Posts

Showing posts from July, 2020

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಂಬಿದೆ ನಿನ್ನ ಪಾದವ | ಪುರಂದರ ವಿಠಲ | Nambide Ninna Padava | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು Kruti: Sri Purandara dasaru  ನಂಬಿದೆ ನಿನ್ನ ಪಾದವ ವೆಂಕಟರಮಣ ನಂಬಿದೆ ನಿನ್ನ ಪಾದವ || ಪ || ನಂಬಿದೆ ನಿನ್ನ ಪಾದಾಂಬುಜಯುಗಳವ ಚಂದದಿ ಸಲಹೋ ಮಂದರಧರನೆ || ಅಪ || ತಂದೆಯು ನೀನೆ ತಾಯಿಯು ನೀನೆ ಬಂಧು ಬಳಗವು ನೀನೆ | ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ ಬಂದೆನ್ನ ಸಲಹೋ ಮುಕುಂದ ಮುರಾರಿ || ೧ || ಚಿಕ್ಕಂದು ಮೊದಲು ನಾನು ನಿನ್ನಯ ಪಾದ ಪೊಕ್ಕು ಜೀವಿಸುತಿಹೆನು | ಘಕ್ಕನೆ ಜ್ಞಾನವ ಅಕ್ಕರೆಯಿಂದಲಿ ಕೊಡು ಮಕ್ಕಳ ಮಾಣಿಕ್ಯ ರುಕ್ಮಿಣೀ ಅರಸ || ೨ || ಮರೆತು ನಾ ಮಾಯೆಯೊಳು ಮುಳುಗಿದೆ ಮಾಯೆಯ ಅರಿತು ಅರಿಯದಾದೆ | ಮರೆಯದೆ ಎನ್ನನು ಸಲಹೋ ಕೃಪಾನಿಧೇ ವರದ ಶ್ರೀ ವೆಂಕಟ ಪುರಂದರ ವಿಠಲ || ೩ || naMbide ninna paadava veMkaTaramaNa naMbide ninna paadava || pa || naMbide ninna paadaaMbujayugaLava caMdadi salahO maMdaradharane || apa || taMdeyu nIne taayiyu nIne baMdhu baLagavu nIne | baMda duritavella hoMdikoLLadaMte baMdenna salahO mukuMda muraari || 1 || cikkaMdu modalu naanu ninnaya paada pokku jIvisutihenu | Gakkane jnaanava akkareyiMdali koDu makkaLa maaNikya rukmiNI arasa || 2 || maretu naa maayeyoLu muLugide maayeya aritu ariyadaade | mareyade ennanu salahO kRupaani...

ಹೊಸ ಕಣ್ಣು ಎನಗೆ | ಇಂದಿರೇಶ | Hosa Kannu Enage | Indiresha

Image
ಸಾಹಿತ್ಯ :    ಶ್ರೀ ಇಂದಿರೇಶ ದಾಸರು (ಇಂದಿರೇಶ)  Kruti: Sri Indiresha Dasaru (Indiresha) ಹೊಸ ಕಣ್ಣು ಎನಗೆ ಹಚ್ಚಲಿಬೇಕು ಜಗದಂಬಾ  ವಸುದೇವ ಸುತನ ಕಾಂಬುದಕೆ ||ಪ||  ಘಸಣೆಯಾಗಿದೆ ಭವ ವಿಷಯ ವಾರಿಧಿಯೊಳು  ಶಶಿ ಮುಖಿ ಕರುಣದಿ ಕಾಯೇ ಅಮ್ಮಾ ||ಅಪ||  ಪರರ ಅನ್ನವನುಂಡು ಪರರ ಧನವ ಕಂಡು ಪರಿಪರಿ ಕ್ಲೇಶಗಳಿಂದ |  ವರಮಹಾಲಕ್ಷ್ಮಿ ನಿನ್ನ ಚರಣವ ಮೊರೆ ಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ ಅಮ್ಮಾ ||೧||  ಮಂದಹಾಸಿನಿ ಭವ ಸಿಂಧುವಿನೊಳಗಿಟ್ಟು ಚಂದವೆ ಅಮ್ಮಾ ನೋಡುವುದು |  ಕಂದ ನೀ ಎಂದೆನ್ನ ಕುಂದುಗಳೆಣಿಸದೇ ಮಂದರೋದ್ಧರನ ತೋರಮ್ಮಾ ಅಮ್ಮಾ ||೨||  ಅಂದ ಚಂದವನೊಲ್ಲೆ ಬಂಧು ಬಳಗವನೊಲ್ಲೆ ಬಂಧನಕ್ಕೆಲ್ಲಾ ಕಾರಣವೂ ಇಂದಿರೇಶನ ಪಾದ ದ್ವಂದ್ವವ ತೋರಿಸೇ ಹೃನ್ಮಂದಿರದೊಳು ಬಂದು ನಿಲ್ಲೇ ಅಮ್ಮಾ ||೩||  hosa kaNNu enage haccalibEku jagadaMbA  vasudEva sutana kAMbudake ||pa||    GasaNeyAgide Bava viShaya vAridhiyoLu  SaSi muKi karuNadi kAyE ammA ||apa||    parara annavanuMDu parara dhanava kaMDu paripari klESagaLiMda |  varamahAlakShmi ninna caraNava more hokke karuNadi kaNNetti nODe ammA ||1||    maMdahAsini Bava siMdhuvinoLagiT...

ಆರತಿ ಹಾಡು | ಮಂಗಳಾರತಿ ತಂದು | ಭೀಮೇಶ ಕೃಷ್ಣ | Mangalaarathi Tandu | Bhimesha Krishna | Aarati Song

Image
ಸಾಹಿತ್ಯ : ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ)  Kruti: Harapanahalli Bhimavva (Bhimesha Krishna) ಮಂಗಳಾರತಿ ತಂದು ಬೆಳಗಿರೆ ಅಂಬುಜಾಕ್ಷನ ರಾಣಿಗೆ || ಪ || ಅಂಗನೇಯರೆಲ್ಲಾ ನೆರೆದು ಮಂಗಳಾರತಿ ಎತ್ತಿರೆ || ಅ.ಪ || ಶುದ್ಧ ಸ್ನಾನವ ಮಾಡಿ ನದಿಯೊಳು | ವಜ್ರ ಪೀಠದಿ ನೆಲೆಸಿದೆ ||  ತಿದ್ದಿ ತಿಲಕ ತೀಡಿದಂತ | ಮುದ್ದು ಮಂಗಳ ಗೌರಿಗೆ || ೧ || ಎರೆದು ಪೀತಾಂಬರವ ನುಡಿಸಿ | ಸರ್ವಾಭರಣವ ತೊಡಿಸಿರೆ || ಹರಳಿನೋಲೆ ಮೂಗುತಿಯನ್ನಿಟ್ಟ | ವರ ಮಹಾಲಕ್ಷ್ಮಿ ದೇವಿಗೆ || ೨ || ಉಟ್ಟ ಪೊಡವಿಯ ಕಷ್ಟ ಕಳೆವಳು | ಕೊಟ್ಟಳು ಅರಸಿನ ಸಿರಿಯನು || ಹೆತ್ತ ಕುವರ ತೋರಿದಂತ | ಶುಕ್ರವಾರದ ಲಕ್ಷ್ಮಿಗೆ || ೩ || ನಿಗಮ ವೇದ್ಯಳೆ ನಿನ್ನ ಗುಣಗಳ | ಬಗೆ ಬಗೆಯಿಂದಲಿ ಸ್ತುತಿಸುವೆ || ತೆಗೆದು ಭಾಗ್ಯವ ನೀಡು ಜಗದೊಡೆಯ | ಭೀಮೇಷ ಕೃಷ್ಣನ ಮಡದಿಯೆ || ೪ || mamgaLaarathi thamdu beLagire aambujaakshhana raaNige  ||pa|| aamganeyarellaa neredu mamgaLaarathi eththire  ||a.pa  || shuddha snaanava maaDi nadiyoLu | vajra piThadi neleside  || thiddi thilaka thiDidamtha | muddu mamgaLa gaurige  || 1 || eredu pithaambarava nuDisi | sarvaabharaNava thoDisire  || haraLinole muguthiyanniTTa | vara mahaalakshhmi devige  |...

ಇದಿರ‍್ಯಾರೋ ಗುರುವೇ ಸಮರ‍್ಯಾರೋ | ವೆಂಕಟಪತಿ ವಿಠಲ | Idiryaaro Guruve samaryaaro | Venkatapati Vithala

Image
ಸಾಹಿತ್ಯ : ಶ್ರೀ ವೆಂಕಟ ವಿಠಲ ದಾಸರು (ವೆಂಕಟಪತಿ  ವಿಠಲ) Kruti: Sri Venkata Vittala Dasaru (Venkatapati vittala) ಇದಿರ‍್ಯಾರೋ || ಗುರುವೇ ಸಮರ‍್ಯಾರೋ ಶ್ರೀಹಯವದನನ ಪಾದಪ್ರಿಯ ವಾದಿರಾಜ || ಪ || ಸಿರಿನಿಲಯನ ಗುಣಗಳ ಸ್ಮರಿಸುತ, ಗುರು ಮಧ್ವ ಮುನಿಪನ ಮಹಿಮೆಯ ಪೊಗಳುತ || ನೆರೆದಿದ್ದ ಮಾಯಿಮತಕರಿಗಳ ಶಿರವನು | ಭರದಿ ಭೇದಿಪ ಬಲಿ ವಿಭುದ ಕೇಸರಿಯೆ || ೧ || ಹರಿ ತತ್ವ ಸಾರ, ಸಜ್ಜನರಿಗೆ ತಿಳಿಯದೆ | ಪರಿಪರಿ ಕುಸಮಯತಮ ಕವಿಯಲುನೀ || ಸರಸ ಭಾರತಿ ಮೊದಲಾದ ಗ್ರಂಥಗಳನು | ವಿರಚಿಸಿ ತಮಹರಿಸಿದ ದಿನಕರನೇ || ೨ || ಸೋದೆಯಪುರದಲ್ಲಿರುವ ಶ್ರೀ ಹಯವದನನ | ಮೋದದಿ ಭಜಿಸುತ ಈ ಧರೆಯೊಳ್ | ಪೂರ್ಣಬೋಧ ತೀರ್ಥರ ಪಾದಸೇವಕರಿಗೆ | ಆಧಾರ ಮಾಳ್ಪ ಯತಿಕುಲ ಶಿರೋಮಣಿಯೇ || ೩ || ಮುದ್ದು ಲಕ್ಷ್ಮೀಶ ವೆಂಕಟಪತಿ ವಿಠಲನ | ಹೊದ್ದಿದ ಭಕ್ತರ ಸಂತಾಪ ಕಳೆಯುತ || ಮಧ್ವ ಮುನಿಯ ಮತ ದುಗ್ಧ ವಾರಿಧಿಯೊಳು | ಉದ್ಭವಿಸಿದ ಪೂರ್ಣಶುದ್ಧ ಚಂದ್ರಮನೇ || ೪ || idiRr^yaarO || guruvE samaRr^yaarO shrIhayavadanana paadapriya vaadiraaja || pa || sirinilayana guNagaLa smarisuta, guru madhva munipana mahimeya pogaLuta || neredidda maayimatakarigaLa shiravanu | bharadi bhEdipa bali vibhuda kEsariye || 1 || hari tatva saara, sajjanarige tiLiyade | paripari kusamayatama kaviyalunI...

ಇದು ಏನಂಗ ಮೋಹನಾಂಗ | ಪುರಂದರ ವಿಠಲ | Idu Enanga Mohananga | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಇದು ಏನಂಗ ಮೋಹನಾಂಗ ||ಪ|| ಮದನ ಜನಕ ತೊರವೆಯ ನರಸಿಂಗ ||ಅ.ಪ.|| ಸುರರು ಸ್ತುತಿಸಿ ಕರೆಯೆ | ತುಟಿಯ ಮಿಸುಕದವ || ಬರಿದೆ ಏತಕೆ ಬಾಯ ತೆರೆದೆ ಹೇಳೊಮ್ಮೆ ||೧|| ವರನೀಲ ಮುತ್ತು ಮಾಣಿಕ | ಹಾರಗಳಿರೆ || ಕೊರಳಲಿ ಕರುಳ ಮಾಲೆ ಹಾಕಿ ಮೆರೆವುದು ||೨|| ತೊರವೆಯ ನರಹರಿ ಪುರಂದರ ವಿಠಲ ಸಿರಿಯಿಪ್ಪ ತೊಡೆಯೊಳು ಅರಿಯನಿಟ್ಟಿರುವುದು ||೩|| idu EnaMga mOhanaaMga ||pa|| madana janaka toraveya narasinga ||a.pa.|| suraru stutisi kareye | tuTiya misukadava || baride Etake baaya terede hELomme ||1|| varanIla muttu maaNika | haaragaLire || koraLali karuLa maale haaki merevudu ||2|| toraveya narahari puraMdara viThala siriyippa toDeyoLu ariyaniTTiruvudu ||3||

ಸರ್ವಮಂಗಳೆ ತಾಯೆ | ತಂದೆ ವೆಂಕಟೇಶ ವಿಠಲ | Sarvamangale Taye | Tande Venkatesha Vithala

Image
ಸಾಹಿತ್ಯ : ಶ್ರೀ ತಂದೆ ವೆಂಕಟೇಶ ವಿಠಲ ದಾಸರು (ತಂದೆ ವೆಂಕಟೇಶ ವಿಠಲ) Kruti: Sri Tande Venkatesha Vittala Dasaru (Tande venkatesha vittala) ಸರ್ವಮಂಗಳೆ ತಾಯೆ ಪಾರ್ವತಿಯೆ ||ಪ|| ಊರ್ವಿ ಧರಾತ್ಮಜೆಯೇ ಶರ್ವ ಜಾಯೇ ||ಅಪ|| ಕಾತ್ಯಾಯಿನಿ ಗೌರಿ ಭೃತ್ಯಜನ ಶುಭಕಾರಿ ಮತ್ತಮಹಿಷನ ವೈರಿ ರಾಜೇಶ್ವರಿ  ಚಿತ್ತೈಸಿ ಎನ್ನ ಉಪರಿ ಉತ್ತಮ ಮತಿ ತೋರಿ ಗೋತ್ರಪತಿ ಸುಕುಮಾರಿ ಶಿವ ಶಂಕರಿ ||೧|| ವಾರಣಾಶ್ಯನ ಮಾತೆ ಕಾರುಣ್ಯ ರಸ ಭರಿತೇ ಧಾರುಣಿ ಪತಿ ಭಕುತಿ ಭವನದಿ ಪೋತೆ ಕಾರುಣ್ಯಮಯ ವನಿತೆ ಮಾರಣಾಸ್ತ್ರದಿ ನಮಿಪೆ | ಶರಣನಿಗೆ ಮಂತ್ರಿಸುತೆ ಶರ ವರವನಿತ್ತೆ ||೨|| ಭುಜಗ ಭೂಷಣ ರಾಣಿ ಗಜಗಮನೆ ಕಲ್ಯಾಣಿ | ಸುಜನಾಬ್ಜ ಗಗನ ಮಣಿ ದುರ್ಗೆ ಶರ್ವಾಣಿ || ಅಜನ ತಂದೆ ವೆಂಕಟೇಶ ವಿಠಲ ಪದಾಬ್ಜ ಮಣಿ ನಿಜ ಶಿರದಿ ಧರಿಸಿರುವ ಮಧುರ ವಿಹಾರಿಣಿ ||೩|| sarvamaMgaLe taaye paarvatiye ||pa|| Urvi dharaatmajeyE sharva jaayE ||apa|| kaatyaayini gouri bhRutyajana shubhakaari mattamahiShana vairi raajEshvari  cittaisi enna upari uttama mati tOri gOtrapati sukumaari shiva shaMkari ||1|| vaaraNaashyana maate kaaruNya rasa bharitE dhaaruNi pati bhakuti bhavanadi pOte kaaruNyamaya vanite maaraNaastradi namipe | sharaNanige maMtrisute shara varavanitte |...

ಅಪಮಾನವಾದರೆ ಒಳ್ಳೇದು | ಪುರಂದರವಿಠಲ | Apamaanavaadare Olledu | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ ಅಂಕಿತ) Kruti: Sri Purandara dasaru (Purandara vittala) ಅಪಮಾನವಾದರೆ ಒಳ್ಳೇದು || ಪ || ಅಪರೂಪ ಹರಿ ನಾಮ ಜಪಿಸುವ ಮನುಜಗೆ || ಅಪ || ಮಾನದಿಂದ ಅಭಿಮಾನ ಪುಟ್ಟುವುದು | ಮಾನದಿಂದ ತಪ ಹಾನಿಯಾಗುವುದು || ಮಾನಿ ದುರ್ಯೋಧನಗೆ ಹಾನಿಯಾಯಿತು | ಅನುಮಾನವಿಲ್ಲ ಅಪಮಾನ ಸಮನಿಗೆ || ೧ || ಅಪಮಾನದಿಂದಲಿ ತಪವೃದ್ಧಿಯಾಗುವುದು | ಅಪಮಾನದಿಂದ  ಪುಣ್ಯ ಸಫಲವಾಗುವುದು || ಅಪಮಾನದಿಂದಲಿ ನೃಪ ಧೃವರಾಯಗೆ |  ಕಪಟನಾಟಕ ಕೃಷ್ಣ ಅಪರೋಕ್ಷನಾದನು || ೨ || ನಾನೇನು ಮಾಡಲಿ ಯಾರಲ್ಲಿ ಹೋಗಲಿ | ಕಾನನ ಚರರಾರಾಧ್ಯ ನೀನಿರಲು || ದೀನ ರಕ್ಷಕ ನಮ್ಮ | ಪುರಂದರ ವಿಠಲ ಏನು ಬೇಡೆನಗಪಮಾನವೆ ಇರಲಿ || ೩ || apamaanavaadare oLLEdu || pa || aparUpa hari naama japisuva manujage || apa || maanadiMda abhimaana puTTuvudu | maanadiMda tapa haaniyaaguvudu || maani duryOdhanage haaniyaayitu | anumaanavilla apamaana samanige || 1 ||   apamaanadiMdali tapavRuddhiyaaguvudu | apamaanadiMda puNya saPalavaaguvudu || apamaanadiMdali nRupa dhRuvaraayage |  kapaTanaaTaka kRuShNa aparOkShanaadanu || 2 || naanEnu maaDali yaaralli hOgali | kaanana cararaaraadhya nIniralu || dIn...

ಎಂದು ನೋಡುವೆ ನೋಡಿ ನಲಿಯುವೆ ತಂದೆ | ಭೂಪತಿ ವಿಠಲ | Endu Noduve Nodi Naliyuve | Bhupati Vithala

Image
ಸಾಹಿತ್ಯ : ಶ್ರೀ ಭೂಪತಿ ವಿಠಲ ದಾಸರು (ಭೂಪತಿ ವಿಠಲ) Kruti:Sri Bhupathi Vittala Dasaru (Bhupathi vittala)  ಎಂದು ನೋಡುವೆ ನೋಡಿ ನಲಿಯುವೆ ತಂದೆ ಫಂಡರಿರಾಯನ |ಪ| ಇಂದುಧರ ಸುರವೃಂದನುತ ಮುಚುಕುಂದ ವರದ ಮುಕುಂದನ ||ಅಪ|| ಚಂದ್ರಭಾಗ ತಟನಿವಾಸನ ನಂದಗೋಪಿಯ ಕಂದನ ಮಂದರೋದ್ಧಾರನಾ ಗೋವಿಂದ ಹರಿ ಗೋಪಾಲನ ||೧|| ಪುಂಡಲೀಕನ ಭಕ್ತಿಗೊಲಿದು ಬಂದ ಜ್ಞಾನಾನಂದನ ಇಂದಿರಾ ಭೂರಮಣನ ತಂದೆ ಪುರಂದರ ವಿಠಲನ ||೨|| ಅಜಭವಾದಿಗಳರಸನಾದ ಭುಜಗಶಯನ ಅನಂತನ ವಿಜಯ ಸಾರಥಿಯಾದ ರಣದೊಳು ವಿಜಯ ವಿಠಲರಾಯನ ||೩|| ಗೋಕುಲದ ಗೊಲ್ಲರನು ಕೂಡಿ ಆಕಳ್ಹಿಂಡನು ಕಾಯ್ದನ ಗೋಪಿಯರೊಡಗೂಡಿ ಕುಣಿಯುವ ಗೋಪ ಗೋಪಾಲ ವಿಠಲನ ||೪| ಬಗೆ ಬಗೆಯ ಮಹಿಮೆಗಳ ತೋರುವ ಜಯ ಜಗನ್ನಾಥ ವಿಠಲನ ಹಗಲಿರುಳು ಭಕ್ತರನು ಪೊರೆಯುವ ತಂದೆ ಭೂಪತಿ ವಿಠಲನ ||೫|| eMdu nODuve nODi naliyuve taMde paMDharirAyana |pa| iMdudhara suravRuMdanuta mucukuMda varada mukuMdana ||apa|| caMdraBAga taTanivAsana naMdagOpiya kaMdana maMdarOddhAranA gOviMda hari gOpAlana ||1|| puMDalIkana Baktigolidu baMda j~jAnAnaMdana iMdirA BUramaNana taMde puraMdara viThalana ||2|| ajaBavAdigaLarasanAda BujagaSayana anaMtana vijaya sArathiyAda raNadoLu vijaya viThalarAyana ||3|| gOkulada gollaranu kUDi AkaLhi...

ಶೇಷದೇವ ವಾರುಣಿ ಪತಿ | ಜಗನ್ನಾಥ ವಿಠಲ Sheshadeva Varuni Pati | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ಶೇಷದೇವ ವಾರುಣಿ ಪತಿ ಪಾಹಿ || ಪ || ಶೇಷದೇವ ತ್ರೈಘೋಷಣ ಮುಖಪರಿ ಪೋಷಿಸು ಎಮ್ಮಭಿಲಾಷೆಯ ಸಲಿಸಿ || ಅಪ || ಭಜಿಸುವೆ ಸರ್ವದ ಸುಜನರಭೀಷ್ಟದ ಸುಜನರಾಧಕ ಭುಜಗೋತ್ತಂಸ || ೧ || ಪುಣ್ಯಚರಿತ ಸುಶರಣ್ಯನೆ ಸುಬ್ರಹ್ಮಣ್ಯ ದೇವ ಕಾರುಣ್ಯ ಮೂರುತಿ || ೨ || ವಾರುಣಿಮುಖ ಸರೋರುಹ ದಿನಕರ ತೋರು ತವಾಂಘ್ರಿ ಮಹೋರಗರಾಜ || ೩ || ಅಸಿತವಸನ ಹಲ ಮುಸಲಾಯುಧ ಧರ ದ್ವಿಸಹಸ್ರೇಕ್ಷಣ ಸುಶರಣಪಾಲ || ೪ || ಪಾತಾಳಪ ಪುರುಹೂತನುತ ಜಗನ್ನಾಥ ವಿಠಲನ ಪ್ರೀತಿ ವಿಷಯನೆ || ೫ || shEShadEva vaaruNi pati paahi || pa || shEShadEva traighOShaNa muKapari pOShisu emmabhilaaSheya salisi || apa || bhajisuve sarvada sujanarabhIShTada sujanaraadhaka bhujagOttaMsa || 1 || puNyacarita susharaNyane subrahmaNya dEva kaaruNya mUruti || 2 || vaaruNimuKa sarOruha dinakara tOru tavaaMghri mahOragaraaja || 3 || asitavasana hala musalaayudha dhara dvisahasrEkShaNa susharaNapaala || 4 || paataaLapa puruhUtanuta jagannaatha viThalana prIti viShayane || 5 ||  

ಸಾರಿದೆನೊ ನಿನ್ನ ವೆಂಕಟ | ಹಯವದನ | Sarideno Ninna Venkata | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಸಾರಿದೆನೊ ನಿನ್ನ ವೆಂಕಟರನ್ನ || ಪ || ನೀರಜನಯನನೆ ನಿರ್ಮಲ ಗುಣಪೂರ್ಣ || ಅಪ || ಅನಾಥನು ನಾನು ಎನಗೆ ಬಂಧು ನೀನು ನಿನ್ನವನೆಂದು ನೋಡೋ ನೀನಾಗಿ ದಯಮಾಡೊ || ೧ || ಎನ್ನ ಕುಂದುಗಳನ್ನು ಎಣಿಸಲಾಗದೊ ದೇವ ಪನ್ನಗಾದ್ರಿವಾಸ ನೀನೇ ನಿರ್ದೋಷ || ೨ || ದೇಶದೇಶದವರ ಪೊರೆವಂತೆ ಪೊರೆಯೆನ್ನ ಶೇಷಾಚಲ ಘನ್ನ ಶ್ರೀಷ ಹಯವದನ || ೩ || saarideno ninna veMkaTaranna || pa || nIrajanayanane nirmala guNapUrNa || apa || anaathanu naanu enage baMdhu nInu ninnavaneMdu nODO nInaagi dayamaaDo || 1 || enna kuMdugaLannu eNisalaagado dEva pannagaadrivaasa nInE nirdOSha || 2 || dEshadEshadavara porevaMte poreyenna shEShaachala Ganna shrISha hayavadana || 3 ||

ಬಂದಳು ನೋಡೆ ಮಂದಿರದೊಳು | ಜಗನ್ನಾಥ ವಿಠಲ | Bandalu Node Mandiradolu | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ಬಂದಳು ನೋಡೆ ಮಂದಿರದೊಳು ಭಾಗ್ಯದ ಲಕ್ಷ್ಮೀ || ಪ || ಇಂದುವದನೆ ಮಂದಹಾಸದಿಂದ ನಗುತಲಿ || ಅಪ || ಅಂದಿಗೆ ಕಿರುಗೆಜ್ಜೆರುಳಿರು ಘಿಲ್ಲು ಘಿಲ್ಲೆನುತಲಿ | ಮುದದಿ ಪಾದ ಇಕ್ಕುತ ಪದ್ಮನಾಭನ ಅರಸಿಯು || ೧ || ಎಡಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತಲಿ | ಬಿಡದೆ ತನ್ನ ಕರಕಮಲದಿಂದ ವರವ ಕೊಡುತಲಿ || ೨ || ಸೃಷ್ಟಿಗೊಡೆಯ ತಂದೆ ಜಗನ್ನಾಥ ವಿಠಲನ | ಪಟ್ಟದರಸಿ ಅರ್ಥಿಯಾದ ಭಕ್ತರ ಮನೆಗೆ || ೩ || baMdaLu nODe maMdiradoLu bhaagyada lakShmI || pa || iMduvadane maMdahaasadiMda nagutali || apa || aMdige kirugejjeruLiru Gillu Gillenutali | mudadi paada ikkuta padmanaabhana arasiyu || 1 || eDabaladalli gajagaLiMda pUjegoLLutali | biDade tanna karakamaladiMda varava koDutali || 2 || sRuShTigoDeya taMde jagannaatha viThalana | paTTadarasi arthiyaada bhaktara manege || 3 ||

ಸುಬ್ಬರಾಯ ಶುಭಕಾಯ | ವಿಜಯ ವಿಠಲ | Subbaraaya Shubhakaaya | Vijaya Vithala

Image
ಸಾಹಿತ್ಯ : ಶ್ರೀ ವಿಜಯ ವಿಠಲ ದಾಸರು (ವಿಜಯ ವಿಠಲ) Kruti:Sri Vijaya vithala dasaru (Vijaya vittala) ಸುಬ್ಬರಾಯ ಶುಭಕಾಯ || ಪ || ಸುಬ್ಬರಾಯ ಶುಭಾಕಾಯಂಗಜ ನೀನೆ ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ || ಅಪ || ಮಾರಾ ಭರತನೆ ಶಂಬರಾರಿ ಸನತ್ಕುಮಾರ ಕುಮಾರಾ ಸಾಂಬಾ | ಸಾರಿದೆ ನಿನ್ನವತಾರ ಮೂಲರೂಪ ಸಾರಿಸಾರಿಗೆ ಸಂಸಾರಮನ  ವಿಸ್ತಾರವಾಗದಂತೆ ಹಾರಿ ಸದುರ ವ್ಯಾಪಾರಗುಣ ಪಾರಾವಾರಾ || ೧ || ಮಾಡುವೆ ವಂದನೆ ಸತತ ಸಜ್ಜನರೊಳಗಾಡಿಸು ಭಕುತರ ಪ್ರೀತಾ ಪಾಡಿದವರ ಕಾಪಾಡುವ ರತಿಪತಿ ಈಡಾರು ನಿನಗೆ ನಾಡಿನೊಳಗೆಲ್ಲ | ಬೇಡುವೆ ದಯವನ್ನು ಮಾಡು ವಿರಕುತಿಯ ನೀಡು ಬಿಡದಲೆ ನೋಡು || ೨ || ಕುಕ್ಕೆ ಪುರಿಯ ನಿಲಯಾ ನಿಲಯಾ ಶ್ರೀಧರ ಬೊಮ್ಮ ಮುಕ್ಕಣ್ಣಗಳ ತನಯ || ಸೊಕ್ಕಿದ ತಾರಕ ರಕ್ಕಸಹರ ದೇವರ್ಕಳ ನಿಜದಳಕೆ ನಾಯಕನಾದೆ  ಪಕ್ಷಿವಾಹನ ಸಿರಿ ವಿಜಯ ವಿಠಲನ ಚಕ್ರ ಐದೊಂದು ವಕ್ತ್ರಾ || ೩ || subbaraaya shubhakaaya || pa || subbaraaya shubhaakaayaMgaja nIne nibbara mahimaa dayaaMbudhi skaMdaa || apa || maaraa bharatane shaMbaraari sanatkumaara kumaaraa saaMbaa | saaride ninnavataara mUlarUpa saarisaarige saMsaaramana  vistaaravaagadaMte haari sadura vyaapaaraguNa paaraavaaraa || 1 || maaDuve vaMdane satata sajjanaroLagaaDisu bhakutara prItaa paaD...

ಹಹಹಹ ಮಾನವ ಹೀಗೇಕೆ ಕೆಟ್ಟೆ | ಪುರಂದರವಿಠಲ | Ha ha Maanava heegeke kette | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಹಹಹಹಹ ಮಾನವ ಹೀಗೇಕೆ ಕೆಟ್ಟೆ ಹರಿಭಜನೆಯ ಬಿಟ್ಟೆ || ಪ || ಜನ್ಮಾಂತರದಲಿ ಮಾಡಿದ ಪುಣ್ಯ ಇಂದಿಗೆ ಭೂಸುರ ಜನ್ಮವ ಕೊಟ್ಟ ದೇವವರೇಣ್ಯ | ಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯ ಚರಿತ್ರನ | ಒಮ್ಮಾನರೂ ನೀ ಮನ್ನಿಸಲಿಲ್ಲ ಠೊಣ್ಯ || ೧ || ತನುವಿನ ಚಿಂತೆ ತನಯರ ಚಿಂತೆ ಧನಧಾನ್ಯದ ಚಿಂತೆ | ವನಿತೆಯರ ಚಿಂತೆ ಉದರದ ಚಿಂತೆ | ಅನುದಿನದಲಿ ತನುವ ನೆನೆಸುತ ಕನಕನಂತೆ || ೨ || ಮಡದಿ ಮಕ್ಕಳಿಗೆ ಒಡವೆಯ ಗಳಿಸ | ಬೇಕೆಂಬ ಚಿಂತೆ ಮನೆ ಚಿಂತೆ ಮಾನ್ಯದ ಚಿಂತೆ ಮನುಜರಿಗೆ ಅನುದಿನ ಪುರಂದರ ವಿಠಲನ ನೆನೆಯದೆ ಕನಕನಂತೆ || ೩ || hahahahaha maanava hIgEke keTTe haribhajaneya biTTe || pa || janmaaMtaradali maaDida puNya iMdige bhUsura janmava koTTa dEvavarENya | sanmaanadi maanya manmathanayyana dhanya caritrana | ommaanarU nI mannisalilla ThoNya || 1 || tanuvina ciMte tanayara ciMte dhanadhaanyada ciMte | vaniteyara ciMte udarada ciMte | anudinadali tanuva nenesuta kanakanaMte || 2 || maDadi makkaLige oDaveya gaLisa | bEkeMba ciMte mane ciMte maanyada ciMte manujarige anudina puraMdara viThalana neneyade kanakanaM...

ಇದಿರದಾವನು ನಿನಗೆ ವ್ಯಾಸ ಮುನಿರಾಯ | ಶ್ರೀಪಾದರಾಜರು | Idiradaavanu Ninage Vyaasa Muni | Sripaadarajaru

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ ಅಂಕಿತ) Kruti: Sri Sripadarajaru (Ranga vittala) ಇದಿರದಾವನು ನಿನಗೆ ವ್ಯಾಸ ಮುನಿರಾಯ ||ಪ|| ಪದುಮನಾಭನ ದಾಸ ಪರಮ ಉಲ್ಲಾಸ ||ಅ.ಪ.|| ವಾದಿ ತಿಮಿರ ಮಾರ್ತಾಂಡನೆಂದೆನಿಸಿದ ವಾದಿ ಶರಭ ಭೇರುಂಡ ವ್ಯಾಸಮುನಿರಾಯ ||೧|| ಯತಿಗಳೊಳು ನಿನ್ನಂಥ ಪ್ರತಿಭೆ ಉಳ್ಳವರ ಪ್ರತಿಗಾಣೆ ನಾ ಕ್ಷಿತಿಯೊಳಗೆ ಯತಿರಾಯ ||೨|| ಹಮ್ಮನಳಿದು ಶ್ರೀಪತಿ ರಂಗವಿಠಲನ ಸುಮ್ಮಾನದಿಂ ಸೇವಿಪ ವ್ಯಾಸಮುನಿರಾಯ ||೩|| idiradaavanu ninage vyaasa muniraaya ||pa|| padumanaabhana daasa parama ullaasa ||a.pa.|| vaadi timira maartaaMDaneMdenisida vaadi sharabha bhEruMDa vyaasamuniraaya ||1|| yatigaLoLu ninnaMtha pratibhe uLLavara pratigaaNe naa kShitiyoLage yatiraaya ||2|| hammanaLidu shrIpati raMgaviThalana summaanadiM sEvipa vyaasamuniraaya ||3||

ಬಾರೆ ಗೌರಿ ಪೂಜಿಸುವೆನು | ಕಾರ್ಪರ ನಾರಸಿಂಹ | Baare Gouri Poojisuvenu | Karpara Narasimha

Image
ಸಾಹಿತ್ಯ : ಶ್ರೀ ಕಾರ್ಪರ ನರಹರಿ ದಾಸರು (ಕಾರ್ಪರ ನಾರಸಿಂಹ) Kruti: Sri Karpara Narahari dasaru (Karpara Narasimha) ಬಾರೆ ಗೌರಿ ಪೂಜಿಸುವೆನು ಸಾರ ಸಾಂಬಕಿ | ಸಾರುವೆ ಸಂಸಾರದಿ ನೀ ಸುಖವ ತೋರೆ ವಿಧುಮುಖಿ || ಪ || ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ | ಚಂದದಿ ಸಮರ್ಪಿಸುವೆನು ನಾ ಫಲಪುಷ್ಪಂಗಳ || ೧ || ಮಂಗಳೆ ಎಂದು ಪಾಡುತ ಬೆಳಗುವೆನು ಆರುತಿ | ಮಂಗಳಗೌರಿ ಕೊಡು ಎನಗೆ ಸೌಭಾಗ್ಯ ಸಂತತಿ || ೨ || ಮಂಗಳಪ್ರದಾತೆ ಗಿರಿಸಂಭೂತೆ ಸುರನುತೆ | ಮಂಗಳಾಂಗಿ ಕುರು ಕರುಣಾಮಯಿ ನಮೋ ನಮೋಽಸ್ತುತೆ || ೩ || ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ | ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ || ೪ || ರತಿಯ ಪತಿಯ ಪಿತಗೆ ಸದಾ ಪ್ರತಿಮೆಯೆನಿಸುವೆ | ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ || ೫ || ಸಡಗರದಿ ನಿಮ್ಮಡಿಯ ಸೇವೆ ಬಿಡದೆ ಮಾಡುವೆ | ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ || ೬|| ಶರಣ ಜನರ ಪೊರೆವ ಕಾರ್ಪರ ನಾರಸಿಂಹನ | ಚರಣ ಕಮಲಯುಗಳದಿ ಭಕುತಿಯಿರಲನುದಿನ || ೭ || baare gouri pUjisuvenu saara saaMbaki | saaruve saMsaaradi nI suKava tOre vidhumukhi || pa || kuMda mallige jaaji kusuma gaMdha parimaLa | chaMdadi samarpisuvenu naa phalapuShpaMgaLa || 1 || maMgaLe eMdu paaDuta beLaguvenu Aruti | maMgaLagouri koDu enage soubhaagya saMtati || 2 || ma...

ಅಂಗಿ ತೊಟ್ಟೇನೆ ಗೋಪಿ ಶೃಂಗಾರವಾದೇನೆ | ಪುರಂದರ ವಿಠಲ | Angi Tottene Gopi | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ ಅಂಕಿತ) Kruti: Sri Purandara dasaru (Purandara vittala) ಅಂಗಿ ತೊಟ್ಟೇನೆ ಗೋಪಿ ಶೃಂಗಾರವಾದೇನೆ | ಪ || ಹಾಲ ಕುಡಿದೇನೆ ಗೋಪಿ ಆಕಳ ಕಾಯ್ದೇನೆ || ಅಪ || ಚಕ್ಕುಲಿ ಕೊಡು ಎನಗೆ ಗೋಪಿ ಅಕ್ಕರದಿ ಬಂದೆನೆ  ಗೊಲ್ಲರ ಮಕ್ಕಳ ಎಲ್ಲರೊಡಗೂಡಿ ಹಲವು ಗೋವ್ಗಳ ಕಾಯ್ದು ಬಂದೆನೆ || ೧ || ಅಮ್ಮಣ್ಣಿ ಕೊಡು ಎನಗೆ ಗೋಪಿ ಬೆಣ್ಣೆಯ ತೋರೆ ಮೇಲೆ ಗಮ್ಮನೆ ತಟಕನೆ ಮೊಸರನೆ ಸವಿದು ಸುಮ್ಮನೆ ತೊಟ್ಟಿಲೊಳು ಲೋಲಾಡುವೆನು || ೨ || ಅಪ್ಪಚ್ಚಿ ಕೊಡು ಎನಗೆ ಗೋಪಿ ತುಪ್ಪವ ಕೊಡೆ ಮೇಲೆ ಅಪ್ಪಗೆ ಹೇಳಿ ಟೊಪ್ಪಿಗೆ ಕೊಡಿಸೆ ಉಪ್ಪು ಕಡಲೆಯನ್ನು ಚೀಲದಿ ತುಂಬುವ || ೩ || ಚೆಂಡು ಕೊಡು ಎನಗೆ ಗೋಪಿ ಚಿನಿಕೋಲು ಬೇಕಲ್ಲ  ಗುಂಡುಕಲ್ಲಿನಂಥ ಬುತ್ತಿಯ ಕಟ್ಟಿ ಹಿಂಡು ಗೋವುಗಳ ಕಾಯ್ದು ಬಂದೆನೆ || ೪ || ಈ ಲೀಲೆಗಳ ಕೇಳಿ ಗೊಪಿ ತೋಳಿನೊಳ್ ಬಿಗಿದಪ್ಪಿ ಶ್ರೀಲೋಲ ಪುರಂದರ ವಿಠಲ ಲೀಲೆಯಿಂದ ಬಾರೆನುತ || ೫ || aMgi toTTEne gOpi shRuMgaaravaadEne | pa || haala kuDidEne gOpi AkaLa kaaydEne || apa || cakkuli koDu enage gOpi akkaradi baMdene  gollara makkaLa ellaroDagUDi halavu gOvgaLa kaaydu baMdene || 1 || ammaNNi koDu enage gOpi beNNeya tOre mEle gammane taTakane mosarane savidu summane toTTiloLu lOlaaDuvenu || 2 || ...

ಗುರುವಾದಿರಾಜ ರವಿಕೋಟಿತೇಜ | ವಿಜಯವಿಠಲ | Guru Vadiraja Ravikoti teja | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು (ವಿಜಯ ವಿಠಲ ಅಂಕಿತ) Kruti:Sri Vijaya dasaru (Vijaya vittala) ಗುರುವಾದಿರಾಜ ರವಿಕೋಟಿತೇಜ  ಶರಣೆಂಬೆನಯ್ಯ ಸತತವು ಜೀಯ || ಪ || ನಂಬಿದೆನು ನಿನ್ನ ದಯಾ ಸಂಪನ್ನ  ಸಂಭ್ರಮದಲ್ಲೆನ್ನ ಪೊರೆಯೋ ಪ್ರಸನ್ನ || ೧ || ವೇದ ಶಾಸ್ತ್ರ ಬಲ್ಲ ಭಳಿರೆ ಮಲ್ಲ ಭೇದವು  ನಿಜವೆಂಬೋ ಜ್ಞಾನವೇ ಫಲ || ೨ || ಮಾಯಿಗಳ ಒದ್ದ ಮಮತೆಯ ಗೆದ್ದ  ಗಾಯನ ಪ್ರಸಿದ್ಧ ಗುಣದಲ್ಲಿ ಇದ್ದ ||೩|| ನಾನಾ ಚರಿತ್ರೆ ತೋರಿದ ಪವಿತ್ರ ಧ್ಯಾನಿಸಿ  ಹರಿಯ ಪಾತ್ರದೊಳಿಟ್ಟ ಪಾತ್ರ || ೪ || ಸಂತತ ವಿರಕ್ತ ಜೀವನ್ಮುಕ್ತ  ಸಂತತ ಜಗದ್ರಾತ ಹರಿನಾದ ಸೋಕ್ತ || ೫ || ಸೋದೆ ಪುರವಾಸ ಸಾಧು ಗುಣ  ಭಾಸ ಸದ್ಭಕ್ತರ ಪೋಷ ಮಧ್ವಮತೋಲ್ಲಾಸ || ೬ || ವಿಜಯ ವಿಠಲನ್ನ ನೆನೆಯುವ ಘನ್ನ ತ್ರಿಜಗ ಹಯವದನನ್ನ ಪರನೆಂಬೋ ಪೂರ್ಣ || ೭ || guruvAdirAja ravikOTitEja  sharaNeMbenayya satatavu jIya || pa || naMbidenu ninna dayA saMpanna  saMBramadallenna poreyO prasanna || 1 || vEda SAstra balla BaLire malla bhEdavu  nijaveMbO j~jAnavE Pala || 2 || mAyigaLa odda mamateya gedda  gAyana prasiddha guNadalli idda ||3|| nAnA caritre tOrida pavitra dhyAnisi  hariya pAtradoLiTTa pAtra || 4 || saMtata virakta...

ದಿಕ್ಕುದೆಸೆ ನೀನೇ ಗುರು ವಾದಿರಾಜ | ಬಾದರಾಯಣ ವಿಠಲ | Dikku Dese Neene Guru Vadiraja | Badarayana Vithala

Image
ಸಾಹಿತ್ಯ : ಶ್ರೀ ಸವಣೂರು ಬಾದರಾಯಣ ದಾಸರು  Kruti: Sri Savanuru Baadarayanadasaru  ದಿಕ್ಕುದೆಸೆ ನೀನೇ ಗುರು ವಾದಿರಾಜ ||ಪ||  ಇಕ್ಕೋ ಈ ದೇಹವನು ನಿನಗರ್ಪಿಸಿದೆ ಎಮಗೆ ||ಅಪ||    ಇನ್ನೊಬ್ಬರಿಗೆ ನಾನು ಶರಣೆನ್ನಲಾರೆನು ನಿನ್ನಡಿಗೆ ಕೊರಳ ಕಟ್ಟಿದೆನು ಸತ್ಯ ||  ಅನ್ಯಾಯ ನ್ಯಾಯವನು ಬಲ್ಲ ಮಹಿಮನು ನೀನು |  ನಿನ್ನ ನಂಬಿದ ಮೇಲೆ ಇನ್ನು ಕೆಡಿಸುವನಲ್ಲ ||೧||    ಆರಾರಿಗಾಲ್ಪರಿದ ಆರೇನು ಮಾಡುವರೋ |  ಧೀರ ವಾಗೀಶ ಕರಕಮಲ ಜಾತ |  ಧಾರುಣಿಯ ಮೇಲಿನ್ನು ನಿನ್ನಂತ ಕರುಣಿಗಳ  ಆರಾರಿಸಿ ಹುಡುಕಿದರು ನಾಕಾಣೆ ಎನ್ನಾಣೆ ||೨||    ವೇದ ವೇದ್ಯಾಚಾರ್ಯ ವಂದಿತ ಪದಾಂಬೋಜ  ಸಾಧುಕುಲ ತಿಲಕ ಸರ್ವಜ್ಞ ಮುನಿಯೇ ||  ಶ್ರೀಧವಳ ಗಂಗಾ ತಟ ನಿಲಯ ಸಲಹೆಮ್ಮ  ಬಾದರಾಯಣ ವಿಠಲ ಭಕ್ತಾಗ್ರಣಿಯೇ ಎಮಗೆ ||೩||  dikkudese nInE guru vAdirAja ||pa||  ikkO I dEhavanu ninagarpiside emage ||apa||    innobbarige nAnu SaraNennalArenu ninnaDige koraLa kaTTidenu satya ||  anyAya nyAyavanu balla mahimanu nInu |  ninna naMbida mEle innu keDisuvanalla ||1||    ArArigAlparida ArEnu mADuvarO |  dhIra vAgISa karakamala jAta |...

ಅಕ್ಕ ಕೇಳೇ ನಿನ್ನ ತಪಸೀಯ | ಗುರು ಮಹೀಪತಿ | Akka Kele Ninna | Guru Mahipati

Image
ಸಾಹಿತ್ಯ : ಶ್ರೀ ಕಾಖಂಡಕಿ ಕೃಷ್ಣದಾಸರು (ಗುರು ಮಹಿಪತಿ ಅಂಕಿತ) Kruti: Sri Kakhandaki Krishnadasaru (Guru Mahipati) ಅಕ್ಕ ಕೇಳೇ ನಿನ್ನ ತಪಸೀಯರೊಳಗೊಬ್ಬ ಮುಕ್ಕಣ್ಣಗೀವರಂತೆ | ನಿನ್ನ ಮುಕ್ಕಣ್ಣಗೀವರಂತೆ ||ಪ|| ಮೂರ್ಖನೊ ಗಿರಿರಾಜ ವಿಗಡ ಮುನಿ ಮಾತನೆ ಲೆಕ್ಕಿಸಿ ಮದುವೆ ಮಾಡಿ ಕೊಡುವವನಂತೆ ||ಅ.ಪ.|| ತಲೆ ಎಲ್ಲ ಜಡೆಯಂತೆ ಅದರೊಳಗೆ ಜಲವಂತೆ | ತಿಲಕ ಫಣಿಗೆ ಬಾಲ ಚಂದ್ರನಂತೆ || ಹೊಳೆವ ಕಿಡಿಗಣ್ಣನಂತೆ ನಂಜುಗೊರಳನಂತೆ | ಸಲೆ ರುಂಡ ಮಾಲೆಯ ಕೊರಳಿಗ್ಹಾಕಿದನಂತೆ ||೧|| ಉರಗ ಭೂಷಣನಂತೆ ಭಸ್ಮಲೇಪನನಂತೆ | ಕರಿಯ ಚರ್ಮಾಂಬರ ಉಡುಗೆಯಂತೆ || ತಿರಿದುಂಬುವವನಂತೆ ಬಿಳಿಯ ಮೈಯವನಂತೆ ನಿರುತ ಢಮರುವ ಬಾರಿಸುವ ಜೋಗಿಯಂತೆ ||೨|| ಹಡೆದವಳಿಲ್ಲವಂತೆ ಎತ್ತನೇರುವನಂತೆ ಅಡವಿ ಗಿರಿಗಳೊಳು ಇಪ್ಪನಂತೆ | ಒಡನೆ ಪುಲಿದೊಗಲನ ಹಾಸಿಗೆ ಇಹುದಂತೆ | ನುಡಿಗೊಮ್ಮೆ ರಾಮ ರಾಮ ಎಂಬ ಸ್ಮರಣೆ ಇಹುದಂತೆ ||೩|| ಮಾರನ ರಿಪುವಂತೆ ಐದು ಮೋರೆಯಂತೆ | ಆರು ಇಲ್ಲದ ಪರದೇಶಿಯಂತೆ || ಧಾರುಣಿಯೊಳು ಗುರುಮಹಿಪತಿ ಸುತ ಪ್ರಭೋ ಭವತಾರಕ ಶಿವನೆಂದು ಮೊರೆ ಹೋಗಬೇಕಂತೆ ||೪|| akka kELE ninna tapasIyaroLagobba mukkaNNagIvaraMte | ninna mukkaNNagIvaraMte ||pa|| mUrKano giriraaja vigaDa muni maatane lekkisi maduve maaDi koDuvavanaMte ||a.pa.|| tale ella jaDeyaMte adaroLage jalavaMte | tilaka PaNige baala caMdrana...

ಶ್ರೀಕೃಷ್ಣ ಸತ್ಯಭಾಮೆ ಸಂವಾದ | ನಾಗಶಯನನು | Nagashayananu | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾಗಶಯನನು ನಿನಗಾಗಿಯೆ ಬಂದಿಹೆ ಬಾಗಿಲ ತೆಗೆಯೆ ಭಾಮೆ ನೀ ಬಾಗಿಲ ತೆಗೆಯೆ ಭಾಮೆ || ಪ. || ಕೂಗುವ ನೀನ್ಯಾರೊ ಈಗ ಹೊತ್ತಲ್ಲ ಕೂಗಬೇಡ ಪೋಗೋ ನೀ ಕೂಗಬೇಡ ಪೋಗೋ || ಅ.ಪ.|| ನೀರೊಳು ಮುಳುಗಿ ನಿಗಮ ಚೋರನ ಗೆದ್ದ ನೀರಜಾಕ್ಷನೆ ಭಾಮೆ ನಾ ನೀರಜಾಕ್ಷನೆ ಭಾಮೆ ನಾರುವ ಮೈಯನ್ನು ಎನ್ನಲ್ಲಿ ತೋರದೆ ಸಾರು ಸಾರು ನೀ ದೂರ ರಂಗ ಸಾರು ಸಾರು ನೀ ದೂರ  || ೧ || ಮಂದರ ಗಿರಿಯನು ಬೆನ್ನಲಿ ಪೊತ್ತ ಇಂದಿರೆಯರಸನೆ ಭಾಮೆ ನಾ- ನಿಂದಿರೆಯರಸನೆ ಭಾಮೆ ಇಂದು ನಿನಗೆ ತಕ್ಕ ಭಾರಗಳಿಲ್ಲವು ಸಿಂಧುವಿನೊಳು ನೀ ಪೋಗೈ ಕೃಷ್ಣ ಸಿಂಧುವಿನೊಳು ನೀ ಪೋಗೈ  || ೨ || ಧರಣಿಗೆ ಸುಖವನು ತೋರಿದ ಸೂಕರ ಪರಮಪುರುಷನೆ ಭಾಮೆ ನಾ ಪರಮ ಪುರುಷನೆ ಭಾಮೆ ವರಾಹರೂಪದ ನಿನ್ನ ಗುರುಗುರು ಶಬ್ದವ ಅರಿವಳಲ್ಲವೊ ನೀ ಪೋಗೈ ರಂಗ ಅರಿವಳಲ್ಲವೊ ನೀ ಪೋಗೈ  || ೩ || ಬಾಲನ ತಾಪವ ಕೋಪದಿ ತರಿದ (ಜ್ವಾಲ) ನಾರಸಿಂಹನೆ ಭಾಮೆ ನಾ (ಜ್ವಾಲ) ನಾರಸಿಂಹನೆ ಭಾಮೆ ಜ್ವಾಲೆಯ ವದನ ಕ್ರೂರ ಕಾರ್ಯಂಗಳ ಕೇಳಿ ಅಂಜುವಳಲ್ಲ ಪೋಗೈ ರಂಗ ಕೇಳಿ ಅಂಜುವಳಲ್ಲ ಪೋಗೈ || ೪ || ವಾಸವನನುಜನೆ ವಾಮನರೂಪನೆ ನಾಶರಹಿತನೆ ಭಾಮೆ ನಾ ನಾಶರಹಿತನೆ ಭಾಮೆ ಕೂಸಿನ ರೂಪದಿ ಮೋಸವ ಮಾಡಿದಗೆ ದಾಸಿಯೊಬ್ಬಳು ಬೇಕೇ ರಂಗ ದಾಸಿಯೊಬ್ಬಳು ಬೇಕೇ  || ೫ || ತಾತನ ಮಾತಿಗೆ ತಾಯಿಯನಳಿದ ಖ್ಯಾತ ಭಾರ್ಗವನೆ ಭಾಮೆ ನಾ ಖ್ಯಾತ ಭಾರ್ಗವನೆ ಭಾಮೆ ಮಾತೆ...

ಎಂಥಾ ಬಲವಂತನೋ | ಪುರಂದರ ವಿಠಲ | Entha Balavanthano | Purandara vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ ಅಂಕಿತ) Kruti: Sri Purandara dasaru (Purandara vittala) ಎಂಥಾ ಬಲವಂತನೋ ಕುಂತಿಯ ಸಂಜಾತನೋ ||ಪ|| ಭಾರತಿಗೆ ಕಾಂತನೋ ನಿತ್ಯ ಶ್ರೀಮಂತನೋ ||ಅಪ||   ರಾಮಚಂದ್ರನ ಪ್ರಾಣನೋ ಅಸುರ ಹೃದಯ ಬಾಣನೋ ಖಳರ ಗಂಟಲ ಗಾಣನೋ ಜಗದೊಳಗೆ ಪ್ರವೀಣನೋ ||೧||   ಬಂಡಿಯನ್ನವನುಂಡನೋ ಬಕನ ಪ್ರಾಣವ ಕೊಂದನೋ ದ್ರೌಪದಿಗೆ ಗಂಡನೋ ಭೀಮ ಪ್ರಚಂಡನೋ ||೨||   ಕುಂತಿಯ ಕಂದನೋ ಸೌಗಂಧಿಕವ ತಂದನೋ ಕುರುಕ್ಷೇತ್ರಕೆ ಬಂದನೋ ಕೌರವರ ಕೊಂದನೋ ||೩||   ವೈಷ್ಣವಾಗ್ರಗಣ್ಯನೋ ಸಂಚಿತಾಗ್ರ ಪುಣ್ಯನೋ ದೇವವರೇಣ್ಯನೋ ದೇವ ಶರಣ್ಯನೋ ||೪||   ಮಧ್ವ ಶಾಸ್ತ್ರವ ರಚಿಸಿದನೋ ಸದ್ವೈಷ್ಣವರ ಸಲಹಿದನೋ  ಉಡಿಪಿಲಿ ಕೃಷ್ಣನ ನಿಲಿಸಿದನೋ ಪುರಂದರ ವಿಠಲನ ದಾಸನೋ ||೫||  eMthA balavaMtanO kuMtiya saMjAtanO ||pa|| BAratige kAMtanO nitya SrImaMtanO ||apa||   rAmacaMdrana prANanO asura hRudaya bANanO KaLara gaMTala gANanO jagadoLage pravINanO ||1||   baMDiyannavanuMDanO bakana prANava koMdanO draupadige gaMDanO BIma pracaMDanO ||2||   kuMtiya kaMdanO saugaMdhikava taMdanO kurukShEtrake baMdanO kauravara koMdanO ||3||   vaiShNavAgragaNyanO saMcitAgra puNyanO dEva...

ಧನು ಮುರಿದ ಶ್ರೀರಾಮ | ಪುರಂದರ ವಿಠಲ | Dhanu Murida Shri Rama | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ ಅಂಕಿತ) Kruti: Sri Purandara dasaru (Purandara vittala) ಧನು ಮುರಿದ ಶ್ರೀರಾಮ ಶೌರ್ಯವನು ತೋರಿ ಜನಕನಾ ಸಭೆಯಲ್ಲಿ ಜಾನಕಿಯ ಮನ ಸೆಳೆದ ||ಪ|| ವಸುಧೀಶರೆಲ್ಲರೂ ಅಸುಗೆಟ್ಟು ಕುಳಿತಿರಲು | ದಶಕಂಠ ಧನುವೆತ್ತಿ ಬಸವಳಿದು ಬಿದ್ದು |  ಪಸರಿಸಿತು ಹಾಸ್ಯಧ್ವನಿ ನೆರೆದಾ ಸಭೆಯೊಳಗೆಲ್ಲ | ನಸುನಕ್ಕ ವಿಶ್ವಾಮಿತ್ರ ರಾಮನೆಬ್ಬಿಸಿದ ||೧|| ಶ್ಯಾಮಸುಂದರನೆದ್ದು | ಪ್ರೇಮದಿಂದ ಮುನಿಗೆರೆಗಿ ಆ ಮಹಾಧನುವಿದ್ದ ಸ್ಥಳಕ್ಕೆ ಬಂದು | ಕೋಮಲ ಕರಗಳಿಂದ ಧನುವೆತ್ತಿ ತಾ ಪಿಡಿದು | ಸಾಮರ್ಥ್ಯದಿಂದ ಎಳೆದಾ ಧನು ಮುರಿದು ಎರಡಾಯ್ತು ||೨|| ಜಯಭೇರಿ ಹೊಡೆಯಿತು ಜಯವಾಯ್ತು ರಾಮಗೆಂದು | ಜಯ ಜಯವೆಂದು ವನಪುಷ್ಪ ಮಳೆಗರೆಯೆ | ಜಯಮಾಲೆ ಹಾಕಿದಳು ಜಾನಕೀಯು ಓಡಿ ಬಂದು | ಜಯ ಪಡೆದು ನಿಂತಿಹ ಪುರಂದರ ವಿಠಲ ||೩|| dhanu murida shrIrAma shouryavanu tOri janakanaa sabheyalli jaanakiya mana seLeda ||pa|| vasudhIsharellarU asugeTTu kuLitiralu | dashakaMTha dhanuvetti basavaLidu biddu |  pasarisitu haasyadhvani neredaa sabheyoLagella | nasunakka vishvaamitra raamanebbisida ||1|| shyaamasuMdaraneddu | prEmadiMda munigeregi A mahaadhanuvidda sthaLakke baMdu | kOmala karagaLiMda dhanuvetti taa piDidu ...

ಒಂದೇ ಮನದಿ ಭಜಿಸು ವಾಗ್ದೇವಿಯ | ಪುರಂದರವಿಠಲ | Onde Manadi Bhajisu | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು Kruti: Sri Purandara dasaru  ಒಂದೇ ಮನದಿ ಭಜಿಸು ವಾಗ್ದೇವಿಯ  ಇಂದುಮತಿ ಕೊಡುವಳು ಹರಿಯ ಧ್ಯಾನದಲ್ಲಿ || ಪ || ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ | ನಿಂದು ಆರಾಧಿಸಲು ಹರಿ ವಿಶ್ವಮಯನೆಂದು || ಬಂದ ವಿಘ್ನ ಕಳೆದು ಭಾವಶುದ್ಧಿಯನಿತ್ಯ | ಪೊಂದಿಸಿದಳಾಗ ಶ್ರೀ ಹರಿಯ ಚರಣವನು || ೧ || ಅಂದು ದಶಮುಖನನುಜ ವಂದಿಸದೆ ವಾಣಿಯನು | ಬಂದು ತಪವನು ಗೈಯೆ ಬಹುಕಾಲಕೆ || ಅಂದದಿಂದಜ ಮೆಚ್ಚಿ ವರವಧಿಕ ಬೇಡೆನಲು | ಬಂದು ಜಿಹ್ವೆಯಲಿ ನಿದ್ರೆಯನು ಬೇಡಿಸಲು || ೨ || ಅರಿತು ಭಜಿಸಲು ಬಿಡದೆ ಅಜನ ಅರಸಿಯ ನಿತ್ಯ | ಉರುತರವಾದ ವಾಕ್ ಶುದ್ಧಿಯನಿತ್ತು || ನಿರುತ ಶ್ರೀಪುರಂದರವಿಠಲನ ಸೇವೆಯೊಳು | ಪರತತ್ತ್ವದ ಕಥಾಮೃತವನುಣಿಸುವಳು | ೩ || oMdE manadi Bajisu vAgdEviya  iMdumati koDuvaLu hariya dhyAnadalli || pa || hiMde prahlAdanu kamalajana satigeragi | niMdu ArAdhisalu hari viSvamayaneMdu || baMda viGna kaLedu BAvaSuddhiyanitya | poMdisidaLAga SrI hariya caraNavanu || 1 || aMdu daSamuKananuja vaMdisade vANiyanu | baMdu tapavanu gaiye bahukAlake || aMdadiMdaja mecci varavadhika bEDenalu | baMdu jihveyali nidreyanu bEDisalu || 2 || aritu Bajisalu biDade ajana arasiya nitya | ur...

ನರಹರಿ ಎನಬಾರದೆ | ಪುರಂದರ ವಿಠಲ | Narahari Enabaarade | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು Kruti: Sri Purandara dasaru   ನರಹರಿ ಎನಬಾರದೆ ||ಪ|| ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು | ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅಪ|| ದಾರಿದ್ರ್ಯಾದಿ ಭಯವೊಂದು ಇಲ್ಲ | ದಾರಿ ವೈಕುಂಠಕ್ಕೆ ತೋರೋದಲ್ಲ || ನಾರಾಯಣ ನಿಮ್ಮ ನಾಮ ಉಚ್ಚರಿಸಿದ ನಾರದ ದೇವ ಋಷಿಯಾದನು ||೧|| ಜಪತಪದಲ್ಲಿ ಮಾಡು ಮತಿಜಪಿತ ಮಾರ್ಗವಿದು ಕಠಿಣವಲ್ಲ || ಶ್ರೀಪತಿಯೆಂದ ದ್ರೌಪದಿಯ ಅಭಿಮಾನವ ಕಾಯಿದ ಶ್ರೀ ನಾಮವು ||೨|| ಮಂಗಳ ಮೂರುತಿಯೆ ಹಿಂಗದೆ ಭಕ್ತಿರಸದಲ್ಲಿ ಮುಳುಗಿದೆ || ರಂಗಪುರಂದರ ವಿಠಲರಾಯನ ಉರಗಶಯನನಾದ ನಾಮವು ||೩|| narahari enabArade ||pa|| bAri bArigI SarIravu bArad~hAge mADO nAmavu | GOrisida prahlAdana janakana urava sILida nAmavu ||apa|| dAridryAdi BayavoMdu illa | dAri vaikuMThakke tOrOdalla || nArAyaNa nimma nAma uccarisida nArada dEva RuShiyAdanu ||1|| japatapadalli mADu matijapita mArgavidu kaThiNavalla || SrIpatiyeMda draupadiya aBimAnava kAyida SrI nAmavu ||2|| maMgaLa mUrutiye hiMgade Baktirasadalli muLugide || raMgapuraMdara viThalarAyana uragaSayananAda nAmavu ||3||

ಏನ ಬಣ್ಣಿಪೆ ನಮ್ಮಮ್ಮ| ಹಯವದನ | Ena bannipe Nammamma | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ ಅಂಕಿತ) Kruti : Vadirajaru (Hayavadana) ಏನ ಬಣ್ಣಿಪೆ ನಮ್ಮಮ್ಮ| ಏನಾ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ||ಪ|| ಮಧ್ವ ಸರೋವರದ ತೀರದ | ಮುದ್ದು ಕೃಷ್ಣನ |  ಪ್ರಸಿದ್ಧಿಯಿಂದ, ಪೂಜೆ ಮಾಡಿ ಗೆದ್ದ, ಬಲವಂತ ರಾಯರಾ ||೧|| ಬಹ್ವ ಬದ್ಧ ಮಾಯಿಗಳ ಕಾಲಿ|ಲೊದ್ದು, ಮೂಲೆಗೆ ಹಾಕಿ| ಮಧ್ವ ಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದಾ ಯತಿರಾಯರಾ ||೨|| ಸಿರಿ ಹಯವದನನ| ಚರಣ ಕಮಲವನು|  ನಿರುತವಾಗಿ ಸೇವಿಸುವ, ಪರಮಾಚ್ಚಿನ್ನಾ, ನಿಜದಾಸರ ||೩||  ena baNNipe nammamma| enaa baNNipe purNaprajnja pamDitharaayara ||p|| madhva sarovarada thirada |muddu krrishhNana | prasiddhiyimd, puje maaDi gedd, balavamtha raayaraa ||1|| bahva baddha maayigaLa kaali|loddu, mulege haaki| madhva shaasthravella prasiddha maaDidaa yathiraayaraa ||2|| siri hayavadanan| charaNa kamalavanu| niruthavaagi sevisuv, paramaachchinnaa, nijadaasara ||3||

ಇಂದಿರೆ ನಿನ್ನ ಪಾದ ವಂದಿಸುವೆ | ಜಗನ್ನಾಥ ವಿಠಲ | Indire ninna paada | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ ಅಂಕಿತ) Kruti: Jagannatha dasaru (Jagannatha vittala) ಇಂದಿರೆ ನಿನ್ನ ಪಾದ ವಂದಿಸುವೆ ಎನ್ನ ಮಂದಿರದಲ್ಲಿ ನಿಲ್ಲೇ ಕೇಳುವದನ ಸೊಲ್ಲೆ ||ಪ|| ಅಂಧಕೂಪದ ಭವ ಸಿಂಧುವಿನೊಳು  ಬಹು ನೊಂದು ಬೇಡಿಕೊಂಬೆ ಪಾಲಿಸು ಜಗದಂಬೆ ||೧|| ಇಂದಿರೇಶನ ರಾಣಿ ಮಂದಭಾಗ್ಯನ  ಕರುಣದಿಂದಲಿ ಎನ್ನ ನೋಡೇ ನಲಿದಾಡೇ ||೨|| ಮಂದಜಾಸನ ಜನನಿ ಸುಂದರ ಸುಗುಣಿ ನಿನ್ನ ಕಂದನು ನಾನಮ್ಮಾ ಸಿರಿಯೇ ನೀ ಸುಖ ಸುರಿಯೇ ||೩|| ಎಂದಿಗೂ ಎನ್ನನು ಪೊಂದಿದ ಈ ಭವಬಂಧನ ಬಿಡಿಸೆಂಬೆ ನಿನ್ನ ಬೇಡಿಕೊಂಬೆ ||೪|| ದಾತ ಗುರು ಜಗನ್ನಾಥ ವಿಠಲನ ಪ್ರೀತಿಯಿಂದ ಎನಗೆ ತೋರೇ ಎನ್ನ ಮನೆಗೆ ಬಾರೆ ||೫|| iMdire ninna paada vaMdisuve enna maMdiradalli nillE kELuvadana solle ||p|| aMdhakUpada bhava siMdhuvinoLu  bahu noMdu bEDikoMbe paalisu jagadaMbe ||1|| iMdirEshana raaNi maMdabhaagyana  karuNadiMdali enna nODE nalidaaDE ||2|| maMdajaasana janani suMdara suguNi ninna kaMdanu naanammaa siriyE nI suKa suriyE ||3|| eMdigU ennanu poMdida I bhavabaMdhana biDiseMbe ninna bEDikoMbe ||4|| daata guru jagannaatha viThalana prItiyiMda enage tOrE enna manege baare ||5||

ಎಣಿಸಲೆನ್ನಳವೆ ನಿನ್ನ ಮಹಿಮೆಗಳ | ಹಯವದನ | Enisalennalave ninna mahime | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ ಅಂಕಿತ) Kruti: Vadirajaru (Hayavadana) ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡರಾಮ ||ಪ|| ಜಲದಿ ಸಂಚರಿಸಿದೆ ಬಲುಗಿರಿಯ ಧರಿಸಿದೆ ಲಲನೆ ಧರಿತ್ರಿಯ ಪೊರೆದೆ ಛಲದಿ ಹಿರಣ್ಯಕಶಿಪುವ ಸಂಹರಿಸಿದೆ ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ ||೧|| ದುರುಳ ರಾಯರ ತರಿದೆ ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ ತರುಣಿಯರ ವ್ರತ ಗೆಲಿದೆ ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ ||೨|| ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ ಕರುಣಿಸು ಗುಣಸಂಪನ್ನ ಸ್ಮರನಜನಕ ಚೆನ್ನ ಧರಜೆಯ ಮೋಹನ್ನ ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ ||೩|| eNisalennaLave ninna mahimegaLa guNagaNanuta naama kOdaMDaraama ||pa|| jaladi saMcariside balugiriya dhariside lalane dharitriya porede Caladi hiraNyakashipuva saMhariside iLeyaapEkShiside baliya bhaMjiside ||1|| duruLa raayara taride harana billa muride narage saarathiyaagi merede taruNiyara vrata gelide turagavanEri sharaNaagatarannu porevudu ninna birude ||2|| karuNaasaagara ninna caraNasEvege enna karuNisu guNasaMpanna smaranajanaka cenna dharajeya mOhanna sthiravaada lakShmIsha karuNiso hayavadana ||3|| ...

ಏನ ಬೇಡಲಿ ನಿನ್ನ ಚಂಚಲ ಕಠಿಣನ | ಪುರಂದರವಿಠಲ | Ena Bedali Ninna | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು  Kruti: Shree Purandara dasaru  ಏನ ಬೇಡಲಿ ನಿನ್ನ ಚಂಚಲ ಕಠಿಣನ ||ಪ|| ಮೌನದಿಂದಲಿ ಮೋರೆ ಓರೆ ಮಾಡುವನ ||ಅ.ಪ|| ಕರುಳ ಹರಕನ ಬೇಡಲೇನು ತಿರಿದು ತಿಂಬುವನ ಕೊರಳಗೊಯ್ಯ ಅರಣ್ಯ ತಿರುಗುವವ ತಿರುಗಿ ಬೆಣ್ಣೆ ಕದ್ದು ತಿಂಬುವನ ||೧|| ವಾಸಶೂನ್ಯನ ಕೈಯ್ಯ ಕತ್ತಿ ಬೀಸಿ ಸವರುವನ ಕಾಸು ವೀಸವನೆಲ್ಲ ಮೀಸಲು ಮಾಡಿಟ್ಟು ಕೇಸಕ್ಕಿ ಉಂಡುಂಡು ವಾಸ ಮಾಡುವನ ||೨|| ಬೇಡಿದರೆ ನೀಡಿ ಅವರ ಮೋರೆ ಬಿಡೆಯವನು ನೋಡಿ ಬಡವರ ಕರೆತಂದು ಅಡಿಗೆ ಸೇರಿಸಿಕೊಂಡ ಒಡೆಯ ಶ್ರೀಪುರಂದರ ವಿಠಲ ದೊರೆಯೆ ||೩|| Ena bEDali ninna caMcala kaThiNana ||p|| mounadiMdali mOre Ore maaDuvana ||a.p|| karuLa harakana bEDalEnu tiridu tiMbuvana koraLagoyya araNya tiruguvava tirugi beNNe kaddu tiMbuvana ||1|| vaasashUnyana kaiyya katti bIsi savaruvana kaasu vIsavanella mIsalu maaDiTTu kEsakki uMDuMDu vaasa maaDuvana ||2|| bEDidare nIDi avara mOre biDeyavanu nODi baDavara karetaMdu aDige sErisikoMDa oDeya shrIpuraMdara viThala doreye ||3||  

ಆವ ರೋಗವು ಎನಗೆ | ಗೋಪಾಲ ವಿಠಲ | Ava Rogavu Enage Deva Dhanvantri | Gopala Vithala

Image
ಸಾಹಿತ್ಯ : ಗೋಪಾಲ ದಾಸರು Kruti: Gopala Dasaru  ಆವ ರೋಗವು ಎನಗೆ ದೇವ ಧನ್ವಂತ್ರಿ|  ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ |ಪ|    ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು|  ಹರಿ ಕೀರ್ತನೆಯು ಕೇಳಿಸದು ಕಿವಿಗೆ|  ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ|  ಹರಿ ಪ್ರಸಾದ ಜಿಹ್ವೆಗೆ ಸವಿಯಾಗದಯ್ಯ |೧|    ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು|  ಗುರುಹಿರಿಯರಂಘ್ರಿಗೆ ಶಿರ ಬಾಗದು|  ಹರಿಯ ನಿರ್ಮಾಲ್ಯವಾ ಘ್ರಾಣಿಸದು ನಾಸಿಕವು|  ಹರಿಯಾತ್ರೆಗಳಿಗೆನ್ನ ಕಾಲೇಳವಯ್ಯಾ |೨|    ಅನಾಥ ಬಂಧು ಗೋಪಾಲ ವಿಠಲರೇಯ|  ಎನ್ನ ಭಾಗದ ವೈದ್ಯ ನೀನೆಯಾದಿ|  ಅನಾದಿ ಕಾಲದ ಭವ ರೋಗ ಕಳೆಯಯ್ಯಾ|  ನಾನೆಂದಿಗು ಮರೆಯೆ ನೀ ಮಡಿದುಪಕಾರ |೩|  Ava rOgavu enage dEva dhanvaMtri|  sAvadhAnadi enna kai piDidu nODayya |pa|    harimUrtigaLu enna kaMgaLige kANisavu|  hari kIrtaneyu kELisadu kivige|  hari maMtra stOtra bAradu enna nAligege|  hari prasAda jihvege saviyAgadayya |1|    haripAda sEvegenna hastagaLu calisavu|  guruhiriyaraMGrige Sira bAgadu|  hariya nirmAlyavA GrANisadu nAsikavu|...

ಟೀಕಾಚಾರ್ಯರ ಪಾದ | ವಿಜಯ ವಿಠಲ | Teekacharyara Paada | Vijaya Vithala

Image
ಸಾಹಿತ್ಯ : ವಿಜಯ ದಾಸರು  Kruti: Vijaya Dasaru ಟೀಕಾಚಾರ್ಯರ ಪಾದ ಸೋಕಿದ ಕೊನೆಧೂಳು ತಾಕಿದ ಮನುಜರಿಗೆ  ||ಪ|| ಕಾಕುಗೊಳಿಸುವ ಅನೇಕ ಪಾಪಂಗಳ  ಬೀರಿ ಬಿಸಾಡುವ ಸಾಕುವ ಸುಜನರ  ||ಅ.ಪ|| ಮಧ್ವ ಮತವೆಂಬ ದುಗ್ಧಾಬ್ಧಿಯೊಳು ಉದ್ಭವಿಸಿದ ಚಂದ್ರನೋ | ಅದ್ವೈತ ವಿಪಿನ ಭೇದನ ಕುಠಾರ ವಿದ್ಯಾರಣ್ಯನ  ಗರ್ವಕೆ ಪರಿಹಾರ ||೧|| ತತ್ವವನುಡಿಸಲು ತತ್ವಸುಧಾ ಭಾಷ್ಯ ವಿಸ್ತರಿಸಿದ ಚಂದ್ರನೋ | ಚಿತ್ತವಿಟ್ಟು ಟೀಕ  ಮಾಡಿದ ಸಂಭ್ರಮದಿ ಸುತ್ತೇಳು ಜಗಕೆಲ್ಲ ಪ್ರಕಟಿಸಿ ಮೆರೆದಂತ  ||೨|| ಜ ಎಂದು ನುಡಿಯಲು ಜಯಶೀಲನಾಗುವ ಯ ಎಂದು ನುಡಿಯಲು ಯುಮನಂಜುವ | ತೀ ಎಂದು ನುಡಿಯಲು ತಿಮಿರ ಪಾತಕ ಹಾನಿ  ಥ  ಎಂದು ನುಡಿಯಲು ತಾಪತ್ರಯ ಪರಿಹಾರ ||೩|| ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ ಬಿಂದು ಮಾತ್ರದಿ ನೆನೆಯೇ | ಮಂದ ಮತಿಗಾದರೂ ಅಜ್ಞಾನ ನಾಶನ ಸಂದೇಹವಿಲ್ಲವಯ್ಯ  ಸ್ಮರಣೆ ಮಾಡಿದ ಮೇಲೆ ||೪|| ಯೋಗಿ ಅಕ್ಷೋಭ್ಯರ ಕರಕಮಲಸಂಜಾತ ಭಾಗವತರ ಪ್ರೀಯನೆ | ಯೋಗಿಗಳರಸನೇ ಮಳಖೇಡ ನಿವಾಸ  ಕಾಗಿಣಿ ತಟವಾಸ ವಿಜಯವಿಠ್ಠಲ ದಾಸ ||೫|| Tikaachaaryara paada sokida konedhuLu thaakida manujarige ||p|| kaakugoLisuva aneka paapamgaLa biri bisaaDuva saakuva sujanara ||a.p|| madhva mathavemba dugdhaabdhiyoLu udbhavisida chamdrano | advaitha vipina bhedana kuThaa...

ಅಪಮೃತ್ಯು ಪರಿಹರಿಸೋ ಅನಿಲದೇವಾ | ಜಗನ್ನಾಥವಿಠಲ | Apamrutyu parihariso | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು  Kruti: Sri Jagannatha Dasaru  ಅಪಮೃತ್ಯು ಪರಿಹರಿಸೋ ಅನಿಲದೇವಾ ||ಪ||  ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ ||ಅ.ಪ||    ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ  ಅನುದಿನವು ಎಮ್ಮನೂದಾಸೀನ ಮಾಡುವುದು ಅನುಚಿತವು ಜಗದಿ ಸಜ್ಜನ ಶಿಖಾಮಣಿಯೇ ||೧||    ಜ್ಞಾನಾಯುರೂಪಕನು ನೀನಹುದು ವಾಣಿ ಪಂಚಾನನಾಧ್ಯಮರರಿಗೆ ಪ್ರಾಣದೇವ ದೀನವತ್ಸಲನೆಂದು ನಾ ನಿನ್ನ ಮೊರೆಹೊಕ್ಕೆ ದಾನವಾರಣ್ಯ ಕೃಶಾನು ಸರ್ವದಯೆನ್ನ ||೨||    ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವಲ್ಲ ಸಾಧು ಪ್ರಿಯನೆ  ವೇದವಾದೋದಿತ ಜಗನ್ನಾಥ ವಿಠಲನ ಪಾದ ಭಜನೆಯನಿತ್ತು ಮೋದ ಕೊಡು ಸತತ ||೩|| apamRutyu pariharisO aniladEvA ||pa||  kRupaNavatsalane kAvara kANe jagadoLage ||a.p||    ninaginnu samarAda animitta bAMdhavaru enagilla AvAva janumadalli  anudinavu emmanUdAsIna mADuvudu anucitavu jagadi sajjana SiKAmaNiyE ||1||    JnaanAyurUpakanu nInahudu vANi paMcAnanAdhyamararige prANadEva dInavatsalaneMdu nA ninna morehokke dAnavAraNya kRuSAnu sarvadayenna ||2||    sAdhana SarIravidu nI dayadi...

ಆಂಜನೇಯನೆ ಪಾಲಿಸೊ | ಗುರು ಗೋಪಾಲ ವಿಠಲ | Anjaneyane Paliso | Guru Gopala Vithala

Image
ಸಾಹಿತ್ಯ : ಶ್ರೀ ಗುರುಗೋಪಾಲ ದಾಸರು  Kruti: Sri  Guru Gopala Dasaru ಆಂಜನೇಯನೆ ಪಾಲಿಸೊ ನಿನ್ನ ಶ್ರೀಪಾದಕಂಜ ಮನದಲ್ಲಿ ತೋರಿಸೊ ||ಪ|| ಸಂಜೀವಧರನೇ ಪ್ರಭಂಜನ ತನಯ ಧನಂಜಯ ಕೇತನ ಮಂಜುಳ ಮೂರುತಿ || ಅ.ಪ. || ರಾಮಪಾದಾಂಬುಜ ಭೃಂಗಾ ಸಕಲ ಸದ್ಗುಣ ಧಾಮಾ ಸಜ್ಜನಾಂತರಂಗಾ ಭೂಮಿಸುತೆಯ ಪರಿಣಾಮ ತಿಳಿದು ಆರಾಮ  ಮುರಿದು ಖಳಸ್ತೋಮ ಭಂಜಿಸಿದ ನಿಸ್ಸೀಮ ಬಲಧಾಮ ರಿಪು ಭೀಮ ಋಜುಸಾರ್ವಭೌಮ || ೧ || ಲಕ್ಷ್ಮಣ ಪ್ರಾಣಾಧಾರಾ ದಶಕಂದರ ವಕ್ಷಮರ್ದನ ಅತಿ ಶೂರಾ ಅಕ್ಷಾರಾತಿಯೆ ರಕ್ಷೋನಿಕರಧ್ಯಕ್ಷರ ಮಹ ಮದ ಶಿಕ್ಷಣೆಯು ಕೃತ ದೀಕ್ಷಾ  ಬಲು ದಕ್ಷ ರುಧಿರಾಕ್ಷ ಕೊಡು ನಿನ್ನ ಪರೋಕ್ಷ || ೨ || ಉದಿತ ಭಾಸ್ಕರ ಪ್ರಭಾವ ಅಚ್ಯುತಾನಂತ ಸದನ ಸದಯ ಸ್ವಭಾವ ತ್ರಿದಶರ ಗುರು ಗೋಪಾಲವಿಠಲನ ಪದ ಭಜಕರೊಳಗೆ ಮೊದಲಿಗ ನೀನೇ ಪವನ  ಮಾಧವನ ಗುಣಸ್ತವನ ಮಾಡಿಸು ನಿನ್ನವನ || ೩ || AMjanEyane paaliso ninna shrIpaadakaMja manadalli tOriso ||pa|| saMjIvadharanE prabhaMjana tanaya dhanaMjaya kEtana maMjuLa mUruti || a.pa. || raamapaadaaMbuja bhRuMgaa sakala sadguNa dhaamaa sajjanaaMtaraMgaa bhUmisuteya pariNaama tiLidu Araama  muridu KaLastOma bhaMjisida nissIma baladhaama ripu bhIma Rujusaarvabhouma || 1 || lakShmaNa praaNaadhaaraa dashakaMdara vak...

ಶರಣು ಬೆನಕನೆ ಕನಕರೂಪನೆ | ಪುರಂದರ ವಿಠಲ | Sharanu Benakane | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara Dasaru ಶರಣು ಬೆನಕನೆ ಕನಕರೂಪನೆ| ಕಾಮಿನಿ ಸಂಗದೂರನೆ ||ಪ|| ಶರಣು ಸಾಂಬನ ಪ್ರೀತಿ ಪುತ್ರನೆ | ಶರಣು ಜನರಿಗೆ ಮಿತ್ರನೇ ||ಅ. ಪ|| ಏಕದಂತನೆ ಲೋಕಖ್ಯಾತನೆ | ಏಕವಾಕ್ಯ ಪ್ರವೀಣನೆ || ಏಕವಿಂಶತಿ ಪತ್ರ ಪೂಜಿತ | ಅನೇಕ ವಿಘ್ನ ವಿನಾಶಕ ||೧|| ಲಂಬಕರ್ಣನೆ ನಾಸಿಕಾಧರನೇ | ಗಾಂಭೀರ್ಯ ಇವ ಗುಣಸಾರನೇ || ಕಂಬು ಕಂಧರ ಇಂದು ಮೌಳಿಜ | ಚಂದನ ಚರ್ಚಿತಾಂಗನೇ ||೨|| ಚತುರ್ಭಾಹು ಚರಣ ತೊಡಲನೆ | ಚತುರ ಆಯುಧ ಧಾರನೆ || ಮತಿಯವಂತನೆ ಮಲಿನ ಜನಿತನೆ | ಅತಿಯ ಮಧುರ ಹಾರನೇ ||೩|| ವಕ್ರತುಂಡನೇ ಮಹಾಕಾಯನೆ | ಅರ್ಕ ಕೋಟಿ ಪ್ರದೀಪನೇ || ಚಕ್ರಧರ ಹರಬ್ರಹ್ಮ ಪೂಜಿತ | ರಕ್ತ ವಸ್ತ್ರಧಾರನೆ ||೪|| ಮೂಷಿಕಾಸನ ಶೇಷಭೂಷಣ | ಅಶೇಷ ವಿಘ್ನ ವಿನಾಯಕ || ದಾಸ ಪುರಂದರ ವಿಠಲೇಶನ | ಈಶಗುಣಗಳ ಪೊಗಳುವೆ ||೫|| sharaNu benakane kanakarupane| kaamini samgadurane ||p|| sharaNu saambana prithi puthrane | sharaNu janarige mithrane ||a. p|| ekadamthane lokakhyaathane | ekavaakya praviNane || ekavimshathi pathra pujitha | aneka vighna vinaashaka ||1|| lambakarNane naasikaadharane | gaambhirya iva guNasaarane || kambu kamdhara iamdu mauLija | chamdana charchithaamgane ||2|| chathurbhaahu charaNa thoDalane | chat...

ಸೇವಕನೆಲೋ ನಾನು ನಿನ್ನಯ ಪಾದ | ಹಯವದನ | Sevakanelo Nanu | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಸೇವಕನೆಲೋ ನಾನು ನಿನ್ನಯ ಪಾದ | ಸೇವೆ ನೀಡೆಲೋ ನೀನು ||ಪ|| ಸೇವಕನೆಲೋ ನಾನು ಸೇವೆ ನೀಡೆಲೋನೀನು ಕಾವುದೇನೆಲೋ ಶ್ರೀ ರಘುವರ ರಾವಣಾಂತಕ ರಕ್ಷಿಸೆನ್ನನು | ಗೋವರ್ಧನ ಧರ ದೇವ - ಗೋವುಗಳ ಕಾವ ಶ್ರೀ ಮಹಾನುಭಾವ ವರಗಳ ನೀವ ದೇವಾ | ಶ್ರೀವಲ್ಲಭ ದಯ ಮಾಡೆನ್ನೊಳು ಈ ವೇಳೆಗೆ ಇಂದಿರಾ ರಮಣ ||ಅ. ಪ|| ರಾಮ ದಶರಥ ನಂದನಾ  ರಘು ಕುಲಾಂಬುದಿ ಸೋಮ ಸುಂದರ ವದನಾ | ವಾಮನ ಪರಿಪೂರ್ಣ ಕಾಮ ಕೌಸಲ್ಯರಾಮ ಸ್ವಾಮಿ ಶ್ರೀರಂಗ ಧಾಮ ದೈತ್ಯವಿರಾಮ ಶ್ರೀ ಮದಾನಂತ ನಾಮ | ಭೀಮ - ಮುನಿಜನ ಸ್ತೋಮ - ರಮ್ಯಗುಣ ಧಾಮ - ರಣರಂಗ ಭೀಮ - ಕೋಮಲ ಶ್ಯಾಮ - ರಾಮ | ಸಾಮಜ ವರದಾನಂದದಿ ನೀ ಕಾಮಿತ ಫಲ ಕರುಣಿಸಿ ಕಾಯೋ ||೧|| ಶಂಕರ ಸುರ ಸೇವಿತಾ ಶೇಷಾ - ಗರುಡಾ - ಲಂಕರ ಮಣಿ ಭೂಷಿತಾ | ಪಂಕಜ ನಯನ ಮೀನಾಂಕ ಜನಕ - ಪಾದ ಪಂಕಜಾಸನ ವಿನುತ ತಿರುಪತಿ ವೆಂಕಟ ಬಿರುದಾಂಕ ಜಯ ಜಯ | ಶಂಖ - ಚಕ್ರಗದಾ ಪಂಕಜಧರ ಅಕಳಂಕ - ಚರಿತಾ ಟಂಕಾ ಗೊಲಿದ ನಿಶ್ಯಂಕಾ | ಲಂಕಾದಿಪಲಾಲಿತ ರಘುಪತಿ | ಕಿಂಕರರಿಗೆ ಕಿಂಕರ ನಾನೆಲೋ ||೨|| ಮಂಧರಧರ ಮಾಧವಾ | ಮಧುಸೂಧನ ನಂದ ಸುಂದರ ವಿಗ್ರಹ | ಬಿಂಧು ಮಾಧವ ಗೋವಿಂದ ಗೋಕುಲಾನಂದ | ವಂದಿತಾಮರ ವೃಂದ ವೇದವ ತಂದ ತುರುಗವನೇರಿ ಬಂದಾ | ವೃಂದಾವನದೊಳಗಿಂದ - ಯಶೋದೆಯ ಕಂದ ಹರಿ ಗೋವಿಂದ - ಶೇಷಗಿರಿಯಲಿ ನಿಂದ | ಮಂದಾಕಿನಿ ದ್ರೌಪದಿ ದ್ರುವ ಗೊಲಿ ದಂದದಿ ಎನಗೊಲಿ ಹಯವದನ ||೩||...

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು | ಪುರಂದರ ವಿಠಲ | Rama Embuva Eradu | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara dasaru  ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ ||ಅ. ಪ|| 'ರಾ' ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ | ಆಯಸ್ತಿ ಗತವಾದ ಅತಿ ಪಾಪವನ್ನು|| ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ| ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧|| ರಾಮ....  ಶ್ರೀರಾಮ....ರಾಮ.... ರಘುರಾಮ....  ಮತ್ತೆ 'ಮಾ' ಎಂದೆನಲು ಹೊರ ಬಿದ್ದ ಪಾಪಗಳು| ಒತ್ತಿ ಒಳಗೆ ಪೋಗದಂತೆ ಕವಾಟವಾಗಿ || ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ| ಭಕ್ತವರ ಹನುಮಂತನು ಓಬ್ಬ ತಾ ಬಲ್ಲ ||೨|| ರಾಮ....ರಾಮ.... ರಾಮ.... ಶ್ರೀರಾಮ....ಶ್ರೀರಾಮ....ಶ್ರೀರಾಮ.... ಧರೆಯೊಳೀ ನಾಮಕ್ಕೆ ಸರಿ ಮಿಗಿಲು ಇಲ್ಲೆಂದು| ಪರಮ ವೇದಗಳೆಲ್ಲ ಪೊಗಳುತಿಹವು || ಸಿರಿಯರಸ ಪುರಂದರ ವಿಠಲನ ನಾಮವನು| ಶಿವಕಾಶಿಯೊಳಗಿದ್ದ ಶಿವನು ತಾ ಬಲ್ಲ ||೩|| ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ|  ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೆ || raama eambuva eraDu akshharada mahimeyanu paamararu thaavenu ballarayya ||a. p|| 'raa' eamda maathradoLu raktha maamsadoLidda | aayasthi gathavaada athi paapavannu|| maayavanu maaDi maharaaya mukthiya koDuv| daayavanu vaalmiki muniraaya balla ||1|| raam.... shriraam....raam.... raghura...

ಈಶಾ ಕೈಲಾಸವಾಸಾ | ವಿಜಯ ವಿಠಲ | Isha Kailasavasa | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಈಶಾ ಕೈಲಾಸವಾಸಾ ||ಪ|| ಕಾಶಿನಗರಾಧೀಶ ಶೇಷಭೂಷಣ ಗಿರೀಶ, ವಿಶ್ವೇಶ ಚಿತ್ತವಾಸ ||ಅ. ಪ|| ಶಿವಸಿದ್ಧ ಸಾದ್ಯ ಸೇವ್ಯಾ | ಭವವ ನಾಶವ ದಿವ್ಯ |  ಭವಮೂರ್ತಿ ಕೀರ್ತಿ ಭವ್ಯಾ, ಕವಿ ಪ್ರಿಯ ಜ್ಞಾನಾ ದ್ರವ್ಯಾ | ಹಾ ಶಿವ ನಮೋ ನಮಃ ಶಿವ, ತವ ಚರಣ ನೋಡುವ, ಪವಿತ್ರ ಚಿತ್ತವ ಕೊಡು, ಧವಳ ಗಂಗಾಧರನೇ ||೧|| ಸತಿನಾಥ ಭೂತ ಪ್ರೀತ, ಸತತ ಸದ್ಗುಣ ವ್ರಾತ, ಪತಿತ ಪಾವನ ತ್ರಾತ| ಕೃತುವೈ ಪದ್ಮ ಜಾತಾ, | ಹಾ ಕ್ಷಿತಿಯೊಳು ನೀಲಲೋಹಿತಾ, ನೀನೇ ಗುರುವೆಂದು, ತುತಿಪ ಗತಿಗೆ, ರಘುಪತಿ, ನಾಮ ಎನಗೀಯೋ ||೨|| ತ್ರಯನೇತ್ರ ಚಿತ್ರಗಾತ್ರ, ನಯ, ನಮಿಪರ ಮಿತ್ರ,  ಜಯ ಜಯಾ ಮರ ಸ್ತೋತ್ರ, ದಯ ಮಾಡೋ ಪುಣ್ಯ ಪಾತ್ರಾ, ಹಾ ಭಯ ನಿವಾರಣ ಸಿರಿ | ವಿಜಯ ವಿಠಲನ, ಭಕುತಿಯ ಕೊಡು, ಅತಿ ಶಯದಿ, ಪಿನಾಕೀಶ ||೩|| ishaa kailaasavaasaa ||p|| kaashinagaraadhisha sheshhabhushhaNa girish, vishvesha chiththavaasa ||a. p|| shivasiddha saadya sevyaa |bhavava naashava divya | bhavamurthi kirthi bhavyaa, kavi priya jnjaanaa dravyaa | haa shiva namo namh shiv, thava charaNa noDuv, pavithra chiththava koDu, dhavaLa gamgaadharane ||1|| sathinaathha bhutha prith, sathatha sadguNa vraath, pathitha paavana thraath| krrith...

ಇದನೆ ಬೇಡುವೆ, ರಾಘವೇಂದ್ರ ಗುರುರಾಯ | ಭೂಪತಿ ವಿಠಲ | Idane Beduve Raghavendra | Bhupati Vithala

Image
ಸಾಹಿತ್ಯ : ಶ್ರೀ ಭೂಪತಿ ವಿಠಲ ದಾಸರು Kruti:Sri Bhupati Vithlala Dasaru ಇದನೆ ಬೇಡುವೆ, ರಾಘವೇಂದ್ರ ಗುರುರಾಯ | ಸದಮಲಂತಃ ಕರಣ, ದೃಡ ಭಕುತಿ ಜ್ಞಾನ ||ಪ|| ನಿನ್ನ ಸೇವೆಯು ಬೇಕು, ಅನ್ಯರಂಬಲ ಬೇಡ ನಿನ್ನ ರಘುಪತಿಯ, ಸಂತತ ಸ್ಮರಣೆ ಬೇಕು ||೧|| ನಿನ್ನ ನಿಜದಾಸರ, ದಾಸ್ಯವನು ಕೊಡಬೇಕು ನನ್ನದೆಂಬಹಂಕಾರ,ವನೆ ಬಿಡಿಸಬೇಕು ||೨|| ನಿನ್ನ ನಿಜ ಭಕ್ತರ, ಸಹವಾಸವಿರಬೇಕು ನಿನ್ನ ದ್ವೇಷಿಗಳಿಂದ, ದೂರಿರಿಸಬೇಕು ||೩|| ನಿನ್ನ ಹಸ್ತೋದಕದ, ಅಮೃತಾನವನು ಉಣಿಸಿ, ನಿನ್ನ ಪಾದೋದಕವ, ನೀ ಕುಡಿಸಬೇಕು ||೪|| ಮಧ್ವ ಮತ, ಸಿದ್ಧಾಂತ, ಮನನ ಮಾಡಿಸಬೇಕು, ಶುದ್ಧ ತಾತ್ಪರ್ಯದ, ಸುಧೆಯುಣಿಸಬೇಕು ||೫|| ಕ್ಷುದ್ರವಾದ ವಿಚಾರ, ದುರ್ಬುದ್ಧಿ ಬರದಂತೆ | ತಿದ್ದಿ ಭೂಪತಿ ವಿಠಲನ, ತೋರಬೇಕು ||೬|| idane beDuve, raaghavemdra gururaaya | sadamalamthh karaN, drriDa bhakuthi jnjaana ||p|| ninna seveyu beku, anyarambala beDa ninna raghupathiy, samthatha smaraNe beku ||1|| ninna nijadaasar, daasyavanu koDabeku nannadembahamkaar,vane biDisabeku ||2|| ninna nija bhakthar, sahavaasavirabeku ninna dveshhigaLimd, duririsabeku ||3|| ninna hasthodakad, amrrithaanavanu uNisi, ninna paadodakav, ni kuDisabeku ||4|| madhva math, siddhaamth, manana maaDisabeku...

ವೇಣಿ ಮಾಧವನ ತೋರಿಸೆ ಜಾಣೆ | ಹಯವದನ | Veni Madhavana Torise Jaane | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ ||ಪ|| ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ ||ಅ. ಪ|| ಬಂದೆನೆ ಬಹಳ ದೂರದಿ ಭವಸಾಗರತರಣಿ ನಿಂದೆನೆ ನಿನ್ನ ತೀರದಿ ಒಂದುಗಳಿಗೆ ಹರಿ ಅಗಲಿ ನಾನಿರಲಾರೆ ಮಂದಗಮನೆ ಎನ್ನ ಮುಂದಕೆ ಕರೆಯೆ ||೧|| ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು ಕರುಣದಿಂದೆನ್ನ ಪೊರೆಯೆ ಸ್ಮರಣೆ ಮಾತ್ರದಿ ಭವತಾಪವ ಹರಿಸುವ ಸ್ಮರನ ಪಿತ ಮುರಹರನ ಕರುಣದಿ ||೨|| ಸುಜನರಿಗೆಲ್ಲಾಧಾರಳೆ ಸುಖಶೀಲೆ ಕೇಳೆ ಕುಜನ ಸಂಗವನು ಕೀಳೆ ನಿಜಪದವಿಯನೀವ ಹಯವದನನ ಪಾದ ವಾರಿಜ ತೋರಿಸೆ ಮದಗಜಗಮನೆ ||೩|| veNi maadhavana thorise jaaNe thriveNi kaaNade nillalaarene ||p||  kaaNutha bhakthara karuNadi salahuva jaaNe thriveNi saare sukhavaaNi ||a. p||  bamdene bahaLa duradi bhavasaagaratharaNi nimdene ninna thiradi  oamdugaLige hari agali naaniralaare mamdagamane enna mumdake kareye ||೧||  sharaNaagathara paalipudu tharaLe ninna birudu karuNadimdenna poreye  smaraNe maathradi bhavathaapava harisuva smarana pitha muraharana karuNadi ||೨||  sujanarigellaadhaaraLe sukh...

ಸಿಕ್ಕಿದನಲ್ಲೆ ಯಾದವರರಸಿಲ್ಲೆ | ಹಯವದನ | Sikkidanalle Yadava | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಸಿಕ್ಕಿದನಲ್ಲೆ ಯಾದವರರಸಿಲ್ಲೆ ||ಪ|| ಸಿಕ್ಕಿದನಲ್ಲೇ ದಕ್ಕಿದನಲ್ಲೆ  ||ಅ. ಪ|| ಗೋಪಿಯ ಕಂದನೆ ಬೆಣ್ಣೆಯ ತಿಂದನೆ ಪೂತನಿಯ ಕೊಂದನೆ ಮಧುರೆಗೆ ಬಂದನೆ ||೧|| ಮಧವನಿವನೇ ವೇದಕೆ ಸಿಲುಕನೆ  ಸಾಧುಗಳರಸನೆ ಸಜ್ಜನ ಪೋಷನೆ ||೨|| ಜಾಣರ ಜಾಣನೆ ಗಾನಕೆ ಪ್ರೀಯನೆ ಮುನಿಗಳ ವಂದ್ಯನೆ ಮನ್ಮಥಪಿತನೆ ||೩|| ಕಾಮಿತನೀವೋನೆ ಭಾಮಾಪ್ರೀಯನೆ ನೇಮದಿ ಭಜಿಪರಾ ಸದನಕ್ಕೆ ಬರುವನೆ ||೪|| ವೇದವ ತಂದನೆ ಗಿರಿಯ ಪೊತ್ತನೆ ಬೇರನು ತಿಂದನೆ ಕಂಬದಿ ಬಂದನೆ ||೫|| ದಾನವ ಬೇಡ್ದನೆ ಕ್ಷತ್ರೇರ ಕೊಂದನೆ ವನಕೆ ಪೋದನೆ ದುರುಳರ ಕೊಂದನೆ ||೬|| ಕಾಳೀಯ ಭಂಜನೆ ಬತ್ತಲೆ ನಿಂದನೆ ಹಯವನೇರ್ದನೆ ಹಯವದನನೆ ||೭|| sikkidanalle yaadavararasille ||p||  sikkidanalle dakkidanalle ||a. p||  gopiya kamdane beNNeya thimdane  puthaniya komdane madhurege bamdane ||೧||  madhavanivane vedake silukane  saadhugaLarasane sajjana poshhane ||೨||  jaaNara jaaNane gaanake priyane  munigaLa vamdyane manmathhapithane ||೩||  kaamithanivone bhaamaapriyane  nemadi bhajiparaa sadanakke baruvane ||೪||  vedava thamdane giriya poththane  b...

ಕಾವುದೆಮ್ಮನು ಜಗವ ಕಾವ ಕರುಣಿಯೆ | ಹಯವದನ | Kavudemmanu Jagava | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕಾವುದೆಮ್ಮನು ಜಗವ ಕಾವ ಕರುಣಿಯೆ ||ಪ|| ಈವುದೆಮಗೆ ಸಕಲಸುಖವ ದೇವ ಲಕುಮಿನಾರಾಯಣ ||ಅ. ಪ|| ಕಮಲಕರ್ಣಿಕಾ ಮಧ್ಯದಲ್ಲಿ ವಿಮಲ ವಿಹಂಗಪತಿಯ ಶಿರದಿ ಕಮಲಭವನು ಬಿಡದೆ ಪೂಜಿಪ ಅಮರಕುಲ ಲಲಾಮ ವಿಭುವೆ ||೧|| ಮಧ್ವಮುನಿಯ ಕರಗಳೆಂಬೊ ಪದುಮಗಳಿಂದ ಪೂಜಿತ ಚರಣ ಗೆದ್ದು ಕುಜನತತಿಯ ಸುಜನರುದ್ಧರಿಸುವ ಸುಗುಣನಿಧಿಯೆ ||೨|| ಶಂಖಚಕ್ರಗಧಾಪದುಮ ಅಂಕೆಗಳಿಂದ ಶೋಭಿತ ಕರ ಪಂಕಜಾಕ್ಷ ಪಯೋಧಿಶಯನ ಶಂಕೆಯೆಲ್ಲದ ಹಯವದನ ||೩|| kaavudemmanu jagava kaava karuNiye ||p||  ivudemage sakalasukhava deva lakuminaaraayaNa ||a. p||  kamalakarNikaa madhyadalli vimala vihamgapathiya shiradi  kamalabhavanu biDade pujipa amarakula lalaama vibhuve ||೧||  madhvamuniya karagaLembo padumagaLimda pujitha charaNa  geddu kujanathathiya sujanaruddharisuva suguNanidhiye ||೨||  shamkhachakragadhaapaduma aamkegaLimda shobhitha kara  pamkajaakshha payodhishayana shamkeyellada hayavadana ||೩||

ಎನ್ನ ಮನದ ಡೊಂಕ ತಿದ್ದಯ್ಯ | ಹಯವದನ | Enna Manada Donka | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎನ್ನ ಮನದ ಡೊಂಕ ತಿದ್ದಯ್ಯ ಗೋಪಾಲಕೃಷ್ಣ ||ಪ|| ಎನ್ನ ಮನದ ಡೊಂಕ ತಿದ್ದಿ ಮುನ್ನ ಮನ್ನಿಸದಿರೆ ತಿದ್ದಿ ಬನ್ನಪಡಲಾರೆ ಭವಾಬ್ಧಿಯನ್ನೆ ದಾಟಿಸೊ ಅಪಾರ ಮಹಿಮ ||ಅ. ಪ|| ಉದಯವಾದರೆ ಊಟದ ಚಿಂತೆ ಉಂಡಮೇಲೆ ಭೋಗದ ಚಿಂತೆ ಅದರಮೇಲೆ ಹದಿನಾಲ್ಕು ಲೋಕಂಗಳನೆ ಆಳ್ವ ಚಿಂತೆ ||೧|| ಸುಖವು ಬಂದರೆ ನಾನೆ ಸಮರ್ಥ ದುಃಖ ಬಂದರೆ ಹರಿಯು ಮಾಡ್ದ ರೊಕ್ಕ ಬಂದರೆ ನಾನೆ ಧನಿಕ ಸಿಕ್ಕಿಬಿದ್ದರೆ ಹರಿಯ ವ್ಯಾಪಾರ ||೨|| ತಿಳಿದು ತಿಳಿದು ಪತಂಗದ್ಹುಳವು ಕಿಚ್ಚಿನಲ್ಲಿ ಬೀಳೊಹಾಂಗೆ ಕಾಲಕಳೆದೆ ಮೂಕನಂತೆ ಮುದ್ದು ಹಯವದನನೆ ||೩|| enna manada Domka thiddayya gopaalakrrishhNa ||p||  enna manada Domka thiddi munna mannisadire thiddi  bannapaDalaare bhavaabdhiyanne daaTiso apaara mahima ||a. p||  udayavaadare uTada chimthe uamDamele bhogada chimthe  adaramele hadinaalku lokamgaLane aaLva chimthe ||೧||  sukhavu bamdare naane samarthha duhkha bamdare hariyu maaDda  rokka bamdare naane dhanika sikkibiddare hariya vyaapaara ||೨||  thiLidu thiLidu pathamgadhuLavu kichchinalli biLohaamge  kaalakaLede mukanamthe muddu hay...

ಕಂಜನಯನನ ಕಂಡೆ ಕಾಮನಯ್ಯನ | ಹಯವದನ | Kanjanayanana Kande | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕಂಜನಯನನ ಕಂಡೆ ಕಾಮನಯ್ಯನ ||ಪ|| ಮಂಜುಗುಣಿಯೊಳಿಪ್ಪನ ತಿಮ್ಮಪ್ಪನ ||ಅ. ಪ|| ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟಂಬುಚಕ್ರವ ಕಟ್ಟಿದ ಕಠಾರಿಯಿಂದ ದುಷ್ಟ ಹುಡಿಗುಟ್ಟುವ ||೧|| ಚಕ್ರಶಂಖಧರನಾಗಿ ಕಕ್ಕಸರ ರಕ್ಕಸರ ಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ  ||೨|| ಆಗಮವೈರಿಯನು ಕೊಂದಾ ಹಯವದನನ್ನ ಈಗ ಮಾನಿಸರಿಗೆ ಸೌಭಾಗ್ಯವೀವ ದೇವನ ||೩|| kamjanayanana kamDe kaamanayyana ||p||  mamjuguNiyoLippana thimmappana ||a. p||  puTTa paavugeyoLmeTTi thoTTambuchakrava  kaTTida kaThaariyimda dushhTa huDiguTTuva ||೧||  chakrashamkhadharanaagi kakkasara rakkasara  shikshhisi shakramukhyara akkarimda rakshhisuva ||೨||  aagamavairiyanu komdaa hayavadananna  iga maanisarige saubhaagyaviva devana ||೩||

ಪಾಥೇಯವ ಕಟ್ಟಿರೋ ವೈಕುಂಠಕೆ | ಹಯವದನ | Patheyava Kattiro | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಪಾಥೇಯವ ಕಟ್ಟಿರೋ ವೈಕುಂಠಕೆ ಪಯಣ ಸಮ್ಮತವಾದರೆ ||ಪ||  ಮಾತಾಪಿತರುಯೆಂಬೊ ಭಕ್ತಿ ಚಿತ್ರಾನ್ನವ ಪಾರ್ಥಸೂತನ ಪಾದಪದ್ಮಪತ್ರವ ಹಾಸಿ ||ಅ. ಪ|| ಹರಿಭಕ್ತಿಹರಿಗೋಲಿಂದ ಮೆಲ್ಲನೆ ನೀವು ವಿರಜಾನದಿಯ ದಾಟಿರೊ ಕರಜಾಗ್ರಗಳಿಂದ ಹಿರಣ್ಯಕನನು ಸೀಳಿದ ಪರವಾಸುದೇವನ ದರುಶನವಾಹೋದಯ್ಯ ||೧|| ಪ್ರಳಯದ್ಹಾವಳಿಯಿಲ್ಲವೊ ಪೇಳುವುದೇನು ಚಳಿ ಮಳೆ ಬಿಸಿಲಿಲ್ಲವೊ ಬೆಳಸು ಬಿತ್ತಿಲ್ಲದ ಬೇಕಾದ ಸಂಪತ್ತು ನಳಿನನಾಭನ ಪುರದೊಳಗೆ ನೆಲೆಸಿಹುದಯ್ಯ ||೨|| ಶುದ್ಧ ಸಾತ್ವಿಕ ಪುರವು ತಾಮಸರಿಗೆ ಪೊದ್ದಲಳವಲ್ಲವೊ ಆಧ್ಯಾತ್ಮ ಅರ್ಜುನಗೆ ನಿರ್ಧಾರ ಪೇಳಿದ ತದ್ಧಾಮ ಪರಮಂ ಮಮವೊಂಬೊ ಪುರವೊ ||೩|| ಕೂಗಳತೆಗೆ ಕೊಂಚವೊ ಹರಿಯಪುರ ನಾಗರಾಜನ ಸಾಕ್ಷಿಯೊ ನಾಗಶಯನನಲ್ಲಿ ನಮ್ಮ ಕಂಡರೆ ಹೋಗಬೇಡಿರೆಂದು ಹುಟ್ಟ ತಡೆವನೋ ||೪|| ಬರವೆಂಬ ಮಾತಿಲ್ಲವೋ ಒಂದುಕಾಸು ತೆರಿಗೆಯ ಕೊಡಬ್ಯಾಡಿರೊ  ಪರಮಕರುಣಿ ಹಯವದನ ವೈಕುಂಠದಿ ಸರುವಮಾನ್ಯವನಿತ್ತು ಶರಣರ ಪೊರೆವನು ||೫||    paathheyava kaTTiro vaikumThake payaNa sammathavaadare ||p||  maathaapitharuyembo bhakthi chithraannava  paarthhasuthana paadapadmapathrava haasi ||a. p||  haribhakthiharigolimda mellane nivu virajaanadiya daaTiro  karajaagragaLimda hiraN...

ನಾರಾಯಣ ನರಹರಿಯೆ | ಹಯವದನ | Narayana Narahariye | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣ ನರಹರಿಯೆ ||ಪ|| ನಾರಾಯಣ ನರಹರಿಯೆ ಹಯವದನ  ಸ್ವಾಮಿ ನೀ ಎನಗೆ ದಯವಾಗೊ ||ಅ.ಪ|| ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು ಆಗಮವ ತಂದು ಅಜಗಿತ್ತೆ ಆಗಮವ ತಂದು ಅಜಗಿತ್ತೆ ಹಯವದನ ಆದಿಮೂರುತಿಯೆ ದಯವಾಗೊ ||೧|| ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದೆ ಪ್ರೇಮದಿ ಸುರರಿಗಮೃತವ ಪ್ರೇಮದಿ ಅಮೃತವನಿಕ್ಕಿದ ಹಯವದನ ಸ್ವಾಮಿ ನೀ ಎನಗೆ ದಯವಾಗೊ ||೨|| ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು ರೂಢಿಯನೆಗಹಿ ಜಗಕಿತ್ತೆ ರೂಢಿಯನೆಗಹಿ ಜಗಕಿತ್ತೆ ಹಯವದನ ಪ್ರೌಢ ನೀ ಎನಗೆ ದಯವಾಗೊ ||೩|| ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ ಕುಶಲದಿಂ ಕರುಳಮಾಲೆಯ ಕುಶಲದಿಂ ಕರುಳಮಾಲೆಯ ಧರಿಸಿದ ಹಯವದನ  ಬಿಸಜಾಕ್ಷ ಎನಗೆ ದಯವಾಗೊ ||೪|| ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ ವ್ಯೋಮಕ್ಕೆ ಚರಣವ ನೀಡಿದೆ ವ್ಯೋಮಕ್ಕೆ ಚರಣವ ನೀಡಿದ ಹಯವದನ ವಾಮನ ಎನಗೆ ದಯವಾಗೊ ||೫|| ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ ಹಡೆದ ತಂದೆಯ ಮಾತು ಸಲಿಸಿದೆ ಹಡೆದ ತಂದೆಯ ಮಾತು ಸಲಿಸಿದ ಹಯವದನ ಒಡೆಯ ನೀ ಎನಗೆ  ದಯವಾಗೊ ||೬|| ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ ಭೂತ ರಾವಣನ ಮಡುಹಿದೆ ಭೂತ ರಾವಣನ ಮಡುಹಿದ ಹಯವದನ ಖ್ಯಾತ ನೀ ಎನಗೆ ದಯವಾಗೊ ||೭|| ಗೊಲ್ಲರೊಡನಾಡಿ ಬಲ್ಲಿದಕಂಸನ ಕೊಂದೆ ಮಲ್ಲರೊಡನಾಡಿ ಮಡುಹಿದೆ ಮಲ್ಲರೊಡನಾಡಿ ಮಡುಹಿದ ಹಯವದನ ಫುಲ್ಲಾಕ...

ಶ್ರೀಶ ನೀನಹುದೋ ಶೇಷಾಚಲವಾಸ | ಹಯವದನ | Shrisha Neenahudo | Sri Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು, (ಹಯವದನ) Kruti:Sri Vadirajaru (Hayavadana) ಶ್ರೀಶ  ನೀನಹುದೋ ಶೇಷಾಚಲವಾಸ ನೀನಹುದೊ ||ಪ|| ಶೇಷಶಯನ ಸುರೇಶವಂದಿತ ಶೇಷಜನರನು ಪಾಲಿಸಿ ಬಡ್ಡಿ - ಕಾಸು ಸೇರಿಸಿ ಗಂಟುಕಟ್ಟುವ ಕ್ಯಾಸಕ್ಕಿ ತಿಮ್ಮಪ್ಪ ನೀನೆ ||ಅ. ಪ|| ತಂದೆ ನೀನಹುದೊ ಕರುಣಾ-ಸಿಂಧು ನೀನಹುದೊ ಅಂದು ದ್ರುಪದನ ನಂದನೆಯ ಎಳೆ ತಂದು ಘಾಸಿಯ ಮಾಡುತಿರಲು ಮುಂದೆಬಂದು ಅಕ್ಷಯವೆಂದು ಸಲಹಿದ ಮಂದಹಾಸ ಮುಕುಂದನು ನೀನೆ ||೧|| ಧೀರ ನೀನಹುದೊ ಜಗದೋ-ದ್ಧಾರ ನೀನಹುದೊ ಬಾರಿ ಬಾರಿಗೆ ನಿನ್ನ ಪಾದ ಸು-ವಾರಿಜಂಗಳ ಸೇರಿದ ಭಕ್ತರ ಘೋರ ದುರಿತವ ದೂರಗೈಸುವ ಮಾರಜನಕ ಅಪಾರ ಮಹಿಮನೆ ||೨|| ಧನ್ಯ ನೀನಹುದೊ ಸುರಮುನಿ ಮಾನ್ಯ ನೀನಹುದೊ ಪನ್ನಗಾರಿವಾಹನ್ನ ಧರೆಯೊಳು ಇನ್ನು ನಿನಗೆದುರ್ಯಾರ ಕಾಣೆನೊ ಪ್ರ - ಸನ್ನನಾಗೆಲೊ ಬಿನ್ನಹ ಕೇಳು ಪ್ರ-ಸನ್ನ ವತ್ಸಲ ಶ್ರೀ ಹಯವದನ ||೩|| shrisha ninahudo sheshhaachalavaasa ninahudo ||p||  sheshhashayana sureshavamditha sheshhajanaranu paalisi baDDi -  kaasu serisi gamTukaTTuva kyaasakki thimmappa nine ||a. p||  thamde ninahudo karuNaa-simdhu ninahudo  aamdu drupadana namdaneya eLe thamdu ghaasiya maaDuthiralu  mumdebamdu akshhayavemdu salahida mamdahaasa mukumdanu nine ||೧||  dhira ninahudo ja...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru