ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪಾಲಿಸೇ ಶರ್ವಾಣಿ | ಶ್ರೀಷ ವಿಠಲ | Palise Sharvani | Shrisha Vittala


ಸಾಹಿತ್ಯ : ಶ್ರೀ ಶ್ರೀಷ ವಿಠಲ ದಾಸರು
Kruti: Sri Shrisha Vithala Dasaru


ಪಾಲಿಸೇ ಶರ್ವಾಣಿ ಪನ್ನಗ ವೇಣಿ ||ಪ||

ಬಾಲನ ಮಾತನು ಲಾಲಿಸಿ ಬೇಗನೆ| 
ಕಾಲಕಾಲಕೆ ಹರಿ ಧ್ಯಾನ ಮಾಡಿಸೆ| ||೧||

ನಾಗಾಭರಣ ವೈದ್ಯೇಶನ ರಾಣಿ| 
ಜಾಗುಮಾಡದೆ ಪೊರೆಯೆ ಭವಾನಿ ||೨||

ಸುಂದರ ವದನೇ ಮಂದಿಯ ರೋಗವಾ| 
ಕುಂದದೆ ಕಳೆದು ಆನಂದ ಕೊಡೆ ತಾಯಿ ||೩||

ನಿನ್ನ ಸಮಾನದಾತೆ ಕಾಣೆನೆಲ್ಲೊ ಮಾತೆ| 
ಅನ್ಯರ ಬೇಡದ ಉನ್ನತ ಮನ ನೀಡೆ ||೪||

ದೋಷರಹಿತ ಮಾತೆ ಶ್ರೀಶ ವಿಠ್ಠಲ ತಾ| 
ಪೋಷಿಪ ನಿನ್ನಯಾ ಭಾಷೆ ಲಾಲಿಸಿ ಬೇಗಾ ||೫||

pAlisE SarvANi pannaga vENi ||pa||

bAlana mAtanu lAlisi bEgane| 
kAlakAlake hari dhyAna mADise| ||1||
 
nAgABaraNa vaidyESana rANi| 
jAgumADade poreye BavAni ||2||

suMdara vadanE maMdiya rOgavA| 
kuMdade kaLedu AnaMda koDe tAyi ||3||
 
ninna samAnadAte kANenello mAte| 
anyara bEDada unnata mana nIDe ||4||
 
dOSharahita mAte SrISa viThThala tA| 
pOShipa ninnayA BAShe lAlisi bEgA ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru