ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಲ್ಲಾಡಿ ಬಂದೆ ಎನ್ನ ರಂಗಯ್ಯ | ರಂಗವಿಠಲ | Elladi Bande Enna Rangayya | Sripadarajaru


ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)
Kruti: Sri Sripadarajaru (Ranga vittala)


ಎಲ್ಲಾಡಿ ಬಂದೆ ಎನ್ನ ರಂಗಯ್ಯ ನೀ ಎಲ್ಲಾಡಿ ಬಂದೆ ಮುದ್ದು ಕೃಷ್ಣಯ್ಯ |ಪ|
ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ |ಅಪ|

ಆಲಯದೊಳಗೆ ನೀ ಆಡದೆ ಬೆಣ್ಣೆ ಹಾಲು ಸಕ್ಕರೆ ನೀ ಬೇಡದೆ|
ಇಲ್ಲಿ ಬಾಲರಿಂದೊಡಗೂಡಿ ಆಡದೆ| ಮುದ್ದು ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ | ೧ |

ಬಟ್ಟ ಮುತ್ತಿನ ಬೊಗಸೆ ಕಂಗಳು ಫಣೆಯೊಳಿಟ್ಟ ಕಸ್ತೂರಿ ತಿಲಕದಂದವು|
ಬಲು ದಿಟ್ಟ ತನದಿ ಒಲ್ಯಾಡಲು ಪುಟ್ಟ ಕೃಷ್ಣಯ್ಯ ನೀ ಎನ್ನ ಕಣ್ಣ ಮುಂದಾಡದೆ | ೨ |

ಅಷ್ಟ ದಿಕ್ಕಲಿ ಅರಸೀ ಕಾಣದೆ ನಾ ದೃಷ್ಟಿಗೆಟ್ಟೆನೋ ನಿನ್ನ ನೋಡದೆ ಇನ್ನೆಷ್ಟು ಹೇಳಲಿ|
ಕೇಳಬಾರದೆ ರಂಗವಿಠಲ ನೀ ಎನ್ನ ಕಣ್ಣ ಮುಂದಾಡದೆ | ೩ |

ellADi baMde enna raMgayya nI ellADi baMde muddu kRuShNayya |pa|
bAlayya nI enna kaNNa muMdADade |apa|
 
AlayadoLage nI ADade beNNe hAlu sakkare nI bEDade|
illi bAlariMdoDagUDi ADade| muddu bAlayya nI enna kaNNa muMdADade | 1 |
 
baTTa muttina bogase kaMgaLu PaNeyoLiTTa kastUri tilakadaMdavu|
balu diTTa tanadi olyADalu puTTa kRuShNayya nI enna kaNNa muMdADade | 2 |
 
aShTa dikkali arasI kANade nA dRuShTigeTTenO ninna nODade inneShTu hELali|
kELabArade raMgaviThala nI enna kaNNa muMdADade | 3 |


 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru