ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀಶ ನೀನಹುದೋ ಶೇಷಾಚಲವಾಸ | ಹಯವದನ | Shrisha Neenahudo | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು, (ಹಯವದನ)
Kruti:Sri Vadirajaru (Hayavadana)


ಶ್ರೀಶ  ನೀನಹುದೋ ಶೇಷಾಚಲವಾಸ ನೀನಹುದೊ ||ಪ||
ಶೇಷಶಯನ ಸುರೇಶವಂದಿತ ಶೇಷಜನರನು ಪಾಲಿಸಿ ಬಡ್ಡಿ -
ಕಾಸು ಸೇರಿಸಿ ಗಂಟುಕಟ್ಟುವ ಕ್ಯಾಸಕ್ಕಿ ತಿಮ್ಮಪ್ಪ ನೀನೆ ||ಅ. ಪ||

ತಂದೆ ನೀನಹುದೊ ಕರುಣಾ-ಸಿಂಧು ನೀನಹುದೊ
ಅಂದು ದ್ರುಪದನ ನಂದನೆಯ ಎಳೆ ತಂದು ಘಾಸಿಯ ಮಾಡುತಿರಲು
ಮುಂದೆಬಂದು ಅಕ್ಷಯವೆಂದು ಸಲಹಿದ ಮಂದಹಾಸ ಮುಕುಂದನು ನೀನೆ ||೧||

ಧೀರ ನೀನಹುದೊ ಜಗದೋ-ದ್ಧಾರ ನೀನಹುದೊ
ಬಾರಿ ಬಾರಿಗೆ ನಿನ್ನ ಪಾದ ಸು-ವಾರಿಜಂಗಳ ಸೇರಿದ ಭಕ್ತರ
ಘೋರ ದುರಿತವ ದೂರಗೈಸುವ ಮಾರಜನಕ ಅಪಾರ ಮಹಿಮನೆ ||೨||

ಧನ್ಯ ನೀನಹುದೊ ಸುರಮುನಿ ಮಾನ್ಯ ನೀನಹುದೊ
ಪನ್ನಗಾರಿವಾಹನ್ನ ಧರೆಯೊಳು ಇನ್ನು ನಿನಗೆದುರ್ಯಾರ ಕಾಣೆನೊ ಪ್ರ -
ಸನ್ನನಾಗೆಲೊ ಬಿನ್ನಹ ಕೇಳು ಪ್ರ-ಸನ್ನ ವತ್ಸಲ ಶ್ರೀ ಹಯವದನ ||೩||

shrisha ninahudo sheshhaachalavaasa ninahudo ||p|| 
sheshhashayana sureshavamditha sheshhajanaranu paalisi baDDi - 
kaasu serisi gamTukaTTuva kyaasakki thimmappa nine ||a. p|| 

thamde ninahudo karuNaa-simdhu ninahudo 
aamdu drupadana namdaneya eLe thamdu ghaasiya maaDuthiralu 
mumdebamdu akshhayavemdu salahida mamdahaasa mukumdanu nine ||೧|| 

dhira ninahudo jagado-ddhaara ninahudo 
baari baarige ninna paada su-vaarijamgaLa serida bhakthara 
ghora durithava duragaisuva maarajanaka apaara mahimane ||೨|| 

dhanya ninahudo suramuni maanya ninahudo 
pannagaarivaahanna dhareyoLu innu ninageduryaara kaaNeno pra - 
sannanaagelo binnaha keLu pr-sanna vathsala shri hayavadana ||೩||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru