ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮೂಲೋಕದೊಳಗೆ ಮುಕುಂದನೆ | ಹಯವದನ | Moolokadolage Mukundane | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಮೂಲೋಕದೊಳಗೆ ಮುಕುಂದನೇ ದೈವವು
ಇದಕಾಲೋಚನೆಯ ಮಾಡಬೇಡ 
ಲೋಲಾಕ್ಷಿ ಎಂದೆಂದು ಬಿಡ ಅಲ್ಲದಿದ್ದರೆ
ಮೇಲಣ ಸಂಪದವ ಕೊಡ ಇಂಥವನಾವ || ಪ. ||

ಆಡಲೇಕಿನ್ನು ಸಖಿ ಅಂಜಿದವನಂತೋಡುವ
ಕಾಡುವ ಖಳನಾಗಿ ನಿಂತ ಇವ
ರೂಢಿಯೊಳಗೆ ಬಲುದೈತ್ಯ ಇದನೋಡಿ
ಪಾಡುವರು ಸುಖ ನಲಿವುತ್ತ ಇಂಥವನಾವ || ೧ ||

ಕಾಳೀಯ ನಾಗನ ತುಳಿದ ಮತ್ತವಗೊಲಿದ
ಬಾಲಗೋಪಾಲ ಸುಕೃಪಾಳು ಇವ
ನಾಳು ನಾನೆಂದು ಸಖಿ ಬಾಳು ಗಿರಿಯ ಭಾರವ
ತಾಳಿತಿವನದೊಂದು ತೋಳು ಇಂಥವನಾವ  || ೨ ||

ಕಣ್ಣಾರೆ ಕಂಡೆವಲ್ಲ ಮಣ್ಣಮೆದ್ದೆಯೆನಲು
ಸಣ್ಣ ಬಾಯೊಳು ಸರ್ವಜಗವ ಎಲೆ
ಹೆಣ್ಣೆ ತೋರಿ ತೊಳೆದ ನಮ್ಮಘವ ಇನ್ನು ಹಯವ
ದನ್ನ ತನ್ನದನೆನ್ನಾಳುವ ಇಂಥವನಾವ || ೩ ||

mUlOkadoLage mukuMdanE daivavu
idakAlOcaneya mADabEDa 
lOlAkShi eMdeMdu biDa alladiddare
mElaNa saMpadava koDa iMthavanAva || pa. ||

ADalEkinnu saKi aMjidavanaMtODuva
kADuva KaLanAgi niMta iva
rUDhiyoLage baludaitya idanODi
pADuvaru suKa nalivutta iMthavanAva || 1 ||

kALIya nAgana tuLida mattavagolida
bAlagOpAla sukRupALu iva
nALu nAneMdu saKi bALu giriya BArava
tALitivanadoMdu tOLu iMthavanAva  || 2 ||

kaNNAre kaMDevalla maNNameddeyenalu
saNNa bAyoLu sarvajagava ele
heNNe tOri toLeda nammaGava innu hayava
danna tannadanennALuva iMthavanAva || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru