ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಾದಿರಾಜರ ಶ್ರೀ ಕೇಶವ ಪಂಚರತ್ನ ಕೀರ್ತನೆ | ಕೃಷ್ಣ ಮುರಾರಿ | Krishna Murari | Pancharatna Keerthane | Vadirajaru



ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಶ್ರೀ ಕೇಶವ ಪಂಚರತ್ನ ಕೀರ್ತನೆ 

ಕೃಷ್ಣಮುರಾರಿ ಕೇಶವ ಮುರಾರಿ | 
ಅಚ್ಯುತಾನಂತ ಗೋವಿಂದ ಮುರಾರಿ || ಪ ||

ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿ | 
ಭೂಸುರರಿಗ್ವರವನಿತ್ತ್ಯೋ ಕೇಶವ ಮುರಾರಿ || ೧ ||

ನಾ ತಾಳಲಾರೆನೊ ಲೋಕಾಧಿಪತಿಯೆ ಕಾಯೊ|
ಅನಾಥರಕ್ಷಕ ನಾರಾಯಣನೆ ಮುರಾರಿ || ೨ ||

ಮನಸು ನಿಲ್ಲದು ದೇವ ಮಾರನಟ್ಟುಳಿಗೆನ್ನ |
ಮನಕಾಗಿ ನೀನೆ ಬಾರೊ ಮಾಧವ ಮುರಾರಿ || ೩ ||

ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿ|
ಗೋಪಿಯರರಸ ಗೋವಿಂದ ಮುರಾರಿ || ೪ ||

ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ|
ದಿಷ್ಟಾರ್ಥವನೀವ ವಿಷ್ಣು ಮುರಾರಿ || ೫ ||

ಮಧುರವಾಕ್ಯಗಳಿಂದ ಮಂದಿರಕಾಗಿ ಬಾರೊ| 
ಮನಸಿಜನಯ್ಯ ಮಧುಸೂದನ ಮುರಾರಿ || ೬ ||

ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂದ |
ಮುದ್ದುನಸುನಗೆಯ ತ್ರಿವಿಕ್ರಮ ಮುರಾರಿ || ೭ ||

ಕಾಮಿನಿ ಅಗಲಿ ಬಂದು ಸೀಮೆನಾಳುವನೆಂದು|
ನೇಮವಾಕ್ಯದಿ ನಿಂದ ವಾಮನ ಮುರಾರಿ || ೮ ||

ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿ| 
ಸಿಂಧುಶಯನ ಶ್ರೀಧರನೆ ಮುರಾರಿ || ೯ ||

ಋಷಿಗಳಿಗ್ವರವನಿತ್ತು ಬೃಂದಾವನದಲ್ಲಿ ನಿಂದು| 
ಹರುಷವಾರಿಧಿ ಹೃಷಿಕೇಶ ಮುರಾರಿ || ೧೦ ||

ಪಾವನ್ನ ಮೂರುತಿ ಪರಮದಯಾಳು ನೀನೆ | 
ಪಾಲಿಸೊ ಶ್ರೀ ಪದ್ಮನಾಭ ಮುರಾರಿ || ೧೧ ||

ದಾನವರ ಮರ್ದಿಸಿ ಸುಮನಸರಿಗೊಲಿದ | 
ದಾನದತ್ತನೆ ದಾಮೋದರನೆ ಮುರಾರಿ || ೧೨ ||

ಶಂಕೆಯಿಲ್ಲದೆ ಗೆಲಿಸು ಶಂಖಚಕ್ರವ ಧರಿಸಿ ಅ|
ಲಂಕಾರವಾದ ಸಂಕರ್ಷಣನೆ ಮುರಾರಿ || ೧೩ ||

ಶೇಷಶಯನ ಸಾಧು ಸಜ್ಜನರ ಪೋಷ | 
ನೀ ಸಲವೊ ವಾಸುದೇವ ಮುರಾರಿ || ೧೪ ||

ಇದ್ದ ಗೋಪೇರ ಮನೆಯ ಕದ್ದು ಬೆಣ್ಣೆಯ ಮೆದ್ದ |
ಪದ್ಮದಳಾಕ್ಷ ಪ್ರದ್ಯುಮ್ನ ಮುರಾರಿ || ೧೫ ||

ಅನಿಮಿಷನಾಗಿ ಬಂದು ಯಾದವರನೆಲ್ಲ ಗೆಲಿದ |
ಆಮಹಾಮಹಿಮ ಅನಿರುದ್ಧ ಮುರಾರಿ || ೧೬ ||

ಪುನುಗುಕಸ್ತೂರಿಗಂಧ ಪರಿಮಳಪುಷ್ಪದಿಂದ |
ಪುಣ್ಯಮೂರುತಿಪುರುಷೋತ್ತಮನೆ ಮುರಾರಿ || ೧೭ || 

ರಕ್ಷಿಸೋ ನೀ ಎನ್ನ ಅಕ್ಷಯದಿಂದಲಿ | 
ರಕ್ಷಿಸೋ ಅವನಿ ಅಧೋಕ್ಷಜ ಮುರಾರಿ || ೧೮ ||

ನಾನೇನ ಪೇಳಲಿ ನಗೆನಗೆಯಲ್ಲಿ ಅಕ್ಷಿ | 
ಕ್ರೂರವಾಯಿತು ನಾರಸಿಂಹ ಮುರಾರಿ || ೧೯ ||

ಮೆಚ್ಚಿದೆ ನಾ ನಿನ್ನ ಪಕ್ಷಿವಾಹನಸ್ವಾಮಿ | 
ಮುಚ್ಚುಮರೆಗಳ್ಯಾಕೊ ಅಚ್ಯುತ ಮುರಾರಿ || ೨೦ ||

ಜಾಣತನದಿ ಪೋಗಿ ಜಾರಸ್ತ್ರೀಯರನ್ನು | 
ಒಡಗೂಡಿ ಆಡಿದ ಜನಾರ್ದನ ಮುರಾರಿ || ೨೧ ||

ಉಗುರಲ್ಲಿ ಹಿರಣ್ಯಕನ ಸೀಳಿ ಉರದಲ್ಲಿ ಮಾಲೆಯ ಧರಿಸಿ | 
ಉಬ್ಬಲ್ಲಿ ಮೆರದ ಉಪೇಂದ್ರ ಮುರಾರಿ || ೨೨ ||

ಹಿರಣ್ಯಕನ ತನಯನಂದು ಕರೆಯೆ ಕಂಬದಿ ಬಂದ | 
ಗರುವದಿಂದಲೆ ನರಹರಿಯೆ ಮುರಾರಿ || ೨೩ ||

ಅಟ್ಟ‍ಅಡವಿಯ ತಪಸು ಎಷು ದಿನವೊ ಸ್ವಾಮಿ | 
ಪಟ್ಟಣಕಾಗಿ ಬಾರೊ ಕೃಷ್ಣಮುರಾರಿ || ೨೪ ||

ಎಲ್ಲರ ಸಲಹಿದ ಫುಲ್ಲಲೋಚನ ಸ್ವಾಮಿ | 
ಪಾಲಿಸೊ ಶ್ರೀಹಯವದನ ಮುರಾರಿ || ೨೫ ||

Sri Keshava Pancharatna Keerthane

kRuShNa murAri kESava murAri | 
acyutAnaMta gOviMda murAri || pa ||

vEShadhAriyAgi baMdu asurara saMharisi | 
BUsurarigvaravanittyO kESava murAri || 1 ||

nA tALalAreno lOkAdhipatiye kAyo|
anAtharakShaka nArAyaNane murAri || 2 ||

manasu nilladu dEva mAranaTTuLigenna |
manakAgi nIne bAro mAdhava murAri || 3 ||

anEka gOvgaLa kAyda gOpAlamUruti|
gOpiyararasa gOviMda murAri || 4 ||

kaTTida kAmaneya biTTu  kaLaci mana|
diShTArthavanIva viShNu murAri || 5 ||

madhuravAkyagaLiMda maMdirakAgi bAro| 
manasijanayya madhusUdana murAri || 6 ||

tiddida kasturitilaka tigurida parimaLagaMda |
muddunasunageya trivikrama murAri || 7 ||

kAmini agali baMdu sImenALuvaneMdu|
nEmavAkyadi niMda vAmana murAri || 8 ||

SrIyarasa mELadi ramisi bahukAladi| 
siMdhuSayana SrIdharane murAri || 9 ||

RuShigaLigvaravanittu bRuMdAvanadalli niMdu| 
haruShavAridhi hRuShikESa murAri || 10 ||

pAvanna mUruti paramadayALu nIne | 
pAliso SrI padmanABa murAri || 11 ||

dAnavara mardisi sumanasarigolida | 
dAnadattane dAmOdarane murAri || 12 ||

SaMkeyillade gelisu SaMKacakrava dharisi a|
laMkAravAda saMkarShaNane murAri || 13 ||

SEShaSayana sAdhu sajjanara pOSha | 
nI salavo vAsudEva murAri || 14 ||
 
idda gOpEra maneya kaddu beNNeya medda |
padmadaLAkSha pradyumna murAri || 15 ||

animiShanAgi baMdu yAdavaranella gelida |
AmahAmahima aniruddha murAri || 16 ||

punugukastUrigaMdha parimaLapuShpadiMda |
puNyamUrutipuruShOttamane murAri || 17 || 

rakShisO nI enna akShayadiMdali | 
rakShisO avani adhOkShaja murAri || 18 ||

nAnEna pELali nagenageyalli akShi | 
krUravAyitu nArasiMha murAri || 19 ||

meccide nA ninna pakShivAhanaswAmi | 
muccumaregaLyAko achyuta murAri || 20 ||

jANatanadi pOgi jArastrIyarannu | 
oDagUDi ADida janArdana murAri || 21 ||

uguralli hiraNyakana sILi uradalli mAleya dharisi | 
ubballi merada upEMdra murAri || 22 ||

hiraNyakana tanayanaMdu kareye kaMbadi baMda | 
garuvadiMdale narahariye murAri || 23 ||

aTTa^aDaviya tapasu eShu dinavo svaami | 
paTTaNakAgi bAro kRuShNamurAri || 24 ||

ellara salahida PullalOcana svAmi | 
pAliso SrIhayavadana murAri || 25 ||

 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru