ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು

Kruti: Sri Vijaya Dasaru



ಕಂಕಣಾಕಾರವನ್ನು ಬರೆದು ಅದರ ಮಧ್ಯ |
ಓಂಕಾರ ಎರಡು ಎಡ-ಬಲದಿ ರಚಿಸಿ |
ಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ |
ನಾಂಕನಯ್ಯನ ಪೀಠಸ್ಥಳವಿದೆಂದು |
ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆ ಎರಡಾ |
ಲಂಕಾರವನೆ ಮಾಡಿ ಅದರ ಬಳಿಯ |
ಕಂಕಣಾಕಾರವನ್ನು ಒಳಗೆ ಮಾಡಿಟ್ಟುಕೊಂಡು |
ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ |
ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ |
ಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ |
ಪಂಕಜ ಪಾಣಿಯು ಶ್ರೀ - ಭೂ - ದುರ್ಗಾನಾಮಕಳು |
ಪಂಕಜಾಕ್ಷನ ರೂಪ ಮೂರು ಉಂಟು |
ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು |
ಸಂಕೋಚವಾಗಿ ಇದೆ ದ್ವಿತೀಯ ವಲಯ |
ಪಂಕಜ ಮಿತ್ರ ಸೋಮ ಅಗ್ನಿ ಜನರ ನಾಗ
ಕಂಕಣ ಅನಲ ವರುಣ ದಿಕ್ಕಿಗೆ ರಚಿಸಿ |
ಕಿಂಕರ ಜನಪಾಲ ವಿಜಯ ವಿಠ್ಠಲ ಅಕ |
ಳಂಕನ ಭಜಿಸುವುದು ಹೃದಯದಲಿ ತಿಳಿದು ||೧||

ಮಟ್ಟ ತಾಳ

ಕರಿ ಅಜ ರಥ ವೀಥಿ ಎಂದೆಂಬುವ ಮೂರು |
ಬರೆದು ಇದಕೆ ಹನ್ನೆರಡು ರಾಶಿಗಳು ವಿ- |
ಸ್ತರವಾಗಿ ಉಂಟು ಎರಡೆರಡೊಂದು ಕಡೆ |
ಅರಿವದು ಸ್ಥಿಮಿತ ಸಮಗತಿ ತ್ವರಗತಿ ಸೂರ್ಯನ್ನ |
ಎರಡು ನಾಲಕು ಕೋಣೆ ವಿರಚಿಸಿ ಅದರ ಮೇಲೆ |
ಮರಳೆ ಮಧು - ಮಾಧವಾ ಕರೆಸುವ ಋತು ಒಂದು |
ಬರೆದು ಪ್ರಣವ ವಿವರ ಹೃದಯದಲ್ಲಿ ನಮ |
ಸ್ಕರಿಸು ಜ್ಞಾನಾತ್ಮನೆಂದು |
ಧರಿಸು ಈ ಪರಿ ಮೂರು ಎರಡು ಕೋಣಿಯ ಮಧ್ಯ |
ತರುವಾಯ ಮಾಸ - ಋತು ವರುಷ ತಾರಕ ಸಂ |
ಸ್ಮರಿಸಿ ಕ್ರಮ ವರ್ಣ ಹರಿ ಐಶ್ವರ್ಯಾದಿ |
ಪರಮ ಮೂರ್ತಿಗಳನ್ನು ಶಿರಸು ಮೊದಲು ಮಾಡಿ |
ಕರತಳ ಪದತನಕ ಚರಿತೆಯಾಕೊಂಡಾಡು |
ಗುರುತು ಆರು ಕೋಣೆ ಸರಿ ಉಪರಿಭಾಗ |
ಎರಡರ ಮಧ್ಯ ವರಣಂಗಳು ಉಂಟು |
ಅರಹುವೆ ಪ್ರಥಮದಲ್ಲಿ ಎರಡೆರಡು ನಾಲ್ಕು ೧. - 
"ಅ,ಆ,ಕ,ಖ,ಡ,ಢ,ಮ,ಯ" |
೨. ಎರಡನೆಯ ಮನಿಯಲ್ಲಿ ವರಣಗಳಿಪ್ಪವಯ್ಯ |
"ಇ,ಈ,ಉ,ಊ,ಗ,ಘ,ಣ,ತ,ರ,ಲ" |
೩. ಸ್ಮರಿಸು ಮೂರನೆ ಮನಿಯಲ್ಲಿರುತಿಪ್ಪ ಮಾತ್ರ 
"ಋ,ೠ,ಲೃ,ಲೄ,ಙ,ಚ,ಥ,ದ,ವ,ಶ" |
೪. ಕರಿಸಿಕೊಂಡವು ಇನಿತು ನಾಲ್ಕನೆ ಸ್ಥಾನದಲಿ
"ಎ,ಐ,ಛ,ಜ,ಧ,ನ,ಷ,ಸ" |
೫. ವರಣಂಗಳು ಗ್ರಹಿಸು ಐದನೆ ಮನಿಯಲ್ಲಿ |
"ಓ,ಔ,ಝ,ಞ,ಪ,ಫ,ಹ,ಳ" |
೬. ನಿರುತ ಇಪ್ಪುದು ಕೇಳಿ ಕಡಿಯಣ ಮನಿಯಲ್ಲಿ |
"ಅಂ,ಅಃ,ಟ,ಠ,ಬ,ಭ,ಕ್ಷ" ಬರೆದು ಈ ಪರಿಯಲ್ಲಿ 
ಆರುಮನಿಯ ಮಧ್ಯ |
ಸರಿ ಇಲ್ಲಿಗೆ ಎನ್ನಿ ತರುವಾಯ ನಾಲ್ಕು |
ಎರಡೂ ವಲಯಾಕಾರ ಎರಡು ಕೋಣಿಯ ಗಣಿತ |
ನಿರೀಕ್ಷಿಸಿ ಮನದಲ್ಲಿ ಪರಿಶುದ್ಧನಾಗಿ |
ಪರಮಪುರುಷ ನಮ್ಮ ವಿಜಯವಿಠ್ಠಲ ಮೂರ್ತಿಯ |
ಸ್ಮರಿಸು ಅಜ್ಯಾದಿಗಳ ನರಸಿಂಹ ಪರಿಯಂತ ||೨||

ರೂಪಕ ತಾಳ

ಆರು ಕೋಣಿಯ ಮೇಲೆ ವರ್ತುಳಾಕಾರವನ್ನು |
ಚಾರುವಾಗಿ ಬರೆದು ಅದರ ಸುತ್ತಲು ಎಂಟು |
ವಾರಿಜ ದಳವನ್ನು ರಚಿಸಿ ರಮ್ಯವಾಗಿ |
ಸೌರಿ ಸ್ವರ್ಭಾನು ಗುರು ಬುಧ ಶುಕ್ರ ಚಂದ್ರಮ |
ಧಾರುಣಿಸುತ ಕೇತು ಇವರನ್ನ ಮಧ್ಯ |
ಹಾರೈಸಿ ಬರೆದು ಇವರಿವರ ಬಳಿಯಲ್ಲಿ ಓಂ-|
ಕಾರ ಸಹಿತವಾಗಿ ನಮೋನಾರಾಯಣನೆಂಬೊ |
ಈರೆರಡು ನಾಲ್ಕು ವರ್ಣಗಳು ಒಂದೊಂದರಲ್ಲಿ |
ಆರಾಧಿಸಿ ಬರೆದು ಬೀಜಾಕ್ಷರವೆನ್ನು |
ಸಾರವನ್ನು ತಿಳಿ ಎಂಟು ವರ್ಣಮಿಳಿತ |
ತಾರಮಂತ್ರವೆ ಸತ್ಯ ಇದರ ನಿಯಾಮಕ ವಿಶ್ವ |
ಮೂರುತಿ ಮೊದಲಾದ ಅಷ್ಟ ರೂಪಂಗಳುಂಟು |
ಸೌರಿ ರಾಹು ಮಧ್ಯ ಆದಿ ವರ್ಣವೆ ಲಿಪಿಸಿ |
ದ್ವಿರಷ್ಟ ಮಾತ್ರಾ ವರ್ಗವ ಇದಕೆ ಇಂದಿರಾ |
ಮಾರುತ ದೇವನ್ನ ಬರೆದು ಶ್ರುತಿ ಕಾಲಗಳ |
ಈ ರೀತಿಯಿಂದಲಿ ವಿಶ್ವನ್ನ ಸ್ಮರಿಸೆ |
ಕಾರುಣ್ಯ ಮಾಡುವನು ಮುಂದೆ ಕ ವರ್ಗ ಉ- |
ಕಾರ ತೈಜಸ ದೇವನ ಬರೆದು ಕ ವರ್ಗಕ್ಕೆ |
ಧಾರುಣಿ ಉದಕಾಗ್ನಿ ವಾಯು ಗಗನ ಭೂತ |
ಮೂರೆರಡು ಸ್ಥಾಪಿಸಿ ಅಲ್ಲಿ ಮಾನಿಗಳನ್ನು |
ತಾರೇಶ-ಸ್ವರ್ಭಾನು ಮಧ್ಯದಲ್ಲಿ ಸಿದ್ಧಾ |
ಆ ರೋಹಿಣೆಯ-ಗುರು ಈರ್ವರ ನಡುವೆ ಮ- |
ಕಾರ ಪ್ರಾಜ್ಞ ಮೂರುತಿ ಚ ವರ್ಗ ಒಂದೊಂದಕೆ |
ಈರೆರಡು ಮೇಲೊಂದು ಜ್ಞಾನೇಂದ್ರಿಯಗಳುಂಟು |
ವಾರ ವಾರಕೆ ಬಿಡದೆ ತತ್ವೇಶರುಗಳವಾಸ |
ತೋರುವ ತುರ್ಯದೇವನು ಟ ವರ್ಗಕೈದು |
ಮೀರದೆ ಕರ್ಮೇಂದ್ರಿಯ ಪಾಣಿ ಪಾದದಿ ಪಂಚ |
ಕಾರಣಿಕರಲ್ಲಿ ವಸ್ವಾದಿ ನಿರ್ಜರರೂ |
ಸಾರಿರೈ ಬುಧ-ಶುಕ್ರ ಅಂತರಾಳದಲ್ಲಿ ವಿ- |
ಸ್ತಾರ ಇದನೆ ತಿಳಿದು ಶುಕ್ರ-ಚಂದ್ರನ ನಡುವೆ |
ಭೊರನ್ನ ಆತ್ಮಾಮೂರುತಿ ಬಿಂದು ತ ವರ್ಗ |
ಪೂರೈಸು ಪಂಚ ತನ್ಮಾತ್ರಗಳು ಶಬ್ದಾದಿ |
ಮಾರುತಗಳೈದು ಪ್ರಾಣಾದಿ ನಾಮದಲ್ಲಿ 
ಸೇರಿ ಕೊಂಡಿಪ್ಪರೈ ಮುಂದೆ ಲಾಲಿಸಿ ಕೇಳಿ |
ಗೌರೀಶನ ಶಿರದಲ್ಲಿ ಇಪ್ಪ ಕುಜನ ನಡುವೆ |
ಮೂರುತಿ ಅಂತರಾತ್ಮನು ಘೋಷ ಪ ವರ್ಗ |
ಆರನೇ ಮನೆ ಎನ್ನಿ ಇಲ್ಲಿಪ್ಪದು ಅಹಂ- |
ಕಾರ-ಬುದ್ಧಿ-ಚಿತ್ತ-ಮನಸು-ಚೇತನ ತತ್ವ |
ಮಾರಾರಿ ಮಿಗಿಲಾದ ದೇವತಿಗಳಕ್ಕು |
ಧಾರುಣಿಸುತ ಕೇತು ಇವರ ಮಧ್ಯದಲ್ಲಿ |
ಶ್ರೀರಮಣ ಪರಮಾತ್ಮ ಶಾಂತವೆಂಬೋದು ಓಂ- |
ಕಾರದೊಳಗಿನ ವರ್ಣ ಯ ವರ್ಗ ಚತುರ್ವಿಧಾ |
ಆರೊಂದು ಧಾತುಗಳು ತ್ವಕ್-ಚರ್ಮ-ರಕ್ತಾದಿ |
ವಾರಿಜ ಮಿತ್ರನ್ನ ಮುಸುಕುವನ ಶನಿ ಮಧ್ಯ |
ಬೀರುವೆನು ಜ್ಞಾನಾತ್ಮ ಅತಿಶಾಂತ ಶ ವರ್ಗ- |
ಕ್ಷಾಂತ ಸತ್ವ ರಜ ತಮ ತ್ರಯಾವಸ್ಥಿಗಳು 
ತಾರ ನಮೋ ನಾರಾಯಣವೆಂಬೊವೆಂಟು |
ಸೌರಿ ಮಿಕ್ಕಾದೆಂಟು ದಳದಲ್ಲಿ ಲಿಖಿಸೋದು |
ವಾರಿಜಭವನಯ್ಯ ವಿಜಯವಿಠ್ಠಲರೇಯ |
ಶರೀರದೊಳಗಿದ್ದು ತನ್ನವಗೆ ತಿಳಿಪುವಾ ||೩||

ಝಂಪೆತಾಳ

ಹನ್ನೆರಡು ದಳವುಳ್ಳ ಕಮಲ ವಲಯಾಕಾರ |
ಚನ್ನಾಗಿ ಬರೆಯುವುದು ಇದರ ಮೇಲೆ |
ಇನ್ನು ಒಂದೊಂದು ದಳದೊಳಗೆ ಲಿಖಿಸಬೇಕು |
ಮನ್ನಿಪುದು ಜ್ಞಾನಿಗಳು ಬಾಲಬೋಧ |
ಮುನ್ನಾದಿ ದಳದಲ್ಲಿ ಮೇಷರಾಶಿಯ ಬರೆದು |
ಬಿನ್ನಣದಿ "ಓಂ ಓಂ" ಇದಕೆ ಕೇಶವಮೂರ್ತಿ |
ಭಿನ್ನ ವರ್ಣಂಗಳು "ಅ ಕ ಡ ಮ" ವೆಂಬವು ನಾಲ್ಕು |
ಇನಿತು ರಚಿಸಿ ಎರಡನೇದಳದಲ್ಲಿ |
ಸನ್ನುತಿಸು ವೃಷಭ "ಆ ಖ ಢ ಯ" ಚತುರವರ್ಣಗಳು |
"ಓಂ ನಂ" ನಾರಾಯಣ ಮೂರ್ತಿ ನೆನೆದು |
ಘನ್ನ ಮೂರನೆ ದಳದಿ ಮಿಥುನ ರಾಶಿಯ ಬಳಿಯ |
ವರ್ಣಿಸಿ "ಓಂ ಓಂ" ಮಾಧವದೇವನ್ನ |
ಗಣ್ಯ "ಇ ಗ ಣ ರ" ನಾಲ್ಕು ಮಾತ್ರೆಗಳ ಬರೆದು ನಿಜ- |
ವೆನ್ನಿ ನಾಲ್ಕನೆ ದಳಕೆ ಮನಸು ಮಾಡಿ |
ಪುಣ್ಯವೇ ಉಂಟು ಕರ್ಕರಾಶಿ "ಈ ಘ ತ ಲ" |
ವನ್ನು "ಓಂ ಭಂ" ವರ್ಣ ಗೋವಿಂದನು |
ನಿನ್ನೊಳಗೆ ತಿಳಿವುದೂ ಐದನೆ ಪತ್ರದಲಿ |
ಪೆಣ್ಣುಗಳ ಮಧ್ಯದಾ ಪೆಸರಿನ ರಾಶಿ |
"ಉ ಊ ಙ ಥ ವ" "ಓಂ ಗಂ" ಇದಕೆ ವಿಷ್ಣುಮೂರ್ತಿ |
ಕನ್ಯೆಯಲಿ "ಋ ೠ ಚ ದ ಶ" "ಓಂ ವಂ" ವರ್ಣ ಮಧುಸೂ- | 10.45
ದನ ದೇವನ ಭಜಿಸು ಷಡ್‍ದಳದಲ್ಲಿ |
ಸನ್ಮತವಹುದು ತುಲಾರಾಶಿ "ಲೃ ಲೄ ಛ ಧ ಷ" ಗಳು |
ಇನ್ನು ತ್ರಿವಿಕ್ರಮ "ಓಂ ತೇಂ"(ಓಷ್ಠಾ) ಸಪ್ತಮ ದಳದಿ |
ಮಣ್ಣು ಭಕ್ಷಿಪ ಕ್ರಿಮಿ "ಏ ಐ ಜ ನ ಸ" ವರ್ಣ |
"ಓಂ ವಾಂ" ವಾಮನ ಅಷ್ಟಮ ದಳದಿ |
ಹೊನ್ನಿನಂಥ ಮಾತು ಧನು ರಾಶಿ ಲಿಪಿಸೆ ಸಂ- |
ಪನ್ನ "ಓ ಝ ಪ ಹ" "ಓಂ ಸುಂ" ಶ್ರೀಧರ |
ಇನ್ನು ನೋಡು ಪತ್ರ ನವಮದಲಿ ಈ ಪರಿ |
ಎನ್ನು ಗ್ರಹಿಸುವುದು ಹತ್ತು ದಳದಿ |
ಇನಿತಾದರು ಸತ್ಯ ಮಕರ "ಜ ಞ ಫ ಳ" "ಔ ದೇ" |
ಅನಂತರೂಪಾತ್ಮಕ ಹೃಷೀಕೇಶ ಹನ್ನೊಂದನೆ ದಳದಲ್ಲಿ ಕುಂಭ |
"ಅಂ ಟ ಭ ಕ್ಷ" "ಓಂ" ಎನ್ನು "ವಾಂ" ಇದಕೆ ಶ್ರೀ ಪದ್ಮನಾಭ |
ಹನ್ನೆರಡನೇ ದಳದಿ ಮೀನ "ಅಃ ಠ ಭ" 
ಚೆನ್ನಾಗಿ ರಚಿಸಿ "ಓಂ ಯಂ" ದಾಮೋದರ |
ಹನ್ನೆರಡು ದಳದೊಳಗೆ ಇಷ್ಟೆ ಭಗವದ್ರೂಪ |
ಹನ್ನೆರಡು ಮಾತೃಕೆಯ ಕೂಡಿಸಲು |
"ಓಂ ನಮೊ ಭಗವತೆ ವಾಸುದೇವಾಯ" ಪ್ರ- |
ಸನ್ನ ದೇವನ್ನ ನೋಡಿ ಏಕಪಂಚಾಶ-|
ದ್ವರ್ಣ ಓಂದೊಂದರಲಿ ಹಂಚಿ ಹಾಕಿ |
ಹನ್ನೆರಡು ರಾಶಿಗಳ ಬರೆದು ಸ್ತುತಿಸಿ |
ಧನ್ಯನಾಗೆಲೊ ಮುಂದೆ ದಳದ ಸಂಧಿಗಳಲ್ಲಿ |
ರನ್ನ ತಾರಯೋಗ ಒಂಭತ್ತು ಪದದಂತೆ |
ಹನ್ನೆರಡು ರಾಶಿಗೆ ವಿಭಾಗ ಮಾಡಿ |
ಪನ್ನಗಶಾಯಿ ಸಿರಿ ವಿಜಯ ವಿಠ್ಠಲನ್ನ ಕಾ- |
ರುಣ್ಯವನು ಪಡೆದು ಚಿಂತಿಸು ಸುಹೃದಯದೊಳಗೆ ||೪||

ತ್ರಿವಿಡತಾಳ

ದ್ವಾದಶದಳವುಳ್ಳ ಕಮಲದ ಮೇಲೆ |
ದ್ವಿದ್ವಾದಶಪತ್ರದ ಕಮಲ ಬರೆದು |
ಸಾಧಿಸು ಒಂದೊಂದು ದಳದ ಮಧ್ಯದಲ್ಲಿ ವಿ- |
ನೋದ ಚತುರವಿಂಶತಿ ವರ್ಣಗಳ |
ವೇದ ಮಾತಾ ಮಂತ್ರ ಇದೆ ಎನ್ನು ಕೇಶವ |
ಮಾಧವಾದಿ ವರ್ಣ ಮೂರ್ತಿಗಳ |
ಪಾದವೇ ಸ್ಮರಿಸುತ್ತ ಮತ್ತೆ ಸೂರ್ಯನ ಗಮನ |
ಭೇದದಿಂದಲಿ ತಿಳಿ ನವವೀಥಿಯ |
ಐದಿಸು ಒಂದೊಂದು ಕಡೆ ಮೂರರ ಪ್ರಕಾರ |
ಆದಾವಿಲ್ಲಿಗೆ ತಾರೆ ಇಪ್ಪತ್ತೇಳು |
ಐದೇಳು ರಾಶಿಗಳು ಹಂಚಿ ಹಾಕಲಾಗಿ |
ಪಾದ ಪಾದಾರ್ಧ ತ್ರಿಪಾದವಹುದು |
ಪಾದತ್ರಿಮಂತ್ರ ತತ್ಸವಿತುಃ ವರೇಣ್ಯಂ ಭ- |
ರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾ- |
ಆದಿ ಮೂರುತಿ ನಮ್ಮ ವಿಜಯ ವಿಠ್ಠಲನ ಶ್ರೀ- |
ಪಾದವ ನೆರೆನಂಬು ಓಂ ಕಾರ ನುಡಿಯುತ್ತಾ ||೫||

ಅಟ್ಟತಾಳ

ಇದರ ಮೇಲೇ ಏಕ ಪಂಚಾಶದ್ದಳವುಳ್ಳ |
ಪದುಮವ ಬರೆದು ಪ್ರದಕ್ಷಿಣೆ ಮಾಡಿ |
ಮುದದಿಂದ ದ್ವಿರಷ್ಟ ಮಿಕ್ಕ ಮೂವತ್ತೈದು |
ಇದೆ ಇದೆ ದಳದೊಳು ಲಿಪಿಸಿ ಅಜಾದಿಯ |
ವೊದಗಿ ಸ್ತೋತ್ರವ ಮಾಡು ವರ್ಣದೇವತವೆಂದು |
ತುದಿ ಮೊದಲಿರದ ವಿಸ್ತಾರವೆ ಈ ಪರಿ |
ಇದೆ ಚಕ್ರಾಂಬುಜವೆಂದು ಕರೆಸುತಿಪ್ಪುದು |
ಹೃದಯಾಕಾಶ-ವಾರಿ-ಸ್ಥಂಡಿಲ-ಗಗನ-ಸೂರ್ಯ |
ವಿಧುಮಂಡಲ ಸಮಸ್ತ ಉತ್ತಮಸ್ಥಾನ |
ಇದೆ ನಿರ್ಮಾಣ ಮಾಡಿ ಸತ್ಕರ್ಮದಲಿ ನಿತ್ಯ |
ಪದೋಪದಿಗೆ ಶ್ರೀಹರಿಯ ಧ್ಯಾನ ಮಾಡಲಿಬೇಕು |
ಇದರೊಳು ಏಳುಕೋಟಿ ಮಂತ್ರಾರ್ಥವೆ ಉಂಟು |
ಆಧಿದೈವ ಆಧಿಭೂತ ಆಧ್ಯಾತ್ಮವೇ ಉಂಟು |
ಅಧಿಕಾರತನ ಭೇದ ತಿಳಕೊಂಬ ಜೀವಿಗಳಿಗೆ |
ಸದಮಲಾನಂದ ನಮ್ಮ ವಿಜಯ ವಿಠ್ಠಲರೇಯ |
ಬದಿಯಲ್ಲಿರುತಿಪ್ಪ ಚಕ್ರಾಬ್ಜ ಬಲ್ಲವನಿಗೆ ||೬||

ಆದಿತಾಳ

ಸ್ನಾನ ಉದಕ ಆಚಮನಿಯ ಸಂಧ್ಯಾರ್ಘ್ಯ ತ್ರಿಪದ |
ಎಣಿಸುವಾಗ ನಾನಾ ಮಂತ್ರ ಜಪಿಸುವಾಗ |
ಮೇಣು ಅರ್ಚಾ ಅರ್ಚನೆ ಪಾವಕಾಹುತಿ ಯಜ್ಞ |
ಕ್ಷೋಣಿ ಸುರರ ಪೂಜೆ ಆತ್ಮ ಸಂತೋಷ ಅನ್ನ |
ಪಾನಾದಿ ಕೊಡುವಾಗ ಇದೆ ಚಿಂತಿಸಬೇಕು |
ಏನೆಂಬೆನಯ್ಯ ಅವ ಅಪರೋಕ್ಷಿ ಎಂದಿಗೇ |
ಧ್ಯಾನಸಂಪೂರ್ಣ ಸಿದ್ಧ ಜ್ಞಾನವಂತನಾಹಾ |
ಪ್ರಾಣನಾಗಿ ಇಪ್ಪರು ಹರಿ-ಸಿರಿ-ಪ್ರಾಣಾದ್ಯರು |
ಕಾಣಿಸಿ ಕೊಂಬರು ಒಂದೊಂದು ಮಂಡಲದಲ್ಲಿ |
ಆನಂದ ಗತಿಗೆ ಸಾಧನ ಬೇಕಾದರೆ |
ಮಾನವಾ ಇದನೆ ಕೈಕೊಂಡು ಆಲೋಚಿಸು |
ಸ್ಥಾನಸ್ಥಾನಕೆ ನಿನಗೆ ಶುಭವಕ್ಕು ಪುಸಿ ಅಲ್ಲ |
ದೀನನಾಥನಾದ ವಿಜಯವಿಠ್ಠಲರೇಯನ್ನ |
ಗಾನವ ಮಾಡಿರೊ ಗ್ರಹಿಸಿ ಈ ಪರಿಯಿಂದ ||೭||

ಜತೆ

ಸಿದ್ಧ ಸಾಧನವಿದು ಬಿಂಬ ಕಾಣುವುದಕ್ಕೆ
ಪದ್ಮಿವಲ್ಲಭ ನಮ್ಮ ವಿಜಯವಿಠ್ಠಲ ಪ್ರಾಪ್ತಿ ||೮||


 kaMkaNAkAravannu baredu adara madhya |
OMkAra eraDu eDa-baladi racisi |
SaMke illade naDuve GRuNiyeMdu lipisi mI |
nAMkanayyana pIThasthaLavideMdu |
biMkadali svaradoLage kaDiyaNA svarave eraDA |
laMkAravane mADi adara baLiya |
kaMkaNAkAravannu oLage mADiTTukoMDu |
maMkumatiya toredu trikONasuttisi |
SrIMkAra icCASakti klIMkAra kriyASakti |
hrIMkAra j~jAnaSakti mUru mUlege bareyo |
paMkaja pANiyu SrI - BU - durgAnAmakaLu |
paMkajAkShana rUpa mUru uMTu |
kaMkaNAkAra maraLe trikONa mEle baredu |
saMkOcavAgi ide dvitIya valaya |
paMkaja mitra sOma agni janara nAga
kaMkaNa anala varuNa dikkige racisi |
kiMkara janapAla vijaya viThThala aka |
LaMkana Bajisuvudu hRudayadali tiLidu ||1||

maTTa tALa

kari aja ratha vIthi eMdeMbuva mUru |
baredu idake hanneraDu rASigaLu vi- |
staravAgi uMTu eraDeraDoMdu kaDe |
arivadu sthimita samagati tvaragati sUryanna |
eraDu nAlaku kONe viracisi adara mEle |
maraLe madhu - mAdhavA karesuva Rutu oMdu |
baredu praNava vivara hRudayadalli nama |
skarisu j~jAnAtmaneMdu |
dharisu I pari mUru eraDu kONiya madhya |
taruvAya mAsa - Rutu varuSha tAraka saM |
smarisi krama varNa hari aiSvaryAdi |
parama mUrtigaLannu Sirasu modalu mADi |
karataLa padatanaka cariteyAkoMDADu |
gurutu Aru kONe sari upariBAga |
eraDara madhya varaNaMgaLu uMTu |
arahuve prathamadalli eraDeraDu nAlku 1. - 
"a,A,ka,Ka,Da,Dha,ma,ya" |
2. eraDaneya maniyalli varaNagaLippavayya |
"i,I,u,U,ga,Ga,Na,ta,ra,la" |
3. smarisu mUrane maniyallirutippa mAtra 
"Ru,RU,lRu,lRU,~ga,ca,tha,da,va,Sa" |
4. karisikoMDavu initu nAlkane sthAnadali
"e,ai,Ca,ja,dha,na,Sha,sa" |
5. varaNaMgaLu grahisu aidane maniyalli |
"O,au,Ja,~ja,pa,Pa,ha,La" |
6. niruta ippudu kELi kaDiyaNa maniyalli |
"aM,aH,Ta,Tha,ba,Ba,kSha" baredu I pariyalli 
Arumaniya madhya |
sari illige enni taruvAya nAlku |
eraDU valayAkAra eraDu kONiya gaNita |
nirIkShisi manadalli pariSuddhanAgi |
paramapuruSha namma vijayaviThThala mUrtiya |
smarisu ajyAdigaLa narasiMha pariyaMta ||2||

rUpaka tALa

Aru kONiya mEle vartuLAkAravannu |
cAruvAgi baredu adara suttalu eMTu |
vArija daLavannu racisi ramyavAgi |
sauri svarBAnu guru budha Sukra caMdrama |
dhAruNisuta kEtu ivaranna madhya |
hAraisi baredu ivarivara baLiyalli OM-|
kAra sahitavAgi namOnArAyaNaneMbo |
IreraDu nAlku varNagaLu oMdoMdaralli |
ArAdhisi baredu bIjAkSharavennu |
sAravannu tiLi eMTu varNamiLita |
tAramaMtrave satya idara niyAmaka viSva |
mUruti modalAda aShTa rUpaMgaLuMTu |
sauri rAhu madhya Adi varNave lipisi |
dviraShTa mAtrA vargava idake iMdirA |
mAruta dEvanna baredu Sruti kAlagaLa |
I rItiyiMdali viSvanna smarise |
kAruNya mADuvanu muMde ka varga u- |
kAra taijasa dEvana baredu ka vargakke |
dhAruNi udakAgni vAyu gagana BUta |
mUreraDu sthApisi alli mAnigaLannu |
tArESa-svarBAnu madhyadalli siddhA |
A rOhiNeya-guru Irvara naDuve ma- |
kAra prAj~ja mUruti ca varga oMdoMdake |
IreraDu mEloMdu j~jAnEMdriyagaLuMTu |
vAra vArake biDade tatvESarugaLavAsa |
tOruva turyadEvanu Ta vargakaidu |
mIrade karmEMdriya pANi pAdadi paMca |
kAraNikaralli vasvAdi nirjararU |
sArirai budha-Sukra aMtarALadalli vi- |
stAra idane tiLidu Sukra-caMdrana naDuve |
Boranna AtmAmUruti biMdu ta varga |
pUraisu paMca tanmAtragaLu SabdAdi |
mArutagaLaidu prANAdi nAmadalli 
sEri koMDipparai muMde lAlisi kELi |
gaurISana Siradalli ippa kujana naDuve |
mUruti aMtarAtmanu GOSha pa varga |
AranE mane enni illippadu ahaM- |
kAra-buddhi-citta-manasu-cEtana tatva |
mArAri migilAda dEvatigaLakku |
dhAruNisuta kEtu ivara madhyadalli |
SrIramaNa paramAtma SAMtaveMbOdu OM- |
kAradoLagina varNa ya varga caturvidhA |
AroMdu dhAtugaLu tvak-carma-raktAdi |
vArija mitranna musukuvana Sani madhya |
bIruvenu j~jAnAtma atiSAMta Sa varga- |
kShAMta satva raja tama trayAvasthigaLu 
tAra namO nArAyaNaveMboveMTu |
sauri mikkAdeMTu daLadalli liKisOdu |
vArijaBavanayya vijayaviThThalarEya |
SarIradoLagiddu tannavage tiLipuvA ||3||

JaMpetALa

hanneraDu daLavuLLa kamala valayAkAra |
cannAgi bareyuvudu idara mEle |
innu oMdoMdu daLadoLage liKisabEku |
mannipudu j~jAnigaLu bAlabOdha |
munnAdi daLadalli mESharASiya baredu |
binnaNadi "OM OM" idake kESavamUrti |
Binna varNaMgaLu "a ka Da ma" veMbavu nAlku |
initu racisi eraDanEdaLadalli |
sannutisu vRuShaBa "A Ka Dha ya" caturavarNagaLu |
"OM naM" nArAyaNa mUrti nenedu |
Ganna mUrane daLadi mithuna rASiya baLiya |
varNisi "OM OM" mAdhavadEvanna |
gaNya "i ga Na ra" nAlku mAtregaLa baredu nija- |
venni nAlkane daLake manasu mADi |
puNyavE uMTu karkarASi "I Ga ta la" |
vannu "OM BaM" varNa gOviMdanu |
ninnoLage tiLivudU aidane patradali |
peNNugaLa madhyadA pesarina rASi |
"u U ~ga tha va" "OM gaM" idake viShNumUrti |
kanyeyali "Ru RU ca da Sa" "OM vaM" varNa madhusU- |
dana dEvana Bajisu ShaD^daLadalli |
sanmatavahudu tulArASi "lRu lRU Ca dha Sha" gaLu |
innu trivikrama "OM tEM"(OShThA) saptama daLadi |
maNNu BakShipa krimi "E ai ja na sa" varNa |
"OM vAM" vAmana aShTama daLadi |
honninaMtha mAtu dhanu rASi lipise saM- |
panna "O Ja pa ha" "OM suM" SrIdhara |
innu nODu patra navamadali I pari |
ennu grahisuvudu hattu daLadi |
initAdaru satya makara "ja ~ja Pa La" "au dE" |
anaMtarUpAtmaka hRuShIkESa hannoMdane daLadalli kuMBa |
"aM Ta Ba kSha" "OM" ennu "vAM" idake SrI padmanABa |
hanneraDanE daLadi mIna "aH Tha Ba" 
cennAgi racisi "OM yaM" dAmOdara |
hanneraDu daLadoLage iShTe BagavadrUpa |
hanneraDu mAtRukeya kUDisalu |
"OM namo Bagavate vAsudEvAya" pra- |
sanna dEvanna nODi EkapaMcASa-|
dvarNa OMdoMdarali haMci hAki |
hanneraDu rASigaLa baredu stutisi |
dhanyanAgelo muMde daLada saMdhigaLalli |
ranna tArayOga oMBattu padadaMte |
hanneraDu rASige viBAga mADi |
pannagaSAyi siri vijaya viThThalanna kA- |
ruNyavanu paDedu ciMtisu suhRudayadoLage ||4||

triviDatALa

dvAdaSadaLavuLLa kamalada mEle |
dvidvAdaSapatrada kamala baredu |
sAdhisu oMdoMdu daLada madhyadalli vi- |
nOda caturaviMSati varNagaLa |
vEda mAtA maMtra ide ennu kESava |
mAdhavAdi varNa mUrtigaLa |
pAdavE smarisutta matte sUryana gamana |
BEdadiMdali tiLi navavIthiya |
aidisu oMdoMdu kaDe mUrara prakAra |
AdAvillige tAre ippattELu |
aidELu rASigaLu haMci hAkalAgi |
pAda pAdArdha tripAdavahudu |
pAdatrimaMtra tatsavituH varENyaM Ba- |
rgOdEvasya dhImahi dhiyOyOnaH pracOdayA- |
Adi mUruti namma vijaya viThThalana SrI- |
pAdava nerenaMbu OM kAra nuDiyuttA ||5||

aTTatALa

idara mElE Eka paMcASaddaLavuLLa |
padumava baredu pradakShiNe mADi |
mudadiMda dviraShTa mikka mUvattaidu |
ide ide daLadoLu lipisi ajAdiya |
vodagi stOtrava mADu varNadEvataveMdu |
tudi modalirada vistArave I pari |
ide cakrAMbujaveMdu karesutippudu |
hRudayAkASa-vAri-sthaMDila-gagana-sUrya |
vidhumaMDala samasta uttamasthAna |
ide nirmANa mADi satkarmadali nitya |
padOpadige SrIhariya dhyAna mADalibEku |
idaroLu ELukOTi maMtrArthave uMTu |
Adhidaiva AdhiBUta AdhyAtmavE uMTu |
adhikAratana BEda tiLakoMba jIvigaLige |
sadamalAnaMda namma vijaya viThThalarEya |
badiyallirutippa cakrAbja ballavanige ||6||

AditALa

snAna udaka Acamaniya saMdhyArGya tripada |
eNisuvAga nAnA maMtra japisuvAga |
mENu arcA arcane pAvakAhuti yaj~ja |
kShONi surara pUje Atma saMtOSha anna |
pAnAdi koDuvAga ide ciMtisabEku |
EneMbenayya ava aparOkShi eMdigE |
dhyAnasaMpUrNa siddha j~jAnavaMtanAhA |
prANanAgi ipparu hari-siri-prANAdyaru |
kANisi koMbaru oMdoMdu maMDaladalli |
AnaMda gatige sAdhana bEkAdare |
mAnavA idane kaikoMDu AlOcisu |
sthAnasthAnake ninage SuBavakku pusi alla |
dInanAthanAda vijayaviThThalarEyanna |
gAnava mADiro grahisi I pariyiMda ||7||

jate

siddha sAdhanavidu biMba kANuvudakke
padmivallaBa namma vijayaviThThala prApti ||8||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru