ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಟೀಕಾಚಾರ್ಯರ ಪಾದ | ವಿಜಯ ವಿಠಲ | Teekacharyara Paada | Vijaya Vithala


ಸಾಹಿತ್ಯ : ವಿಜಯ ದಾಸರು 
Kruti: Vijaya Dasaru


ಟೀಕಾಚಾರ್ಯರ ಪಾದ ಸೋಕಿದ ಕೊನೆಧೂಳು
ತಾಕಿದ ಮನುಜರಿಗೆ  ||ಪ||
ಕಾಕುಗೊಳಿಸುವ ಅನೇಕ ಪಾಪಂಗಳ 
ಬೀರಿ ಬಿಸಾಡುವ ಸಾಕುವ ಸುಜನರ  ||ಅ.ಪ||

ಮಧ್ವ ಮತವೆಂಬ ದುಗ್ಧಾಬ್ಧಿಯೊಳು
ಉದ್ಭವಿಸಿದ ಚಂದ್ರನೋ |
ಅದ್ವೈತ ವಿಪಿನ ಭೇದನ ಕುಠಾರ
ವಿದ್ಯಾರಣ್ಯನ  ಗರ್ವಕೆ ಪರಿಹಾರ ||೧||

ತತ್ವವನುಡಿಸಲು ತತ್ವಸುಧಾ ಭಾಷ್ಯ
ವಿಸ್ತರಿಸಿದ ಚಂದ್ರನೋ |
ಚಿತ್ತವಿಟ್ಟು ಟೀಕ  ಮಾಡಿದ ಸಂಭ್ರಮದಿ
ಸುತ್ತೇಳು ಜಗಕೆಲ್ಲ ಪ್ರಕಟಿಸಿ ಮೆರೆದಂತ  ||೨||

ಜ ಎಂದು ನುಡಿಯಲು ಜಯಶೀಲನಾಗುವ
ಯ ಎಂದು ನುಡಿಯಲು ಯುಮನಂಜುವ |
ತೀ ಎಂದು ನುಡಿಯಲು ತಿಮಿರ ಪಾತಕ ಹಾನಿ 
ಥ  ಎಂದು ನುಡಿಯಲು ತಾಪತ್ರಯ ಪರಿಹಾರ ||೩||

ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ
ಬಿಂದು ಮಾತ್ರದಿ ನೆನೆಯೇ |
ಮಂದ ಮತಿಗಾದರೂ ಅಜ್ಞಾನ ನಾಶನ
ಸಂದೇಹವಿಲ್ಲವಯ್ಯ  ಸ್ಮರಣೆ ಮಾಡಿದ ಮೇಲೆ ||೪||

ಯೋಗಿ ಅಕ್ಷೋಭ್ಯರ ಕರಕಮಲಸಂಜಾತ
ಭಾಗವತರ ಪ್ರೀಯನೆ |
ಯೋಗಿಗಳರಸನೇ ಮಳಖೇಡ ನಿವಾಸ 
ಕಾಗಿಣಿ ತಟವಾಸ ವಿಜಯವಿಠ್ಠಲ ದಾಸ ||೫||

Tikaachaaryara paada sokida
konedhuLu thaakida manujarige ||p||
kaakugoLisuva aneka paapamgaLa biri
bisaaDuva saakuva sujanara ||a.p||

madhva mathavemba dugdhaabdhiyoLu
udbhavisida chamdrano |
advaitha vipina bhedana kuThaara
vidyaaraNyana garvake parihaara ||1||

thathvavanuDisalu thathvasudhaa
bhaashhya vistharisida chamdrano |
chiththaviTTu Tika maaDida sambhramadi
suththeLu jagakella prakaTisi meredamtha ||2||

ja eamdu nuDiyalu jayashilanaaguva
ya eamdu nuDiyalu yumanamjuva |
thi eamdu nuDiyalu thimira paathaka haani
thha eamdu nuDiyalu thaapathraya parihaara ||3||

eamdigaadaru omme kone naaligeyimda
bimdu maathradi neneye |
mamda mathigaadaru ajnjaana naashana
samdehavillavayya smaraNe maaDida mele ||4||

yogi akshhobhyara karakamalasamjaatha
bhaagavathara priyane |
yogigaLarasane maLakheDa nivaasa
kaagiNi thaTavaasa vijayaviThThala daasa ||5||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru