ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಗುರುವಾದಿರಾಜ ರವಿಕೋಟಿತೇಜ | ವಿಜಯವಿಠಲ | Guru Vadiraja Ravikoti teja | Vijaya Vithala


ಸಾಹಿತ್ಯ : ಶ್ರೀ ವಿಜಯ ದಾಸರು (ವಿಜಯ ವಿಠಲ ಅಂಕಿತ)
Kruti:Sri Vijaya dasaru (Vijaya vittala)


ಗುರುವಾದಿರಾಜ ರವಿಕೋಟಿತೇಜ 
ಶರಣೆಂಬೆನಯ್ಯ ಸತತವು ಜೀಯ || ಪ ||

ನಂಬಿದೆನು ನಿನ್ನ ದಯಾ ಸಂಪನ್ನ 
ಸಂಭ್ರಮದಲ್ಲೆನ್ನ ಪೊರೆಯೋ ಪ್ರಸನ್ನ || ೧ ||

ವೇದ ಶಾಸ್ತ್ರ ಬಲ್ಲ ಭಳಿರೆ ಮಲ್ಲ ಭೇದವು 
ನಿಜವೆಂಬೋ ಜ್ಞಾನವೇ ಫಲ || ೨ ||

ಮಾಯಿಗಳ ಒದ್ದ ಮಮತೆಯ ಗೆದ್ದ 
ಗಾಯನ ಪ್ರಸಿದ್ಧ ಗುಣದಲ್ಲಿ ಇದ್ದ ||೩||

ನಾನಾ ಚರಿತ್ರೆ ತೋರಿದ ಪವಿತ್ರ ಧ್ಯಾನಿಸಿ 
ಹರಿಯ ಪಾತ್ರದೊಳಿಟ್ಟ ಪಾತ್ರ || ೪ ||

ಸಂತತ ವಿರಕ್ತ ಜೀವನ್ಮುಕ್ತ 
ಸಂತತ ಜಗದ್ರಾತ ಹರಿನಾದ ಸೋಕ್ತ || ೫ ||

ಸೋದೆ ಪುರವಾಸ ಸಾಧು ಗುಣ 
ಭಾಸ ಸದ್ಭಕ್ತರ ಪೋಷ ಮಧ್ವಮತೋಲ್ಲಾಸ || ೬ ||

ವಿಜಯ ವಿಠಲನ್ನ ನೆನೆಯುವ ಘನ್ನ
ತ್ರಿಜಗ ಹಯವದನನ್ನ ಪರನೆಂಬೋ ಪೂರ್ಣ || ೭ ||

guruvAdirAja ravikOTitEja 
sharaNeMbenayya satatavu jIya || pa ||

naMbidenu ninna dayA saMpanna 
saMBramadallenna poreyO prasanna || 1 ||

vEda SAstra balla BaLire malla bhEdavu 
nijaveMbO j~jAnavE Pala || 2 ||

mAyigaLa odda mamateya gedda 
gAyana prasiddha guNadalli idda ||3||

nAnA caritre tOrida pavitra dhyAnisi 
hariya pAtradoLiTTa pAtra || 4 ||

saMtata virakta jIvanmukta 
saMtata jagadrAta harinAda sOkta || 5 ||

sOde puravAsa sAdhu guNa 
BAsa sadBaktara pOSha madhvamatOllAsa || 6 ||

vijaya viThalanna neneyuva Ganna
trijaga hayavadananna paraneMbO pUrNa || 7 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru