ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕುಣಿದಾಡೊ ರಂಗ ನಲಿದಾಡೊ | ಹಯವದನ | Kunidado Ranga Nalidado | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಕುಣಿದಾಡೊ ರಂಗ ನಲಿದಾಡೊ || ಪ ||

ಕುಣಿದಾಡೊ ಕುಂದಣದ ಸರಳೆ 
ನಲಿದಾಡೊ ಮಾಣಿಕದ ಹರಳೆ || ಅ. ಪ ||

ಪತಿಶಾಪದಿ ಶಿಲೆಯಾದ ಗೌತಮ-
ಸತಿಯ ಮೆಟ್ಟಿ ಪೆಣ್ಣಮಾಡಿ 
ಅತಿದಿವ್ಯ ಶ್ರೀ ಚರಣಾರವಿಂದ 
ಗತಿಯಿಂದಲಿ ಧಿಂಧಿಮಿಕೆನ್ನುತ || ೧ ||

ಗಕ್ಕಸದಿಂ ಶಕಟಾಸುರನ 
ಸೊಕ್ಕ ಮುರಿದು ಬಂಡಿಯನೊದೆದು
ಚೊಕ್ಕ ಶ್ರೀಚರಣಾರವಿಂದ 
ಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ || ೨ ||

ಬಲಿಯ ಮೆಟ್ಟಿ ಕಾಳಿಂಗನ ಹೆಡೆಯ
ತುಳಿದು ನಾಟ್ಯವನಾಡಿ 
ಚೆಲುವ ಶ್ರೀಹಯವದನ ನಿಮ್ಮ 
ಘಲಿಘಲಿ ಗೆಜ್ಜೆ ಘಿಲುಘಿಲುಕೆನ್ನುತ || ೩ ||
       
kuNidaaDo ramga nalidaaDo ||pa|| 

kuNidaaDo kumdaNada saraLe 
nalidaaDo maaNikada haraLe ||a. pa|| 

pathishaapadi shileyaada gautham- 
sathiya meTTi peNNamaaDi 
athidivya shri charaNaaravimda 
gathiyimdali dhimdhimikennutha || 1 || 

gakkasadim shakaTaasurana 
sokka muridu bamDiyanodedu 
chokka shricharaNaaravimda 
dhikkiTa dhimikiTa jhhamkiTavennutha || 2 || 

baliya meTTi kaaLimgana heDeya 
thuLidu naaTyavanaaDi 
cheluva shrihayavadana nimma 
ghalighali gejje ghilughilukennutha || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru