ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಪಾರ್ವತಿ ಮತ್ತು ಲಕ್ಷ್ಮೀ ದೇವಿಯರ ಸಂವಾದ | ತರಳೆ ರನ್ನೆ | ಪುರಂದರ ವಿಠಲ | Tarale Ranne | Purandara Vithala



ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ತರಳೆ ರನ್ನೆ ಕಪ್ಪು ಮೈಯವನ್ಯಾತರ ಚೆಲುವನೇ?
ಕರಿಯಾ ಜಡೆಯ ಜೋಗಿಗಿಂತ ಉತ್ತಮನಲ್ಲವೇನೇ?

ಜಲಧಿಯೊಳು ವಾಸವೇನೇ ಮನೆಗಳಿಲ್ಲವೇ?
ಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೇ? || ೧ ||

ಮಂದರಗಿರಿಯ ಪೊತ್ತದು ಅದು ಏನು ಚೆಂದವೇ?
ಕಂದನ ಒಯ್ದು ಅಡವಿಯಲಿಡುವುದು ಯಾವ ನ್ಯಾಯವೇ? || ೨ ||

ಮಣ್ಣನು ಅಗಿದು ಬೇರು ಮೆದ್ದುದು ಏನು ಸ್ವಾದವೇ?
ತನ್ನ ಕರದಿ ಕಪಾಲ ಹಿಡಿದುದು ಯಾವ ನ್ಯಾಯವೇ? || ೩ ||

ಮುತ್ತಿನ ಹಾರ ಇರಲು ಕರುಳ ಮಾಲೆ ಧರಿಸುವರೇ?
ನಿತ್ಯ ರುಂಡಮಾಲೆ ಧರಿಸಿದುದು ಯಾವ ನ್ಯಾಯವೇ? || ೪ ||

ಗಿಡ್ಡನಾಗಿ ಬೆಳೆದು ಅಳೆದುದು ಯಾವ ನ್ಯಾಯವೇ?
ಗುಡ್ಡದ ಮಗಳ ತಂದೆಗೆ ಮುನಿದುದು ಯಾವ ನ್ಯಾಯವೇ? || ೫ ||

ಪಿತನ ಮಾತ ಕೇಳಿ ಮಾತೆಯ ಶಿರವನಳಿವರೇ?
ಶಿತಕಂಠನಾಗಿ ಇರುವುದು ಯಾವ ನ್ಯಾಯವೇ? || ೬ ||

ಕೋಡಗ ಕರಡಿ ಕಪಿಗಳ ಹಿಂಡು ಬಂಧು ಬಳಗವೇ?
ಕೂಡಿ ಬಂದ ಭೂತ ಬಳಗ ಜ್ಞಾತಿ ಸಂಬಂಧವೇ? || ೭ ||

ಹಾವಿನ ಹೆಡೆಯ ತುಳಿವುದೇನೇ ಅಂಜಿಕಿಲ್ಲವೇ?
ಹಾವೇ ಮೈಗೆ ಸುತ್ತಿರಲು ಹ್ಯಾಂಗೆ ಜೀವಿಪನೇ? || ೮ ||

ಬತ್ತಲಿರುವರೇನು ಅವಗೆ ನಾಚಿಕಿಲ್ಲವೇ?
ಸತ್ತಗಜದ ಚರ್ಮ ಹೊದೆಯಲು ಹೇಸಿಕಿಲ್ಲವೇ? || ೯ ||

ಉತ್ತಮ ತೇಜಿ ಧರೆಯೊಳಿರಲು ಹದ್ದನೇರ್ವರೇ?
ಎತ್ತಿನ ಬೆನ್ನ ಏರಿದವರು ಬುದ್ಧಿವಂತರೇ? || ೧೦ ||

ಹರಿಹರರಿಗೆ ಸಾಮ್ಯವೇನೇ ಪೇಳೇ ರುಕ್ಮಿಣಿ
ಪುರಂದರ ವಿಠಲ ಸರ್ವೋತ್ತಮ ಕೇಳೇ ಪಾರ್ವತಿ || ೧೧ ||

taraLe ranne kappu maiyavanyaatara cheluvanE?
kariyaa jaDeya jOgigiMta uttamanallavEnE?

jaladhiyoLu vaasavEnE manegaLillavE?
lalane kELu kaaDigiMta lEsu allavE? || 1 ||

maMdaragiriya pottadu adu Enu cheMdavE?
kaMdana oydu aDaviyaliDuvudu yaava nyaayavE? || 2 ||

maNNanu agidu bEru meddudu Enu svaadavE?
tanna karadi kapaala hiDidudu yaava nyaayavE? || 3 ||

muttina haara iralu karuLa maale dharisuvarE?
nitya ruMDamaale dharisidudu yaava nyaayavE? || 4 ||

giDDanaagi beLedu aLedudu yaava nyaayavE?
guDDada magaLa taMdege munidudu yaava nyaayavE? || 5 ||

pitana maata kELi maateya shiravanaLivarE?
shitakaMThanaagi iruvudu yaava nyaayavE? || 6 ||

kODaga karaDi kapigaLa hiMDu baMdhu baLagavE?
kUDi baMda bhUta baLaga j~jaati saMbaMdhavE? || 7 ||

haavina heDeya tuLivudEnE aMjikillavE?
haavE maige suttiralu hyaaMge jIvipanE? || 8 ||

battaliruvarEnu avage naacikillavE?
sattagajada charma hodeyalu hEsikillavE? || 9 ||

uttama tEji dhareyoLiralu haddanErvarE?
ettina benna Eridavaru buddhivaMtarE? || 10 ||

harihararige saamyavEnE hELE rukmiNi
puraMdara viThala sarvOttama kELE paarvati || 11 ||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru