ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಾದಿರಾಜರ ಶ್ರೀಕೇಶವ ಪಂಚರತ್ನ ಕೀರ್ತನೆ | ಗುಬ್ಬಿಯಾಳೊ ಗೋವಿಂದ | Gubbiyalo Govinda | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಶ್ರೀ ಕೇಶವ ಪಂಚರತ್ನ ಕೀರ್ತನೆ 

ಗುಬ್ಬಿಯಾಳೊ ಗೋವಿಂದ ಗೋವಿಂದಾ ಗುಬ್ಬಿಯಾಳೋ
ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ || ಪ ||

ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ 
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ || ೧ ||

ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ 
ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ || ೨ ||

ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ 
ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ || ೩ ||

ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ 
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ || ೪ ||

ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ 
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ || ೫ ||

ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ 
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ || ೬ ||

ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ 
ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ || ೭ ||

ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ 
ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ || ೮ ||

ಪುರುಷೋತ್ತಮನ್ನ ಪುರಾಣಪುರುಷನೆಂದು ತಿಳಿಯಿರೊ ಗುಬ್ಬಿಯಾಳೊ 
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ || ೯ ||

ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ 
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ || ೧೦ ||

ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ 
ಉಪೇಂದ್ರನು ನಮ್ಮ ಅಪರಾಧವ ಕ್ಷಮಿಸುವನೊ ಗುಬ್ಬಿಯಾಳೊ || ೧೧ ||

ಹರಿನಾಮಾಮೃತಕೆ ಸರಿ ಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ 
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ || ೧೨ ||

ಈ ಗುಬ್ಬಿ ಪಾಡುವರಿಗೆ ಇಹ ಪರವು ಸಂತತವು ಗುಬ್ಬಿಯಾಳೋ 
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ || ೧೩ ||

ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆ ಮನವೆ ನಮ್ಮ 
ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ || ೧೪ ||

Sri Keshava Pancharatna Keerthane

gubbiyALo gOviMda gOviMdA gubbiyaaLO
gOviMda gOviMdAneMdu neneyiro gubbiyALo || pa ||

kEshavanna nenedare klESa parihAravu gubbiyALo 
nArAyaNana dhyAnadiMda narakaBayavillavo gubbiyALo || 1 ||

mAdhavanna nenedare manOBIShTa koDuvonu gubbiyALo 
gOviMdanna dayadiMda GOradurita nASanavu gubbiyALo || 2 ||

viShNuBajaneyilladavage vaiShNavara janmavuMTE gubbiyALo 
madhusUdanana dhyAnadiMda atiSayavu ihudo gubbiyALo || 3 ||

trivikramana nenedare sAvitriyAgiharo gubbiyALo 
vAmanadEvaru namage varagaLa koDuvOru gubbiyALo || 4 ||

SrIdharanna nenedare siri namage olivaLo gubbiyALo 
hRuShIkESana dhyAnadiMda hRudaya pariSuddhavo gubbiyALo || 5 ||

padmanABa nammellara pAlisi rakShipano gubbiyALo 
dAmOdarana nenedare pAmaratva biDisuvano gubbiyALo || 6 ||

saMkarShaNana dhyAnadiMda saMtAna aBivRuddhiyu gubbiyALo 
vAsudEvana dayadiMda vaMSa uddhAravo gubbiyALo || 7 ||

pradyumnana nenedare BUpradakShiNe Palavu gubbiyALo 
aniruddhana sEvise punItarahevo gubbiyALo || 8 ||

puruShOttamanna purANapuruShaneMdu tiLiyiro gubbiyALo 
adhOkShaja nammellarigAdhAravAgihano gubbiyALo || 9 ||

nArasiMhadEvaru namma kuladaivavo gubbiyALo 
acyuta lakShmiya kUDi saccidAnaMdano gubbiyALo || 10 ||

janArdanadEvaru jagakella SrEShTharo gubbiyALo 
upEMdranu namma aparAdhava kShamisuvano gubbiyALo || 11 ||

harinAmAmRutake sari dhareyoLage illavo gubbiyALo 
SrIkRuShNa raMgESayeMbo siddhakriya ballare gubbiyALo || 12 ||

I gubbi pADuvarige iha paravu saMtatavu gubbiyALO 
dharaNiyoLu AcaMdrArka tArakavAgiharu gubbiyALo || 13 ||

hayavadananna pAdadhyAna nitya mareyade nI nene manave namma 
hayavadananna pAdavE nitya manave gubbiyALo || 14 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru