ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೇಶವ ಮಾಧವ ಗೋವಿಂದ | ಪುರಂದರ ವಿಠಲ | Keshava Madhava | Purandara vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ಕೇಶವ ಮಾಧವ ಗೋವಿಂದ ವಿಠ್ಠಲೆಂಬ ದಾಸಯ್ಯ ಬಂದ ಕಣೇ || ಪ ||
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಣೇ || ಅಪ ||

ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಣೇ|
ಭಳಿಳನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಣೇ|
ಇಳೆಯ ಕದ್ದಾಸುರನ ಕೋರೇ ದಾಡಿಲಿ ಕೊಂದ ದಾಸಯ್ಯ ಬಂದ ಕಣೇ |
ಛಲದಿ ಕಂಭದಿ ಬಂದು ಅಸುರನ್ನ ಸೀಳಿದ ದಾಸಯ್ಯ ಬಂದ ಕಣೇ || ೧ ||

ಬಲಿಯ ದಾನವ ಬೇಡಿ ನೆಲವ ಅಳೆದು ನಿಂದ ದಾಸಯ್ಯ ಬಂದ ಕಣೇ |
ಛಲದಿ ಕ್ಷತ್ರಿಯರ ಕುಲವ ಸಂಹರಿಸಿದ ದಾಸಯ್ಯ ಬಂದ ಕಣೇ ||
ಲಲನೆಯನೊಯ್ಯಲು ತಲೆ ಹತ್ತನ ಕೊಂದ ದಾಸಯ್ಯ ಬಂದ ಕಣೇ |
ನೆಲಕ್ಕೊತ್ತಿ ಕಂಸನ ಬಲವ ಸಂಹರಿಸಿದ ದಾಸಯ್ಯ ಬಂದ ಕಣೇ || ೨ ||

ಪುಂಡತನದಿ ಪೋಗಿ ಪುರವನುರುಪಿ ಬಂದ ದಾಸಯ್ಯ ಬಂದ ಕಣೇ |
ಲಂಡರ ಸದೆಯಲು ತುರಗವನೇರಿದ ದಾಸಯ್ಯ ಬಂದ ಕಣೇ ||
ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದ ದಾಸಯ್ಯ ಬಂದ ಕಣೇ |
ಪಾಂಡುರಂಗ ನಮ್ಮ ಪುರಂದರ ವಿಠಲ ದಾಸಯ್ಯ ಬಂದ ಕಣೇ || ೩ ||

kESava mAdhava gOviMda viThThaleMba dAsayya baMda kaNE || pa ||
dOSharahita naravEShava dharisida dAsayya baMda kaNE || apa ||

KaLanu vEdavanoyye poLeva kAyanAda dAsayya baMda kaNE|
BaLiLane kUrma tAnAgi giriya potta dAsayya baMda kaNE|
iLeya kaddAsurana kOrE dADili koMda dAsayya baMda kaNE |
Caladi kaMBadi baMdu asuranna sILida dAsayya baMda kaNE || 1 ||

baliya dAnava bEDi nelava aLedu niMda dAsayya baMda kaNE |
Caladi kShatriyara kulava saMharisida dAsayya baMda kaNE ||
lalaneyanoyyalu tale hattana koMda dAsayya baMda kaNE |
nelakkotti kaMsana balava saMharisida dAsayya baMda kaNE || 2 ||

puMDatanadi pOgi puravanurupi baMda dAsayya baMda kaNE |
laMDara sadeyalu turagavanErida dAsayya baMda kaNE ||
hiMDu vEdagaLella arasi nODalu sigada dAsayya baMda kaNE |
pAMDuraMga namma puraMdara viThala dAsayya baMda kaNE || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru