ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸರ್ವಮಂಗಳೆ ತಾಯೆ | ತಂದೆ ವೆಂಕಟೇಶ ವಿಠಲ | Sarvamangale Taye | Tande Venkatesha Vithala


ಸಾಹಿತ್ಯ : ಶ್ರೀ ತಂದೆ ವೆಂಕಟೇಶ ವಿಠಲ ದಾಸರು (ತಂದೆ ವೆಂಕಟೇಶ ವಿಠಲ)
Kruti: Sri Tande Venkatesha Vittala Dasaru (Tande venkatesha vittala)


ಸರ್ವಮಂಗಳೆ ತಾಯೆ ಪಾರ್ವತಿಯೆ ||ಪ||
ಊರ್ವಿ ಧರಾತ್ಮಜೆಯೇ ಶರ್ವ ಜಾಯೇ ||ಅಪ||

ಕಾತ್ಯಾಯಿನಿ ಗೌರಿ ಭೃತ್ಯಜನ ಶುಭಕಾರಿ ಮತ್ತಮಹಿಷನ ವೈರಿ ರಾಜೇಶ್ವರಿ 
ಚಿತ್ತೈಸಿ ಎನ್ನ ಉಪರಿ ಉತ್ತಮ ಮತಿ ತೋರಿ
ಗೋತ್ರಪತಿ ಸುಕುಮಾರಿ ಶಿವ ಶಂಕರಿ ||೧||

ವಾರಣಾಶ್ಯನ ಮಾತೆ ಕಾರುಣ್ಯ ರಸ ಭರಿತೇ ಧಾರುಣಿ ಪತಿ ಭಕುತಿ ಭವನದಿ ಪೋತೆ
ಕಾರುಣ್ಯಮಯ ವನಿತೆ ಮಾರಣಾಸ್ತ್ರದಿ ನಮಿಪೆ |
ಶರಣನಿಗೆ ಮಂತ್ರಿಸುತೆ ಶರ ವರವನಿತ್ತೆ ||೨||

ಭುಜಗ ಭೂಷಣ ರಾಣಿ ಗಜಗಮನೆ ಕಲ್ಯಾಣಿ | ಸುಜನಾಬ್ಜ ಗಗನ ಮಣಿ ದುರ್ಗೆ ಶರ್ವಾಣಿ ||
ಅಜನ ತಂದೆ ವೆಂಕಟೇಶ ವಿಠಲ ಪದಾಬ್ಜ ಮಣಿ ನಿಜ ಶಿರದಿ ಧರಿಸಿರುವ ಮಧುರ ವಿಹಾರಿಣಿ ||೩||

sarvamaMgaLe taaye paarvatiye ||pa||
Urvi dharaatmajeyE sharva jaayE ||apa||

kaatyaayini gouri bhRutyajana shubhakaari mattamahiShana vairi raajEshvari 
cittaisi enna upari uttama mati tOri
gOtrapati sukumaari shiva shaMkari ||1||

vaaraNaashyana maate kaaruNya rasa bharitE dhaaruNi pati bhakuti bhavanadi pOte
kaaruNyamaya vanite maaraNaastradi namipe |
sharaNanige maMtrisute shara varavanitte ||2||

bhujaga bhUShaNa raaNi gajagamane kalyaaNi | sujanaabja gagana maNi durge sharvaaNi ||
ajana taMde veMkaTESa viThala padaabja maNi nija shiradi dharisiruva madhura vihaariNi ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru