ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಂಥಾ ಬಲವಂತನೋ | ಪುರಂದರ ವಿಠಲ | Entha Balavanthano | Purandara vithala


ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ ಅಂಕಿತ)
Kruti: Sri Purandara dasaru (Purandara vittala)


ಎಂಥಾ ಬಲವಂತನೋ ಕುಂತಿಯ ಸಂಜಾತನೋ ||ಪ||
ಭಾರತಿಗೆ ಕಾಂತನೋ ನಿತ್ಯ ಶ್ರೀಮಂತನೋ ||ಅಪ||
 
ರಾಮಚಂದ್ರನ ಪ್ರಾಣನೋ ಅಸುರ ಹೃದಯ ಬಾಣನೋ
ಖಳರ ಗಂಟಲ ಗಾಣನೋ ಜಗದೊಳಗೆ ಪ್ರವೀಣನೋ ||೧||
 
ಬಂಡಿಯನ್ನವನುಂಡನೋ ಬಕನ ಪ್ರಾಣವ ಕೊಂದನೋ
ದ್ರೌಪದಿಗೆ ಗಂಡನೋ ಭೀಮ ಪ್ರಚಂಡನೋ ||೨||
 
ಕುಂತಿಯ ಕಂದನೋ ಸೌಗಂಧಿಕವ ತಂದನೋ
ಕುರುಕ್ಷೇತ್ರಕೆ ಬಂದನೋ ಕೌರವರ ಕೊಂದನೋ ||೩||
 
ವೈಷ್ಣವಾಗ್ರಗಣ್ಯನೋ ಸಂಚಿತಾಗ್ರ ಪುಣ್ಯನೋ
ದೇವವರೇಣ್ಯನೋ ದೇವ ಶರಣ್ಯನೋ ||೪||
 
ಮಧ್ವ ಶಾಸ್ತ್ರವ ರಚಿಸಿದನೋ ಸದ್ವೈಷ್ಣವರ ಸಲಹಿದನೋ 
ಉಡಿಪಿಲಿ ಕೃಷ್ಣನ ನಿಲಿಸಿದನೋ ಪುರಂದರ ವಿಠಲನ ದಾಸನೋ ||೫|| 

eMthA balavaMtanO kuMtiya saMjAtanO ||pa||
BAratige kAMtanO nitya SrImaMtanO ||apa||
 
rAmacaMdrana prANanO asura hRudaya bANanO
KaLara gaMTala gANanO jagadoLage pravINanO ||1||
 
baMDiyannavanuMDanO bakana prANava koMdanO
draupadige gaMDanO BIma pracaMDanO ||2||
 
kuMtiya kaMdanO saugaMdhikava taMdanO
kurukShEtrake baMdanO kauravara koMdanO ||3||
 
vaiShNavAgragaNyanO saMcitAgra puNyanO
dEvavarENyanO dEva SaraNyanO ||4||
 
madhva SAstrava racisidanO sadvaiShNavara salahidanO
uDipili kRuShNana nilisidanO puraMdara viThalana dAsanO ||5||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru