Posts

Showing posts from October, 2020

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀಕೇಶವ ಪಂಚರತ್ನ ಕೀರ್ತನೆ |ವಾದಿರಾಜರು| ಆರತಿಯನೆತ್ತಿದರೆ | Aaratiyanettidare | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಕೇಶವ ಪಂಚರತ್ನ ಕೀರ್ತನೆ  ಆರತಿಯನೆತ್ತಿದರೆ ಕೇಶವ ನಾರಾಯಣಗೆ || ಪ || ಶಾಶ್ವತವೀವ ಮಾಧವ  ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ || ಅ.ಪ || ದ್ವಾಪರರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ  ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ || ೧ || ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ  ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ || ೨ || ದಾಮ‌ಉದರದಾಲುಳ್ಳವಗೆ ಪ್ರೇಮದಿ ಸಂಕರ್ಷಣಗೆ  ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ || ೩ || ಘನಮಹಿಮ ಪ್ರದ್ಯುಮ್ನನಿಗೆ ಅನಿರುದ್ಧ ಪುರುಷೋತ್ತಮಗೆ  ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ || ೪ || ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ  ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ || ೫ || ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ  ಗೋಪಾಲಮೂರುತಿ ಶ್ರೀಕೃಷ್ಣಗಾರತಿಯನೆತ್ತಿದರೆ || ೬ || ಚತುರವಿಂಶತಿ ಮೂರುತಿಗಳಾ ಅತಿಶಯ ಧವಳವ ಪಾಡೆ  ಸತುಪುರುಷರಿಷ್ಟಾರ್ಥವೀವನು ಸಿರಿ ಹಯವದನ || ೭ || Sri Keshava Pancharatna Keerthane Aratiyanettidare kESava nArAyaNage || pa || SASvatavIva mAdhava  vAsavavaMdya gOviMdagAratiyanettidare || a.pa || dvaapararahita SrIviShNuvige apAra ma...

ವಾದಿರಾಜರ ಶ್ರೀಕೇಶವ ಪಂಚರತ್ನ ಕೀರ್ತನೆ | ಗುಬ್ಬಿಯಾಳೊ ಗೋವಿಂದ | Gubbiyalo Govinda | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಕೇಶವ ಪಂಚರತ್ನ ಕೀರ್ತನೆ  ಗುಬ್ಬಿಯಾಳೊ ಗೋವಿಂದ ಗೋವಿಂದಾ ಗುಬ್ಬಿಯಾಳೋ ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ || ಪ || ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ  ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ || ೧ || ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ  ಗೋವಿಂದನ್ನ ದಯದಿಂದ ಘೋರದುರಿತ ನಾಶನವು ಗುಬ್ಬಿಯಾಳೊ || ೨ || ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊ  ಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ || ೩ || ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ  ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ || ೪ || ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ  ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ || ೫ || ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ  ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ || ೬ || ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ  ವಾಸುದೇವನ ದಯದಿಂದ ವಂಶ ಉದ್ಧಾರವೊ ಗುಬ್ಬಿಯಾಳೊ || ೭ || ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ  ಅನಿರುದ್ಧನ ಸೇವಿಸೆ ಪುನೀತರಹೆವೊ ಗುಬ್ಬಿಯಾಳೊ ||...

ವಾದಿರಾಜರ ಶ್ರೀಕೇಶವ ಪಂಚರತ್ನ ಕೀರ್ತನೆ | ಕೇಶವ ಜಗದೀಶ | Keshava Jagadeesha | Pancharatna Keerthane | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಕೇಶವ ಪಂಚರತ್ನ ಕೀರ್ತನೆ  ಕೇಶವ ಜಗದೀಶ ಸಾಸಿರ ಭಾಸುರಕೋಟಿ ಸಂಕಾಶ  ವಾಸವಾದಿಗಳ ವಂದ್ಯ ಸೀತಾಪತೆ || ೧ || ನಾರಾಯಣ ಸಕಲವೇದ ಪಾರಾಯಣ ಕೃಷ್ಣ | ನಾರದಾದಿಗಳ ವಂದ್ಯ ಸೀತಾಪತೆ || ೨ || ಮಾಧವ ಮಂಗಳಗಾತ್ರ ವೇದವನ್ನೆ ಕದ್ದು ಒಯ್ದ|  ಆ ಖಳನ ಕೊಂದೆ ಸೀತಾಪತೆ || ೩ || ಗೋವಿಂದ ಗೋಕುಲಬಾಲ ಗೋಪಿಯರ ಮನೋಹರ | ಆದಿ ಕೂರ್ಮಾವತಾರ ಸೀತಾಪತೆ || ೪ || ವಿಷ್ಣುವೆ ಯತಿಗಳ ವಂದ್ಯ ಅಷ್ಟಲಕ್ಷ್ಮಿಯರ ನಾಥ | ದಿಟ್ಟ ವರಾಹರೂಪನಾದ ಸೀತಾಪತೆ || ೫ || ಮಧುಸೂದನ ಮಾವನ ವೈರಿ ಯದುಕುಲಕ್ಕೆ ತಿಲಕನಾದ | ಚೆಲುವನಾದ ಹರಿ ನೀನೆ ಸೀತಾಪತೆ || ೬ || ತ್ರಿವಿಕ್ರಮರೂಪನಾಗಿ ತ್ರಿಜಗವನ್ನೆ ಪಾಲಿಸಿದ |  ವಾಮನರೂಪಿ ನೀನೆ ಸೀತಾಪತೆ || ೭ || ವಾಮನರೂಪವ ತಾಳಿ ಆ ಮಹಾಬಲಿಯನ್ನೆ ತುಳಿದು| ನೇಮದಿ ಕ್ಷತ್ರೇರ ಕೊಂದ ಸೀತಾಪತೆ || ೮ || ಶ್ರೀಧರ ನೀನೆಂದೆನಿಸಿ ಶೋಷಿಸಿ ಖಳರನೆಲ್ಲ | ಜಾನಕಿಯ ತಂದ ರಾಮ ಸೀತಾಪತೆ || ೯ || ಹೃಷಿಕೇಶ ನೀನೆಂದು ಋಷಿಗಳು ಸ್ತುತಿಯ ಮಾಡಿ| ವಸುದೇವಸುತ ಕೃಷ್ಣ ಸೀತಾಪತೆ || ೧೦ || ಪದ್ಮನಾಭನೆಂದು ವೇದ ಸಿದ್ಧವಾಗಿ ಪೊಗಳುತಿದೆ | ಬುದ್ಧಾವತಾರ ಕೃಷ್ಣ ಸೀತಾಪತೆ || ೧೧ || ದಾಮೋದರನೆಂದು ನಿಮ್ಮ ದೇವತೆಗಳೆಲ್ಲ ಕರೆಯೆ| ಆ ಮಹಾಕಲ್ಕ್ಯನಾದ ಸೀತಾಪತೆ || ೧೨ || ಸಂಕರುಷಣದೇವ ನಿಮ್ಮ ಕಿಂಕರರು ನಾವೆಲ್ಲರಯ್ಯ | ಪಂಕಜಾಸನವಂದ್ಯ ರಾಮ ಸೀತಾಪತೆ...

ವಾದಿರಾಜರ ಶ್ರೀ ಕೇಶವ ಪಂಚರತ್ನ ಕೀರ್ತನೆ | ಕೃಷ್ಣ ಮುರಾರಿ | Krishna Murari | Pancharatna Keerthane | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಕೇಶವ ಪಂಚರತ್ನ ಕೀರ್ತನೆ  ಕೃಷ್ಣಮುರಾರಿ ಕೇಶವ ಮುರಾರಿ |  ಅಚ್ಯುತಾನಂತ ಗೋವಿಂದ ಮುರಾರಿ || ಪ || ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿ |  ಭೂಸುರರಿಗ್ವರವನಿತ್ತ್ಯೋ ಕೇಶವ ಮುರಾರಿ || ೧ || ನಾ ತಾಳಲಾರೆನೊ ಲೋಕಾಧಿಪತಿಯೆ ಕಾಯೊ| ಅನಾಥರಕ್ಷಕ ನಾರಾಯಣನೆ ಮುರಾರಿ || ೨ || ಮನಸು ನಿಲ್ಲದು ದೇವ ಮಾರನಟ್ಟುಳಿಗೆನ್ನ | ಮನಕಾಗಿ ನೀನೆ ಬಾರೊ ಮಾಧವ ಮುರಾರಿ || ೩ || ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿ| ಗೋಪಿಯರರಸ ಗೋವಿಂದ ಮುರಾರಿ || ೪ || ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ| ದಿಷ್ಟಾರ್ಥವನೀವ ವಿಷ್ಣು ಮುರಾರಿ || ೫ || ಮಧುರವಾಕ್ಯಗಳಿಂದ ಮಂದಿರಕಾಗಿ ಬಾರೊ|  ಮನಸಿಜನಯ್ಯ ಮಧುಸೂದನ ಮುರಾರಿ || ೬ || ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂದ | ಮುದ್ದುನಸುನಗೆಯ ತ್ರಿವಿಕ್ರಮ ಮುರಾರಿ || ೭ || ಕಾಮಿನಿ ಅಗಲಿ ಬಂದು ಸೀಮೆನಾಳುವನೆಂದು| ನೇಮವಾಕ್ಯದಿ ನಿಂದ ವಾಮನ ಮುರಾರಿ || ೮ || ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿ|  ಸಿಂಧುಶಯನ ಶ್ರೀಧರನೆ ಮುರಾರಿ || ೯ || ಋಷಿಗಳಿಗ್ವರವನಿತ್ತು ಬೃಂದಾವನದಲ್ಲಿ ನಿಂದು|  ಹರುಷವಾರಿಧಿ ಹೃಷಿಕೇಶ ಮುರಾರಿ || ೧೦ || ಪಾವನ್ನ ಮೂರುತಿ ಪರಮದಯಾಳು ನೀನೆ |  ಪಾಲಿಸೊ ಶ್ರೀ ಪದ್ಮನಾಭ ಮುರಾರಿ || ೧೧ || ದಾನವರ ಮರ್ದಿಸಿ ಸುಮನಸರಿಗೊಲಿದ |  ದಾನದತ್ತನೆ ದಾಮೋದರನೆ ...

ಶ್ರೀವಾದಿರಾಜರು ರಚಿಸಿದ ಶ್ರೀಕೇಶವ ಪಂಚರತ್ನ | ರಂಗ ಬಾರೋ | Ranga Baaro | Keshava Pancharatna | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರೀ ಕೇಶವ ಪಂಚರತ್ನ ಕೀರ್ತನೆ  ರಂಗ ಬಾರೊ ನರಸಿಂಗ ಬಾರೊ || ಪ || ಅಂಗಜನಯ್ಯ ಕೋನೇರಿ ತಿಮ್ಮ ರಂಗ ಬಾರೊ || ಅ.ಪ. ||  ಸಾಸಿರ ಮೂರುತಿ ವಾಸವವಂದ್ಯನೆ | ಸಾಸಿರ ನಾಮದೊಡೆಯನೆ  ಸಾಸಿರನಾಮದೊಡೆಯನೆ ನರಹರಿ | ಕೇಶವ ನಮ್ಮ ಮನೆದೈವ || ೧ || ವಾರಣವಂದ್ಯನೆ ಕಾರುಣ್ಯರೂಪನೆ | ಪುರಾಣಗಳಲ್ಲಿ  ಪೊಗಳುವ  ಪುರಾಣಗಳಲ್ಲಿ ಪೊಗಳುವ ನರಹರಿ | ನಾರಾಯಣ ನಮ್ಮ ಮನೆದೈವ || ೨ || ಯಾದವಕುಲದಲ್ಲಿ ಸಾಧುಗಳರಸನೆ | ಭೇದಿಸಿ ದನುಜರ ಗೆಲಿದನೆ  ಭೇದಿಸಿ ದನುಜರ ಗೆಲಿದನೆ ನರಹರಿ | ಮಾಧವ ನಮ್ಮ ಮನೆದೈವ || ೩ || ದೇವೇಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿ | ಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ  ಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆ | ಗೋವಿಂದ ನಮ್ಮ ಮನೆದೈವ || ೪ || ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದು|  ಶಿಷ್ಟಪರಿಪಾಲನೆನಿಸಿದ  ಶಿಷ್ಟಪರಿಪಾಲನೆನಿಸಿದ ನರಹರಿ | ವಿಷ್ಣುವೆ ನಮ್ಮ ಮನೆದೈವ || ೫ || ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆ |  ವಿದುರನ ಮನೆಯಲಿ ನಲಿದುಂಡ  ವಿದುರನ ಮನೆಯಲಿ ನಲಿದುಂಡ ನರಹರಿ |  ಮಧುಸೂದನ ನಮ್ಮ ಮನೆದೈವ || ೬ || ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆ |  ಅಕ್ರೂರನೊಡನೆ ಮಧುರೆಗೆ  ಅಕ್ರೂರನೊಡನೆ ಮಧುರೆಗೆ ಪೋದ  ತ್ರಿವಿಕ್ರಮ ನಮ್ಮ ಮನೆದೈವ |...

ಸಾಮೂಹಿಕ ಭಜನೆ | ಸೀತಾರಾಮ ಸೀತಾರಾಮ | ಹಯವದನ | Seetharama Seetharama | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಸೀತಾರಾಮ ಸೀತಾರಾಮ ಸೀತಾರಾಮ ಶ್ರೀ ರಘುರಾಮ ||ಪ||  ಕೇಶವ ರೂಪನೆ ಕರುಣಾತ್ಮಕನೇ, ಕಾರುಣ್ಯರೂಪನೆ ಕಮಲನಯನ ಹರಿ ||೧||  ನಾರಾಯಣನೆ ನಾಮ ಸಹಸ್ರನೇ, ನಾರದ ವಂದಿತ ನರನ ಸಾರಥಿ ಹರಿ ||೨||  ಮಾಧವ ಮಹಿಮನೇ ಮಣಿಗಣ ಭೂಷಣ, ಮಕರ ಕುಂಡಲಧರ ಮಾರಜನಕ ಹರಿ ||೩||  ಗೋವಿಂದಾತ್ಮನೇ ಗೋಪಾಲಕನೇ, ಗೋಕುಲದೊಡೆಯನೇ, ಗೋಪಿಯ ಸುತ ಹರಿ ||೪||  ವಿಷ್ಣು ಎನಿಪನೇ, ವಿದುರ ವಂದಿತನೇ, ವಿಶ್ವವ್ಯಾಪಕ, ವಿಶ್ವರೂಪ ಹರಿ ||೫||  ಮಧುಸೂದನನೇ, ಮಾಯಾರೂಪನೇ ಮಾಯಾನಾಟಕ, ಮಹಿಮಾಂಬುಧಿ ಹರಿ ||೬||  ತ್ರಿವಿಕ್ರಮನೇ ತ್ರಿಗುಣ ವರ್ಜಿತನೇ, ತ್ರಿಮೂರ್ತಿಗೊಡೆಯನೇ ತ್ರಿಜಗವಂದಿತ ಹರಿ ||೭||  ವಾಮನ ನಾಮನೇ, ವಾರಿಧಿ ಬಂಧನ, ದಾಸವಂದಿತ, ವೈಭವ ಶೋಭಿತ ಹರಿ ||೮||  ಶ್ರೀಧರ ರೂಪನೇ, ಶ್ರೀ ವತ್ಸಲಾಂಛನ, ಶ್ರೀರಮೆಯರಸನೇ, ಶ್ರೀ ಕರ್ತೃಹರಿ ||೯||  ಪದ್ಮನಾಭನೆ, ಪದ್ಮಾವದನನೆ, ಪದ್ಮಾ ಪದದ್ವಯ, ಪದ್ಮನಯನ ಹರಿ ||೧೦||  ದಾಮೋದರನೇ ದಾನವಾಂತಕನೆ ದಶಾವತಾರನೇ ದರಾಧಿಪತಿ ಹರಿ ||೧೧||  ಸಂಕರ್ಷಣನೇ ಶತಶಿರ ಹರಣನೇ, ಶ್ಯಾಮಲವರ್ಣನೇ ಶಂಖಚಕ್ರಧರ ಹರಿ ||೧೨||    ವಾಸುದೇವನೇ ವಟಪತ್ರ ಶಯನನೇ, ವಸುದೇವತನಯನೆ ವನಜನಾಭ ಹರಿ ||೧೩||  ಪ್ರದ್ಯುಮ್ನ ಹರಿ ಪಾವನ ರೂಪಕ ಪಂಡಿತ ರಕ್ಷಕ ಅಪಾರ ಮಹಿಮ ಹರಿ ||೧೪||...

ನಡೆದು ಬಾರಯ್ಯ | ಗೋಪಾಲವಿಠಲ | Nadedu Barayya | Goapala vittala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala dasaru (Gopala vittala) ನಡೆದು ಬಾರಯ್ಯ ನೀನು| ನಡೆದು ಬಾರಯ್ಯ ಭವ ಕಡಲಿಗೆ ಕುಂಭ ಸಂಭವ| ಪ | ಸಡಗರದಿಂದ ಮೆಲ್ಲಡಿಯನಿಡುತ ಬೇಗ| ಎಡಬಲದಲಿ ನಿನ್ನ ಮಡದಿಯರೊಪ್ಪುತ  ತಡಮಾಡದೆ ಬಾ ಮೃಡಸಖ ವೇಂಕಟ ||ಅಪ||  ವಿಜಯದಶಮಿ ಆಶ್ವೀಜ ಮಾಸ ಶುದ್ಧದಲ್ಲಿ ನಿಜರಥಾರೂಢನಾಗಿ ಸುಜನರಿಂದೊಡಗೂಡಿ|  ಗಜಸಿಂಹ ಮಯೂರ ದ್ವಿಜಸಿಂಹ ಸಾರಂಗ| ಮಝ ಬಾಪುರೆ ಎನಲು| ತ್ರಿಜಗವು ತಲೆದೂಗೆ  ಅಜನು ಸ್ತುತಿಯ ಮಾಡೆ| ದ್ವಿಜಗಣಾಧಿಪ ಪಾಡೆ| ಗಜಮುಖನಯ್ಯನು ನಿಜಾನಂದದೊಳಾಡೆ|  ಭುಜಗ ಶ್ರೇಷ್ಠರು ದ್ವಿಜರಾಜರು ಜಯವೆನ್ನೆ ಕುಜನರೆದೆಯ ಮೆಟ್ಟಿ ರಜತಮ ಕಳೆಯುತ ||೧||  ದಕ್ಷಿಣದಿಕ್ಕಿನಲ್ಲಿ ರಾಕ್ಷಸರೆದುರಾಗಿ| ಅಕ್ಷೋಣಿ ಬಲ ನಿನ್ನುಪೇಕ್ಷೆ ಮಾಡುತಲಿರೆ| ಪಕ್ಷಿವಾಹನನೆ ನೀನಾಕ್ಷಣದಲಿ ಖಳರ ಶಿಕ್ಷಿಸಿ ಸುಜನರ ರಕ್ಷಿಸಿ ಪೊರೆದಯ್ಯ|  ತಕ್ಷಕ ಸುತ ಸಹಸ್ರಾಕ್ಷನ ಮಗನನು ಭಕ್ಷಿಸೆ ಬರುತಿರೆ ಈಕ್ಷಿಸಿ ರಥವನು|  ತಕ್ಷಣ ನೆಲಕ್ಕೊತ್ತಿ ಮೋಕ್ಷವ ಗೈಸಿದೆ ಕುಕ್ಷಿಯೊಳಗೆ ಜಗದ್ರಕ್ಷಿಪ ವಿಶ್ವ ||೨||  ಅಂಬುಜಾಕ್ಷನೆ ಬಾರೋ ಅಂಬುಜ ವದನನೆ ಅಂಬುಜಾಲಯಪತಿ ಅಂಬುಜನಾಭನೆ|  ಅಂಬುಜ ಭವ ಜನಕ ಅಂಬುಜಾರಿಧರ| ಅಂಬುಜನಿವಾಸ ಅಂಬುಜ ಮಿತ್ರತೇಜ|  ಕೊಂಬು ಕಹಳೆಗಳು ಭೋಂ ಭೋಂ ಇಡುತಿರೆ ತುಂಬುರು ನಾರದರಿಂಬಾಗಿ ಪಾಡಲು  ಅಂಬರದಲಿ ವಾದ್ಯ ತುಂಬಿ ಧಣಿದರೆನೆ ಸಂಭ್...

ಒಂದು ಬಾರಿ ಸ್ಮರಣೆ ಸಾಲದೆ | ಹಯವದನ | Ondu Bari Smarane | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಒಂದು ಬಾರಿ ಸ್ಮರಣೆ ಸಾಲದೆ ||ಪ||  ಆನಂದತೀರ್ಥರ ಪೂರ್ಣಪ್ರಜ್ಞರ, ಸರ್ವಜ್ಞರಾಯರ ಮಧ್ವರಾಯರ ||ಅಪ||  ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು ||  ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ ||೧||  ಪ್ರಕೃತಿ ಬಂಧದಲ್ಲಿ ಸಿಲುಕಿ, ಸಕಲ ವಿಷಯಗಳಲಿ ನೊಂದು ||  ಅಕಳಂಕ ಚರಿತ ಹರಿಯ ಪಾದ ಭಕುತಿ ಬೇಕೆಂಬುವರಿಗೆ ||೨||  ಆರುಮಂದಿ ವೈರಿಗಳನು ಸೇರಲೀಸದಂತೆ ಜರಿದು ||  ಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ ||೩||  ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ||  ವಾಡೆ ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆಂಬುವರಿಗೆ ||೪||  ಹೀನ ಬುದ್ಧಿಯಿಂದ ಶ್ರೀ ಹಯವದನನ ಜರಿದು ||  ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ ||೫||  oMdu bAri smaraNe sAlade ||pa||  AnaMdatIrthara pUrNaprajnara, sarvajnarAyara madhvarAyara ||apa||    hiMdanEka janmagaLali noMdu yOniyalli baMdu ||  iMdirESa hariya pAdava hoMdabEkeMbuvarige ||1||    prakRuti baMdhadalli siluki, sakala viShayagaLali noMdu ||  akaLaMka carita hariya pAda Bakuti bEkeMbuvarige ||2||    A...

ದುರ್ಗೆ ಪಾಲಿಸೆ ಮಾತೆ | ಗುರು ಗೋಪಾಲವಿಠಲ | Durge Palise Maate | Gurugopala Vithala

Image
ಸಾಹಿತ್ಯ : ಶ್ರೀ ಗುರು ಗೋಪಾಲ ದಾಸರು (ದಾಸಪ್ಪ ದಾಸರು) Kruti:Sri Guru Gopala Dasaru ದುರ್ಗೆ ಪಾಲಿಸೆ ಮಾತೆ| ನಂಬಿದೆ ಬ್ರಹ್ಮಬರ್ಗಾದಿ ಸುರವಿನುತೆ ||ಪ|| ದುರ್ಗಮ ಭವದಿಂದ, ನಿರ್ಗಮಗೈಸು ಹೇ ಭಾರ್ಗವಿ, ಸ್ವರ್ಗಾಪವರ್ಗ ಪ್ರದಾತೆ ||ಅಪ|| ಅಂಬರ ಭೂಮಿ ವಿಹಾರಿ, ಅಷ್ಟಾಯುಧ ದಿವ್ಯಾಂಬರಧಾರಿ ಅಸುರಾರಿ | ನಂಬಿದೆ ನಿನ್ನ ಪಾದಾಂಬುಜ ಎನ್ನ ಹೃದಯಾಂಬರದಲ್ಲಿಹ ಬಿಂಬವ ತೋರಿಸು ಎಂಬೆ| ಸುನಿತಂಬೆ ಜಗದಂಬೆ ಶುಭಗುಣ ನಿಕುರಂಬೆ ||೧|| ನಂದಗೋಪನ ಕುಮಾರಿ, ನರಸಿಂಹಾಕ ಮಂದಿರೆ ಸುಜನೋದ್ಧಾರಿ || ಇಂದಿರೆ ಎನ್ನಯ ಇಂದ್ರಿಯ ಮನಸ್ಸು ಮುಕುಂದನ ಪದದಲ್ಲಿ ತಂದು ನಿಲ್ಲಿಸು ಎಂದೆ ಎನ್ನ ತಂದೆ ಇನ್ನು ಮುಂದೆ ನೀನೆ ಗತಿ ಎಂದೆ ||೨|| ಸಿರಿನರಸಿಂಹನ ರಾಣಿ | ವರನೀಲವೇಣಿ ಪರಮ ಕಲ್ಯಾಣಿ | ಗುರುಶ್ರೇಣಿ | ಪರತರ ಗುರು ಗೋಪಾಲವಿಠಲನ ಚರಣ ಕಮಲದಲ್ಲಿ ಸ್ಥಿರವಾದ ಭಕುತಿಯ ನೀಡೆ | ನಿನಗೀಡೆ ನಲಿದಾಡೆ ದಯಮಾಡಿ ನೋಡೆ ||೩|| durge pAlise mAte| naMbide brahmabargAdi suravinute ||pa|| durgama BavadiMda, nirgamagaisu hE BArgavi, svargApavarga pradAte ||apa|| aMbara BUmi vihAri, aShTAyudha divyAMbaradhAri asurAri | naMbide ninna pAdAMbuja enna hRudayAMbaradalliha biMbava tOrisu eMbe| sunitaMbe jagadaMbe SuBaguNa nikuraMbe ||1|| naMdagOpana kumAri, narasiMhAka maMdire sujanOd...

ಶ್ರೀ ದುರ್ಗಸುಳಾದಿ | Sri Durga Suladi | Vijaya Vittala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ದುರ್ಗ ಸುಳಾದಿ  ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೇ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರೂ ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ ವರ್ಗಕ್ಕೆ ಮೀರಿದ ಬಲು ಸುಂದರೀ ದುರ್ಗುಣದವರ ಬಾಧೆ ಬಹಳವಾಗಿದೆ ತಾಯೇ ದುರ್ಗತಿಹಾರೆ ನಾನು ಪೇಳುವುದೇನು ದುರ್ಗಂಧವಾಗಿದೆ ಸಂಸ್ಕೃತಿ ನೋಡಿದರೆ ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ ದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು ದುರ್ಗೆ ದುರ್ಜಯೆ ದುರ್ಧರ್ಷೆ ಶಕ್ತೆ ದುರ್ಗಕಾನನ ಗಹನ ಪರ್ವತಘೋರ ಸರ್ಪ ಗರ್ಗರ ಶಬ್ಧ ವ್ಯಾಘ್ರ ಕರಡಿ ಮೃತ್ಯು ವರ್ಗ ಭೂತ ಪ್ರೇತ ಪೈಶಾಚ ಮೊದಲಾದ ದುರ್ಗಣ ಸಂಕಟ ಪ್ರಾಪ್ತವಾಗೆ ದುರ್ಗಾದುರ್ಗೆ ಎಂದು ಉಚ್ಛಸ್ವರದಿಂದ ನಿರ್ಗಳಿತವಾಗಿ ಒಮ್ಮೆ ಕೂಗಿದರೂ ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ ಸುರ್ಗಣ ಜಯ ಜಯವೆಂದು ಪೊಗಳುತಿರೆ ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ ನೀರ್ಗುಡಿದಂತೆ ಲೋಕ ಲೀಲೆ ನಿನಗೆ ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡೆ || ೧ || ಅರಿ ದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ ವರ ಅಭಯ ಮುಸಲ ಪರಿ ಪರಿ ಆಯುಧವ ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ ಸರ್ವ ದೇವತೆಗಳ ಕರುಣಾಪಾಂಗದಲ್ಲಿ ನಿರೀಕ್ಷಿಸಿ ಅವರವರ ಸ್ವರೂಪ ಸುಖವ ಕೊಡು...

ಶ್ರೀ ವಾದಿರಾಜ ವಿರಚಿತ ಶ್ರೀದುರ್ಗಾ ಸ್ತವ | Sri Durga Stava | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಸನ್ನದ್ಧ ಸಿಂಹ ಸ್ಕಂಧಸ್ಥಾಂ ಸ್ವರ್ಣವರ್ಣಾಂ ಮನೋರಮಾಮ್ | ಪೂರ್ಣೇಂದು ವದನಾಂ ದುರ್ಗಾಂ ವರ್ಣಯಾಮಿ ಗುಣಾರ್ಣವಾಮ್ || ೧ || ಕಿರೀಟಹಾರಗ್ರೈವೇಯ ನೂಪುರಾಂಗದ ಕಂಕಣೈಃ | ರತ್ನಕಾಂಚ್ಯಾ ರತ್ನಚಿತ್ರ ಕುಚಕಂಚುಕತೇಜಸಾ || ೨ || ವಿರಾಜಮಾನಾ ರುಚಿರಾಂಬರಾ ಕಿಂಕಿಣಿಮಂಡಿತಾ | ರತ್ನಮೇಖಲಯಾ ರತ್ನವಾಸೋಪರಿ ವಿಭೂಷಿತಾ || ೩ || ವೀರಶೃಂಖಲಯಾ ಶೋಭಿಚಾರುಪಾದ ಸರೋರುಹಾ | ರತ್ನ ಚಿತ್ರಾಂಗುಲೀ ಮುದ್ರಾರತ್ನ ಕುಂಡಲ ಮಂಡಿತಾ || ೪ || ವಿಚಿತ್ರ ಚೂಡಾಮಣಿನಾ ರತ್ನೋದ್ಯತ್ತಿಲಕೇನ ಚ | ಅನರ್ಘ್ಯನಾಸಾ ಮಣಿನಾ ಶೋಭಿತಾಸ್ಯ ಸರೋರುಹಾ || ೫ || ಭುಜಕೀರ್ತ್ಯಾ ರಚ್ನಚಿತ್ರ ಕಂಠ ಸೂತ್ರೇಣ ಚಾಂಕಿತಾ ಪದ್ಮಾಕ್ಷಿಣೀ ಸುಬಿಂಬೋಷ್ಠೀ ಪದ್ಮಗರ್ಭಾದಿಭಿಃಸ್ತುತಾ || ೬ || ಕಬರೀಭಾರವಿನ್ಯಸ್ತಪುಷ್ಟಸ್ತಬಕವಿಸ್ತರಾ | ಕರ್ಣನೀಲೋತ್ಪಲರುಚಾ ಲಸದ್ಭ್ರೂಮಂಡಲತ್ವಿಷಾ || ೭ || ಕುಂತಲಾನಾಂ ಚ ಸಂತತ್ಯಾ ಶೋಭಮಾನಾ ಶುಭಪ್ರದಾ | ತನು ಮಧ್ಯಾ ವಿಶಾಲೋರಃಸ್ಥಲಾ ಪೃಥುನಿತಂಬಿನೀ || ೮ || ಚಾರುದೀರ್ಘಭುಜಾ ಕಂಬುಗ್ರೀವಾ ಜಂಘಾಯುಗಪ್ರಭಾ | ಅಸಿಚರ್ಮಗದಾಶೂಲಧನುರ್ಬಾಣಾಂಕುಶಾದಿನಾ || ೯ || ವರಾಭಯಾಭ್ಯಾಂ ಚಕ್ರೇಣ ಶಂಖೇನ ಚ ಲಸತ್ಕರಾ | ದಂಷ್ಟ್ರಾಗ್ರಭೀಷಣಾಸ್ಯೋತ್ಥಹುಂಕಾರಾರ್ದಿತ ದಾನವಾ || ೧೦ || ಭಯಂಕರೀ ಸುರಾರೀಣಾಂ ಸುರಾಣಾಮಭಯಂಕರೀ | ಮುಕುಂದಕಿಂಕರೀ ವಿಷ್ಣುಭಕ್ತಾನಾಂ ಮೌಕ್ತಶಂಕರೀ || ೧೧ || ಸುರಸ...

ಕಿಂಕರನ ಧ್ವನಿಗೆ ಕೊಡು | ವಿಜಯ ವಿಠಲ | Kinkarana Dwanige | Viajaya Vittala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕಿಂಕರನ ಧ್ವನಿಗೆ ಕೊಡು ಮತಿಯನು,  ಪಂಕಜನಾಭನ ಸೊಸೆಯೇ ಸರಸ್ವತಿಯೇ ||ಪ||  ಸಕಲ ವಿದ್ಯಾರಂಭೆ ಕನಕ ಪುತ್ಥಳಿ ಗೊಂಬೆ,  ವಿಕಸಿತ ಸುಲಲಿತಾಂಬೆ, ಸುನಿತಂಬೆ ||  ನಿಕುರಂಬೆ ಸುರರಂಬೆ ದಂತ ದಾಳಿಂಬೆ,  ಭಕುತಿಯಲಿ ಕಾಂಬೆ ನಿನ್ನ ನಾಮವನು ಉಂಬೆ ||೧||  ಗಂಗೆ ಯಮುನೆ ಉಭಯ ಸಂಗಮೆ ಭಕ್ತಭಯ  ಹಿಂಗಿಸಿಕೊಡು ಅಭಯ ಅಖಿಳಧ್ಯೇಯೆ ||  ಮಂಗಳ ಶೋಭನ ಮಣಿಯೆ, ಅಭ್ಯುದಯೆ ಅತಿ ಸದಯೆ  ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ ||೨||  ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೇ  ಕ್ಷಯರಹಿತ ಮುನಿಸ್ತೋತ್ರೇ ಶುಭ ಚರಿತ್ರೆ ||  ನಯ ವಿನಯ ನೇತ್ರೇ ಪವಿತ್ರೆ ಅಜನ ಕಳತ್ರೆ  ಜಯ ಜಯೆ ವಿಜಯ ವಿಠಲನ ಪೌತ್ರೇ ||೩|| kiMkarana dhvanige koDu matiyanu,  paMkajanABana soseyE sarasvatiyE ||pa||    sakala vidyAraMbhe kanaka putthaLi goMbe,  vikasita sulalitAMbe, sunitaMbe ||  nikuraMbe suraraMbe daMta dALiMbe,  bhakutiyali kAMbe ninna nAmavanu uMbe ||1||    gaMge yamune ubhaya saMgame BaktaBaya  hiMgisikoDu abhaya akhiLadhyEye ||  maMgaLa shObhana maNiye, abhyudaye ati saday...

ಮಧ್ವಾಂತರ್ಗತ ವೇದವ್ಯಾಸ | ಹಯವದನ | Madwantargata Vedavyasa | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮಧ್ವಾಂತರ್ಗತ ವೇದವ್ಯಾಸ  ಕಾಯೋ ಶುದ್ಧ ಮೂರುತಿಯೆ ಸರ್ವೇಶ ||ಪ|| ಶ್ರದ್ಧೆಯಿಂದಲಿ ನಿನ್ನ ಭಜಿಸುವ ಜನರಿಗೆ  ಬುದ್ಧ್ಯಾದಿಗಳ ಕೊಟ್ಟುದ್ಧರಿಸೋ ದೇವರದೇವ ||ಅಪ|| ದ್ವಾಪರದಲಿ ಒಬ್ಬ ಮುನಿಪ  ತನ್ನ ಕೋಪದಿಂದಲಿ ಕೊಟ್ಟ ಶಾಪ ಸ್ಥಾಪಿಸಲು ಜ್ಞಾನ ಲೋಪ  ಅಪಾರ ತತ್ತ್ವಸ್ವರೂಪ ಶ್ರೀಪತಿಯೆ ಕಾಯೆಂದು ಮೊರೆಯಿಡೆ  ಪಾಪ ವಿರಹಿತಳಾದ ಯಮುನೆಯ ದ್ವೀಪದಲಿ ಅಂಬಿಗರ ಹೆಣ್ಣಿನ  ರೂಪಗೊಲಿದವನಲ್ಲಿ ಜನಿಸಿದೆ ||೧|| ವೇದವಾದಗಳೆಲ್ಲ ಕೆಡಲು  ತತ್ತ್ವವಾದಿ ಜನರು ಬಾಯಿ ಬಿಡಲು ಮೇದಿನಿ ಸುರರ‍್ಮೊರೆಯಿಡಲು  ನಾಲ್ಕುವೇದ ವಿಭಾಗ ರಚಿಸಲು ಮೋದದಿಂದ ತದರ್ಥ ಬೋಧಕವಾದ  ಸೂತ್ರ ಪುರಾಣ ವಿರಚಿಸಿ ವಾದಿಗಳ ನಿರ್ವಾದ ಮಾಡಿದ  ಸಾಧುವಂದಿತ ಬಾದರಾಯಣ ||೨|| ಸುಮತಿಗಳಿಗೆ ನೀ ಬೋಧಿಸಿದೆ  ಮಿಕ್ಕ ಕುಮತಿಗಳನ್ನು ನೀ ಛೇದಿಸಿದೆ ಕ್ರಿಮಿಯಿಂದ ರಾಜ್ಯವಾಳಿಸಿದೆ  ಜಗತ್‍ಸ್ವಾಮಿ ನೀನೆಂದು ತೋರಿಸಿದೆ ವಿಮಲ ರೂಪನೆ ಕಮಲನಾಭನೆ  ರಮೆಯ ಅರಸನೆ ರಮ್ಯ ಚರಿತನೆ ಮಮತೆಯಲಿ ಕೊಡು ಕಾಮಿತಾರ್ಥವ  ನಮಿಸುವೆನು ಹಯವದನ ಮೂರುತಿ ||೩|| madhvAMtargata vEdavyAsa  kAyO shuddha mUrutiye sarvESa ||pa|| shraddheyiMdali ninna Bajisuva janarige  buddhyAdigaLa koTTuddharisO dEvaradEva ...

ಕೊಡು ಬೇಗ ದಿವ್ಯಮತಿ | ಪುರಂದರವಿಠಲ | Kodu Bega Divyamati | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಕೊಡು ಬೇಗ ದಿವ್ಯಮತಿ | ಸರಸ್ವತಿ | ಕೊಡು ಬೇಗ ದಿವ್ಯಮತಿ ||ಪ|| ಮೃಡಹರಿ ಹಯಮುಖರೊಡೆಯಳೆ ನಿನ್ನಯ  ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||೧|| ಇಂದಿರಾ ರಮಣನ ಹಿರಿಯ ಸೊಸೆಯು ನೀನು |  ಬಂದೆನ್ನ ವದನದಿ ನಿಂದು ನಾಮವ ನುಡಿಸೇ ||೨|| ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ |  ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ ||೩|| ಪತಿತ ಪಾವನೆ ನೀನು ಗತಿಯೆಂದು ನಂಬಿದೆ |  ವಿತತ ಪುರಂದರ ವಿಠಲನ ತೋರೆ  ||೪|| koDu bEga divyamati | sarasvati |  koDu bEga divyamati ||pa||   mRuDahari hayamuKaroDeyaLe ninnaya  aDigaLigeraguve amma brahmana rANi ||1||   iMdirA ramaNana hiriya soseyu nInu |  baMdenna vadanadi niMdu nAmava nuDisE ||2||   aKila vidyABimAni ajana paTTada rANi |  suKavittu pAlise sujana SirOmaNi ||3||   patita pAvane nInu gatiyeMdu naMbide |  vitata puraMdara viThalana tOre ||4||

ಮರುಳು ಮಾಡಿಕೊಂಡೆಯಲ್ಲೇ | ಪುರಂದರ ವಿಠಲ | Marulu Madikondeyalle | Purandara Vittala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿಯೇ ||ಪ|| ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ ||ಅಪ|| ಪ್ರಳಯ ಕಾಲದಲ್ಲಿ ಆಲದೆಲೆಯ ಮೇಲೆ ಮಲಗಿದ್ದಾಗ | ಹಲವು ಆಭರಣಗಳು ಜಲವು ಆಗಿ ಜಾಣತನದಿ ||೧|| ಸರ್ವ ಸಂಗ ಬಿಟ್ಟು ಸನ್ಯಾಸಿಯಾದ ಕಾಲಕ್ಕು | ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ ||೨|| ಎಡಕೆ ಭೂಮಿ ಬಲಕೆ ಶ್ರೀಯು ಎದುರಿನಲ್ಲಿ ದುರ್ಗಾದೇವಿ ತೊಡೆಯ ಮೇಲೆ ಲಕುಮಿಯಾಗಿ ಬಿಡದೆ ಮುದ್ದಾಡಿಪ್ಪಂತೆ ||೩|| ಮಕ್ಕಳ ಪಡೆದರೆ ನಿನ್ನ ಚೊಕ್ಕತನವು ಪೋಪುದೆಂದು ಪೊಕ್ಕುಳೊಳು ಮಕ್ಕಳ ಪಡೆದು ಕಕ್ಕುಲಾತಿ ಪಡುವಂತೆ ||೪|| ಎಂದೆಂದಿಗು ಮರೆಯೆ ನಿನ್ನ ಆನಂದದಿ ಜನರಿಗೆಲ್ಲ | ತಂದು ತೋರೆ ಸ್ವಾಧೀನ ಪುರಂದರ ವಿಠಲರಾಯನ ||೫|| maruLu mADikoMDeyallE mAyAdEviyE ||pa|| iruLu hagalu EkavAgi hariyu ninna biDadippaMte ||apa||   praLaya kAladalli Aladeleya mEle malagiddAga | halavu ABaraNagaLu jalavu Agi jANatanadi ||1||   sarva saMga biTTu sanyAsiyAda kAlakku | sarvadA tannedeya mEle biDade ninna dharisippaMte ||2|| eDake BUmi balake SrIyu edurinalli durgAdEvi toDeya mEle lakumiyAgi biDade muddADippaMte ||3|| makkaLa...

ಪಾಲಿಸೇ ಶರ್ವಾಣಿ | ಶ್ರೀಷ ವಿಠಲ | Palise Sharvani | Shrisha Vittala

Image
ಸಾಹಿತ್ಯ : ಶ್ರೀ ಶ್ರೀಷ ವಿಠಲ ದಾಸರು Kruti: Sri Shrisha Vithala Dasaru ಪಾಲಿಸೇ ಶರ್ವಾಣಿ ಪನ್ನಗ ವೇಣಿ ||ಪ|| ಬಾಲನ ಮಾತನು ಲಾಲಿಸಿ ಬೇಗನೆ|  ಕಾಲಕಾಲಕೆ ಹರಿ ಧ್ಯಾನ ಮಾಡಿಸೆ| ||೧|| ನಾಗಾಭರಣ ವೈದ್ಯೇಶನ ರಾಣಿ|  ಜಾಗುಮಾಡದೆ ಪೊರೆಯೆ ಭವಾನಿ ||೨|| ಸುಂದರ ವದನೇ ಮಂದಿಯ ರೋಗವಾ|  ಕುಂದದೆ ಕಳೆದು ಆನಂದ ಕೊಡೆ ತಾಯಿ ||೩|| ನಿನ್ನ ಸಮಾನದಾತೆ ಕಾಣೆನೆಲ್ಲೊ ಮಾತೆ|  ಅನ್ಯರ ಬೇಡದ ಉನ್ನತ ಮನ ನೀಡೆ ||೪|| ದೋಷರಹಿತ ಮಾತೆ ಶ್ರೀಶ ವಿಠ್ಠಲ ತಾ|  ಪೋಷಿಪ ನಿನ್ನಯಾ ಭಾಷೆ ಲಾಲಿಸಿ ಬೇಗಾ ||೫|| pAlisE SarvANi pannaga vENi ||pa|| bAlana mAtanu lAlisi bEgane|  kAlakAlake hari dhyAna mADise| ||1||   nAgABaraNa vaidyESana rANi|  jAgumADade poreye BavAni ||2|| suMdara vadanE maMdiya rOgavA|  kuMdade kaLedu AnaMda koDe tAyi ||3||   ninna samAnadAte kANenello mAte|  anyara bEDada unnata mana nIDe ||4||   dOSharahita mAte SrISa viThThala tA|  pOShipa ninnayA BAShe lAlisi bEgA ||5||

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಸ್ತ್ರೀಯರೆಲ್ಲರು ಬನ್ನಿರೆ | ಶ್ರೀನಿವಾಸನ ಪಾಡಿರೇ ಜ್ಞಾನಗುರುಗಳಿಗೊಂದಿಸಿ | ಮುಂದೆ ಕಥೆಯ ಪೇಳುವೆ || ಗಂಗಾತೀರದಿ ಋಷಿಗಳು | ಅಂದು ಯಾಗವ ಮಾಡಿದರು ಬಂದು ನಾರದ ನಿಂತುಕೊಂಡು | ಯಾರಿಗೆಂದು ಕೇಳಲು ಅರಿತು ಬರಬೇಕು ಎಂದು | ಆ ಮುನಿಯು ತೆರಳಿದ -ಭೃಗುಮುನಿಯು ತೆರಳಿದ  ನಂದಗೋಪನ ಮಗನ ಕಂದನ | ಮಂದಿರಕಾಗೆ ಬಂದನು ವೇದಗಳನೆ ಓದುತಾ | ಹರಿಯನು ಕೊಂಡಾಡುತಾ ಇರುವ ಬೊಮ್ಮನ ನೋಡಿದ | ಕೈಲಾಸಕ್ಕೆ ಬಂದನು ಕಂಭುಕಂಠನು ಪಾರ್ವತೀಯು | ಕಲೆತಿರುವುದ ಕಂಡನು ಸೃಷ್ಟಿಯೊಳಗೆ ನಿನ್ನ ಲಿಂಗ | ಶ್ರೇಷ್ಠವಾಗಲೆಂದನು ವೈಕುಂಠಕ್ಕೆ ಬಂದನು | ವಾರಿಜಾಕ್ಷನ ಕಂಡನು ಕೆಟ್ಟ ಕೋಪದಿಂದ ಒದ್ದರೆ | ಎಷ್ಟು ನೊಂದಿತೆಂದನು ತಟ್ಟನೆ ಬಿಸಿನೀರಿನಿಂದ | ನೆಟ್ಟಗೆ ಪಾದ ತೊಳೆದನು ಬಂದ ಕಾರ್ಯ ಆಯಿತೆಂದು | ಅಂದು ಮುನಿಯು ತೆರಳಿದ ಬಂದು ನಿಂದು ಸಭೆಯೊಳಗೆ |  ಇಂದಿರೇಶನ ಹೊಗಳಿದ ಪತಿಯ ಕೂಡೆ ಕಲಹ ಮಾಡಿ | ಕೊಲ್ಹಾಪುರಕೆ ಹೋದಳು ಸತಿಯು ಪೋಗೆ ಪತಿಯು ಹೊರಟು | ಗಿರಿಗೆ ಬಂದು ಸೇರಿದ ಹುತ್ತದಲ್ಲೇ ಹತ್ತು ಸಾವಿರ ವರುಷ | ಗುಪ್ತವಾಗೇ ಇದ್ದನು ಬ್ರಹ್ಮ ಧೇನುವಾದನು | ರುದ್ರ ವತ್ಸನಾದನು ಧೇನು ಮುಂದೆ ಮಾಡಿಕೊಂಡು | ಗೋಪಿ ಹಿಂದೆ ಬಂದಳು ಕೋಟಿ ಹೊನ್ನು ಬಾಳುವೋದು | ಕೊಡದ ಹಾಲು ಕರೆವುದು ಪ್ರೀತಿಯಿಂದಲಿ ತನ್ನ ಮನೆಗೆ | ತಂದುಕೊಂಡನು ಚೋಳನು ಒಂದು ದಿವಸ ಕಂದಗ್ಹಾಲು | ಚೆಂದದಿಂದಲಿ ಕೊ...

ಎಂದು ಕಾಂಬೆನು ಎನ್ನ ಸಲಹುವ ಬಂಧು |ಹಯವದನ | Endu kambenu enna salahuva | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎಂದು ಕಾಂಬೆನು ಎನ್ನ ಸಲಹುವ ಬಂಧು ಬಳಗ ನಮ್ಮಪ್ಪನಾ ತಿರುಪತಿಯಲಿ ಇಪ್ಪನಾ ವರಹಾ ತಿಮ್ಮಪ್ಪನಾ ||ಪ|| ದಂಡಿಗೆಯನು ಬಾರಿಸುತಲಿ ಶ್ರುತಿಗೂಡಿಕೊಂಡು ಪಾಡುತ ||  ಮನದಿ ಲೋಲ್ಯಾಡುತ ಕುಣಿಕುಣಿದಾಡುತ ||೧||  ಬೆಟ್ಟದೊಡೆಯನ ಚರಣಕಮಲಕೆ ಶಿರವಿಟ್ಟು ಕರಗಳ  ಮುಗಿವೆ ನಾ ಕವಕವ ನಗುವೆ ನಾ ಎನ್ನೊಡೆಯನಾ ಪೊಗಳಿ ನಾ ||೨||  ಸ್ವಾಮಿ ಪುಷ್ಕರಿಣಿಯಲ್ಲಿ ಸ್ನಾನ ನೇಮವ ಮಾಡುವೆ  ಪುಣ್ಯಕ್ಷೇತ್ರವ ನೋಡುವೆ, ಹಯವದನನ ಕೊಂಡಾಡುವೆ ||೩||  eMdu kAMbenu enna salahuva baMdhu baLaga nammappanA tirupatiyali ippanA varahA timmappanA ||pa|| daMDigeyanu bArisutali shrutigUDikoMDu pADuta ||  manadi lOlyADuta kuNikuNidADuta ||1||  beTTadoDeyana caraNakamalake shiraviTTu karagaLa  mugive nA kavakava naguve nA ennoDeyanA pogaLi nA ||2||  svAmi puShkariNiyalli snAna nEmava mADuve  puNyakShEtrava nODuve, hayavadanana koMDADuve ||3|| 

ನಾನೇನು ಮಾಡಿದೆನೋ ಕೃಷ್ಣಯ್ಯ | ಪುರಂದರ ವಿಠಲ | Nanenu Madideno Krishnayya | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಾನೇನು ಮಾಡಿದೆನೋ ಕೃಷ್ಣಯ್ಯ ನೀ ಎನ್ನ ಸಲಹಬೇಕು ||ಪ||  ಕರಿರಾಜ ಕರೆಸಿದನೆ ದ್ರೌಪದಿ ದೇವಿ ಬರೆದೋಲೆ ಕಳುಹಿದಳೆ ||  ಹರುಷದಿಂದಲಿ ಋಷಿ ಪತ್ನಿಯ ಶಾಪವ ಪರಿಹರಿಸಿದೆಯಲ್ಲೋ ಹೇ ಸ್ವಾಮಿ || ೧ || ರಕ್ಕಸ ತನುಜನಲ್ಲೇ ಪ್ರಹ್ಲಾದನು ಚಿಕ್ಕ ಪ್ರಾಯದ ಧ್ರುವನು ||  ಸಿಕ್ಕಿದ ಪಾಪವ ಮಾಡಿದ ಅಜಾಮಿಳ ನಿನ್ನಕ್ಕರೆಯ ಮಗನೇನೊ ಪೇಳೋ ಹೇ ಸ್ವಾಮಿ ||೨||  ಒಪ್ಪಿಡಿ ಅವಲಕ್ಕಿಯ ಕೃಷ್ಣಯ್ಯ ನಿನಗೊಪ್ಪಿಸಿದವನಿಗೊಲಿದೆ ||  ಒಪ್ಪೆನು ನಿನಗೇ ಶ್ರೀ ಪುರಂದರ ವಿಠಲ ಅವರೊಪ್ಪುವಂತೆ ಕಾಯಬೇಕೋ ಹೇ ಸ್ವಾಮಿ ||೩||  nAnEnu mADidenO kRuShNayya nI enna salahabEku ||pa||    karirAja karesidane draupadi dEvi baredOle kaLuhidaLe ||  haruShadiMdali RuShi patniya SApava pariharisideyallO hE svAmi || 1 ||   rakkasa tanujanallE prahlAdanu cikka prAyada dhruvanu ||  sikkida pApava mADida ajAmiLa ninnakkareya maganEno pELO hE svAmi ||2||    oppiDi avalakkiya kRuShnayya ninagoppisidavanigolide ||  oppenu ninagE SrI puraMdara viThala avaroppuvaMte kAyabEkO hE svA...

ನಾರಾಯಣನೆಂಬ ನಾಮವೇ ಮೂಲಮಂತ್ರ | ಹಯವದನ | Narayananemba namave | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾರಾಯಣನೆಂಬ ನಾಮವೇ ಮೂಲಮಂತ್ರ ಓರಂತೆ ಜಪಿಸುವೆನು ಶ್ರೀಹರಿ ಹರಿ ||ಪ|| ಆರ ಬಿಡುವೆನು ಮತ್ತಾರ ಕೂಡುವೆನು ಆರಾರಿಗೊಡಲನೀವೆ ಆರಂಘ್ರಿಗೆರಗುವೆ ಆರಾರ ಮನ್ನಿಸುವೆ ಆರಿಂದ ಉದರ ಪೂರ್ತಿ || ೧ || ಆರಿದ್ದರೇನು ಫಲ ಆರುಬಗೆಯನರಿತು ಆರುಸಾವಿರವನೋದಿ ನೂರ ನೀರೊಳಗಿಟ್ಟು ಆರೆಂಟ ನೆನೆದು ಹದಿ- ನಾರನಾದರು ಕೊಟ್ಟೇನೆ || ೨ || ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆ ಹಬ್ಬವಾವನ ಕಂಡರೆ ಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆ ಅಬ್ಜಾಕ್ಷ ಹಯವದನ || ೩ || naaraayaNaneMba naamavE mUlamaMtra OraMte japisuvenu shrIhari hari ||pa|| Ara biDuvenu mattaara kUDuvenu AraarigoDalanIve AraMghrigeraguve Araara mannisuve AriMda udara pUrti || 1 || AriddarEnu Pala Arubageyanaritu ArusaaviravanOdi nUra nIroLagiTTu AreMTa nenedu hadi- naaranaadaru koTTEne || 2 || ibbaroLage enagobbane saaku kaNge habbavaavana kaMDare obbanigOsuga mattobbana bhajisuve abjaakSha hayavadana || 3 ||

ಇಂಥಾ ಪ್ರಭುವ ಕಾಣೆನೋ | ವಿಜಯ ವಿಠಲ | Intha Prabhuva Kaneno | Vijaya Vittala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಇಂಥಾ ಪ್ರಭುವ ಕಾಣೆನೋ ಈ ಜಗದೊಳಗಿಂಥಾ ಪ್ರಭುವ ಕಾಣೆನೋ ||ಪ||  ಇಂಥ ಪ್ರಭುವ ಕಾಣೆ ಶಾಂತ ಮೂರುತಿ ಜಗದಂತ ರಂಗನು ಲಕ್ಷ್ಮೀಕಾಂತ  ಸರ್ವಂತರ್ಯಾಮಿ ||ಅಪ||    ಬೇಡಿದಿಷ್ಟವ ಕೊಡುವ ಭಕ್ತರ ತಪ್ಪು ನೋಡದೆ ಬಂದು ಪೊರೆವ |  ಗಾಡಿಕಾರನು ಗರುಡಾರೂಢ ಗುಣವಂತ ಮಹಾ ಪ್ರೌಢ ಪ್ರತಾಪೀ ಜಗದೀ ಗೂಢದಿ ಸಂಚರಿಪ |  ಪಾಡಿ ಪೊಗಳಿ ಕೊಂಡಾಡುವವರ ಮುಂದಾಡುತಲಿಪ್ಪನು ನಾಡೊಳಗಿದ್ದರು |  ಕೇಡಿಗನೇ ನಾಡಾಡಿಗಳಂದದಿ ಈಡುಂಟೇ ನೋಡೀ ವೆಂಕಟಗೆ ||೧||    ನಿಗಮ ತತಿಗಳರಿಯದ ನೀರಜ ಭವಾದ್ಯಗಣಿತ ಸುರರು ಕಾಣದ |  ಜಗದೊಡೆಯನು ಭಕ್ತರೂಗಳಿಗೊಲಿದು ತ್ರಿಸ್ಥಾನಗಳ ತ್ಯಜಿಸಿ ಕಲಿಯುಗದಿ ಭೂಮಿಗೆ ಬಂದು |  ಅಗಣಿತ ಸುಗುಣಾರ್ಣವ ಶ್ರೀ ಹರಿಯೇ ಜಗದೊಳು ಸೇವಾದಿಗಳನು ಕೊಳುತಿಹ | ಅಘಹರ ಮೋಕ್ಷಾದಿಗಳನೆ ನೀಡುತ ನಗೆಮೊಗದಲಿ ಚೆನ್ನಿಗೆ ನಿಂತಿಹನು ||೨||  ಭಾರ್ಗವ ಭೂಮಿ ವಲ್ಲಭ ಭವದೂರ ಭಕ್ತವರ್ಗಕ್ಕೆ ಇವ ಸುಲಭ |  ನಿರ್ಗುಣ ನಿರ್ವಿಕಾರ ಸ್ವರ್ಗದೈಶ್ವರ್ಯದಿಂದಾನರ್ಘ್ಯ ಪದವನೀವ ದೀರ್ಘಾಯುವಂತ ನೀತ |  ಭಾರ್ಗವ ರಾಮ ನೃಪರ್ಗಳನೆಲ್ಲರಣಾಗ್ರದಿ ಜಯಿಸಿದ ಉಗ್ರಪ್ರತಾಪಿ ಅಗ್ರಗಣ್ಯ  ಸದ್ವಿಗ್ರಹ ಶ್ರೀಮದನುಗ್ರಹ ಮಾಡುತ ದುರ್ಗುಣ ಕಳೆವ ||೩||      ನಿರ್ದುಃಖಾನಂದ ಭರಿತಾ ನಿರ್ವಾಣ ಸುಖಕೆ | ಆರ್ದ್ರ ಹೃದಯ ತೋರು...

ಮುಖ್ಯಕಾರಣ ವಿಷ್ಣು | ಗೋಪಾಲವಿಠಲ | MukhyaKarana Vishnu | GopalaVittala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti:Sri Gopala dasaru (Gopala vittala) ಮುಖ್ಯ ಕಾರಣ ವಿಷ್ಣು ಸ್ವತಂತ್ರನೆ || ಪ || ಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ || ಅಪ || ತಿಳಿವೆಂಬುವವ ನೀನೆ ತಿಳಿದು ತಿಳಿಸುವ ನೀನೆ ತಿಳಿವ ವಸ್ತುವು ನೀನೇ ತೀರ್ಥ ಪದನೇ ತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆ ತಿಳಿವ ತಂತ್ರವು ನಿನ್ನದು ತಿಳಿಸೋ ಸರ್ವೇಶ || ೧ || ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ ಅಚೇತನನು ಸರಿ ನೀನು ಸುಮ್ಮನಿರಲು ಯಾತರವ ನಾನಯ್ಯ ನಿನ್ನಾಧೀನವು ಎಲ್ಲ ಚೇತನನು ಅಹುದೋ ನೀ ಚಲಿಸೆ ಚಲಿಸುವೆನು || ೨ || ತಿಳಿಯೆನ್ನುವುದಕ್ಕಾಗಿ ತಿಳಿಯತಕ್ಕದು ನೀನೆ ತಿಳಿಸೋ ಸೋತ್ತಮರೆಲ್ಲ ತಿಳಿದ ಶೇಷ ತಿಳಿವಲ್ಲಿ ತಿಳಿಪಲ್ಲಿ ತಿಳುವಳಿಕೆ ನೀನಾಗಿ  ಚಲಿಸದಲೆ ಮನ ನಿಲಿಸೋ ಗೋಪಾಲವಿಠ್ಠಲ || ೩ || mukhya kaaraNa viShNu svataMtrane || pa || saKya satvara pOShya sarasijaadyamarEsha || apa || tiLiveMbuvava nIne tiLidu tiLisuva nIne tiLiva vastuvu nInE tIrtha padanE tiLidudake Pala nIne tiLiyagoDadava nIne tiLiva taMtravu ninnadu tiLisO sarvEsha || 1 || chEtananu naanu nI chEShTe maaDisalaaga achEtananu sari nInu summaniralu yaatarava naanayya ninnaadhInavu ella chEtananu ahudO nI chalise chalisuvenu || 2 || tiLiyen...

ದೇವಕಿ ಕಂದ ಮುಕುಂದ | ಪುರಂದರವಿಠಲ | Devaki Kanda Mukunda | Puranda Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ದೇವಕಿ ಕಂದ ಮುಕುಂದ ಗೋವಿಂದ ||ಪ||  ನಿಗಮೋದ್ಧಾರ ನವನೀತ ಚೋರ || ಖಗಪತಿ ವಾಹನ ಜಗದೋದ್ಧಾರ ||೧||  ಶಂಖ ಚಕ್ರಧರ ಶ್ರೀ ಗೋವಿಂದ || ಪಂಕಜಲೋಚನ ಪರಮಾನಂದ ||೨||  ಮಕರ ಕುಂಡಲ ಧರ ಮೋಹನ ವೇಷ || ರುಕುಮಿಣಿ ವಲ್ಲಭ ಪಾಂಡವ ಪೋಷ ||೩||  ಕಂಸಮರ್ದನ ಕೌಸ್ತುಭಾಭರಣ | ಹಂಸ ವಾಹನ ಪೂಜಿತ ಚರಣ ||೪||  ವರವೇಲಾಪುರ ಚೆನ್ನ ಪ್ರಸನ್ನ ಪುರಂದರ ವಿಠಲ ಸಕಲಾ ಗುಣಪೂರ್ಣ ||೫|| dEvaki kaMda mukuMda gOviMda ||pa||  nigamOddhAra navanIta cOra || Kagapati vAhana jagadOddhAra ||1||    SaMKa cakradhara SrI gOviMda || paMkajalOcana paramAnaMda ||2||    makara kuMDala dhara mOhana vESha || rukumiNi vallaBa pAMDava pOSha ||3||    kaMsamardana kaustuBABaraNa | haMsa vAhana pUjita caraNa ||4||    varavElApura cenna prasanna puraMdara viThala sakalA guNapUrNa ||5||

ರಂಗ ಕುಣಿದ ಮುದ್ದು | ಪ್ರಸನ್ನವೇಂಕಟ | Ranga Kunida | Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ರಂಗ ಕುಣಿದ ಮುದ್ದು ರಂಗ ಕುಣಿದ || ಪ || ರಂಗ ಕುಣಿದ ಗೋಪಿಕಂಗಳ ಮುಂದೆ ಪೊಂಗೆಜ್ಜೆ ರವದೊಳು ಅಂಗಳದೊಳು || ಅಪ || ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿ ಬಳುಕುತ ಬಾಗುತ ನಲಿನಲಿದಾಡಿ   ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿ ಕಳಕಳಿಸಿ ನಕ್ಕು ನಗುತ ಬಿದ್ದೆದ್ದು || ೧ || ಸುಳಿಗುರುಳು ಫಣೆಯಲಿ ಒಲಿದಾಡಲು ಬಲರಾಮ ತಿದ್ದಿದರಳುತ ಅಳುಕುತ  ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನು ಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ || ೨ || ಅರಳೆಲೆ ಮಾಗಾಯಿ ಬೆರಳ ರನ್ನುಂಗುರ ಕಿರುಗೆಜ್ಜೆ ಭಾರೆಂದು ತರಳರಿಗಿತ್ತು  ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯ ಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ || ೩ || raMga kuNida muddu raMga kuNida || pa || raMga kuNida gOpikaMgaLa muMde poMgejje ravadoLu aMgaLadoLu || apa || geLeyareMdenisuva eLemakkaLoDagUDi baLukuta bAguta nalinalidADi   moLevallu bAyijollu giLisolliniMdali kaLakaLisi nakku naguta biddeddu || 1 || suLiguruLu phaNeyali olidADalu balarAma tiddidaraLuta aLukuta  makkaLa ratuna SrI cikkakRuShNayyanu bekkige bedaryeve ikkade nODi || 2 || araLele mAgAy...

ತೋಳು ತೋಳು ರಂಗ ತೋಳನ್ನಾಡೈ | ಪುರಂದರ ವಿಠಲ | Tolu Tolu Ranga Tolannadai | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ತೋಳು ತೋಳು ತೋಳು ರಂಗ ತೋಳನ್ನಾಡೈ ನೀಲವರ್ಣದ ಬಾಲಕೃಷ್ಣನೇ ತೋಳನ್ನಾಡೈ ||ಪ|| ಹುಲಿಯುಗುರು ಅರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ ಘಳಿರು ಘಳಿರೆಂಬ ಗೆಜ್ಜೆಲಿ ನಲಿಯುತಾ ತೋಳನ್ನಾಡೈ ನಿಲುವಿಗೆ ನಿಲುಕದ ಓರಳ ತಂದಿಟ್ಟ ತೋಳನ್ನಾಡೈ ಸ್ವಾಮಿ ಚೆಲುವ ಮಕ್ಕಳ ಮುದ್ದು ಮಣಿಕ್ಯವೇ ತೋಳನ್ನಾಡೈ ||೧|| ಪೂತನಿ ಎಂಬುವಳ ಅಸುವನೆ ಹೀರಿದಾ ತೋಳನ್ನಾಡೈ ಸ್ವಾಮಿ ಮಾತೆಯ ಪಿತನ ಅಣುಗನ ಮಡುಹಿದಾ ತೋಳನ್ನಾಡೈ ಮಾತಿಗೆ ಶಿಶುಪಾಲನ ಶಿರ ತರಿದಾ ತೋಳನ್ನಾಡೈ ಸ್ವಾಮಿ ಶ್ರೀ ತುಳಸಿಯ ಪ್ರಿಯ ನಿತ್ಯ ವಿನೋದಿ ತೋಳನ್ನಾಡೈ ||೨|| ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ ಅರ್ಜುನನ ರಥ ಸಾರಥ್ಯ ಮಾಡಿದ ತೋಳನ್ನಾಡೈ ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ ವಜ್ರಪಂಜರ ಪಾಂಡವ ಪ್ರಿಯ ತೋಳನ್ನಾಡೈ ||೩|| ದಟ್ಟಡಿಯಿಡುತಲಿ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ ಬಟ್ಟಲಲುಣುವಿಸೆ ನಗುವಾತನೆ ತೋಳನ್ನಾಡೈ  ||೪|| ನಖದಿಂದ ಹಿರಣ್ಯಕನ ಉದರವ ಸೀಳಿದಾ ತೋಳನ್ನಾಡೈ ಸ್ವಾಮಿ ಸುಖವನಿತ್ತು ಪ್ರಹ್ಲಾದನ ಕಾಯ್ದ ತೋಳನ್ನಾಡೈ ವಿಕಳಿತಗೆಡಿಸಿದ ಗೋಪಿಯರೆಲ್ಲರ ತೋಳನ್ನಾಡೈ ಸ್ವಾಮಿ ಸುಖತೀರ್ಥರ ಪತಿ ಪುರಂದರ ವಿಠಲನೆ ತೋಳನ್ನಾಡೈ ||೫|| tOLu tO...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru