ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇದಿರ‍್ಯಾರೋ ಗುರುವೇ ಸಮರ‍್ಯಾರೋ | ವೆಂಕಟಪತಿ ವಿಠಲ | Idiryaaro Guruve samaryaaro | Venkatapati Vithala


ಸಾಹಿತ್ಯ : ಶ್ರೀ ವೆಂಕಟ ವಿಠಲ ದಾಸರು (ವೆಂಕಟಪತಿ  ವಿಠಲ)
Kruti: Sri Venkata Vittala Dasaru (Venkatapati vittala)



ಇದಿರ‍್ಯಾರೋ || ಗುರುವೇ ಸಮರ‍್ಯಾರೋ
ಶ್ರೀಹಯವದನನ ಪಾದಪ್ರಿಯ ವಾದಿರಾಜ || ಪ ||

ಸಿರಿನಿಲಯನ ಗುಣಗಳ ಸ್ಮರಿಸುತ, ಗುರು
ಮಧ್ವ ಮುನಿಪನ ಮಹಿಮೆಯ ಪೊಗಳುತ ||
ನೆರೆದಿದ್ದ ಮಾಯಿಮತಕರಿಗಳ ಶಿರವನು |
ಭರದಿ ಭೇದಿಪ ಬಲಿ ವಿಭುದ ಕೇಸರಿಯೆ || ೧ ||

ಹರಿ ತತ್ವ ಸಾರ, ಸಜ್ಜನರಿಗೆ ತಿಳಿಯದೆ |
ಪರಿಪರಿ ಕುಸಮಯತಮ ಕವಿಯಲುನೀ ||
ಸರಸ ಭಾರತಿ ಮೊದಲಾದ ಗ್ರಂಥಗಳನು |
ವಿರಚಿಸಿ ತಮಹರಿಸಿದ ದಿನಕರನೇ || ೨ ||

ಸೋದೆಯಪುರದಲ್ಲಿರುವ ಶ್ರೀ ಹಯವದನನ |
ಮೋದದಿ ಭಜಿಸುತ ಈ ಧರೆಯೊಳ್ |
ಪೂರ್ಣಬೋಧ ತೀರ್ಥರ ಪಾದಸೇವಕರಿಗೆ |
ಆಧಾರ ಮಾಳ್ಪ ಯತಿಕುಲ ಶಿರೋಮಣಿಯೇ || ೩ ||

ಮುದ್ದು ಲಕ್ಷ್ಮೀಶ ವೆಂಕಟಪತಿ ವಿಠಲನ |
ಹೊದ್ದಿದ ಭಕ್ತರ ಸಂತಾಪ ಕಳೆಯುತ ||
ಮಧ್ವ ಮುನಿಯ ಮತ ದುಗ್ಧ ವಾರಿಧಿಯೊಳು |
ಉದ್ಭವಿಸಿದ ಪೂರ್ಣಶುದ್ಧ ಚಂದ್ರಮನೇ || ೪ ||

idiRr^yaarO || guruvE samaRr^yaarO
shrIhayavadanana paadapriya vaadiraaja || pa ||

sirinilayana guNagaLa smarisuta, guru
madhva munipana mahimeya pogaLuta ||
neredidda maayimatakarigaLa shiravanu |
bharadi bhEdipa bali vibhuda kEsariye || 1 ||

hari tatva saara, sajjanarige tiLiyade |
paripari kusamayatama kaviyalunI ||
sarasa bhaarati modalaada graMthagaLanu |
viracisi tamaharisida dinakaranE || 2 ||

sOdeyapuradalliruva shrI hayavadanana |
mOdadi bhajisuta I dhareyoL |
pUrNabOdha tIrthara paadasEvakarige |
Adhaara maaLpa yatikula shirOmaNiyE || 3 ||

muddu lakShmIsha veMkaTapati viThalana |
hoddida bhaktara saMtaapa kaLeyuta ||
madhva muniya mata dugdha vaaridhiyoLu |
udbhavisida pUrNashuddha caMdramanE || 4 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru