ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ದಿಕ್ಕುದೆಸೆ ನೀನೇ ಗುರು ವಾದಿರಾಜ | ಬಾದರಾಯಣ ವಿಠಲ | Dikku Dese Neene Guru Vadiraja | Badarayana Vithala


ಸಾಹಿತ್ಯ : ಶ್ರೀ ಸವಣೂರು ಬಾದರಾಯಣ ದಾಸರು 
Kruti: Sri Savanuru Baadarayanadasaru 


ದಿಕ್ಕುದೆಸೆ ನೀನೇ ಗುರು ವಾದಿರಾಜ ||ಪ|| 
ಇಕ್ಕೋ ಈ ದೇಹವನು ನಿನಗರ್ಪಿಸಿದೆ ಎಮಗೆ ||ಅಪ|| 
 
ಇನ್ನೊಬ್ಬರಿಗೆ ನಾನು ಶರಣೆನ್ನಲಾರೆನು ನಿನ್ನಡಿಗೆ ಕೊರಳ ಕಟ್ಟಿದೆನು ಸತ್ಯ || 
ಅನ್ಯಾಯ ನ್ಯಾಯವನು ಬಲ್ಲ ಮಹಿಮನು ನೀನು | 
ನಿನ್ನ ನಂಬಿದ ಮೇಲೆ ಇನ್ನು ಕೆಡಿಸುವನಲ್ಲ ||೧|| 
 
ಆರಾರಿಗಾಲ್ಪರಿದ ಆರೇನು ಮಾಡುವರೋ | 
ಧೀರ ವಾಗೀಶ ಕರಕಮಲ ಜಾತ | 
ಧಾರುಣಿಯ ಮೇಲಿನ್ನು ನಿನ್ನಂತ ಕರುಣಿಗಳ 
ಆರಾರಿಸಿ ಹುಡುಕಿದರು ನಾಕಾಣೆ ಎನ್ನಾಣೆ ||೨|| 
 
ವೇದ ವೇದ್ಯಾಚಾರ್ಯ ವಂದಿತ ಪದಾಂಬೋಜ 
ಸಾಧುಕುಲ ತಿಲಕ ಸರ್ವಜ್ಞ ಮುನಿಯೇ || 
ಶ್ರೀಧವಳ ಗಂಗಾ ತಟ ನಿಲಯ ಸಲಹೆಮ್ಮ 
ಬಾದರಾಯಣ ವಿಠಲ ಭಕ್ತಾಗ್ರಣಿಯೇ ಎಮಗೆ ||೩|| 

dikkudese nInE guru vAdirAja ||pa|| 
ikkO I dEhavanu ninagarpiside emage ||apa|| 
 
innobbarige nAnu SaraNennalArenu ninnaDige koraLa kaTTidenu satya || 
anyAya nyAyavanu balla mahimanu nInu | 
ninna naMbida mEle innu keDisuvanalla ||1|| 
 
ArArigAlparida ArEnu mADuvarO | 
dhIra vAgISa karakamala jAta | 
dhAruNiya mElinnu ninnaMta karuNigaLa 
ArArisi huDukidaru nAkANe ennANe ||2|| 
 
vEda vEdyAcArya vaMdita padAMbOja 
sAdhukula tilaka sarvaj~ja muniyE || 
SrIdhavaLa gaMgA taTa nilaya salahemma 
bAdarAyaNa viThala BaktAgraNiyE emage ||3||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru