ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆಂಜನೇಯನೆ ಪಾಲಿಸೊ | ಗುರು ಗೋಪಾಲ ವಿಠಲ | Anjaneyane Paliso | Guru Gopala Vithala


ಸಾಹಿತ್ಯ : ಶ್ರೀ ಗುರುಗೋಪಾಲ ದಾಸರು 
Kruti: Sri  Guru Gopala Dasaru


ಆಂಜನೇಯನೆ ಪಾಲಿಸೊ ನಿನ್ನ ಶ್ರೀಪಾದಕಂಜ ಮನದಲ್ಲಿ ತೋರಿಸೊ ||ಪ||

ಸಂಜೀವಧರನೇ ಪ್ರಭಂಜನ ತನಯ ಧನಂಜಯ ಕೇತನ ಮಂಜುಳ ಮೂರುತಿ || ಅ.ಪ. ||

ರಾಮಪಾದಾಂಬುಜ ಭೃಂಗಾ ಸಕಲ ಸದ್ಗುಣ ಧಾಮಾ
ಸಜ್ಜನಾಂತರಂಗಾ ಭೂಮಿಸುತೆಯ ಪರಿಣಾಮ ತಿಳಿದು ಆರಾಮ 
ಮುರಿದು ಖಳಸ್ತೋಮ ಭಂಜಿಸಿದ ನಿಸ್ಸೀಮ ಬಲಧಾಮ ರಿಪು ಭೀಮ ಋಜುಸಾರ್ವಭೌಮ || ೧ ||

ಲಕ್ಷ್ಮಣ ಪ್ರಾಣಾಧಾರಾ ದಶಕಂದರ ವಕ್ಷಮರ್ದನ ಅತಿ ಶೂರಾ ಅಕ್ಷಾರಾತಿಯೆ
ರಕ್ಷೋನಿಕರಧ್ಯಕ್ಷರ ಮಹ ಮದ ಶಿಕ್ಷಣೆಯು ಕೃತ ದೀಕ್ಷಾ 
ಬಲು ದಕ್ಷ ರುಧಿರಾಕ್ಷ ಕೊಡು ನಿನ್ನ ಪರೋಕ್ಷ || ೨ ||

ಉದಿತ ಭಾಸ್ಕರ ಪ್ರಭಾವ ಅಚ್ಯುತಾನಂತ ಸದನ ಸದಯ ಸ್ವಭಾವ
ತ್ರಿದಶರ ಗುರು ಗೋಪಾಲವಿಠಲನ ಪದ ಭಜಕರೊಳಗೆ ಮೊದಲಿಗ ನೀನೇ ಪವನ 
ಮಾಧವನ ಗುಣಸ್ತವನ ಮಾಡಿಸು ನಿನ್ನವನ || ೩ ||

AMjanEyane paaliso ninna shrIpaadakaMja manadalli tOriso ||pa||

saMjIvadharanE prabhaMjana tanaya dhanaMjaya kEtana maMjuLa mUruti || a.pa. ||

raamapaadaaMbuja bhRuMgaa sakala sadguNa dhaamaa
sajjanaaMtaraMgaa bhUmisuteya pariNaama tiLidu Araama 
muridu KaLastOma bhaMjisida nissIma baladhaama ripu bhIma Rujusaarvabhouma || 1 ||

lakShmaNa praaNaadhaaraa dashakaMdara vakShamardana ati shUraa akShaaraatiye
rakShOnikaradhyakShara maha mada shikShaNeyu kRuta dIkShaa 
balu dakSha rudhiraakSha koDu ninna parOkSha || 2 ||

udita bhaaskara prabhaava achyutaanaMta sadana sadaya svabhaava
tridashara guru gOpaalaviThalana pada bhajakaroLage modaliga nInE pavana 
maadhavana guNastavana maaDisu ninnavana || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru