೋಹರುಷ ನೀಡಿದ ರಾಮ ಸೀತಾಪತೆ || ೧೭ ||

ಅಧೋಕ್ಷಜ ಲೋಕಗಳಿಗೆ ಆಧಾರಭೂತನಾಗಿರುವೆ | 
ವೇದವೇದ್ಯ ರಾಮ ಸೀತಾಪತೆ || ೧೮ ||

ನಾರಸಿಂಹ ನರನಿಗೆ ವೇದಗೀತೆಗಳನೆಲ್ಲ |
ಬೋಧನೆಯನ್ನು ಮಾಡಿದ ಸೀತಾಪತೆ || ೧೯ ||

ಅಚ್ಯುತ ವಿಶ್ವಾಮಿತ್ರರ ಅತಿಶಯ ಯಾಗವ ಕಾಯ್ದ |
ಭಕ್ತವತ್ಸಲ ರಾಮ ಸೀತಾಪತೆ || ೨೦ ||

ಜನಾರ್ದನರೂಪನಾಗಿ ಜಾನಕಿಯ ತಂದ |
ಜಾಹ್ನವೀಜನಕ ರಾಮ ಸೀತಾಪತೆ || ೨೧ ||

ಉಪೇಂದ್ರನೆ ಉದ್ಧವಗೆ ಉಪದೇಶವನೆ ಮಾಡಿ|
ಅಪರಿಮಿತಪದವಿ ಕೊಟ್ಟ ಸೀತಾಪತೆ || ೨೨ ||

ಹರಿಹರಿಯೆ ರಕ್ಷಿಸೆಂದು ಹಲವುಕಾಲ ತಪವ ಮಾಡಿ|
ಚರಿಸುವರಿಗೆ ಮೋಕ್ಷವಿತ್ತೆ ಸೀತಾಪತೆ || ೨೩ ||

ರಕ್ಷಿಸಯ್ಯ ಕೃಷ್ಣರಾಮ ರಕ್ಷಿಸಯ್ಯ ಹಯವದನ | 
ಪಕ್ಷಿವಾಹನ ರಾಮ ಸೀತಾಪತೆ || ೨೪ ||

kESava jagadISa sAsira BAsurakOTi saMkASa 
vAsavAdigaLa vaMdya sItApate || 1 ||

nArAyaNa sakalavEda pArAyaNa kRuShNa |
nAradAdigaLa vaMdya sItApate || 2 ||

mAdhava maMgaLagAtra vEdavanne kaddu oyda| 
A KaLana koMde sItApate || 3 ||

gOviMda gOkulabAla gOpiyara manOhara |
Adi kUrmAvatAra sItApate || 4 ||

viShNuve yatigaLa vaMdya aShTalakShmiyara nAtha |
diTTa varAharUpanAda sItApate || 5 ||

madhusUdana mAvana vairi yadukulakke tilakanAda |
celuvanAda hari nIne sItApate || 6 ||

trivikramarUpanAgi trijagavanne pAlisida | 
vAmanarUpi nIne sItApate || 7 ||

vAmanarUpava tALi A mahAbaliyanne tuLidu|
nEmadi kShatrEra koMda sItApate || 8 ||

SrIdhara nIneMdenisi SOShisi KaLaranella |
jAnakiya taMda rAma sItApate || 9 ||

hRuShikESa nIneMdu RuShigaLu stutiya mADi|
vasudEvasuta kRuShNa sItApate || 10 ||

padmanABaneMdu vEda siddhavAgi pogaLutide |
buddhAvatAra kRuShNa sItApate || 11 ||

dAmOdaraneMdu nimma dEvategaLella kareye|
A mahAkalkyanAda sItApate || 12 ||

saMkaruShaNadEva nimma kiMkararu nAvellarayya |
paMkajAsanavaMdya rAma sItApate || 13 ||

vAsudEva nimma pAdakke vaMdaneya mADuvenayya | 
dOSharASi nASamADu sItApate || 14 ||

pradyumnaneMdu suraru eddu ninna pogaLuttire |
uddhAramADida dEvasItApate || 15 ||

aniruddhane gatiyeMdu anudina ninna kareye |
animittabaMdhu kRuShNa sItApate || 16 ||
 
puruShOttama puNyanAma smarisuva janara | 
manOharuSha nIDida rAma sItApate || 17 ||

adhOkShaja lOkagaLige AdhAraBUtanAgiruve | 
vEdavEdya rAma sItApate || 18 ||

nArasiMha naranige vEdagItegaLanella |
bOdhaneyannu mADida sItApate || 19 ||

acyuta viSvAmitrara atiSaya yAgava kAyda |
Baktavatsala rAma sItApate || 20 ||

janArdanarUpanAgi jAnakiya taMda |
jAhnavIjanaka rAma sItApate || 21 ||

upEMdrane uddhavage upadESavane mADi|
aparimitapadavi koTTa sItApate || 22 ||

harihariye rakShiseMdu halavukAla tapava mADi|
carisuvarige mOkShavitte sItApate || 23 ||

rakShisayya kRuShNarAma rakShisayya hayavadana | 
pakShivAhana rAma sItApate || 24 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru