ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಪಮಾನವಾದರೆ ಒಳ್ಳೇದು | ಪುರಂದರವಿಠಲ | Apamaanavaadare Olledu | Purandara Vithala


ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ ಅಂಕಿತ)
Kruti: Sri Purandara dasaru (Purandara vittala)


ಅಪಮಾನವಾದರೆ ಒಳ್ಳೇದು || ಪ ||
ಅಪರೂಪ ಹರಿ ನಾಮ ಜಪಿಸುವ ಮನುಜಗೆ || ಅಪ ||

ಮಾನದಿಂದ ಅಭಿಮಾನ ಪುಟ್ಟುವುದು |
ಮಾನದಿಂದ ತಪ ಹಾನಿಯಾಗುವುದು ||
ಮಾನಿ ದುರ್ಯೋಧನಗೆ ಹಾನಿಯಾಯಿತು |
ಅನುಮಾನವಿಲ್ಲ ಅಪಮಾನ ಸಮನಿಗೆ || ೧ ||

ಅಪಮಾನದಿಂದಲಿ ತಪವೃದ್ಧಿಯಾಗುವುದು |
ಅಪಮಾನದಿಂದ  ಪುಣ್ಯ ಸಫಲವಾಗುವುದು ||
ಅಪಮಾನದಿಂದಲಿ ನೃಪ ಧೃವರಾಯಗೆ | 
ಕಪಟನಾಟಕ ಕೃಷ್ಣ ಅಪರೋಕ್ಷನಾದನು || ೨ ||

ನಾನೇನು ಮಾಡಲಿ ಯಾರಲ್ಲಿ ಹೋಗಲಿ |
ಕಾನನ ಚರರಾರಾಧ್ಯ ನೀನಿರಲು ||
ದೀನ ರಕ್ಷಕ ನಮ್ಮ |
ಪುರಂದರ ವಿಠಲ ಏನು ಬೇಡೆನಗಪಮಾನವೆ ಇರಲಿ || ೩ ||

apamaanavaadare oLLEdu || pa ||
aparUpa hari naama japisuva manujage || apa ||

maanadiMda abhimaana puTTuvudu |
maanadiMda tapa haaniyaaguvudu ||
maani duryOdhanage haaniyaayitu |
anumaanavilla apamaana samanige || 1 ||
 
apamaanadiMdali tapavRuddhiyaaguvudu |
apamaanadiMda puNya saPalavaaguvudu ||
apamaanadiMdali nRupa dhRuvaraayage | 
kapaTanaaTaka kRuShNa aparOkShanaadanu || 2 ||

naanEnu maaDali yaaralli hOgali |
kaanana cararaaraadhya nIniralu ||
dIna rakShaka namma |
puraMdara viThala Enu bEDenagapamaanave irali || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru