ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಇಂದಿರೆ ನಿನ್ನ ಪಾದ ವಂದಿಸುವೆ | ಜಗನ್ನಾಥ ವಿಠಲ | Indire ninna paada | Jagannatha Vithala


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ ಅಂಕಿತ)
Kruti: Jagannatha dasaru (Jagannatha vittala)


ಇಂದಿರೆ ನಿನ್ನ ಪಾದ ವಂದಿಸುವೆ ಎನ್ನ
ಮಂದಿರದಲ್ಲಿ ನಿಲ್ಲೇ ಕೇಳುವದನ ಸೊಲ್ಲೆ ||ಪ||

ಅಂಧಕೂಪದ ಭವ ಸಿಂಧುವಿನೊಳು 
ಬಹು ನೊಂದು ಬೇಡಿಕೊಂಬೆ ಪಾಲಿಸು ಜಗದಂಬೆ ||೧||

ಇಂದಿರೇಶನ ರಾಣಿ ಮಂದಭಾಗ್ಯನ 
ಕರುಣದಿಂದಲಿ ಎನ್ನ ನೋಡೇ ನಲಿದಾಡೇ ||೨||

ಮಂದಜಾಸನ ಜನನಿ ಸುಂದರ ಸುಗುಣಿ
ನಿನ್ನ ಕಂದನು ನಾನಮ್ಮಾ ಸಿರಿಯೇ ನೀ ಸುಖ ಸುರಿಯೇ ||೩||

ಎಂದಿಗೂ ಎನ್ನನು ಪೊಂದಿದ ಈ ಭವಬಂಧನ
ಬಿಡಿಸೆಂಬೆ ನಿನ್ನ ಬೇಡಿಕೊಂಬೆ ||೪||

ದಾತ ಗುರು ಜಗನ್ನಾಥ ವಿಠಲನ
ಪ್ರೀತಿಯಿಂದ ಎನಗೆ ತೋರೇ ಎನ್ನ ಮನೆಗೆ ಬಾರೆ ||೫||

iMdire ninna paada vaMdisuve enna
maMdiradalli nillE kELuvadana solle ||p||

aMdhakUpada bhava siMdhuvinoLu 
bahu noMdu bEDikoMbe paalisu jagadaMbe ||1||

iMdirEshana raaNi maMdabhaagyana 
karuNadiMdali enna nODE nalidaaDE ||2||

maMdajaasana janani suMdara suguNi
ninna kaMdanu naanammaa siriyE nI suKa suriyE ||3||

eMdigU ennanu poMdida I bhavabaMdhana
biDiseMbe ninna bEDikoMbe ||4||

daata guru jagannaatha viThalana
prItiyiMda enage tOrE enna manege baare ||5||





Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru