ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸೇವಕನೆಲೋ ನಾನು ನಿನ್ನಯ ಪಾದ | ಹಯವದನ | Sevakanelo Nanu | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಸೇವಕನೆಲೋ ನಾನು ನಿನ್ನಯ ಪಾದ |
ಸೇವೆ ನೀಡೆಲೋ ನೀನು ||ಪ||

ಸೇವಕನೆಲೋ ನಾನು ಸೇವೆ ನೀಡೆಲೋನೀನು
ಕಾವುದೇನೆಲೋ ಶ್ರೀ ರಘುವರ ರಾವಣಾಂತಕ ರಕ್ಷಿಸೆನ್ನನು |
ಗೋವರ್ಧನ ಧರ ದೇವ - ಗೋವುಗಳ ಕಾವ
ಶ್ರೀ ಮಹಾನುಭಾವ ವರಗಳ ನೀವ ದೇವಾ |
ಶ್ರೀವಲ್ಲಭ ದಯ ಮಾಡೆನ್ನೊಳು
ಈ ವೇಳೆಗೆ ಇಂದಿರಾ ರಮಣ ||ಅ. ಪ||

ರಾಮ ದಶರಥ ನಂದನಾ 
ರಘು ಕುಲಾಂಬುದಿ ಸೋಮ ಸುಂದರ ವದನಾ |
ವಾಮನ ಪರಿಪೂರ್ಣ ಕಾಮ ಕೌಸಲ್ಯರಾಮ
ಸ್ವಾಮಿ ಶ್ರೀರಂಗ ಧಾಮ ದೈತ್ಯವಿರಾಮ ಶ್ರೀ ಮದಾನಂತ ನಾಮ |
ಭೀಮ - ಮುನಿಜನ ಸ್ತೋಮ - ರಮ್ಯಗುಣ ಧಾಮ -
ರಣರಂಗ ಭೀಮ - ಕೋಮಲ ಶ್ಯಾಮ - ರಾಮ |
ಸಾಮಜ ವರದಾನಂದದಿ ನೀ
ಕಾಮಿತ ಫಲ ಕರುಣಿಸಿ ಕಾಯೋ ||೧||

ಶಂಕರ ಸುರ ಸೇವಿತಾ
ಶೇಷಾ - ಗರುಡಾ - ಲಂಕರ ಮಣಿ ಭೂಷಿತಾ |
ಪಂಕಜ ನಯನ ಮೀನಾಂಕ ಜನಕ - ಪಾದ
ಪಂಕಜಾಸನ ವಿನುತ ತಿರುಪತಿ ವೆಂಕಟ ಬಿರುದಾಂಕ ಜಯ ಜಯ |
ಶಂಖ - ಚಕ್ರಗದಾ ಪಂಕಜಧರ ಅಕಳಂಕ -
ಚರಿತಾ ಟಂಕಾ ಗೊಲಿದ ನಿಶ್ಯಂಕಾ |
ಲಂಕಾದಿಪಲಾಲಿತ ರಘುಪತಿ |
ಕಿಂಕರರಿಗೆ ಕಿಂಕರ ನಾನೆಲೋ ||೨||

ಮಂಧರಧರ ಮಾಧವಾ |
ಮಧುಸೂಧನ ನಂದ ಸುಂದರ ವಿಗ್ರಹ |
ಬಿಂಧು ಮಾಧವ ಗೋವಿಂದ ಗೋಕುಲಾನಂದ |
ವಂದಿತಾಮರ ವೃಂದ ವೇದವ ತಂದ ತುರುಗವನೇರಿ ಬಂದಾ |
ವೃಂದಾವನದೊಳಗಿಂದ - ಯಶೋದೆಯ
ಕಂದ ಹರಿ ಗೋವಿಂದ - ಶೇಷಗಿರಿಯಲಿ ನಿಂದ |
ಮಂದಾಕಿನಿ ದ್ರೌಪದಿ ದ್ರುವ ಗೊಲಿ
ದಂದದಿ ಎನಗೊಲಿ ಹಯವದನ ||೩|| 

sevakanelo naanu ninnaya paada |
seve niDelo ninu ||p||

sevakanelo naanu seve niDeloninu
kaavudenelo shri raghuvara raavaNaamthaka rakshhisennanu |
govardhana dhara deva - govugaLa kaava
shri mahaanubhaava varagaLa niva devaa |
shrivallabha daya maaDennoLu ia veLege iamdiraa ramaNa ||a. p||

raama dasharathha namdanaa
raghu kulaambudi soma sumdara vadanaa |
vaamana paripurNa kaama kausalyaraama
svaami shriramga dhaama daithyaviraama shri madaanamtha naama |
bhima -munijana sthoma -ramyaguNa dhaama -
raNaramga bhima -komala shyaama -raama |
saamaja varadaanamdadi ni
kaamitha phala karuNisi kaayo ||1||

shamkara sura sevithaa
sheshhaa - garuDaa - lamkara maNi bhushhithaa |
pamkaja nayana minaamka janaka - paada
pamkajaasana vinutha thirupathi vemkaTa birudaamka jaya jaya |
shamkha -chakragadaa pamkajadhara akaLamka -
charithaa Tamkaa golida nishyamkaa |
lamkaadipalaalitha raghupathi |
kimkararige kimkara naanelo ||2||

mamdharadhara maadhavaa |
madhusudhana namda sumdara vigraha |
bimdhu maadhava govimda gokulaanamda |
vamdithaamara vrrimda vedava thamda thurugavaneri bamdaa |
vrrimdaavanadoLagimda - yashodeya
kamda hari govimda -sheshhagiriyali nimda |
mamdaakini draupadi druva goli
damdadi enagoli hayavadana ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru