ನಾರಾಯಣ ನಾರಾಯಣ ಗೋವಿಂದ ಹರೀ
ನಾರಾಯಣ ನಾರಾಯಣ ಗೋವಿಂದ ||ಪ||
ನಾರಾಯಣ ಗೋವಿಂದ ಗೋವಿಂದ ಮುಕುಂದ ಪರತರ ಪರಮಾನಂದ ||ಅಪ||
(ಬದರಿ, ಪಂಢರಿ, ಉಡುಪಿ, ರಂಗ, ತಿರುಮಲ, ವೆಂಕಟ)
ಮೊದಲು ಮತ್ಸ್ಯನಾಗಿ ಉದಿಸಿ ಸೋಮನ ಸದೆದು ವೇದಗಳ ತಂದ |
ಮಂದರಧರ ತಾ ಸಿಂಧುವಿನೊಳಮೃತ ತಂದು ಭಕ್ತರಿಗೆ ಉಣಲೆಂದ
ನಾರಾಯಣ ನಾರಾಯಣ ಗೋವಿಂದ
ಹರಿ ನಾರಾಯಣ ನಾರಾಯಣ ಗೋವಿಂದ
ಮತ್ಸ್ಯ ನಾರಾಯಣ ನಾರಾಯಣ ಗೋವಿಂದ
ಕೂರ್ಮ ನಾರಾಯಣ ನಾರಾಯಣ ಗೋವಿಂದ
ಭೂಮಿಯ ಕದ್ದಾ ಖಳನ ಮರ್ದಿಸಿ ಆ ಮಹಾಸತಿಯೆಳ ತಂದ
ದುರುಳ ಹಿರಣ್ಯನ ಕರುಳು ಬಗೆದು ತನ್ನ ಕೊರಳೊಳಗಿಟ್ಟಾ ಬಗೆಯಿಂದಾ
ನಾರಾಯಣ ನಾರಾಯಣ ಗೋವಿಂದ
ಹರಿ ನಾರಾಯಣ ನಾರಾಯಣ ಗೋವಿಂದ
ವರಾಹ ನಾರಾಯಣ ನಾರಾಯಣ ಗೋವಿಂದ
ನರಹರಿ ನಾರಾಯಣ ನಾರಾಯಣ ಗೋವಿಂದ
ಪುಟ್ಟನಾಗಿ ಮಹಿಕೊಟ್ಟ ಬಲಿಯ ತಲೆ ಮೆಟ್ಟಿ ತುಳಿದ ದಯದಿಂದ
ಧಾತ್ರಿಯೊಳು ಮುನಿ ಪುತ್ರನಾಗಿ ಬಂದು ಕ್ಷತ್ರಿಯರೆಲ್ಲರ ಕೊಂದ
ನಾರಾಯಣ ನಾರಾಯಣ ಗೋವಿಂದ
ಹರಿ ನಾರಾಯಣ ನಾರಾಯಣ ಗೋವಿಂದ
ವಾಮನ ನಾರಾಯಣ ನಾರಾಯಣ ಗೋವಿಂದ
ಭಾರ್ಗವ ನಾರಾಯಣ ನಾರಾಯಣ ಗೋವಿಂದ
ಮಡದಿಗಾಗಿ ಸರಗಡಲನೆ ಕಟ್ಟಿ ಹಿಡಿದು ರಾವಣನ ಕೊಂದ
ಗೋಕುಲದಿ ಪುಟ್ಟಿ ಗೋವಳನೆ ಕಾಯ್ದ ಗೋಪಾಲಕೃಷ್ಣ ತಾ ಬಂದ
ನಾರಾಯಣ ನಾರಾಯಣ ಗೋವಿಂದ
ಹರಿ ನಾರಾಯಣ ನಾರಾಯಣ ಗೋವಿಂದ
ರಾಮ ನಾರಾಯಣ ನಾರಾಯಣ ಗೋವಿಂದ
ಕೃಷ್ಣ ನಾರಾಯಣ ನಾರಾಯಣ ಗೋವಿಂದ
ಛಲದಲಿ ತ್ರಿಪುರರ ಸತಿಯರ ವ್ರತದ ಫಲವನಳಿದ ಮುದದಿಂದ
ಧರೆಯೊಳು ಪರಮಾ ನೀಚರ ಸವರಿ ಕುದುರೆಯೇರಿದ ಕಲ್ಕಿ ಚಂದ
ನಾರಾಯಣ ನಾರಾಯಣ ಗೋವಿಂದ
ಹರಿ ನಾರಾಯಣ ನಾರಾಯಣ ಗೋವಿಂದ
ಬುದ್ಧ ನಾರಾಯಣ ಗೋವಿಂದ
ಕಲ್ಕಿ ನಾರಾಯಣ ಗೋವಿಂದ
ದೋಷದೂರ ಶ್ರೀ ಪುರಂದರ ವಿಠಲ ಪೋಷಿತ ಭಕ್ತ
ಸುವೃಂದ
nArAyaNa nArAyaNa gOviMda harI
nArAyaNa nArAyaNa gOviMda ||pa||
nArAyaNa gOviMda gOviMda mukuMda paratara paramAnaMda ||apa||
(badari, paMDhari, uDupi, raMga, tirumala, veMkaTa)
modalu matsyanAgi udisi sOmana sadedu vEdagaLa taMda |
maMdaradhara tA siMdhuvinoLamRuta taMdu Baktarige uNaleMda
nArAyaNa nArAyaNa gOviMda
hari nArAyaNa nArAyaNa gOviMda
matsya nArAyaNa nArAyaNa gOviMda
kUrma nArAyaNa nArAyaNa gOviMda
BUmiya kaddA KaLana mardisi A mahAsatiyeLa taMda
duruLa hiraNyana karuLu bagedu tanna koraLoLagiTTA bageyiMdA
nArAyaNa nArAyaNa gOviMda
hari nArAyaNa nArAyaNa gOviMda
varAha nArAyaNa nArAyaNa gOviMda
narahari nArAyaNa nArAyaNa gOviMda
puTTanAgi mahikoTTa baliya tale meTTi tuLida dayadiMda
dhAtriyoLu muni putranAgi baMdu kShatriyarellara koMda
nArAyaNa nArAyaNa gOviMda
hari nArAyaNa nArAyaNa gOviMda
vAmana nArAyaNa nArAyaNa gOviMda
BArgava nArAyaNa nArAyaNa gOviMda
maDadigAgi saragaDalane kaTTi hiDidu rAvaNana koMda
gOkuladi puTTi gOvaLane kAyda gOpAlakRuShNa tA baMda
nArAyaNa nArAyaNa gOviMda
hari nArAyaNa nArAyaNa gOviMda
rAma nArAyaNa nArAyaNa gOviMda
kRuShNa nArAyaNa nArAyaNa gOviMda
Caladali tripurara satiyara vratada PalavanaLida mudadiMda
dhareyoLu paramA nIcara savari kudureyErida kalki caMda
nArAyaNa nArAyaNa gOviMda
hari nArAyaNa nArAyaNa gOviMda
buddha nArAyaNa gOviMda
kalki nArAyaNa gOviMda
dOShadUra SrI puraMdara viThala pOShita Bakta
suvRuMda