ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜೈ ಜೈ ಗೋಪಾಲ ಗೋಕುಲ ಕೃಷ್ಣ | ಇಂದಿರೇಶ | Jai Jai Goapala | Indiresha


ಸಾಹಿತ್ಯ :    ಶ್ರೀ ಇಂದಿರೇಶ ದಾಸರು (ಇಂದಿರೇಶ) 
Kruti: Sri Indiresha Dasaru (Indiresha)


ಜೈ ಜೈ ಗೋಪಾಲ ಗೋಕುಲ ಕೃಷ್ಣ ಗೋಕುಲ ವೃಂದಾವನದೊಳಗಾಡುವ 
ಶ್ರೀಕರ ಬಾಲನ ಸ್ಮರಿಸುವೆನು || ಪ ||

ಆಕಳ ಹಿಂಡಲಿ ತಾ ಕುಣಿದಾಡುತ ಅನೇಕ ಸ್ವರದಿ ಕೊಳಲೂದುವನು || ಅಪ ||

ಪಾದದಿ ನೂಪುರ ಪಾಡಗ ರುಳಿ ಗೆಜ್ಜೆ ಮೋದದಿ ಕುಣಿಸುವನು
ಹಾದಿಲೆ ಹೋಗುವ ಲೋಕವು ಕೇಳುತ ಪಾದಪದಂತಿಹುದು || ೧ ||

ಅಣ್ಣ ರಾಮನ ಕರವನ್ನೇ ಪಿಡಿದು ಗೋಪರನ್ನೇ ಕುಣಿಸುತಿಹನು
ಹೊನ್ನ ಭೂಷಣ ಮನ್ಮಥ ಪಿತ ಸೈ ಸೈ ಎನ್ನುತ ನಿಂತಿಹನು || ೨ ||

ಎಂದು ಕಾಂಬುವೆನಿಂಥ ಸುಂದರ ಕೂಸಿನ ಚಂದ್ರಕುಲೋದ್ಭವನ
ಬಂದ ಭಕ್ತರ ಭವಬಂಧ ಬಿಡಿಸಿ ಇಂದಿರೇಶನು ತಾನು || ೩ ||

jai jai gOpaala gOkula kRuShNa gOkula vRuMdaavanadoLagaaDuva 
shrIkara baalana smarisuvenu || pa ||

AkaLa hiMDali taa kuNidaaDuta anEka svaradi koLalUduvanu || apa ||

paadadi nUpura paaDaga ruLi gejje mOdadi kuNisuvanu
haadile hOguva lOkavu kELuta paadapadaMtihudu || 1 ||

aNNa raamana karavannE piDidu gOparannE kuNisutihanu
honna bhUShaNa manmatha pita sai sai ennuta niMtihanu || 2 ||

eMdu kaaMbuveniMtha suMdara kUsina caMdrakulOdbhavana
baMda bhaktara bhavabaMdha biDisi iMdirEshanu taanu || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru