ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪಾಥೇಯವ ಕಟ್ಟಿರೋ ವೈಕುಂಠಕೆ | ಹಯವದನ | Patheyava Kattiro | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಪಾಥೇಯವ ಕಟ್ಟಿರೋ ವೈಕುಂಠಕೆ ಪಯಣ ಸಮ್ಮತವಾದರೆ ||ಪ|| 
ಮಾತಾಪಿತರುಯೆಂಬೊ ಭಕ್ತಿ ಚಿತ್ರಾನ್ನವ ಪಾರ್ಥಸೂತನ ಪಾದಪದ್ಮಪತ್ರವ ಹಾಸಿ ||ಅ. ಪ||

ಹರಿಭಕ್ತಿಹರಿಗೋಲಿಂದ ಮೆಲ್ಲನೆ ನೀವು ವಿರಜಾನದಿಯ ದಾಟಿರೊ
ಕರಜಾಗ್ರಗಳಿಂದ ಹಿರಣ್ಯಕನನು ಸೀಳಿದ ಪರವಾಸುದೇವನ ದರುಶನವಾಹೋದಯ್ಯ ||೧||

ಪ್ರಳಯದ್ಹಾವಳಿಯಿಲ್ಲವೊ ಪೇಳುವುದೇನು ಚಳಿ ಮಳೆ ಬಿಸಿಲಿಲ್ಲವೊ
ಬೆಳಸು ಬಿತ್ತಿಲ್ಲದ ಬೇಕಾದ ಸಂಪತ್ತು ನಳಿನನಾಭನ ಪುರದೊಳಗೆ ನೆಲೆಸಿಹುದಯ್ಯ ||೨||

ಶುದ್ಧ ಸಾತ್ವಿಕ ಪುರವು ತಾಮಸರಿಗೆ ಪೊದ್ದಲಳವಲ್ಲವೊ
ಆಧ್ಯಾತ್ಮ ಅರ್ಜುನಗೆ ನಿರ್ಧಾರ ಪೇಳಿದ ತದ್ಧಾಮ ಪರಮಂ ಮಮವೊಂಬೊ ಪುರವೊ ||೩||

ಕೂಗಳತೆಗೆ ಕೊಂಚವೊ ಹರಿಯಪುರ ನಾಗರಾಜನ ಸಾಕ್ಷಿಯೊ
ನಾಗಶಯನನಲ್ಲಿ ನಮ್ಮ ಕಂಡರೆ ಹೋಗಬೇಡಿರೆಂದು ಹುಟ್ಟ ತಡೆವನೋ ||೪||

ಬರವೆಂಬ ಮಾತಿಲ್ಲವೋ ಒಂದುಕಾಸು ತೆರಿಗೆಯ ಕೊಡಬ್ಯಾಡಿರೊ 
ಪರಮಕರುಣಿ ಹಯವದನ ವೈಕುಂಠದಿ ಸರುವಮಾನ್ಯವನಿತ್ತು ಶರಣರ ಪೊರೆವನು ||೫||   

paathheyava kaTTiro vaikumThake payaNa sammathavaadare ||p|| 
maathaapitharuyembo bhakthi chithraannava 
paarthhasuthana paadapadmapathrava haasi ||a. p|| 

haribhakthiharigolimda mellane nivu virajaanadiya daaTiro 
karajaagragaLimda hiraNyakananu siLida paravaasudevana 
darushanavaahodayya ||೧|| 

praLayadhaavaLiyillavo peLuvudenu chaLi maLe bisilillavo 
beLasu biththillada bekaada sampaththu naLinanaabhana 
puradoLage nelesihudayya ||೨|| 

shuddha saathvika puravu thaamasarige poddalaLavallavo 
aadhyaathma arjunage nirdhaara peLida thaddhaama 
paramam mamavombo puravo ||೩|| 

kugaLathege komchavo hariyapura naagaraajana saakshhiyo 
naagashayananalli namma kamDare hogabeDiremdu huTTa thaDevano ||೪|| 

baravemba maathillavo oamdukaasu therigeya koDabyaaDiro 
paramakaruNi hayavadana vaikumThadi saruvamaanyavaniththu sharaNara porevanu ||೫||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru