ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಂದು ನೋಡುವೆ ನೋಡಿ ನಲಿಯುವೆ ತಂದೆ | ಭೂಪತಿ ವಿಠಲ | Endu Noduve Nodi Naliyuve | Bhupati Vithala


ಸಾಹಿತ್ಯ : ಶ್ರೀ ಭೂಪತಿ ವಿಠಲ ದಾಸರು (ಭೂಪತಿ ವಿಠಲ)
Kruti:Sri Bhupathi Vittala Dasaru (Bhupathi vittala) 


ಎಂದು ನೋಡುವೆ ನೋಡಿ ನಲಿಯುವೆ ತಂದೆ ಫಂಡರಿರಾಯನ |ಪ|

ಇಂದುಧರ ಸುರವೃಂದನುತ ಮುಚುಕುಂದ ವರದ ಮುಕುಂದನ ||ಅಪ||

ಚಂದ್ರಭಾಗ ತಟನಿವಾಸನ ನಂದಗೋಪಿಯ ಕಂದನ
ಮಂದರೋದ್ಧಾರನಾ ಗೋವಿಂದ ಹರಿ ಗೋಪಾಲನ ||೧||

ಪುಂಡಲೀಕನ ಭಕ್ತಿಗೊಲಿದು ಬಂದ ಜ್ಞಾನಾನಂದನ
ಇಂದಿರಾ ಭೂರಮಣನ ತಂದೆ ಪುರಂದರ ವಿಠಲನ ||೨||

ಅಜಭವಾದಿಗಳರಸನಾದ ಭುಜಗಶಯನ ಅನಂತನ
ವಿಜಯ ಸಾರಥಿಯಾದ ರಣದೊಳು ವಿಜಯ ವಿಠಲರಾಯನ ||೩||

ಗೋಕುಲದ ಗೊಲ್ಲರನು ಕೂಡಿ ಆಕಳ್ಹಿಂಡನು ಕಾಯ್ದನ
ಗೋಪಿಯರೊಡಗೂಡಿ ಕುಣಿಯುವ ಗೋಪ ಗೋಪಾಲ ವಿಠಲನ ||೪|

ಬಗೆ ಬಗೆಯ ಮಹಿಮೆಗಳ ತೋರುವ ಜಯ ಜಗನ್ನಾಥ ವಿಠಲನ
ಹಗಲಿರುಳು ಭಕ್ತರನು ಪೊರೆಯುವ ತಂದೆ ಭೂಪತಿ ವಿಠಲನ ||೫||

eMdu nODuve nODi naliyuve taMde paMDharirAyana |pa|

iMdudhara suravRuMdanuta mucukuMda varada mukuMdana ||apa||

caMdraBAga taTanivAsana naMdagOpiya kaMdana
maMdarOddhAranA gOviMda hari gOpAlana ||1||

puMDalIkana Baktigolidu baMda j~jAnAnaMdana
iMdirA BUramaNana taMde puraMdara viThalana ||2||

ajaBavAdigaLarasanAda BujagaSayana anaMtana
vijaya sArathiyAda raNadoLu vijaya viThalarAyana ||3||

gOkulada gollaranu kUDi AkaLhiMDanu kAydana
gOpiyaroDagUDi kuNiyuva gOpa gOpAla viThalana ||4||

bage bageya mahimegaLa tOruva jaya jagannAtha viThalana
hagaliruLu Baktaranu poreyuva taMde Bhupati viThalana ||5||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru