ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti



Koteeshwara Sulaadi / ಕೋಟೀಶ್ವರ ಸುಳಾದಿ

ಧ್ರುವತಾಳ

ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ | ಅಸುರ ಸಂಹರ ಶಿರಿ ವಿಜಯವಿಠಲರೇಯಾ | ನಸುನಗುತಾ ಐದಿದ ನಾರಿವೇಷವ ತಾಳಿ ||೩|| ಅಟ್ಟತಾಳ ಶಿವನು ಕೇಶವಗೆ ದಾನವನ ಅಟ್ಟುಳಿಗೆ ಗಾ | ತ್ರವನು ಬಳಲಿ ಮೊರೆಯಿಟ್ಟೂ ಮಾತಿಗೆ ತ್ರಿ | ಭುವನ ಬೆರಗಾಗೆ ಯುವತಿ ರೂಪವ ತಾಳಿ | ನವನವ ಮೋಹಕ ಕೌತುಕವನೆ ತೋರಿ | ಅವನ ವಂಚಿಸಿ ಆಟವನು ಆಡಿದ ದಾ | ನವನ ಸಂಹರಿಸಿದ ಪವನಗಿರಿಯಲ್ಲಿ | ಪವಿತುರ ಮೂರುತಿ | ಕವಿ ಮನೋಹರ ನಮ್ಮ ವಿಜಯವಿಠಲರೇಯಾ | ಅವನಿಯೊಳಗೆ ವೇಲಾಪುರದ ಚನ್ನಿಗ ಕಾಣೊ ||೪|| ಆದಿತಾಳ ಯಾಗ ಮಾಡಿದ ಬ್ರಹ್ಮಾ ಮುನಿಗಳ ಕೂಡ ಇಲ್ಲಿ | ಭಾಗಕೊಡುವದಕ್ಕೆ ತಪೋಧನಾ ಉಳ್ಳ ಕೋಟೇ ಯೋಗೀಶ್ವರರಕೈಯ್ಯ ಪಾರ್ಥಿವ ಪೂಜಿಸಿ ಆಗ ಕರಿಸಿದ ಶಿವನ ಕೂಪದಿಂದೂರ್ಧ್ವಕ್ಕೆ | ಭೂಗೋಳದೊಳಗಿದೆ ಕೋಟೀಶ್ವರ ಪಶ್ಚಿಮ | ಸಾಗರ ತೀರದಲ್ಲಿ ಒಪ್ಪುತಿದೆ ಕೇಳಿ | ನಾಗಭೂಷಣ ಇಲ್ಲಿ ವಸುರಾಯನಿಂದ ಚ ನ್ನಾಗಿ ಪೂಜೆಯಗೊಂಡ ಭಕುತಿಭರಕೆ ಮೆಚ್ಚಿ | ಆಗಮ ವಂದ್ಯನಾದಿ ವಿಜಯವಿಠಲರೇಯ | ಬಾಗಿದ ಜನಕೆ ಸದ್ಗತಿಯಾ ಕೊಡುವಾ ಒಲಿದೂ ||೫|| ಜತೆ ಧ್ವಜಪುರಿನಿಲಯಾ ಪಾರ್ವತಿಪತಿ ಪುರವೈರಿ | ವಿಜಯವಿಠಲನ ಪ್ರೀಯಪಾವನ ಕಾಯಾ ||೬|| dhruvataaLa rudrENa lavaNaaMbhasi eMbo pramaaNa I sa | mudradoLage hattu mahaakalpaa | iddu kShaarOdaka paanamaaDi padavi | siddha maaDikoMDu narasiMhana hRudayadalli iTTu kailaasapati taanu | triddasharalli mahaadEvanenisi | padmajaa pradhaanaa vaayuriMdaali nODe | vidyaadalli kaDime muktili saha | nirdhaaraa tiLidu nityaa smarisI | nirdOSharaaguvaru sajjanarU | shuddha mUruti namma vijayaviThalarEyaa | rudrana paalipa prabhuve enni ||1|| maTTataaLa girijaapati shivanu niruta vairaagyadali | irutippanu tanna parivaarada oDane | siri raamanaamaa smaraNemaaDikoLutaa | surarige guruvenisi parama | puruSha namma vijayaviThalaniMdaa | sharaNara bhaya uttaara maaDuvaa karuNi ||2|| triviDitaaLa bhasmaasuranu mahatapamaaDi ugradali | pashupatiyaa olisida bhakutiyiMda | asamanEtranu baMdu nuDida ninagEnu | kushala bEkenalu vaMdisi talevaagi | vasudhiyoLage citraavara oMdu koDu eMdu | besasIdanu urihastaa karuNiseMdU | eseva maatige satiyiMdaagale avanu | pushiyilladaage parIkShisuvenenalU | dashegeTTu muMdaaNa yOcane tOrade | dashadishige ODidaa bhItiyiMda | asuraa beMbiDade barutiralu pUrvadalliddaa | vasati ide eMdu aDagidaanalli | asura saMhara shiri vijayaviThalarEyaa | nasunagutaa aidida naarivEShava taaLi ||3|| aTTataaLa shivanu kEshavage daanavana aTTuLige gaa | travanu baLali moreyiTTU maatige tri | bhuvana beragaage yuvati rUpava taaLi | navanava mOhaka koutukavane tOri | avana vaMcisi ATavanu ADida daa | navana saMharisida pavanagiriyalli | pavitura mUruti | kavi manOhara namma vijayaviThalarEyaa | avaniyoLage vElaapurada canniga kaaNo ||4|| AditaaLa yaaga maaDida brahmaa munigaLa kUDa illi | bhaagakoDuvadakke tapOdhanaa uLLa kOTE yOgIshvararakaiyya paarthiva pUjisi Aga karisida shivana kUpadiMdUrdhvakke | bhUgOLadoLagide kOTIshvara pashcima | saagara tIradalli opputide kELi | naagabhUShaNa illi vasuraayaniMda ca nnaagi pUjeyagoMDa bhakutibharake mecci | Agama vaMdyanaadi vijayaviThalarEya | baagida janake sadgatiyaa koDuvaa olidU ||5|| jate dhvajapurinilayaa paarvatipati puravairi | vijayaviThalana prIyapaavana kaayaa ||6||



 

Comments

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru