ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಾನೇನು ಮಾಡಿದೆನೋ ಕೃಷ್ಣಯ್ಯ | ಪುರಂದರ ವಿಠಲ | Nanenu Madideno Krishnayya | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ನಾನೇನು ಮಾಡಿದೆನೋ ಕೃಷ್ಣಯ್ಯ ನೀ ಎನ್ನ ಸಲಹಬೇಕು ||ಪ|| 

ಕರಿರಾಜ ಕರೆಸಿದನೆ ದ್ರೌಪದಿ ದೇವಿ ಬರೆದೋಲೆ ಕಳುಹಿದಳೆ || 
ಹರುಷದಿಂದಲಿ ಋಷಿ ಪತ್ನಿಯ ಶಾಪವ ಪರಿಹರಿಸಿದೆಯಲ್ಲೋ ಹೇ ಸ್ವಾಮಿ || ೧ ||

ರಕ್ಕಸ ತನುಜನಲ್ಲೇ ಪ್ರಹ್ಲಾದನು ಚಿಕ್ಕ ಪ್ರಾಯದ ಧ್ರುವನು || 
ಸಿಕ್ಕಿದ ಪಾಪವ ಮಾಡಿದ ಅಜಾಮಿಳ ನಿನ್ನಕ್ಕರೆಯ ಮಗನೇನೊ ಪೇಳೋ ಹೇ ಸ್ವಾಮಿ ||೨|| 

ಒಪ್ಪಿಡಿ ಅವಲಕ್ಕಿಯ ಕೃಷ್ಣಯ್ಯ ನಿನಗೊಪ್ಪಿಸಿದವನಿಗೊಲಿದೆ || 
ಒಪ್ಪೆನು ನಿನಗೇ ಶ್ರೀ ಪುರಂದರ ವಿಠಲ ಅವರೊಪ್ಪುವಂತೆ ಕಾಯಬೇಕೋ ಹೇ ಸ್ವಾಮಿ ||೩|| 

nAnEnu mADidenO kRuShNayya nI enna salahabEku ||pa|| 
 
karirAja karesidane draupadi dEvi baredOle kaLuhidaLe || 
haruShadiMdali RuShi patniya SApava pariharisideyallO hE svAmi || 1 ||
 
rakkasa tanujanallE prahlAdanu cikka prAyada dhruvanu || 
sikkida pApava mADida ajAmiLa ninnakkareya maganEno pELO hE svAmi ||2|| 
 
oppiDi avalakkiya kRuShnayya ninagoppisidavanigolide || 
oppenu ninagE SrI puraMdara viThala avaroppuvaMte kAyabEkO hE svAmi ||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru