ದುರ್ಗ ಸುಳಾದಿ
ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೇ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗುಣದವರ ಬಾಧೆ ಬಹಳವಾಗಿದೆ ತಾಯೇ
ದುರ್ಗತಿಹಾರೆ ನಾನು ಪೇಳುವುದೇನು
ದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯೆ ದುರ್ಧರ್ಷೆ ಶಕ್ತೆ
ದುರ್ಗಕಾನನ ಗಹನ ಪರ್ವತಘೋರ ಸರ್ಪ
ಗರ್ಗರ ಶಬ್ಧ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾದುರ್ಗೆ ಎಂದು ಉಚ್ಛಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನೀರ್ಗುಡಿದಂತೆ ಲೋಕ ಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡೆ || ೧ ||
ಅರಿ ದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರ್ವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪ ಸುಖವ ಕೊಡುವ
ಸಿರಿಭೂಮಿ ದುರ್ಗಾ ಸರ್ವೋತ್ತಮ ನಮ್ಮ
ವಿಜಯ ವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ || ೨ ||
ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ
ನ್ನತ ಬಾಹು ಕರಾಳವದನೆ ಚಂದಿರ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೇ ಭವ್ಯೇ
ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿ ಗಮನೆ ಅ
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿ ತನಯೆ ಸ
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿ ಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರ ನಯನೆ ನಿರುತಕನ್ಯೇ ಉದಯಾರ್ಕ
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೆ ಅ
ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ
ಪತಿತಪಾವನೆ ರನ್ನೆ ಸರ್ವೋಷಧಿಯಲಿದ್ದು
ಹತಮಾಡು ಕಾಡುವ ರೋಗಂಗಳನ್ನು
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿ ಬೇಕು ದುರ್ಗೇ ದುರ್ಗೇ
ಚ್ಯುತಿದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ || ೩ ||
ಶ್ರೀಲಕ್ಷ್ಮೀಕಮಲಾ ಪದ್ಮಾಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯಾವೃದ್ಧಿವಿ
ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ
ಶೀಲೆ ಸುಗಂಧಿ ಸುಂದರಿ ವಿದ್ಯಾಸುಶೀಲೆ
ಸುಲಕ್ಷಣೆ ದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲ ಕಾಲಕೆ ಎನ್ನ ಭಾರ ವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಲ ಮಾಡದೆ ಉದ್ಧಾರ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯ ವಿಠ್ಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ || ೪ ||
ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಾಪತ್ರಯ ವಿನಾಶ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದ ಬಾಲ ಲೀಲೆ
ವ್ಯಾಪುತೆ ಧರ್ಮಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಾಪದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು ಹಾರಿ ಪೋಗೋವು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ಪಾಂಡವರ ಮನೋಭೀಷ್ಟೆ
ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೇ
ಶ್ರೀಪತಿ ನಾಮ ಒಂದೇ ಜಿಹ್ವಾಗ್ರದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೇ
ತಾಪಸ ಜನಪ್ರೀಯ ವಿಜಯವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾ ವರಣಶ್ರಯೆ || ೫ ||
ದುರ್ಗೆ ಹಾ ಹೇ ಹೋ ಹಾ ದುರ್ಗೆ ಮಂಗಳ ದುರ್ಗೆ
ದುರ್ಗತಿ ಕೊಡದಿರು ವಿಜಯವಿಠ್ಠಲಪ್ರೀಯೆ || ೬ ||
DURGA SULADI
durgA durgeye mahaduShTajana saMhAre
durgAMtargata durge durlabhE sulabhe
durgamavAgide ninna mahime bomma
BargAdigaLigella guNisidarU
svarga BUmi pAtALa samasta vyAputa dEvi
vargakke mIrida balu suMdarI
durguNadavara bAdhe bahaLavAgide tAyE
durgatihAre nAnu pELuvudEnu
durgaMdhavAgide saMskRuti nODidare
nirgama nA kANenamma maMgaLAMge
durge hE durge mahAdurge BUdurge viShNu
durge durjaye durdharShe shakte
durgakAnana gahana parvataGOra sarpa
gargara Sabdha vyAGra karaDi mRutyu
varga BUta prEta paiSAcha modalAda
durgaNa saMkaTa prAptavAge
durgAdurge eMdu uchChasvaradiMda
nirgaLitavAgi omme kUgidarU
svargApavargadalli hariyoDane iddarU
surgaNa jaya jayaveMdu pogaLutire
kargaLiMdali etti sAkuva sAkShi BUte
nIrguDidaMte lOka lIle ninage
svargaMgAjanaka namma vijaya viThThalanaMGri
durgAshraya mADi badukuvaMte mADe || 1 ||
ari darAMkuSa Sakti paraSu nEgilu KaDga
sarasija gade mudgara cApa mArgaNa
vara aBaya musala pari pari Ayudhava
dharisi mereva lakumi sarasija Bava rudra
sarva dEvategaLa karuNApAMgadalli
nirIkShisi avaravara svarUpa suKava koDuva
siriBUmi durgA sarvOttama namma
vijaya viThThalanaMGri
parama BakutiyiMda smarisuva jagajjanani || 2 ||
stuti mADuve ninna kALi mahAkALi u
nnata bAhu karALavadane caMdira muKe
dhRuti SAMti bahurUpe rAtri rAtri caraNe
sthitiye nidrABadre BaktavatsalE BavyE
caturaShTa dvihaste hasti hasti gamane a
dButa prabale pravAse durgAraNyavAse
kShitiBAraharaNe kShIrAbdhi tanaye sa
dgati pradAte mAyA SrIye iMdire rame
diti jAta nigrahe nirdhUta kalmaShe
pratikUla BEde pUrNabOdhe raudrE
atiSaya rakta jihvAlOle mANikyamAle
jitakAme janana maraNa rahite KyAte
GRuta pAtra paramAnna tAMbUla haste su
vrate pativrate trinEtre raktAMbare
Satapatra nayane nirutakanyE udayArka
SatakOTi sanniBe hariyAMkasaMsthe
Srutitatinute Sukla SONita rahite a
pratihate sarvadA saMcAriNi chature
chaturakapardiye aMbhraNi hrI
utpatti sthitilaya karte SuBraSOBana mUrte
patitapAvane ranne sarvOShadhiyaliddu
hatamADu kADuva rOgaMgaLannu
kShitiyoLu suKadalli bALuva matiyittu
satata kAyali bEku durgE durgE
cyutidUra vijaya viThThalarEyana prIye
kRutAMjaliyiMdali talebAgi namisuve || 3 ||
SrIlakShmIkamalA padmApadmini kama
lAlaye ramA vRuShAkapi dhanyAvRuddhivi
SAlA yaj~jA iMdire hiraNya hariNi
vAlaya satya nityAnaMda trayi sudhA
SIle sugaMdhi suMdari vidyAsuSIle
sulakShaNe dEvi nAnA rUpagaLiMda mereva mRutyunASe
vAlagakoDu saMtara sannidhiyalli
kAla kAlake enna BAra vahisuva tAyi
mElu mElu ninna Sakti kIrti balu
kELi kELi baMde kEvala I mana
GALiyaMte paradravyakke pOpudu
ELala mADade uddhAra mADuva
kailAsapuradalli pUjegoMba dEvi
mUlaprakRuti sarva varNABimAnini
pAlasAgaraSAyi vijaya viThThalanoLu
lIle mADuva nAnABaraNe BUShaNe pUrNe || 4 ||
gOpinaMdane mukte daitya saMtatige saM
tApava koDutippa mahAkaThOre ugra
rUpa vailakShaNe aj~jAnakkaBimAnini
taapatraya vinASa OMkAre hUMkAre
pApi kaMsage Baya tOrida bAla lIle
vyApute dharmamArga prEraNe aprAkRute
svApadali ninna nenesida SaraNanige
apAravAgidda vAridhiyaMte mahA
Apattu baMdiralu hAri pOgOvu sapta
dvIpa nAyike naraka nirlEpe tamOguNada
vyApAra mADisi Bakta janake puNya
sOpAna mADikoDuva sauBAgyavaMte durge
prAputavAgi enna manadali niMdu duHKa
kUpadiMdali etti kaDe mADu janmaMgaLa
sauparNi migilAda satiyaru nitya ninna
ApAda mauLitanaka Bajisi BavyarAdaru
nA pELuvadEnu pAMDavara manOBIShTe
I paMca Bautikadalli Ava sAdhana kANE
SrIpati nAma oMdE jihvAgradali neneva
aupAsana koDu rudrAdigaLa varadE
tApasa janaprIya vijayaviThThala mUrtiya
SrIpAdArcane mALpA SrIBUdurgA varaNaSraye || 5 ||
durge hA hE hO hA durge maMgaLa durge
durgati koDadiru vijayaviThThalaprIye || 6 ||