ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ನರಹರಿಯೆ ||ಪ||
ನಾರಾಯಣ ನರಹರಿಯೆ ಹಯವದನ ಸ್ವಾಮಿ ನೀ ಎನಗೆ ದಯವಾಗೊ ||ಅ.ಪ||
ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು ಆಗಮವ ತಂದು ಅಜಗಿತ್ತೆ
ಆಗಮವ ತಂದು ಅಜಗಿತ್ತೆ ಹಯವದನ ಆದಿಮೂರುತಿಯೆ ದಯವಾಗೊ ||೧||
ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದೆ ಪ್ರೇಮದಿ ಸುರರಿಗಮೃತವ
ಪ್ರೇಮದಿ ಅಮೃತವನಿಕ್ಕಿದ ಹಯವದನ ಸ್ವಾಮಿ ನೀ ಎನಗೆ ದಯವಾಗೊ ||೨||
ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು ರೂಢಿಯನೆಗಹಿ ಜಗಕಿತ್ತೆ
ರೂಢಿಯನೆಗಹಿ ಜಗಕಿತ್ತೆ ಹಯವದನ ಪ್ರೌಢ ನೀ ಎನಗೆ ದಯವಾಗೊ ||೩||
ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ ಕುಶಲದಿಂ ಕರುಳಮಾಲೆಯ
ಕುಶಲದಿಂ ಕರುಳಮಾಲೆಯ ಧರಿಸಿದ ಹಯವದನ ಬಿಸಜಾಕ್ಷ ಎನಗೆ ದಯವಾಗೊ ||೪||
ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ ವ್ಯೋಮಕ್ಕೆ ಚರಣವ ನೀಡಿದೆ
ವ್ಯೋಮಕ್ಕೆ ಚರಣವ ನೀಡಿದ ಹಯವದನ ವಾಮನ ಎನಗೆ ದಯವಾಗೊ ||೫||
ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ ಹಡೆದ ತಂದೆಯ ಮಾತು ಸಲಿಸಿದೆ
ಹಡೆದ ತಂದೆಯ ಮಾತು ಸಲಿಸಿದ ಹಯವದನ ಒಡೆಯ ನೀ ಎನಗೆ ದಯವಾಗೊ ||೬||
ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ ಭೂತ ರಾವಣನ ಮಡುಹಿದೆ
ಭೂತ ರಾವಣನ ಮಡುಹಿದ ಹಯವದನ ಖ್ಯಾತ ನೀ ಎನಗೆ ದಯವಾಗೊ ||೭||
ಗೊಲ್ಲರೊಡನಾಡಿ ಬಲ್ಲಿದಕಂಸನ ಕೊಂದೆ ಮಲ್ಲರೊಡನಾಡಿ ಮಡುಹಿದೆ
ಮಲ್ಲರೊಡನಾಡಿ ಮಡುಹಿದ ಹಯವದನ ಫುಲ್ಲಾಕ್ಷ ಎನಗೆ ದಯವಾಗೊ ||೮||
ತ್ರಿಪುರರ ಸತಿಯರಿಗುಪದೇಶವನಿಕ್ಕಿ ತ್ರಿಪುರರನೆಲ್ಲ ಮಡುಹಿದೆ
ತ್ರಿಪುರರನೆಲ್ಲ ಮಡುಹಿದ ಹಯವದನ ನಿಪುಣ ನೀ ಎನಗೆ ದಯವಾಗೊ ||೯||
ತೇಜಿಯನೇರಿ ರಾಹುತನಾಗಿ ನೀ ಮೆರೆದೆ ಮೂರ್ಜಗಕೆ ಕಲ್ಕಿಯೆಂದೆನಿಸಿದೆ
ಮೂರ್ಜಗಕೆ ಕಲ್ಕಿಯೆಂದೆನಿಸಿದ ಹಯವದನ ಭೋಜ ನೀ ಎನಗೆ ದಯವಾಗೊ ||೧೦||
ವಾದಿರಾಜನಿಗೊಲಿದು ಸ್ವಾದೆಪುರದಲಿ ನಿಂದು ವೇದದ ಕಥೆಯನರುಹಿದೆ
ವೇದದ ಕಥೆಯನರುಹಿದ ಹಯವದನ ಮಾಧವ ನೀ ಎನಗೆ ದಯವಾಗೊ ||೧೧||
naaraayaNa naaraayaNa naaraayaNa naaraayaNa naaraayaNa narahariye ||p||
naaraayaNa narahariye hayavadana svaami ni enage dayavaago ||a.p||
nigamava kaddoyda duguDa daithyana komdu aagamava thamdu ajagiththe
aagamava thamdu ajagiththe hayavadana aadimuruthiye dayavaago ||೧||
kurmarupadi bamdu aaa giriyaneththide premadi surarigamrrithava
premadi amrrithavanikkida hayavadana svaami ni enage dayavaago ||೨||
kroDarupadi bamdu muDhadaithyana komdu ruDhiyanegahi jagakiththe
ruDhiyanegahi jagakiththe hayavadana prauDha ni enage dayavaago ||೩||
shishuva baadhisuthirda kashipanna siLidi kushaladim karuLamaaleya
kushaladim karuLamaaleya dharisida hayavadana bisajaakshha enage dayavaago ||೪||
vaamanarupadi bamdu bhumi oraDi maaDi vyomakke charaNava niDide
vyomakke charaNava niDida hayavadana vaamana enage dayavaago ||೫||
koDaliya piDidu kaDide dushhTanrripara haDeda thamdeya maathu saliside
haDeda thamdeya maathu salisida hayavadana oDeya ni enage dayavaago ||೬||
sithegoskara pogi sethuveya kaTTide bhutha raavaNana maDuhide
bhutha raavaNana maDuhida hayavadana khyaatha ni enage dayavaago ||೭||
gollaroDanaaDi ballidakamsana komde mallaroDanaaDi maDuhide
mallaroDanaaDi maDuhida hayavadana phullaakshha enage dayavaago ||೮||
thripurara sathiyarigupadeshavanikki thripuraranella maDuhide
thripuraranella maDuhida hayavadana nipuNa ni enage dayavaago ||೯||
thejiyaneri raahuthanaagi ni merede murjagake kalkiyemdeniside
murjagake kalkiyemdenisida hayavadana bhoja ni enage dayavaago ||೧೦||
vaadiraajanigolidu svaadepuradali nimdu vedada kathheyanaruhide
vedada kathheyanaruhida hayavadana maadhava ni enage dayavaago ||೧೧||