ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹ್ಯಾಂಗೆ ಮೆಚ್ಚಿಸಲಿ ನಿನ್ನ ಶ್ರೀಹರಿ | ಪುರಂದರ ವಿಠಲ | Hyange Mechisali Ninna Srihari | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ಹ್ಯಾಂಗೆ ಮೆಚ್ಚಿಸಲಿ ನಿನ್ನ ಶ್ರೀ ಹರಿ ಹ್ಯಾಂಗೆ ಅರ್ಚಿಸಲಿ ನಿನ್ನ ಶ್ರೀಹರಿ || ಪ ||
ನಾಗಶಯನನೆ ನಾರದ ವಂದ್ಯನೆ ದೇವಾ || ಅ.ಪ ||

ಮಂಗಳಾಭಿಷೇಕಕೆ ಉದಕ ತರುವೆನೆನೆ
ಗಂಗೆಯ ಉಂಗುಷ್ಟದಲ್ಲಿ ಪಡೆದಿರುವೆ |
ಸಂಗೀತ ಕೀರ್ತನೆ ಪಾಡುವೆನೆಂದರೆ
ತುಂಬುರು ನಾರದರು ಪಾಡುತಿಹರು ದೇವಾ || ೧ ||

ಪುಷ್ಪವನ್ನು ತಂದು ನಿನಗರ್ಪಿಸುವೆನೆಂದರೆ
ಪುಷ್ಪ ಪಲ್ಲವಿಸಿದೆ ಪೊಕ್ಕುಳಲ್ಲಿ |
ಇಪ್ಪ ತೆತ್ತೀಸಕೋಟಿ ದೇವರ್ಕಳದ
ಒಪ್ಪಿ ನೈವೇದ್ಯ ನೀಡಲು ತೃಪ್ತನಾಗುವೆ || ೨ ||

ಕೋಟಿ ಸೂರ್ಯರ ಪ್ರಭೆ ಮಿಗಿಲಾದಾತನಿಗೊಂದು
ದೀಪವನು ಹಚ್ಚಿದರೆ ಬೆಳಕಹುದೆ |
ಸಾಟಿಗಾಣದೆ ಲಕ್ಷ್ಮೀ ಉರಸ್ಥಳವಾಗಿರೆ
ಲೋಷ್ಟ ಕಾಸು ಯೆಂತು ಕಾಣಿಕೆ ನೀಡಲು || ೩ ||

ಹಾಸಿಗೆಯನ್ನು ತಂದು ಹಾಸುವೆನೆಂದರೆ
ಶೇಷನ ಮೇಲೆ ನೀ ಪವಡಿಸಿರ್ಪೆ |
ಬೀಸಣಿಗೆಯನು ತಂದು ಬೀಸುವೆನೆಂದರೆ
ಬೀಸುತಿಹನು ಖಗ ತನ್ನ ಪಕ್ಕದಲ್ಲಿ || ೪ ||

ನಿತ್ಯ ಗುಣಾರ್ಣವ ನಿಜಗುಣಪರಿಪೂರ್ಣ
ಸಚ್ಚಿದಾನಂದನೇ ಸನಕಾದಿವಂದ್ಯ | 
ಮುಕ್ತಿದಾಯಕ ನಮ್ಮ ಪುರಂದರ ವಿಠಲ
ಭಕ್ತಿದಾಯಕನೆಂದು ಸ್ತುತಿಸಿ ಕೊಂಡಾಡುವೆನೊ || ೫ ||

hyAMge mechchisali ninna shrI hari hyaaMge archisali ninna shrIhari || pa ||
nAgashayanane nArada vaMdyane dEvaa || a.pa ||

maMgaLABiShEkake udaka taruvenene
gaMgeya uMguShTadalli paDediruve |
saMgIta kIrtane pADuveneMdare
tuMburu nAradaru pADutiharu dEvA || 1 ||

puShpavannu taMdu ninagarpisuveneMdare
puShpa pallaviside pokkuLalli |
ippa tettIsakOTi dEvarkaLada
oppi naivEdya nIDalu tRuptanAguve || 2 ||

kOTi sUryara praBe migilAdAtanigoMdu
dIpavanu haccidare beLakahude |
sATigANade lakShmI urasthaLavAgire
lOShTa kAsu yeMtu kANike nIDalu || 3 ||

hAsigeyannu taMdu hAsuveneMdare
SEShana mEle nI pavaDisirpe |
bIsaNigeyanu taMdu bIsuveneMdare
bIsutihanu Kaga tanna pakkadalli || 4 ||

nitya guNArNava nijaguNaparipUrNa
saccidAnaMdanE sanakAdivaMdya | 
muktidAyaka namma puraMdara viThala
BaktidaayakaneMdu stutisi koMDADuveno || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru