ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಿಂಕರನ ಧ್ವನಿಗೆ ಕೊಡು | ವಿಜಯ ವಿಠಲ | Kinkarana Dwanige | Viajaya Vittala


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಕಿಂಕರನ ಧ್ವನಿಗೆ ಕೊಡು ಮತಿಯನು, 
ಪಂಕಜನಾಭನ ಸೊಸೆಯೇ ಸರಸ್ವತಿಯೇ ||ಪ|| 

ಸಕಲ ವಿದ್ಯಾರಂಭೆ ಕನಕ ಪುತ್ಥಳಿ ಗೊಂಬೆ, 
ವಿಕಸಿತ ಸುಲಲಿತಾಂಬೆ, ಸುನಿತಂಬೆ || 
ನಿಕುರಂಬೆ ಸುರರಂಬೆ ದಂತ ದಾಳಿಂಬೆ, 
ಭಕುತಿಯಲಿ ಕಾಂಬೆ ನಿನ್ನ ನಾಮವನು ಉಂಬೆ ||೧|| 

ಗಂಗೆ ಯಮುನೆ ಉಭಯ ಸಂಗಮೆ ಭಕ್ತಭಯ 
ಹಿಂಗಿಸಿಕೊಡು ಅಭಯ ಅಖಿಳಧ್ಯೇಯೆ || 
ಮಂಗಳ ಶೋಭನ ಮಣಿಯೆ, ಅಭ್ಯುದಯೆ ಅತಿ ಸದಯೆ 
ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ ||೨|| 

ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೇ 
ಕ್ಷಯರಹಿತ ಮುನಿಸ್ತೋತ್ರೇ ಶುಭ ಚರಿತ್ರೆ || 
ನಯ ವಿನಯ ನೇತ್ರೇ ಪವಿತ್ರೆ ಅಜನ ಕಳತ್ರೆ 
ಜಯ ಜಯೆ ವಿಜಯ ವಿಠಲನ ಪೌತ್ರೇ ||೩||

kiMkarana dhvanige koDu matiyanu, 
paMkajanABana soseyE sarasvatiyE ||pa|| 
 
sakala vidyAraMbhe kanaka putthaLi goMbe, 
vikasita sulalitAMbe, sunitaMbe || 
nikuraMbe suraraMbe daMta dALiMbe, 
bhakutiyali kAMbe ninna nAmavanu uMbe ||1|| 
 
gaMge yamune ubhaya saMgame BaktaBaya 
hiMgisikoDu abhaya akhiLadhyEye || 
maMgaLa shObhana maNiye, abhyudaye ati sadaye 
raMgu mANika praBeye sujanAbdhigEye ||2|| 
 
prayAga varakShEtravAse puNyakShEtrE 
kShayarahita munistOtrE shubha caritre || 
naya vinaya nEtrE pavitre ajana kaLatre 
jaya jaye vijaya viThalana pautrE ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru