ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಈಶಾ ಕೈಲಾಸವಾಸಾ | ವಿಜಯ ವಿಠಲ | Isha Kailasavasa | Vijaya Vithala


ಸಾಹಿತ್ಯ : ಶ್ರೀ ವಿಜಯ ದಾಸರು
Kruti: Sri Vijaya Dasaru


ಈಶಾ ಕೈಲಾಸವಾಸಾ ||ಪ||
ಕಾಶಿನಗರಾಧೀಶ ಶೇಷಭೂಷಣ
ಗಿರೀಶ, ವಿಶ್ವೇಶ ಚಿತ್ತವಾಸ ||ಅ. ಪ||

ಶಿವಸಿದ್ಧ ಸಾದ್ಯ ಸೇವ್ಯಾ | ಭವವ ನಾಶವ ದಿವ್ಯ | 
ಭವಮೂರ್ತಿ ಕೀರ್ತಿ ಭವ್ಯಾ, ಕವಿ ಪ್ರಿಯ ಜ್ಞಾನಾ ದ್ರವ್ಯಾ |
ಹಾ ಶಿವ ನಮೋ ನಮಃ ಶಿವ, ತವ ಚರಣ ನೋಡುವ,
ಪವಿತ್ರ ಚಿತ್ತವ ಕೊಡು, ಧವಳ ಗಂಗಾಧರನೇ ||೧||

ಸತಿನಾಥ ಭೂತ ಪ್ರೀತ, ಸತತ ಸದ್ಗುಣ ವ್ರಾತ,
ಪತಿತ ಪಾವನ ತ್ರಾತ| ಕೃತುವೈ ಪದ್ಮ ಜಾತಾ, |
ಹಾ ಕ್ಷಿತಿಯೊಳು ನೀಲಲೋಹಿತಾ, ನೀನೇ ಗುರುವೆಂದು,
ತುತಿಪ ಗತಿಗೆ, ರಘುಪತಿ, ನಾಮ ಎನಗೀಯೋ ||೨||

ತ್ರಯನೇತ್ರ ಚಿತ್ರಗಾತ್ರ, ನಯ, ನಮಿಪರ ಮಿತ್ರ, 
ಜಯ ಜಯಾ ಮರ ಸ್ತೋತ್ರ, ದಯ ಮಾಡೋ ಪುಣ್ಯ ಪಾತ್ರಾ,
ಹಾ ಭಯ ನಿವಾರಣ ಸಿರಿ | ವಿಜಯ ವಿಠಲನ,
ಭಕುತಿಯ ಕೊಡು, ಅತಿ ಶಯದಿ, ಪಿನಾಕೀಶ ||೩||

ishaa kailaasavaasaa ||p||
kaashinagaraadhisha sheshhabhushhaNa
girish, vishvesha chiththavaasa ||a. p||

shivasiddha saadya sevyaa |bhavava naashava divya |
bhavamurthi kirthi bhavyaa, kavi priya jnjaanaa dravyaa |
haa shiva namo namh shiv, thava charaNa noDuv,
pavithra chiththava koDu, dhavaLa gamgaadharane ||1||

sathinaathha bhutha prith, sathatha sadguNa vraath,
pathitha paavana thraath| krrithuvai padma jaathaa, |
haa kshhithiyoLu nilalohithaa, nine guruvemdu,
thuthipa gathige, raghupathi, naama enagiyo ||2||

thrayanethra chithragaathr, nay, namipara mithr,
jaya jayaa mara sthothr, daya maaDo puNya paathraa,
haa bhaya nivaaraNa siri |vijaya viThalan,
bhakuthiya koDu, athi shayadi, pinaakisha ||3||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru