ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶರಣು ಬೆನಕನೆ ಕನಕರೂಪನೆ | ಪುರಂದರ ವಿಠಲ | Sharanu Benakane | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು
Kruti: Sri Purandara Dasaru


ಶರಣು ಬೆನಕನೆ ಕನಕರೂಪನೆ|
ಕಾಮಿನಿ ಸಂಗದೂರನೆ ||ಪ||
ಶರಣು ಸಾಂಬನ ಪ್ರೀತಿ ಪುತ್ರನೆ |
ಶರಣು ಜನರಿಗೆ ಮಿತ್ರನೇ ||ಅ. ಪ||

ಏಕದಂತನೆ ಲೋಕಖ್ಯಾತನೆ |
ಏಕವಾಕ್ಯ ಪ್ರವೀಣನೆ ||
ಏಕವಿಂಶತಿ ಪತ್ರ ಪೂಜಿತ |
ಅನೇಕ ವಿಘ್ನ ವಿನಾಶಕ ||೧||

ಲಂಬಕರ್ಣನೆ ನಾಸಿಕಾಧರನೇ |
ಗಾಂಭೀರ್ಯ ಇವ ಗುಣಸಾರನೇ ||
ಕಂಬು ಕಂಧರ ಇಂದು ಮೌಳಿಜ |
ಚಂದನ ಚರ್ಚಿತಾಂಗನೇ ||೨||

ಚತುರ್ಭಾಹು ಚರಣ ತೊಡಲನೆ |
ಚತುರ ಆಯುಧ ಧಾರನೆ ||
ಮತಿಯವಂತನೆ ಮಲಿನ ಜನಿತನೆ |
ಅತಿಯ ಮಧುರ ಹಾರನೇ ||೩||

ವಕ್ರತುಂಡನೇ ಮಹಾಕಾಯನೆ |
ಅರ್ಕ ಕೋಟಿ ಪ್ರದೀಪನೇ ||
ಚಕ್ರಧರ ಹರಬ್ರಹ್ಮ ಪೂಜಿತ |
ರಕ್ತ ವಸ್ತ್ರಧಾರನೆ ||೪||

ಮೂಷಿಕಾಸನ ಶೇಷಭೂಷಣ |
ಅಶೇಷ ವಿಘ್ನ ವಿನಾಯಕ ||
ದಾಸ ಪುರಂದರ ವಿಠಲೇಶನ |
ಈಶಗುಣಗಳ ಪೊಗಳುವೆ ||೫||

sharaNu benakane kanakarupane|
kaamini samgadurane ||p||
sharaNu saambana prithi puthrane |
sharaNu janarige mithrane ||a. p||

ekadamthane lokakhyaathane |
ekavaakya praviNane ||
ekavimshathi pathra pujitha |
aneka vighna vinaashaka ||1||

lambakarNane naasikaadharane |
gaambhirya iva guNasaarane ||
kambu kamdhara iamdu mauLija |
chamdana charchithaamgane ||2||

chathurbhaahu charaNa thoDalane |
chathura aayudha dhaarane ||
mathiyavamthane malina janithane |
athiya madhura haarane ||3||

vakrathumDane mahaakaayane |
arka koTi pradipane ||
chakradhara harabrahma pujitha |
raktha vasthradhaarane ||4||

mushhikaasana sheshhabhushhaNa |
asheshha vighna vinaayaka ||
daasa puramdara viThaleshana |
ishaguNagaLa pogaLuve ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru