ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀಕೃಷ್ಣ ಸತ್ಯಭಾಮೆ ಸಂವಾದ | ನಾಗಶಯನನು | Nagashayananu | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನಾಗಶಯನನು ನಿನಗಾಗಿಯೆ ಬಂದಿಹೆ
ಬಾಗಿಲ ತೆಗೆಯೆ ಭಾಮೆ ನೀ
ಬಾಗಿಲ ತೆಗೆಯೆ ಭಾಮೆ || ಪ. ||
ಕೂಗುವ ನೀನ್ಯಾರೊ ಈಗ ಹೊತ್ತಲ್ಲ
ಕೂಗಬೇಡ ಪೋಗೋ ನೀ
ಕೂಗಬೇಡ ಪೋಗೋ || ಅ.ಪ.||

ನೀರೊಳು ಮುಳುಗಿ ನಿಗಮ ಚೋರನ ಗೆದ್ದ
ನೀರಜಾಕ್ಷನೆ ಭಾಮೆ ನಾ
ನೀರಜಾಕ್ಷನೆ ಭಾಮೆ
ನಾರುವ ಮೈಯನ್ನು ಎನ್ನಲ್ಲಿ ತೋರದೆ
ಸಾರು ಸಾರು ನೀ ದೂರ ರಂಗ
ಸಾರು ಸಾರು ನೀ ದೂರ  || ೧ ||

ಮಂದರ ಗಿರಿಯನು ಬೆನ್ನಲಿ ಪೊತ್ತ
ಇಂದಿರೆಯರಸನೆ ಭಾಮೆ ನಾ-
ನಿಂದಿರೆಯರಸನೆ ಭಾಮೆ
ಇಂದು ನಿನಗೆ ತಕ್ಕ ಭಾರಗಳಿಲ್ಲವು
ಸಿಂಧುವಿನೊಳು ನೀ ಪೋಗೈ ಕೃಷ್ಣ
ಸಿಂಧುವಿನೊಳು ನೀ ಪೋಗೈ  || ೨ ||

ಧರಣಿಗೆ ಸುಖವನು ತೋರಿದ ಸೂಕರ
ಪರಮಪುರುಷನೆ ಭಾಮೆ ನಾ
ಪರಮ ಪುರುಷನೆ ಭಾಮೆ
ವರಾಹರೂಪದ ನಿನ್ನ ಗುರುಗುರು ಶಬ್ದವ
ಅರಿವಳಲ್ಲವೊ ನೀ ಪೋಗೈ ರಂಗ
ಅರಿವಳಲ್ಲವೊ ನೀ ಪೋಗೈ  || ೩ ||

ಬಾಲನ ತಾಪವ ಕೋಪದಿ ತರಿದ
(ಜ್ವಾಲ) ನಾರಸಿಂಹನೆ ಭಾಮೆ ನಾ
(ಜ್ವಾಲ) ನಾರಸಿಂಹನೆ ಭಾಮೆ
ಜ್ವಾಲೆಯ ವದನ ಕ್ರೂರ ಕಾರ್ಯಂಗಳ
ಕೇಳಿ ಅಂಜುವಳಲ್ಲ ಪೋಗೈ ರಂಗ
ಕೇಳಿ ಅಂಜುವಳಲ್ಲ ಪೋಗೈ || ೪ ||

ವಾಸವನನುಜನೆ ವಾಮನರೂಪನೆ
ನಾಶರಹಿತನೆ ಭಾಮೆ ನಾ
ನಾಶರಹಿತನೆ ಭಾಮೆ
ಕೂಸಿನ ರೂಪದಿ ಮೋಸವ ಮಾಡಿದಗೆ
ದಾಸಿಯೊಬ್ಬಳು ಬೇಕೇ ರಂಗ
ದಾಸಿಯೊಬ್ಬಳು ಬೇಕೇ  || ೫ ||

ತಾತನ ಮಾತಿಗೆ ತಾಯಿಯನಳಿದ
ಖ್ಯಾತ ಭಾರ್ಗವನೆ ಭಾಮೆ ನಾ
ಖ್ಯಾತ ಭಾರ್ಗವನೆ ಭಾಮೆ
ಮಾತೆಯನಳಿದ ಘಾತುಕ ನಿನಗೆ
ದೂತಿಯೊಬ್ಬಳು ಬೇಕೇ ರಂಗ
ದೂತಿಯೊಬ್ಬಳು ಬೇಕೇ || ೬ ||

ದಶರಥನಂದನ ದಶಮುಖಭಂಜನ
ಪಶುಪತಿವಂದ್ಯನೆ ಭಾಮೆ ನಾ
ಪಶುಪತಿ ವಂದ್ಯನೆ ಭಾಮೆ
ಹಸನಾದ ಏಕಪತ್ನೀವ್ರತದವಗೆ
ಸುದತಿಯೊಬ್ಬಳು ಬೇಕೇ ರಂಗ
ಸುದತಿಯೊಬ್ಬಳು ಬೇಕೇ  || ೭ ||

ಹದಿನಾರು ಸಾಸಿರ ನೂರೆಂಟು ಸುದತೇರ
ಬದಿಯಲಿಟ್ಟವನೆ ಭಾಮೆ ನಾ
ಬದಿಯಲಿಟ್ಟವನೆ ಭಾಮೆ
ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ
ವದನ ಮುಚ್ಚಿಕೊಂಡು ಪೋಗೈ ರಂಗ
ವದನ ಮುಚ್ಚಿಕೊಂಡು ಪೋಗೈ || ೮ ||

ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ
ಮುಗ್ಧರ ಮಾಡಿದೆ ಭಾಮೆ ನಾ
ಮುಗ್ಧರ ಮಾಡಿದೆ ಭಾಮೆ
ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ
ವೃದ್ಧಳು ನಾನಲ್ಲ ಪೋಗೈ ರಂಗ
ವೃದ್ಧಳು ನಾನಲ್ಲ ಪೋಗೈ || ೯ ||

ವರ ತುರಗವನೇರಿ ಧರೆಯೆಲ್ಲ
ಚರಿಸಿದ ದೊರೆವರ ನಾನೆ ಭಾಮೆ
ಚರಿಸಿದ ದೊರೆವರ ನಾನೆ
ತುರಗದ ಚಾಕರಿಯೊಳಗಿರುವವನಿಗೆ
ತರುಣಿಯ ಭೋಗವು ಬೇಕೇ ರಂಗ
ತರುಣಿಯ ಭೋಗವು ಬೇಕೇ || ೧೦ ||

ಸರುವ ಪ್ರಾಣಿಗಳ ಉದರದೊಳಿಂಬಿಟ್ಟು
ಶರಧಿಯೊಳ್ಮಲಗಿದವ ಭಾಮೆ ನಾ
ಶರಧಿಯೊಳ್ಮಲಗಿದವ ಭಾಮೆ
ದೊರೆ ಹಯವದನನ ಚರಣಕ್ಕೆರಗುತ
ತೆರೆದಳು ಬಾಗಿಲ ಭಾಮೆ ಆಗ
ತೆರೆದಳು ಬಾಗಿಲ ಭಾಮೆ || ೧೧ ||

nAgaSayananu ninagAgiye baMdihe
bAgila tegeye BAme nI
bAgila tegeye BAme || pa. ||
kUguva nInyAro Iga hottalla
kUgabEDa pOgO nI
kUgabEDa pOgO || a.pa.||

nIroLu muLugi nigama cOrana gedda
nIrajAkShane BAme nA
nIrajAkShane BAme
nAruva maiyannu ennalli tOrade
sAru sAru nI dUra raMga
sAru sAru nI dUra  || 1 ||

maMdara giriyanu bennali potta
iMdireyarasane BAme nA-
niMdireyarasane BAme
iMdu ninage takka BAragaLillavu
siMdhuvinoLu nI pOgai kRuShNa
siMdhuvinoLu nI pOgai  || 2 ||

dharaNige suKavanu tOrida sUkara
paramapuruShane BAme nA
parama puruShane BAme
varAharUpada ninna guruguru Sabdava
arivaLallavo nI pOgai raMga
arivaLallavo nI pOgai  || 3 ||

bAlana tApava kOpadi tarida
(jvAla) nArasiMhane BAme nA
(jvAla) nArasiMhane BAme
jvAleya vadana krUra kAryaMgaLa
kELi aMjuvaLalla pOgai raMga
kELi aMjuvaLalla pOgai || 4 ||

vAsavananujane vAmanarUpane
nASarahitane BAme nA
nASarahitane BAme
kUsina rUpadi mOsava mADidage
dAsiyobbaLu bEkE raMga
dAsiyobbaLu bEkE  || 5 ||

tAtana mAtige tAyiyanaLida
KyAta BArgavane BAme nA
KyAta BArgavane BAme
mAteyanaLida GAtuka ninage
dUtiyobbaLu bEkE raMga
dUtiyobbaLu bEkE || 6 ||

daSarathanaMdana daSamuKaBaMjana
paSupativaMdyane BAme nA
paSupati vaMdyane BAme
hasanAda EkapatnIvratadavage
sudatiyobbaLu bEkE raMga
sudatiyobbaLu bEkE  || 7 ||

hadinAru sAsira nUreMTu sudatEra
badiyaliTTavane BAme nA
badiyaliTTavane BAme
hadanakke bArada mArgaMgaLyAtakke
vadana muccikoMDu pOgai raMga
vadana muccikoMDu pOgai || 8 ||

bauddharakuladalli huTTi avaraMte
mugdhara mADide BAme nA
mugdhara mADide BAme
SuddhaguNagaLella iddalligepELe
vRuddhaLu nAnalla pOgai raMga
vRuddhaLu nAnalla pOgai || 9 ||

vara turagavanEri dhareyella
carisida dorevara nAne BAme
carisida dorevara nAne
turagada cAkariyoLagiruvavanige
taruNiya BOgavu bEkE raMga
taruNiya BOgavu bEkE || 10 ||

saruva prANigaLa udaradoLiMbiTTu
SaradhiyoLmalagidava BAme nA
SaradhiyoLmalagidava BAme
dore hayavadanana caraNakkeraguta
teredaLu bAgila BAme Aga
teredaLu bAgila BAme || 11 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru