ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಧನು ಮುರಿದ ಶ್ರೀರಾಮ | ಪುರಂದರ ವಿಠಲ | Dhanu Murida Shri Rama | Purandara Vithala


ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ ಅಂಕಿತ)
Kruti: Sri Purandara dasaru (Purandara vittala)


ಧನು ಮುರಿದ ಶ್ರೀರಾಮ ಶೌರ್ಯವನು ತೋರಿ ಜನಕನಾ ಸಭೆಯಲ್ಲಿ ಜಾನಕಿಯ ಮನ ಸೆಳೆದ ||ಪ||

ವಸುಧೀಶರೆಲ್ಲರೂ ಅಸುಗೆಟ್ಟು ಕುಳಿತಿರಲು | ದಶಕಂಠ ಧನುವೆತ್ತಿ ಬಸವಳಿದು ಬಿದ್ದು | 
ಪಸರಿಸಿತು ಹಾಸ್ಯಧ್ವನಿ ನೆರೆದಾ ಸಭೆಯೊಳಗೆಲ್ಲ | ನಸುನಕ್ಕ ವಿಶ್ವಾಮಿತ್ರ ರಾಮನೆಬ್ಬಿಸಿದ ||೧||

ಶ್ಯಾಮಸುಂದರನೆದ್ದು | ಪ್ರೇಮದಿಂದ ಮುನಿಗೆರೆಗಿ ಆ ಮಹಾಧನುವಿದ್ದ ಸ್ಥಳಕ್ಕೆ ಬಂದು |
ಕೋಮಲ ಕರಗಳಿಂದ ಧನುವೆತ್ತಿ ತಾ ಪಿಡಿದು | ಸಾಮರ್ಥ್ಯದಿಂದ ಎಳೆದಾ ಧನು ಮುರಿದು ಎರಡಾಯ್ತು ||೨||

ಜಯಭೇರಿ ಹೊಡೆಯಿತು ಜಯವಾಯ್ತು ರಾಮಗೆಂದು | ಜಯ ಜಯವೆಂದು ವನಪುಷ್ಪ ಮಳೆಗರೆಯೆ |
ಜಯಮಾಲೆ ಹಾಕಿದಳು ಜಾನಕೀಯು ಓಡಿ ಬಂದು | ಜಯ ಪಡೆದು ನಿಂತಿಹ ಪುರಂದರ ವಿಠಲ ||೩||

dhanu murida shrIrAma shouryavanu tOri janakanaa sabheyalli jaanakiya mana seLeda ||pa||

vasudhIsharellarU asugeTTu kuLitiralu | dashakaMTha dhanuvetti basavaLidu biddu | 
pasarisitu haasyadhvani neredaa sabheyoLagella | nasunakka vishvaamitra raamanebbisida ||1||

shyaamasuMdaraneddu | prEmadiMda munigeregi A mahaadhanuvidda sthaLakke baMdu |
kOmala karagaLiMda dhanuvetti taa piDidu | saamarthyadiMda eLedaa dhanu muridu eraDaaytu ||2||

jayabhEri hoDeyitu jayavaaytu raamageMdu | jaya jayaveMdu vanapuShpa maLegareye |
jayamaale haakidaLu jaanakIyu ODi baMdu | jaya paDedu niMtiha puraMdara viThala ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru