ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಕ್ಕ ಕೇಳೇ ನಿನ್ನ ತಪಸೀಯ | ಗುರು ಮಹೀಪತಿ | Akka Kele Ninna | Guru Mahipati


ಸಾಹಿತ್ಯ : ಶ್ರೀ ಕಾಖಂಡಕಿ ಕೃಷ್ಣದಾಸರು (ಗುರು ಮಹಿಪತಿ ಅಂಕಿತ)
Kruti: Sri Kakhandaki Krishnadasaru (Guru Mahipati)


ಅಕ್ಕ ಕೇಳೇ ನಿನ್ನ ತಪಸೀಯರೊಳಗೊಬ್ಬ ಮುಕ್ಕಣ್ಣಗೀವರಂತೆ | ನಿನ್ನ ಮುಕ್ಕಣ್ಣಗೀವರಂತೆ ||ಪ||
ಮೂರ್ಖನೊ ಗಿರಿರಾಜ ವಿಗಡ ಮುನಿ ಮಾತನೆ ಲೆಕ್ಕಿಸಿ ಮದುವೆ ಮಾಡಿ ಕೊಡುವವನಂತೆ ||ಅ.ಪ.||

ತಲೆ ಎಲ್ಲ ಜಡೆಯಂತೆ ಅದರೊಳಗೆ ಜಲವಂತೆ | ತಿಲಕ ಫಣಿಗೆ ಬಾಲ ಚಂದ್ರನಂತೆ ||
ಹೊಳೆವ ಕಿಡಿಗಣ್ಣನಂತೆ ನಂಜುಗೊರಳನಂತೆ | ಸಲೆ ರುಂಡ ಮಾಲೆಯ ಕೊರಳಿಗ್ಹಾಕಿದನಂತೆ ||೧||

ಉರಗ ಭೂಷಣನಂತೆ ಭಸ್ಮಲೇಪನನಂತೆ | ಕರಿಯ ಚರ್ಮಾಂಬರ ಉಡುಗೆಯಂತೆ ||
ತಿರಿದುಂಬುವವನಂತೆ ಬಿಳಿಯ ಮೈಯವನಂತೆ ನಿರುತ ಢಮರುವ ಬಾರಿಸುವ ಜೋಗಿಯಂತೆ ||೨||

ಹಡೆದವಳಿಲ್ಲವಂತೆ ಎತ್ತನೇರುವನಂತೆ ಅಡವಿ ಗಿರಿಗಳೊಳು ಇಪ್ಪನಂತೆ |
ಒಡನೆ ಪುಲಿದೊಗಲನ ಹಾಸಿಗೆ ಇಹುದಂತೆ | ನುಡಿಗೊಮ್ಮೆ ರಾಮ ರಾಮ ಎಂಬ ಸ್ಮರಣೆ ಇಹುದಂತೆ ||೩||

ಮಾರನ ರಿಪುವಂತೆ ಐದು ಮೋರೆಯಂತೆ | ಆರು ಇಲ್ಲದ ಪರದೇಶಿಯಂತೆ ||
ಧಾರುಣಿಯೊಳು ಗುರುಮಹಿಪತಿ ಸುತ ಪ್ರಭೋ ಭವತಾರಕ ಶಿವನೆಂದು ಮೊರೆ ಹೋಗಬೇಕಂತೆ ||೪||

akka kELE ninna tapasIyaroLagobba mukkaNNagIvaraMte | ninna mukkaNNagIvaraMte ||pa||
mUrKano giriraaja vigaDa muni maatane lekkisi maduve maaDi koDuvavanaMte ||a.pa.||

tale ella jaDeyaMte adaroLage jalavaMte | tilaka PaNige baala caMdranaMte ||
hoLeva kiDigaNNanaMte naMjugoraLanaMte | sale ruMDa maaleya koraLig~haakidanaMte ||1||

uraga bhUShaNanaMte bhasmalEpananaMte | kariya carmaaMbara uDugeyaMte ||
tiriduMbuvavanaMte biLiya maiyavanaMte niruta Dhamaruva baarisuva jOgiyaMte ||2||

haDedavaLillavaMte ettanEruvanaMte aDavi girigaLoLu ippanaMte |
oDane pulidogalana haasige ihudaMte | nuDigomme raama raama eMba smaraNe ihudaMte ||3||

maarana ripuvaMte aidu mOreyaMte | Aru illada paradEshiyaMte ||
dhaaruNiyoLu gurumahipati suta prabhO bhavataaraka shivaneMdu more hOgabEkaMte ||4||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru