ಇಂಥಾ ಪ್ರಭುವ ಕಾಣೆನೋ ಈ ಜಗದೊಳಗಿಂಥಾ ಪ್ರಭುವ ಕಾಣೆನೋ ||ಪ||
ಇಂಥ ಪ್ರಭುವ ಕಾಣೆ ಶಾಂತ ಮೂರುತಿ ಜಗದಂತ ರಂಗನು ಲಕ್ಷ್ಮೀಕಾಂತ
ಸರ್ವಂತರ್ಯಾಮಿ ||ಅಪ||
ಬೇಡಿದಿಷ್ಟವ ಕೊಡುವ ಭಕ್ತರ ತಪ್ಪು ನೋಡದೆ ಬಂದು ಪೊರೆವ |
ಗಾಡಿಕಾರನು ಗರುಡಾರೂಢ ಗುಣವಂತ ಮಹಾ ಪ್ರೌಢ ಪ್ರತಾಪೀ ಜಗದೀ ಗೂಢದಿ ಸಂಚರಿಪ |
ಪಾಡಿ ಪೊಗಳಿ ಕೊಂಡಾಡುವವರ ಮುಂದಾಡುತಲಿಪ್ಪನು ನಾಡೊಳಗಿದ್ದರು |
ಕೇಡಿಗನೇ ನಾಡಾಡಿಗಳಂದದಿ ಈಡುಂಟೇ ನೋಡೀ ವೆಂಕಟಗೆ ||೧||
ನಿಗಮ ತತಿಗಳರಿಯದ ನೀರಜ ಭವಾದ್ಯಗಣಿತ ಸುರರು ಕಾಣದ |
ಜಗದೊಡೆಯನು ಭಕ್ತರೂಗಳಿಗೊಲಿದು ತ್ರಿಸ್ಥಾನಗಳ ತ್ಯಜಿಸಿ ಕಲಿಯುಗದಿ ಭೂಮಿಗೆ ಬಂದು |
ಅಗಣಿತ ಸುಗುಣಾರ್ಣವ ಶ್ರೀ ಹರಿಯೇ ಜಗದೊಳು ಸೇವಾದಿಗಳನು ಕೊಳುತಿಹ |
ಅಘಹರ ಮೋಕ್ಷಾದಿಗಳನೆ ನೀಡುತ ನಗೆಮೊಗದಲಿ ಚೆನ್ನಿಗೆ ನಿಂತಿಹನು ||೨||
ಭಾರ್ಗವ ಭೂಮಿ ವಲ್ಲಭ ಭವದೂರ ಭಕ್ತವರ್ಗಕ್ಕೆ ಇವ ಸುಲಭ |
ನಿರ್ಗುಣ ನಿರ್ವಿಕಾರ ಸ್ವರ್ಗದೈಶ್ವರ್ಯದಿಂದಾನರ್ಘ್ಯ ಪದವನೀವ ದೀರ್ಘಾಯುವಂತ ನೀತ |
ಭಾರ್ಗವ ರಾಮ ನೃಪರ್ಗಳನೆಲ್ಲರಣಾಗ್ರದಿ ಜಯಿಸಿದ ಉಗ್ರಪ್ರತಾಪಿ ಅಗ್ರಗಣ್ಯ
ಸದ್ವಿಗ್ರಹ ಶ್ರೀಮದನುಗ್ರಹ ಮಾಡುತ ದುರ್ಗುಣ ಕಳೆವ ||೩||
ನಿರ್ದುಃಖಾನಂದ ಭರಿತಾ ನಿರ್ವಾಣ ಸುಖಕೆ | ಆರ್ದ್ರ ಹೃದಯ ತೋರುತ ||
ನಿದ್ರೆಯೊಳಿದ್ದವಗು ಭದ್ರ ಪಡಿಸಿ ದೈತ್ಯ ಕ್ಷುದ್ರನಂ ಕೊಲಿಸಿ ಸುಭದ್ರ ಜಗಕೆ ಇತ್ತ ||
ನಿರ್ದಯನಲ್ಲ ಸಮುದ್ರಶಯನ ಗೋವರ್ಧನ ಗಿರಿಯನು ಉದ್ಧರಿಸಿದ
ಯದುವರ್ಧನ ದನುಜ ವಿಮರ್ದನ ಲಕ್ಷ್ಮೀ ಜನಾರ್ಧನ ವರ ಶೇಷಾದ್ರಿ ನಿವಾಸ ||೪||
ವಾರಿಜಾಸನ ಮನುಜ ಈರ್ವರು ಸುತರು ಸುರತರಂಗಿಣಿ ತನುಜೆ
ಪುರವೇ ವೈಕುಂಠ ಇಂದ್ರಾದ್ಯಮರರು ಕಿಂಕರರು ಗರುಡವಾಹನ ಉರಗ ಪರ‍್ಯಂಕ ನಿಷ್ಕಳಂಕ
ಸರಿ ದೊರೆಗಳನಾನರಿಯನು ವೆಂಕಟ ಗಿರಿಯಲಿ ಇರುತಿಹ ಕರುಣಿಗಳರಸನೆ ಮರೆಯದೆ ಸಲಹೋ
ಶರಣಾಗತರನು ಮರುತಾಂತರ್ಗತ ಸಿರಿ ವಿಜಯ ವಿಠಲ ||೫||
iMthA praBuva kANenO I jagadoLagiMthA praBuva kANenO ||pa||
iMtha praBuva kANe SAMta mUruti jagadaMta raMganu lakShmIkAMta
sarvaMtaryAmi ||apa||
bEDidiShTava koDuva Baktara tappu nODade baMdu poreva |
gADikAranu garuDArUDha guNavaMta mahA prauDha pratApI jagadI gUDhadi saMcaripa |
pADi pogaLi koMDADuvavara muMdADutalippanu nADoLagiddaru |
kEDiganE nADADigaLaMdadi IDuMTE nODI veMkaTage ||1||
nigama tatigaLariyada nIraja BavAdyagaNita suraru kANada |
jagadoDeyanu BaktarUgaLigolidu tristhAnagaLa tyajisi kaliyugadi BUmige baMdu |
agaNita suguNArNava SrI hariyE jagadoLu sEvAdigaLanu koLutiha |
aGahara mOkShAdigaLane nIDuta nagemogadali cennige niMtihanu ||2||
BArgava BUmi vallaBa BavadUra Baktavargakke iva sulaBa |
nirguNa nirvikAra svargadaiSvaryadiMdAnarGya padavanIva dIrGAyuvaMta nIta |
BArgava rAma nRupargaLanellaraNAgradi jayisida ugrapratApi agragaNya
sadvigraha SrImadanugraha mADuta durguNa kaLeva ||3||
nirduhkhaanaMda BaritA nirvANa suKake | Ardra hRudaya tOruta ||
nidreyoLiddavagu Badra paDisi daitya kShudranaM kolisi suBadra jagake itta ||
nirdayanalla samudraSayana gOvardhana giriyanu uddharisida
yaduvardhana danuja vimardana lakShmI janArdhana vara SEShAdri nivAsa ||4||
vArijAsana manuja Irvaru sutaru surataraMgiNi tanuje
puravE vaikuMTha iMdrAdyamararu kiMkararu garuDavAhana uraga par^yaMka niShkaLaMka
sari doregaLanAnariyanu veMkaTa giriyali irutiha karuNigaLarasane mareyade salahO
SaraNAgataranu marutAMtargata siri vijaya viThala ||5||