ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿನ್ನ ಮಗನೇನೇ ಗೋಪಿ | ಶ್ರೀಕೃಷ್ಣ | Ninna Maganene Gopi | Sri Vyasarajaru


ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti: Sri Vyasarajaru (Sri Krishna)


ನಿನ್ನ ಮಗನೇನೇ ಗೋಪಿ ||ಪ|| 
ಚೆನ್ನಾರಿ ಚೆಲುವಿನ ಉಡುಪಿಯ ಕೃಷ್ಣರಾಯ ||ಅಪ|| 

ಮುಂಗುರುಳು ಮುಂದಲೆಗೆ ಬಂಗಾರದರಳೆಲೆ | 
ರಂಗು ಮಾಣಿಕ್ಯದುಂಗುರವಿಟ್ಟು | 
ಪೊಂಗೆಜ್ಜೆ ತೊಡರು ಅಂದುಗೆ ಘಲು ಘಲುರೆನೆ | 
ಅಂಗಳದಲ್ಲಾಡುವ ಈ ಮುದ್ದು ಬಾಲ ||೧|| 

ಕಟವಾಯಿ ಬೆಣ್ಣೆ ಕಾಡಿಗೆಗಣ್ಣು ಕಟಿಸೂತ್ರ | 
ಪಟವಾಳಿ ಕೌಪೀನ ಕೊರಳಲ್ಲಿ ಪದಕ | 
ಸಟೆಯಿಲ್ಲ ಬ್ರಹ್ಮಾಂಡ ಉದರದಲ್ಲಿಂಬಿಟ್ಟು | 
ಮಿಟಮಿಟನೇ ನೋಡುವ ಈ ಮುದ್ದು ಬಾಲ ||೨|| 

ಹರಿವ ಹಾವನು ಕಂಡು ಹೆಡೆ ಹಿಡಿದಾಡುವ | 
ಕರುವಾಗಿ ಆಕಳ ಮೊಲೆಯುಂಬುವ | 
ಹಿರಿದಾಗಿ ನೋಡಲು ಅಂತರಂಗದ ಸ್ವಾಮಿ | 
ಧರೆಯೊಳಂಬುಧಿ ತೀರ ಉಡುಪಿಯ ಶ್ರೀ ಕೃಷ್ಣ ||೩|| 

ninna maganEnE gOpi ||pa|| 
cennAri celuvina uDupiya kRuShNarAya ||apa|| 
 
muMguruLu muMdalege baMgAradaraLele | 
raMgu mANikyaduMguraviTTu | 
poMgejje toDaru aMduge Galu Galurene | 
aMgaLadallADuva I muddu bAla ||1|| 

kaTavAyi beNNe kADigegaNNu kaTisUtra | 
paTavALi kaupIna koraLalli padaka | 
saTeyilla brahmAMDa udaradalliMbiTTu | 
miTamiTanE nODuva I muddu bAla ||2|| 
 
hariva hAvanu kaMDu heDe hiDidADuva | 
karuvAgi AkaLa moleyuMbuva | 
hiridAgi nODalu aMtaraMgada svAmi | 
dhareyoLaMbudhi tIra uDupiya SrI kRuShNa ||3|| 


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru