ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸಾಮೂಹಿಕ ಭಜನೆ | ಸೀತಾರಾಮ ಸೀತಾರಾಮ | ಹಯವದನ | Seetharama Seetharama | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಸೀತಾರಾಮ ಸೀತಾರಾಮ ಸೀತಾರಾಮ ಶ್ರೀ ರಘುರಾಮ ||ಪ|| 

ಕೇಶವ ರೂಪನೆ ಕರುಣಾತ್ಮಕನೇ, ಕಾರುಣ್ಯರೂಪನೆ ಕಮಲನಯನ ಹರಿ ||೧|| 
ನಾರಾಯಣನೆ ನಾಮ ಸಹಸ್ರನೇ, ನಾರದ ವಂದಿತ ನರನ ಸಾರಥಿ ಹರಿ ||೨|| 

ಮಾಧವ ಮಹಿಮನೇ ಮಣಿಗಣ ಭೂಷಣ, ಮಕರ ಕುಂಡಲಧರ ಮಾರಜನಕ ಹರಿ ||೩|| 
ಗೋವಿಂದಾತ್ಮನೇ ಗೋಪಾಲಕನೇ, ಗೋಕುಲದೊಡೆಯನೇ, ಗೋಪಿಯ ಸುತ ಹರಿ ||೪|| 

ವಿಷ್ಣು ಎನಿಪನೇ, ವಿದುರ ವಂದಿತನೇ, ವಿಶ್ವವ್ಯಾಪಕ, ವಿಶ್ವರೂಪ ಹರಿ ||೫|| 
ಮಧುಸೂದನನೇ, ಮಾಯಾರೂಪನೇ ಮಾಯಾನಾಟಕ, ಮಹಿಮಾಂಬುಧಿ ಹರಿ ||೬|| 

ತ್ರಿವಿಕ್ರಮನೇ ತ್ರಿಗುಣ ವರ್ಜಿತನೇ, ತ್ರಿಮೂರ್ತಿಗೊಡೆಯನೇ ತ್ರಿಜಗವಂದಿತ ಹರಿ ||೭|| 
ವಾಮನ ನಾಮನೇ, ವಾರಿಧಿ ಬಂಧನ, ದಾಸವಂದಿತ, ವೈಭವ ಶೋಭಿತ ಹರಿ ||೮|| 

ಶ್ರೀಧರ ರೂಪನೇ, ಶ್ರೀ ವತ್ಸಲಾಂಛನ, ಶ್ರೀರಮೆಯರಸನೇ, ಶ್ರೀ ಕರ್ತೃಹರಿ ||೯|| 
ಪದ್ಮನಾಭನೆ, ಪದ್ಮಾವದನನೆ, ಪದ್ಮಾ ಪದದ್ವಯ, ಪದ್ಮನಯನ ಹರಿ ||೧೦|| 

ದಾಮೋದರನೇ ದಾನವಾಂತಕನೆ ದಶಾವತಾರನೇ ದರಾಧಿಪತಿ ಹರಿ ||೧೧|| 
ಸಂಕರ್ಷಣನೇ ಶತಶಿರ ಹರಣನೇ, ಶ್ಯಾಮಲವರ್ಣನೇ ಶಂಖಚಕ್ರಧರ ಹರಿ ||೧೨|| 
 
ವಾಸುದೇವನೇ ವಟಪತ್ರ ಶಯನನೇ, ವಸುದೇವತನಯನೆ ವನಜನಾಭ ಹರಿ ||೧೩|| 
ಪ್ರದ್ಯುಮ್ನ ಹರಿ ಪಾವನ ರೂಪಕ ಪಂಡಿತ ರಕ್ಷಕ ಅಪಾರ ಮಹಿಮ ಹರಿ ||೧೪|| 

ಅನಿರುದ್ಧ ಹರಿ ಅಪಾರ ಮಹಿಮನೇ ಅಗಣಿತ ಗುಣಗಣ ಅತಿ ಸುಂದರ ಹರಿ ||೧೫|| 
ಪುರುಷೋತ್ತಮನೇ ಪುಣ್ಯ ಚರಿತ್ರನೇ ಪುರಾಣ ಪುರುಷನೇ ಪೂತನಿಹರ ಹರಿ ||೧೬||

ಅಧೋಕ್ಷಜ ಹರಿ ಅಕ್ರೂರ ವರದನೇ ಅಕಳಂಕ ಚರಿತನೇ ಆತ್ಮರಕ್ಷಕ ಹರಿ ||೧೭|| 
ನಾರಸಿಂಹನೇ ನಖವ ಧರಿಸಿದ ನಾಮ ಸಹಸ್ರನೇ ನರನ ಸಾರಥಿ ಹರಿ ||೧೮|| 

ಅಚ್ಯುತ ಅನಂತನೇ ಅಖಂಡ ಮಹಿಮನೇ ಆಶ್ರಿತ ರಕ್ಷಕ ಆತ್ಮ ಸ್ವರೂಪ ಹರಿ ||೧೯|| 
ಜನಾರ್ದನ ಹರಿ ಜಂಬಾರಿ ವಂದಿತ ಜಾನಕಿ ರಮಣನೆ ಜಯ ವಿಕ್ರಮ ಹರಿ ||೨೦||

ಉಪೇಂದ್ರ ವರದನೇ ಉದರ ಪೋಷಕನೇ ಉಚಿತಾನಂತನೇ ಉತ್ತಮೋತ್ತಮ ಹರಿ ||೨೧|| 
ಹರಿಯೆನಿಸಿಹನೇ ಅರಿಯ ಮರ್ಧಿಸಿದನೇ ಹರಿ ಹಯ ರೂಪನೆ ಹಯವದನನೆ ಹರಿ ||೨೨|| 

sItArAma sItArAma sItArAma SrI raGurAma ||pa|| 

kESava rUpane karuNAtmakanE, kAruNyarUpane kamalanayana hari ||1|| 
nArAyaNane nAma sahasranE, nArada vaMdita narana sArathi hari ||2|| 

mAdhava mahimanE maNigaNa BUShaNa, makara kuMDaladhara mArajanaka hari ||3|| 
gOviMdAtmanE gOpAlakanE, gOkuladoDeyanE, gOpiya suta hari ||4|| 

viShNu enipanE, vidura vaMditanE, viSvavyApaka, viSvarUpa hari ||5|| 
madhusUdananE, mAyArUpanE mAyAnATaka, mahimAMbudhi hari ||6|| 

trivikramanE triguNa varjitanE, trimUrtigoDeyanE trijagavaMdita hari ||7|| 
vAmana nAmanE, vAridhi baMdhana, dAsavaMdita, vaiBava SOBita hari ||8|| 

SrIdhara rUpanE, SrI vatsalAMCana, SrIrameyarasanE, SrI kartRuhari ||9|| 
padmanABane, padmAvadanane, padmA padadvaya, padmanayana hari ||10|| 

dAmOdaranE dAnavAntakane daSAvatAranE darAdhipati hari ||11|| 
saMkarShaNanE ShataSira haraNanE, SyAmalavarNanE SaMKacakradhara hari ||12||

vAsudEvanE vaTapatra SayananE, vasudEvatanayane vanajanABa hari ||13|| 
pradyumna hari pAvana rUpaka paMDita rakShaka apAra mahima hari ||14|| 

aniruddha hari apAra mahimanE agaNita guNagaNa ati suMdara hari ||15|| 
puruShOttamanE puNya caritranE purANa puruShanE pUtanihara hari ||16||

adhOkShaja hari akrUra varadanE akaLaMka caritanE AtmarakShaka hari ||17|| 
nArasiMhanE naKava dharisida nAma sahasranE narana sArathi hari ||18|| 

acyuta anaMtanE aKaMDa mahimanE ASrita rakShaka Atma svarUpa hari ||19|| 
janArdana hari jaMbAri vaMdita jAnaki ramaNane jaya vikrama hari ||20||

upEMdra varadanE udara pOShakanE ucitAnaMtanE uttamOttama hari ||21|| 
hariyenisihanE ariya mardhisidanE hari haya rUpane hayavadanane hari ||22|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru