ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೀ ಕರುಣಿಸೊ ವಿಠಲ | ಪ್ರಸನ್ನ ವೇಂಕಟ | Ni Karuniso Vithala | Prasanna Venkata


ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು 
Kruti: Sri Prasanna Venkata Dasaru


ನೀ ಕರುಣಿಸೊ ವಿಠಲ ನಮ್ಮ ಸಾಕೋ ಪಂಢರಿ ವಿಠ್ಠಲಾ ||ಪ|| 

ದೋಷಿಗಳೊಳು ಹಿರಿಯನು ನಾ ನಿ | ರ್ದೋಷಿಗಳರಸೆ ವಿಠ್ಠಲಾ 
ಸಾಸಿವೆಯಷ್ಟು ಭಕುತಿಯನರಿಯೆನು ಶೇಷಶಯನ ಶ್ರೀ ಹರಿ ವಿಠ್ಠಲಾ ||೧||

ಭವಸಾಗರದೊಳು ಮುಳುಗುವೆ ಸುಮ್ಮನೆ | ಅವಲೋಕಿಸುವರೆ ವಿಠ್ಠಲಾ | 
ನವನವ ವಿಷಯಕೆ ಹಿಗ್ಗುತಲಿಹ ಮನದ ಅವಸರ ಕಾಯೋ ವಿಠ್ಠಲಾ ||೨|| 

ದಿನ ದಿನ ಅಶನಾ-ವಸನಕೆ ಹೆಣಗುವ | ಹುಸಿ ಸಂಗ್ರಹಿಸಿದೆ ವಿಠ್ಠಲಾ | 
ನಿಷೇಧ ಮಾಯಾ ಇಲ್ಲದ ನರಕದ | ಗಸಣೆಗೆ ಅಂಜುವೆ ವಿಠ್ಠಲಾ ||೩|| 

ತನು ಸಂಬಂಧಿಗಳತಿ ಕಾರ್ಯಾರ್ಥಿಗಳೆನಗ್ಯಾರಿಲ್ಲೋ ವಿಠಲಾ 
ಬಿನುಗುವಮಾನವರನುಸರಣೆಯಲಿ ದಣಿಸದಿರಯ್ಯಾ ವಿಠ್ಠಲಾ ||೪|| 

ಝಾವಕೆ ಮಾಡುವೆ ಸಾವಿರ ತಪ್ಪನು | ಕಾಯೋ ದಯಾಂಬುಧಿ ವಿಠ್ಠಲಾ ||
ಶ್ರೀವರ ಪ್ರಸನ್ನ ವೇಂಕಟವಿಠ್ಠಲ | ಜೀವಕೆ ಹೊಣೆ ನೀ ವಿಠ್ಠಲಾ ||೫|| 

nI karuNiso viThala namma sAkO paMDhari viThThalA ||pa|| 

dOShigaLoLu hiriyanu nA ni | rdOShigaLarase viThThalA 
sAsiveyaShTu Bakutiyanariyenu SEShaSayana SrI hari viThThalA ||1||
 
BavasAgaradoLu muLuguve summane | avalOkisuvare viThThalA | 
navanava viShayake higgutaliha manada avasara kAyO viThThalA ||2|| 

dina dina aSanA-vasanake heNaguva | husi saMgrahiside viThThalA | 
niShEdha mAyA illada narakada | gasaNege aMjuve viThThalA ||3|| 
 
tanu saMbaMdhigaLati kAryArthigaLenagyArillO viThalA 
binuguvamAnavaranusaraNeyali daNisadirayyA viThThalA ||4|| 
 
JAvake mADuve sAvira tappanu | kAyO dayAMbudhi viThThalA ||
SrIvara prasanna vEMkaTaviThThala | jIvake hoNe nI viThThalA ||5|| 
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru