ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀವಾದಿರಾಜರು ರಚಿಸಿದ ಶ್ರೀಕೇಶವ ಪಂಚರತ್ನ | ರಂಗ ಬಾರೋ | Ranga Baaro | Keshava Pancharatna | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಶ್ರೀ ಕೇಶವ ಪಂಚರತ್ನ ಕೀರ್ತನೆ 

ರಂಗ ಬಾರೊ ನರಸಿಂಗ ಬಾರೊ || ಪ ||
ಅಂಗಜನಯ್ಯ ಕೋನೇರಿ ತಿಮ್ಮ ರಂಗ ಬಾರೊ || ಅ.ಪ. || 

ಸಾಸಿರ ಮೂರುತಿ ವಾಸವವಂದ್ಯನೆ |
ಸಾಸಿರ ನಾಮದೊಡೆಯನೆ 
ಸಾಸಿರನಾಮದೊಡೆಯನೆ ನರಹರಿ |
ಕೇಶವ ನಮ್ಮ ಮನೆದೈವ || ೧ ||

ವಾರಣವಂದ್ಯನೆ ಕಾರುಣ್ಯರೂಪನೆ |
ಪುರಾಣಗಳಲ್ಲಿ  ಪೊಗಳುವ 
ಪುರಾಣಗಳಲ್ಲಿ ಪೊಗಳುವ ನರಹರಿ |
ನಾರಾಯಣ ನಮ್ಮ ಮನೆದೈವ || ೨ ||

ಯಾದವಕುಲದಲ್ಲಿ ಸಾಧುಗಳರಸನೆ |
ಭೇದಿಸಿ ದನುಜರ ಗೆಲಿದನೆ 
ಭೇದಿಸಿ ದನುಜರ ಗೆಲಿದನೆ ನರಹರಿ |
ಮಾಧವ ನಮ್ಮ ಮನೆದೈವ || ೩ ||

ದೇವೇಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿ |
ಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ 
ಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆ |
ಗೋವಿಂದ ನಮ್ಮ ಮನೆದೈವ || ೪ ||

ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದು| 
ಶಿಷ್ಟಪರಿಪಾಲನೆನಿಸಿದ 
ಶಿಷ್ಟಪರಿಪಾಲನೆನಿಸಿದ ನರಹರಿ |
ವಿಷ್ಣುವೆ ನಮ್ಮ ಮನೆದೈವ || ೫ ||

ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆ | 
ವಿದುರನ ಮನೆಯಲಿ ನಲಿದುಂಡ 
ವಿದುರನ ಮನೆಯಲಿ ನಲಿದುಂಡ ನರಹರಿ | 
ಮಧುಸೂದನ ನಮ್ಮ ಮನೆದೈವ || ೬ ||

ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆ | 
ಅಕ್ರೂರನೊಡನೆ ಮಧುರೆಗೆ 
ಅಕ್ರೂರನೊಡನೆ ಮಧುರೆಗೆ ಪೋದ 
ತ್ರಿವಿಕ್ರಮ ನಮ್ಮ ಮನೆದೈವ || ೭ ||

ಸಾಮವನೋದುತ್ತ ದಾನವ ಬೇಡುತ್ತ | 
ನಾಮದ ಮಹಿಮೆ ಪೊಗಳುತ್ತ 
ನಾಮದ ಮಹಿಮೆ ಪೊಗಳುತ್ತ ನರಹರಿ | 
ವಾಮನ ನಮ್ಮ ಮನೆದೈವ || ೮ ||

ಶ್ರೀಧರ ಎನಿಸಿದ ಶ್ರೀವತ್ಸಲಾಂಛನ | 
ಶ್ರೀಧರ ಗೋಪೀತನಯನೆ 
ಶ್ರೀಧರ ಗೋಪೀತನಯನೆ ನರಹರಿ | 
ಶ್ರೀಧರ ನಮ್ಮ ಮನೆದೈವ || ೯ ||

ಋಷಿಜನ ವಂದ್ಯನೆ ಬಿಸಜನಾಭನೆ ದೇವ | 
ಋಷಿಜನರಿಗೆಲ್ಲ ಅಭಯವ 
ಋಷಿಜನರಿಗೆಲ್ಲ ಅಭಯವ ಕೊಡುವೋನೆ | 
ಹೃಷಿಕೇಶನೆ ನಮ್ಮ ಮನೆದೈವ || ೧೦ ||

ಪದುಮಸಂಭವಪಿತ ಪದುಮದಾಮೋದರ | 
ಪದುಮದಿಂದಭಯವ ಕೊಡುವೋನೆ 
ಪದುಮದಿಂದಭಯವ ಕೊಡುವೋನೆ ನರಹರಿ | 
ಪದುಮನಾಭನೆ ನಮ್ಮ ಮನೆದೈವ || ೧೧ ||

ನಾಮದ ಮಹಿಮೆಯ ಪ್ರೇಮದಿ ಪೊಗಳಲು | 
ಕಾಮಿತಾರ್ಥಗಳ ಕೊಡುವೋನೆ 
ಕಾಮಿತಾರ್ಥಗಳ ಕೊಡುವೋನೆ ನರಹರಿ | 
ದಾಮೋದರ ನಮ್ಮ ಮನೆದೈವ || ೧೨ ||

ಸಂಕಟಗಳ ತರಿವೋನೆ ಪಂಕಜನಾಭನೆ | 
ಶಂಕೆ ಇಲ್ಲದೆ ಅಸುರರ 
ಶಂಕೆ ಇಲ್ಲದೆ ಅಸುರರ ಸಂಹರಿಸಿದ | 
ಸಂಕರ್ಷಣ ನಮ್ಮ ಮನೆದೈವ || ೧೩ ||

ವಸುದೇವ ತನಯನೆ ಶಿಶುಪಾಲನ ಗೆಲಿದನೆ | 
ವಶವ ಮಾಡಿದೆಯೊ ತ್ರಿಪುರರ 
ವಶವ ಮಾಡಿದೆಯೊ ತ್ರಿಪುರರ ನರಹರಿ | 
ವಾಸುದೇವ ನಮ್ಮ ಮನೆದೈವ || ೧೪ ||

ಶುದ್ಧಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯ | 
ಹದ್ದು ವಾಹನನಾದ ದೇವನೆ 
ಹದ್ದು ವಾಹನನಾದ ದೇವನೆ ನರಹರಿ | 
ಪ್ರದ್ಯುಮ್ನ ನಮ್ಮ ಮನೆದೈವ || ೧೫ ||

ವನಜಲೋಚನ ಹರಿ ವಿನಯ ಉಳ್ಳವನೆ | 
ಧ್ವನಿಕೇಳಿ ಬಂದ ಕುಬುಜೆಯ 
ಧ್ವನಿಕೇಳಿ ಬಂದ ಕುಬುಜೆಯ ನರಹರಿ | 
ಅನಿರುದ್ಧ ನಮ್ಮ ಮನೆದೈವ || ೧೬ ||

ಪಾರಿಜಾತದ ಹೂವ ನಾರಿಗೆ ಇತ್ತನೆ | 
ವೀರ ದಾನವರ ಗೆಲಿದನೆ 
ವೀರ ದಾನವರ ಗೆಲಿದನೆ ನರಹರಿ | 
ಪುರುಷೋತ್ತಮ ನಮ್ಮ ಮನೆದೈವ || ೧೭ ||

ಅಕ್ಷಯಪದವೀವ ಪಕ್ಷಿವಾಹನಸ್ವಾಮಿ | 
ಕುಕ್ಷಿಯೊಳೀರೇಳು ಭುವನವ 
ಕುಕ್ಷಿಯೊಳೀರೇಳು ಭುವನವನಾಳಿದ ನರಹರಿ ಅ | 
ಧೋಕ್ಷಜ ನಮ್ಮ ಮನೆದೈವ || ೧೮ ||

ನರಕಾಸುರನ ಕೊಂದು ಹಿರಣ್ಯನ ಮರ್ದಿಸಿ | 
ಕರುಳ ಬಗೆದು ವನಮಾಲೆ ಹಾಕಿ 
ಕರುಳ ಬಗೆದು ವನಮಾಲೆ ಹಾಕಿದ ಹರಿ | 
ನರಸಿಂಹನೆ ನಮ್ಮ ಮನೆದೈವ || ೧೯ ||

ಅಚ್ಯುತಾನಂತನೆ ಸಚ್ಚಿದಾನಂದನೆ | 
ಮಚ್ಚಾವತಾರದಿ ನಲಿದನೆ 
ಮಚ್ಚಾವತಾರದಿ ನಲಿದನೆ ನರಹರಿ | 
ಅಚ್ಯುತ ನಮ್ಮ ಮನೆದೈವ || ೨೦ ||

ಜಾನಕಿರಮಣನೆ ದಾನವಾಂತಕನೆ | 
ದೀನರಕ್ಷಕನೆ ಸಲಹಯ್ಯ 
ದೀನರಕ್ಷಕನೆ ಸಲಹಯ್ಯ ನರಹರಿ | 
ಜನಾರ್ದನ ನಮ್ಮ ಮನೆದೈವ || ೨೧ ||

ಅಪರಿಮಿತಮಹಿಮನೆ ವಿಪರೀತ ಚರಿತನೆ | 
ಗುಪಿತ ವೇಷಗಳ ತಾಳಿದನೆ 
ಗುಪಿತ ವೇಷಗಳ ತಾಳಿದ ನರಹರಿ | 
ಉಪೇಂದ್ರ ನಮ್ಮ ಮನೆದೈವ || ೨೨ ||

ಹರನ ಭಸ್ಮಾಸುರನು ಮರಳಿ ಬೆನ್ಹತ್ತಲು | 
ತರುಣಿ ರೂಪವನು ತಾಳಿದನೆ 
ತರುಣಿ ರೂಪವನು ತಾಳಿದ ನರಹರಿ | 
ಶ್ರೀಹರಿಯೆ ನಮ್ಮ ಮನೆದೈವ || ೨೩ ||

ಕೃಷ್ಣಾವತಾರದಲಿ ದುಷ್ಟರ ಗೆಲಿದನೆ | 
ವೃಷ್ಣಿಯರ ಕುಲ ತಿಲಕನೆ 
ವೃಷ್ಣಿಯರ ಕುಲ ತಿಲಕನೆ ನರಹರಿ | 
ಶ್ರೀ ಕೃಷ್ಣನೆ ನಮ್ಮ ಮನೆದೈವ || ೨೪ ||

ಇಪ್ಪತ್ತುನಾಲ್ಕು ನಾಮಂಗಳ ಪಾಡುವೆನು | 
ಅಪ್ಪ ಕೇಶವನ ಚರಿತೆಯನು 
ಅಪ್ಪ ಕೇಶವನ ಚರಿತೆಯನು ಪಾಡಲು | 
ಒಪ್ಪಿಸಿಕೊಳ್ಳುವ ಹಯವದನ || ೨೫ ||

raMga bAro narasiMga bAro || pa ||
aMgajanayya kOnEri timma raMga bAro || a.pa. || 

sAsira mUruti vAsavavaMdyane |
sAsira nAmadoDeyane 
sAsiranAmadoDeyane narahari |
kESava namma manedaiva || 1 ||

vAraNavaMdyane kAruNyarUpane |
purANagaLalli  pogaLuva 
purANagaLalli pogaLuva narahari |
nArAyaNa namma manedaiva || 2 ||

yAdavakuladalli sAdhugaLarasane |
BEdisi danujara gelidane 
BEdisi danujara gelidane narahari |
mAdhava namma manedaiva || 3 ||

dEvEMdra maLegareye gOvardhana giriyetti |
A giriya SrIkRuShNa koDemADi 
A giriya SrIkRuShNa koDemADi kAyidane |
gOviMda namma manedaiva || 4 ||

sRuShTige kartane duShTakaMsana gelidu| 
SiShTaparipAlanenisida 
SiShTaparipAlanenisida narahari |
viShNuve namma manedaiva || 5 ||

madhuveMbo daityana mudadiMda gelidane | 
vidurana maneyali naliduMDa 
vidurana maneyali naliduMDa narahari | 
madhusUdana namma manedaiva || 6 ||

cakrava piDidane BUcakrava gelidane | 
akrUranoDane madhurege 
akrUranoDane madhurege pOda 
trivikrama namma manedaiva || 7 ||

sAmavanOdutta dAnava bEDutta | 
nAmada mahime pogaLutta 
nAmada mahime pogaLutta narahari | 
vAmana namma manedaiva || 8 ||

SrIdhara enisida SrIvatsalAMCana | 
SrIdhara gOpItanayane 
SrIdhara gOpItanayane narahari | 
SrIdhara namma manedaiva || 9 ||

RuShijana vaMdyane bisajanABane dEva | 
RuShijanarigella aBayava 
RuShijanarigella aBayava koDuvOne | 
hRuShikESane namma manedaiva || 10 ||

padumasaMBavapita padumadAmOdara | 
padumadiMdaBayava koDuvOne 
padumadiMdaBayava koDuvOne narahari | 
padumanABane namma manedaiva || 11 ||

nAmada mahimeya prEmadi pogaLalu | 
kAmitArthagaLa koDuvOne 
kAmitArthagaLa koDuvOne narahari | 
dAmOdara namma manedaiva || 12 ||

saMkaTagaLa tarivOne paMkajanABane | 
SaMke illade asurara 
SaMke illade asurara saMharisida | 
saMkarShaNa namma manedaiva || 13 ||

vasudEva tanayane SiSupAlana gelidane | 
vaSava mADideyo tripurara 
vaSava mADideyo tripurara narahari | 
vAsudEva namma manedaiva || 14 ||

SuddhasvarUpane Suddha Baktaranu salahayya | 
haddu vAhananAda dEvane 
haddu vAhananAda dEvane narahari | 
pradyumna namma manedaiva || 15 ||

vanajalOcana hari vinaya uLLavane | 
dhvanikELi baMda kubujeya 
dhvanikELi baMda kubujeya narahari | 
aniruddha namma manedaiva || 16 ||

pArijAtada hUva nArige ittane | 
vIra dAnavara gelidane 
vIra dAnavara gelidane narahari | 
puruShOttama namma manedaiva || 17 ||

akShayapadavIva pakShivAhanasvAmi | 
kukShiyoLIrELu Buvanava 
kukShiyoLIrELu BuvanavanALida narahari a | 
dhOkShaja namma manedaiva || 18 ||

narakAsurana koMdu hiraNyana mardisi | 
karuLa bagedu vanamAle hAki 
karuLa bagedu vanamAle hAkida hari | 
narasiMhane namma manedaiva || 19 ||

acyutAnaMtane saccidAnaMdane | 
maccAvatAradi nalidane 
maccAvatAradi nalidane narahari | 
acyuta namma manedaiva || 20 ||

jAnakiramaNane dAnavAMtakane | 
dInarakShakane salahayya 
dInarakShakane salahayya narahari | 
janArdana namma manedaiva || 21 ||

aparimitamahimane viparIta caritane | 
gupita vEShagaLa tALidane 
gupita vEShagaLa tALida narahari | 
upEMdra namma manedaiva || 22 ||

harana BasmAsuranu maraLi benhattalu | 
taruNi rUpavanu tALidane 
taruNi rUpavanu tALida narahari | 
SrIhariye namma manedaiva || 23 ||

kRuShNAvatAradali duShTara gelidane | 
vRuShNiyara kula tilakane 
vRuShNiyara kula tilakane narahari | 
SrI kRuShNane namma manedaiva || 24 ||

ippattunAlku nAmaMgaLa pADuvenu | 
appa kESavana cariteyanu 
appa kESavana cariteyanu pADalu | 
oppisikoLLuva hayavadana || 25 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru