ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮಧ್ವಾಂತರ್ಗತ ವೇದವ್ಯಾಸ | ಹಯವದನ | Madwantargata Vedavyasa | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಮಧ್ವಾಂತರ್ಗತ ವೇದವ್ಯಾಸ 
ಕಾಯೋ ಶುದ್ಧ ಮೂರುತಿಯೆ ಸರ್ವೇಶ ||ಪ||

ಶ್ರದ್ಧೆಯಿಂದಲಿ ನಿನ್ನ ಭಜಿಸುವ ಜನರಿಗೆ 
ಬುದ್ಧ್ಯಾದಿಗಳ ಕೊಟ್ಟುದ್ಧರಿಸೋ ದೇವರದೇವ ||ಅಪ||

ದ್ವಾಪರದಲಿ ಒಬ್ಬ ಮುನಿಪ 
ತನ್ನ ಕೋಪದಿಂದಲಿ ಕೊಟ್ಟ ಶಾಪ
ಸ್ಥಾಪಿಸಲು ಜ್ಞಾನ ಲೋಪ 
ಅಪಾರ ತತ್ತ್ವಸ್ವರೂಪ
ಶ್ರೀಪತಿಯೆ ಕಾಯೆಂದು ಮೊರೆಯಿಡೆ 
ಪಾಪ ವಿರಹಿತಳಾದ ಯಮುನೆಯ
ದ್ವೀಪದಲಿ ಅಂಬಿಗರ ಹೆಣ್ಣಿನ 
ರೂಪಗೊಲಿದವನಲ್ಲಿ ಜನಿಸಿದೆ ||೧||

ವೇದವಾದಗಳೆಲ್ಲ ಕೆಡಲು 
ತತ್ತ್ವವಾದಿ ಜನರು ಬಾಯಿ ಬಿಡಲು
ಮೇದಿನಿ ಸುರರ‍್ಮೊರೆಯಿಡಲು 
ನಾಲ್ಕುವೇದ ವಿಭಾಗ ರಚಿಸಲು
ಮೋದದಿಂದ ತದರ್ಥ ಬೋಧಕವಾದ 
ಸೂತ್ರ ಪುರಾಣ ವಿರಚಿಸಿ
ವಾದಿಗಳ ನಿರ್ವಾದ ಮಾಡಿದ 
ಸಾಧುವಂದಿತ ಬಾದರಾಯಣ ||೨||

ಸುಮತಿಗಳಿಗೆ ನೀ ಬೋಧಿಸಿದೆ 
ಮಿಕ್ಕ ಕುಮತಿಗಳನ್ನು ನೀ ಛೇದಿಸಿದೆ
ಕ್ರಿಮಿಯಿಂದ ರಾಜ್ಯವಾಳಿಸಿದೆ 
ಜಗತ್‍ಸ್ವಾಮಿ ನೀನೆಂದು ತೋರಿಸಿದೆ
ವಿಮಲ ರೂಪನೆ ಕಮಲನಾಭನೆ 
ರಮೆಯ ಅರಸನೆ ರಮ್ಯ ಚರಿತನೆ
ಮಮತೆಯಲಿ ಕೊಡು ಕಾಮಿತಾರ್ಥವ 
ನಮಿಸುವೆನು ಹಯವದನ ಮೂರುತಿ ||೩||

madhvAMtargata vEdavyAsa 
kAyO shuddha mUrutiye sarvESa ||pa||

shraddheyiMdali ninna Bajisuva janarige 
buddhyAdigaLa koTTuddharisO dEvaradEva ||apa||

dvAparadali obba munipa 
tanna kOpadiMdali koTTa SApa
sthApisalu jnAna lOpa 
apAra tattvasvarUpa
SrIpatiye kAyeMdu moreyiDe 
pApa virahitaLAda yamuneya
dvIpadali aMbigara heNNina 
rUpagolidavanalli janiside ||1||

vEdavAdagaLella keDalu 
tattvavAdi janaru bAyi biDalu
mEdini surar^moreyiDalu 
naalkuvEda viBAga rachisalu
mOdadiMda tadartha bOdhakavAda 
sUtra purANa virachisi
vAdigaLa nirvAda mADida 
sAdhuvaMdita bAdarAyaNa ||2||

sumatigaLige nI bOdhiside 
mikka kumatigaLannu nI CEdiside
krimiyiMda rAjyavALiside 
jagat-svAmi nIneMdu tOriside
vimala rUpane kamalanABane 
rameya arasane ramya charitane
mamateyali koDu kAmitArthava 
namisuvenu hayavadana mUruti ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru