ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹೊಸ ಕಣ್ಣು ಎನಗೆ | ಇಂದಿರೇಶ | Hosa Kannu Enage | Indiresha


ಸಾಹಿತ್ಯ :    ಶ್ರೀ ಇಂದಿರೇಶ ದಾಸರು (ಇಂದಿರೇಶ) 
Kruti: Sri Indiresha Dasaru (Indiresha)


ಹೊಸ ಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ 
ವಸುದೇವ ಸುತನ ಕಾಂಬುದಕೆ ||ಪ|| 

ಘಸಣೆಯಾಗಿದೆ ಭವ ವಿಷಯ ವಾರಿಧಿಯೊಳು 
ಶಶಿ ಮುಖಿ ಕರುಣದಿ ಕಾಯೇ ಅಮ್ಮಾ ||ಅಪ|| 

ಪರರ ಅನ್ನವನುಂಡು ಪರರ ಧನವ ಕಂಡು ಪರಿಪರಿ ಕ್ಲೇಶಗಳಿಂದ | 
ವರಮಹಾಲಕ್ಷ್ಮಿ ನಿನ್ನ ಚರಣವ ಮೊರೆ ಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ ಅಮ್ಮಾ ||೧|| 

ಮಂದಹಾಸಿನಿ ಭವ ಸಿಂಧುವಿನೊಳಗಿಟ್ಟು ಚಂದವೆ ಅಮ್ಮಾ ನೋಡುವುದು | 
ಕಂದ ನೀ ಎಂದೆನ್ನ ಕುಂದುಗಳೆಣಿಸದೇ ಮಂದರೋದ್ಧರನ ತೋರಮ್ಮಾ ಅಮ್ಮಾ ||೨|| 

ಅಂದ ಚಂದವನೊಲ್ಲೆ ಬಂಧು ಬಳಗವನೊಲ್ಲೆ ಬಂಧನಕ್ಕೆಲ್ಲಾ ಕಾರಣವೂ ಇಂದಿರೇಶನ ಪಾದ
ದ್ವಂದ್ವವ ತೋರಿಸೇ ಹೃನ್ಮಂದಿರದೊಳು ಬಂದು ನಿಲ್ಲೇ ಅಮ್ಮಾ ||೩|| 

hosa kaNNu enage haccalibEku jagadaMbA 
vasudEva sutana kAMbudake ||pa|| 
 
GasaNeyAgide Bava viShaya vAridhiyoLu 
SaSi muKi karuNadi kAyE ammA ||apa|| 
 
parara annavanuMDu parara dhanava kaMDu paripari klESagaLiMda | 
varamahAlakShmi ninna caraNava more hokke karuNadi kaNNetti nODe ammA ||1|| 
 
maMdahAsini Bava siMdhuvinoLagiTTu caMdave ammA nODuvudu | 
kaMda nI eMdenna kuMdugaLeNisadE maMdarOddharana tOrammA ammA ||2|| 
 
aMda caMdavanolle baMdhu baLagavanolle baMdhanakkellA kAraNavU iMdirESana pAda
dvaMdvava tOrisE hRunmaMdiradoLu baMdu nillE ammA ||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru