ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸುಬ್ಬರಾಯ ಶುಭಕಾಯ | ವಿಜಯ ವಿಠಲ | Subbaraaya Shubhakaaya | Vijaya Vithala


ಸಾಹಿತ್ಯ : ಶ್ರೀ ವಿಜಯ ವಿಠಲ ದಾಸರು (ವಿಜಯ ವಿಠಲ)
Kruti:Sri Vijaya vithala dasaru (Vijaya vittala)


ಸುಬ್ಬರಾಯ ಶುಭಕಾಯ || ಪ ||
ಸುಬ್ಬರಾಯ ಶುಭಾಕಾಯಂಗಜ ನೀನೆ
ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ || ಅಪ ||

ಮಾರಾ ಭರತನೆ ಶಂಬರಾರಿ ಸನತ್ಕುಮಾರ ಕುಮಾರಾ ಸಾಂಬಾ |
ಸಾರಿದೆ ನಿನ್ನವತಾರ ಮೂಲರೂಪ ಸಾರಿಸಾರಿಗೆ ಸಂಸಾರಮನ 
ವಿಸ್ತಾರವಾಗದಂತೆ ಹಾರಿ ಸದುರ ವ್ಯಾಪಾರಗುಣ ಪಾರಾವಾರಾ || ೧ ||

ಮಾಡುವೆ ವಂದನೆ ಸತತ ಸಜ್ಜನರೊಳಗಾಡಿಸು ಭಕುತರ ಪ್ರೀತಾ
ಪಾಡಿದವರ ಕಾಪಾಡುವ ರತಿಪತಿ ಈಡಾರು ನಿನಗೆ ನಾಡಿನೊಳಗೆಲ್ಲ |
ಬೇಡುವೆ ದಯವನ್ನು ಮಾಡು ವಿರಕುತಿಯ ನೀಡು ಬಿಡದಲೆ ನೋಡು || ೨ ||

ಕುಕ್ಕೆ ಪುರಿಯ ನಿಲಯಾ ನಿಲಯಾ ಶ್ರೀಧರ ಬೊಮ್ಮ ಮುಕ್ಕಣ್ಣಗಳ ತನಯ ||
ಸೊಕ್ಕಿದ ತಾರಕ ರಕ್ಕಸಹರ ದೇವರ್ಕಳ ನಿಜದಳಕೆ ನಾಯಕನಾದೆ 
ಪಕ್ಷಿವಾಹನ ಸಿರಿ ವಿಜಯ ವಿಠಲನ ಚಕ್ರ ಐದೊಂದು ವಕ್ತ್ರಾ || ೩ ||

subbaraaya shubhakaaya || pa ||
subbaraaya shubhaakaayaMgaja nIne
nibbara mahimaa dayaaMbudhi skaMdaa || apa ||

maaraa bharatane shaMbaraari sanatkumaara kumaaraa saaMbaa |
saaride ninnavataara mUlarUpa saarisaarige saMsaaramana 
vistaaravaagadaMte haari sadura vyaapaaraguNa paaraavaaraa || 1 ||

maaDuve vaMdane satata sajjanaroLagaaDisu bhakutara prItaa
paaDidavara kaapaaDuva ratipati IDaaru ninage naaDinoLagella |
bEDuve dayavannu maaDu virakutiya nIDu biDadale nODu || 2 ||

kukke puriya nilayaa nilayaa shrIdhara bomma mukkaNNagaLa tanaya ||
sokkida taaraka rakkasahara dEvarkaLa nijadaLake naayakanaade 
pakShivaahana siri vijaya viThalana cakra aidoMdu vaktraa || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru