ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆರತಿ ಹಾಡು | ಮಂಗಳಾರತಿ ತಂದು | ಭೀಮೇಶ ಕೃಷ್ಣ | Mangalaarathi Tandu | Bhimesha Krishna | Aarati Song


ಸಾಹಿತ್ಯ : ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ) 
Kruti: Harapanahalli Bhimavva (Bhimesha Krishna)


ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ || ಪ ||

ಅಂಗನೇಯರೆಲ್ಲಾ ನೆರೆದು ಮಂಗಳಾರತಿ ಎತ್ತಿರೆ || ಅ.ಪ ||

ಶುದ್ಧ ಸ್ನಾನವ ಮಾಡಿ ನದಿಯೊಳು | ವಜ್ರ ಪೀಠದಿ ನೆಲೆಸಿದೆ || 
ತಿದ್ದಿ ತಿಲಕ ತೀಡಿದಂತ | ಮುದ್ದು ಮಂಗಳ ಗೌರಿಗೆ || ೧ ||

ಎರೆದು ಪೀತಾಂಬರವ ನುಡಿಸಿ | ಸರ್ವಾಭರಣವ ತೊಡಿಸಿರೆ ||
ಹರಳಿನೋಲೆ ಮೂಗುತಿಯನ್ನಿಟ್ಟ | ವರ ಮಹಾಲಕ್ಷ್ಮಿ ದೇವಿಗೆ || ೨ ||

ಉಟ್ಟ ಪೊಡವಿಯ ಕಷ್ಟ ಕಳೆವಳು | ಕೊಟ್ಟಳು ಅರಸಿನ ಸಿರಿಯನು ||
ಹೆತ್ತ ಕುವರ ತೋರಿದಂತ | ಶುಕ್ರವಾರದ ಲಕ್ಷ್ಮಿಗೆ || ೩ ||

ನಿಗಮ ವೇದ್ಯಳೆ ನಿನ್ನ ಗುಣಗಳ | ಬಗೆ ಬಗೆಯಿಂದಲಿ ಸ್ತುತಿಸುವೆ ||
ತೆಗೆದು ಭಾಗ್ಯವ ನೀಡು ಜಗದೊಡೆಯ | ಭೀಮೇಷ ಕೃಷ್ಣನ ಮಡದಿಯೆ || ೪ ||


mamgaLaarathi thamdu beLagire aambujaakshhana raaNige  ||pa||
aamganeyarellaa neredu mamgaLaarathi eththire  ||a.pa  ||

shuddha snaanava maaDi nadiyoLu | vajra piThadi neleside  ||
thiddi thilaka thiDidamtha | muddu mamgaLa gaurige  || 1 ||

eredu pithaambarava nuDisi | sarvaabharaNava thoDisire  ||
haraLinole muguthiyanniTTa | vara mahaalakshhmi devige  || 2 ||

uTTa poDaviya kashhTa kaLevaLu |koTTaLu arasina siriyanu  ||
heththa kuvara thoridamtha | shukravaarada lakshhmige  || 3 ||

nigama vedyaLe ninna guNagaLa | bage bageyimdali sthuthisuve  ||
thegedu bhaagyava niDu jagadoDeya | bhimeshha krrishhNana maDadiye  || 4 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru