ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದುರ್ಗೆ ಪಾಲಿಸೆ ಮಾತೆ | ಗುರು ಗೋಪಾಲವಿಠಲ | Durge Palise Maate | Gurugopala Vithala


ಸಾಹಿತ್ಯ : ಶ್ರೀ ಗುರು ಗೋಪಾಲ ದಾಸರು (ದಾಸಪ್ಪ ದಾಸರು)
Kruti:Sri Guru Gopala Dasaru


ದುರ್ಗೆ ಪಾಲಿಸೆ ಮಾತೆ| ನಂಬಿದೆ ಬ್ರಹ್ಮಬರ್ಗಾದಿ ಸುರವಿನುತೆ ||ಪ||
ದುರ್ಗಮ ಭವದಿಂದ, ನಿರ್ಗಮಗೈಸು ಹೇ ಭಾರ್ಗವಿ, ಸ್ವರ್ಗಾಪವರ್ಗ ಪ್ರದಾತೆ ||ಅಪ||

ಅಂಬರ ಭೂಮಿ ವಿಹಾರಿ, ಅಷ್ಟಾಯುಧ ದಿವ್ಯಾಂಬರಧಾರಿ ಅಸುರಾರಿ |
ನಂಬಿದೆ ನಿನ್ನ ಪಾದಾಂಬುಜ ಎನ್ನ ಹೃದಯಾಂಬರದಲ್ಲಿಹ ಬಿಂಬವ ತೋರಿಸು
ಎಂಬೆ| ಸುನಿತಂಬೆ ಜಗದಂಬೆ ಶುಭಗುಣ ನಿಕುರಂಬೆ ||೧||

ನಂದಗೋಪನ ಕುಮಾರಿ, ನರಸಿಂಹಾಕ ಮಂದಿರೆ ಸುಜನೋದ್ಧಾರಿ ||
ಇಂದಿರೆ ಎನ್ನಯ ಇಂದ್ರಿಯ ಮನಸ್ಸು ಮುಕುಂದನ ಪದದಲ್ಲಿ ತಂದು ನಿಲ್ಲಿಸು
ಎಂದೆ ಎನ್ನ ತಂದೆ ಇನ್ನು ಮುಂದೆ ನೀನೆ ಗತಿ ಎಂದೆ ||೨||

ಸಿರಿನರಸಿಂಹನ ರಾಣಿ | ವರನೀಲವೇಣಿ ಪರಮ ಕಲ್ಯಾಣಿ | ಗುರುಶ್ರೇಣಿ |
ಪರತರ ಗುರು ಗೋಪಾಲವಿಠಲನ ಚರಣ ಕಮಲದಲ್ಲಿ ಸ್ಥಿರವಾದ ಭಕುತಿಯ
ನೀಡೆ | ನಿನಗೀಡೆ ನಲಿದಾಡೆ ದಯಮಾಡಿ ನೋಡೆ ||೩||

durge pAlise mAte| naMbide brahmabargAdi suravinute ||pa||
durgama BavadiMda, nirgamagaisu hE BArgavi, svargApavarga pradAte ||apa||

aMbara BUmi vihAri, aShTAyudha divyAMbaradhAri asurAri |
naMbide ninna pAdAMbuja enna hRudayAMbaradalliha biMbava tOrisu
eMbe| sunitaMbe jagadaMbe SuBaguNa nikuraMbe ||1||

naMdagOpana kumAri, narasiMhAka maMdire sujanOddhAri ||
iMdire ennaya iMdriya manassu mukuMdana padadalli taMdu nillisu
eMde enna taMde innu muMde nIne gati eMde ||2||

sirinarasiMhana rANi | varanIlavENi parama kalyANi | guruSrENi |
paratara guru gOpAlaviThalana caraNa kamaladalli sthiravAda Bakutiya
nIDe | ninagIDe nalidADe dayamADi nODe ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru