ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಾರಾಯಣನ ನೆನೆ ಮನವೇ | ಹಯವದನ | Narayanana Nene Manave | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನಾರಾಯಣನ ನೆನೆ ಮನವೇ ನಾರಾಯಣನ ನೆನೆ || ಪ ||
ನಾರಾಯಣನ ಮನ್ನಿಸು ವರ್ಣಿಸು| ಆರಾಧನೆಗಳ ಮಾಡುತ ಪಾಡುತ| 
ನೀರಾಜನದಿಂದ ಅರ್ಚಿಸು ಮೆಚ್ಚಿಸು ಪಾರಾಯಣ ಪ್ರಿಯನ || ಅಪ ||

ಲೋಕದಿ ವರಂ ವರಯೆ ಭದ್ರಂತೆ ಋತೇ ಕೈವಲ್ಯ ಮಹಾತ್ಮನಃ 
ಏಕಮೇವೇಶ್ವರ ತಸ್ಮಾದ್ ಭಗವಾನ್ ಶ್ರೀವಿಷ್ಣುರವ್ಯಯಃ ಎಂಬ|
ಈ ಕಲಿಯುಗದಿ ಬೇಕಾದ ಪುರಾಣದಿ ವಾಕು ವಿವೇಕವ ಮನದಿ ವಿಚಾರಿಸಿ|
ಸ್ವೀಕರಿಸು ವೈಷ್ಣವ ಮತವ ಜೀವ ನಿರಾಕರಿಸನ್ಯ ಮತವ ||೧||

ಆವನ ಶ್ರವಣ ಮನನ ನಿಧಿಧ್ಯಾಸನ| ಆ ವಿಷ್ಣುವಿನ ಭಕ್ತಿ ಮಹಾ ಪ್ರಸಾದಂಗಳು|
ಕೈವಲ್ಯ ಪದಕೆ ಇಕ್ಕಿದ ನಿಚ್ಚಣಿಕೆಂದು ಭಾವಜ್ಞರು ಪೇಳ್ವರು|
ಜೀವನ ಜವನ ಬಾಧೆಗಳನ್ನು ತಪ್ಪಿಸಿ| ಪಾವನ ವೈಕುಂಠ ಪುರದೊಳಗೆಂದೆಂದು
ಆವಾಸನ ಮಾಡಿ ಸುಖಿಸಬೇಕಾದರೆ| ಸೇವಿಸು ವೈಷ್ಣವರ ||೨||

ದ್ವಾರಾವತಿಯ ಗೋಪಿ ಚಂದನದಿಂದ| ಶ್ರೀರಮಣನ ವರ ನಾಮವ ನೆನೆದೆರಡಾರು
ಊರ್ಧ್ವ ಪುಂಡ್ರಗಳ ಧರಿಸೆಂದು ವೀರ ವೈಷ್ಣವ ಗುರುವ|
ಸೇರಿ ಸಂತಪ್ತ ಸುದರುಶನ ಶಂಖವ ಧಾರಣವನು ಭುಜಯುಗದೊಳು ಮಾಡಿ
ಮುರಾರಿಯ ಮಂತ್ರಗಳ ಅವರಿಂದಲಿ ಕೇಳಿ ಓರಂತೆ ಜಪಿಸುತಲಿ ||೩||

ಕಂದ ಬಾರೆಂದರೆ ನಂದನಿಗೊಲಿದಿಹ| ಕುಂದು ಕೊರತೆ ಬಂದರೆ ನೊಂದುಕೊಳ್ಳನು
ಇಂದಿರೆಯರಸ ಮುಕುಂದನೆ ಮುಕುತಿಯಾನಂದವನೀವ ದೇವ|
ಸಂದೇಹವಿಲ್ಲದೆ ಒಂದೆ ಮನದಿ ಗೋವಿಂದನ ನೆನೆದ ಗಜೇಂದ್ರನಿಗೊಲಿದ ಉಪೇಂದ್ರನ 
ಶುಭಗುಣಸಾಂದ್ರನ ಯದುಕುಲಚಂದ್ರನ ವಂದಿಸಿರೋ ||೪||

ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆ| ಅಷ್ಟಿಷ್ಟು ಎನ್ನದೆ ಸಕಲೇಷ್ಟಂಗಳ|
ಕೊಟ್ಟು ಕಾವನು ಶಕ್ರನಿಗೆ ತ್ರಿವಿಷ್ಟವ| ಪಟ್ಟವ ಗಟ್ಟಿದವ
ನಿಷ್ಟುರನಲ್ಲ ವಿಶಿಷ್ಟರಿಗೊಲಿದಿಹ ದುಷ್ಟರ ತರಿದಟ್ಟಿದ ಜಗಜಟ್ಟಿ ಅರಿಷ್ಟ
ಮುಷ್ಟಿಕಾದ್ಯರ ಹುಡಿಗುಟ್ಟಿದ ವಿಠ್ಠಲ ಬಲು ದಿಟ್ಟ ||೫||

ಆವನ ಪಕ್ಷ ಬಲಕ್ಕಿದಿರಿಲ್ಲ ಕೇಳಾವನ ಕುಕ್ಷಿಯೊಳಕ್ಕು ಜಗತ್ರಯ|
ಆವನು ರಕ್ಷಿಪ ಶಿಕ್ಷಿಪನೋ ಮತ್ತಾವನು ಪಾವನನೋ ಆವನ ಶಿಕ್ಷೆಗೆ ಮಿಕ್ಕವರಿಲ್ಲ|
ಕೇಳಾವನುಪೇಕ್ಷೆ ಕುಲಕ್ಷಯವೆನಿಪುದು| ಆವನುರುಕ್ರಮ ವಿಕ್ರಮನೆನಿಸಿದಾ ದೇವನಿಗಾವನೆಣೆಯೇ ||೬||

ಓಡುವ ಅಡಗುವ ದೇವರೆ ಬಲ್ಲರು| ಕೂಡುವ ನೋಡುವ ಮುಕುತರೆ ಬಲ್ಲರು|
ಬೇಡುವ ಮುನಿಗಳೆ ಬಲ್ಲರು ಅವನೊಡನಾಡುವ ರಮೆ ಬಲ್ಲಳು|
ಊಡುವ ಪಾಡುವ ಯಶೋದೆ ಬಲ್ಲಳು ಕಾಡುವ ಖೂಳರ ಆಡುತ
ಕೆಡಳಿಂನಾಡೊಳು ಶರಣರ ಕೇಡು ಕಳೆವ ಕೃಷ್ಣಗೀಡೆನ್ನದಿರು ಮೂಢ ||೭||

ಹರಿ ನಿರ್ಮಾಲ್ಯವ ಶಿರದಿ ಧರಿಸುತಿರು ಹರಿ ನೈವೇದ್ಯವ ಭುಂಜಿಸುತಿರು ನಿತ್ಯ|
ಇರುಳು ಹಗಲು ಹರಿ ಸ್ಮರಣೆಯ ಬಿಡದಿರು ದುರುಳರ ಕೂಡದಿರು|
ಹರಿ ಪದ ತೀರ್ಥವ ಬಿಡದಿರು ನಿತ್ಯ ಹರಿ ಪರದೇವತೆ ಎಂದೊದರುತಲಿರು|
ಗುರುಮುಖದಿಂದ ಸಚ್ಛಾಸ್ತ್ರ ಪುರಾಣವ ನಿರುತದಿ ಕೇಳುತಿರು ||೮||

ಸಿರಿದೇವಿಯಾವನಿಗರಸಿ ಸುರರ ಗುರು| ವಿರಿಂಚಿ ಪವನರು ಆವನ ಕುವರರು|
ಉರಗಾಧಿಪನಾವನ ಮಂಚ ವಿಹಗೇಶ್ವರನಾವನ ವಾಹನ|
ಪುರಹರನಾವನುಂಗುಟ ನೀರ ಪೊತ್ತ ನಿರ್ಜರ ಪತಿಯಾವನ ಚರಣ ಸೇವಕನಾದ|
ಸುರರೊಳಗಾ ಹಯವದನಗಿನ್ನಾರನು ಸರಿಯೆಂದುಸುರುವೆನಯ್ಯ ||೯||

nArAyaNana nene manavE nArAyaNana nene || pa ||
nArAyaNana mannisu varNisu| ArAdhanegaLa mADuta pADuta| 
nIrAjanadiMda arcisu meccisu pArAyaNa priyana || apa ||

lOkadi varaM varaye BadraMte RutE kaivalya mahAtmanaH 
EkamEvESvara tasmAd BagavAn SrIviShNuravyayaH eMba|
I kaliyugadi bEkAda purANadi vAku vivEkava manadi vicArisi|
svIkarisu vaiShNava matava jIva nirAkarisanya matava ||1||

Avana shravaNa manana nidhidhyAsana| A viShNuvina Bakti mahaa prasAdaMgaLu|
kaivalya padake ikkida niccaNikeMdu BAvaj~jaru pELvaru|
jIvana javana bAdhegaLannu tappisi| pAvana vaikuMTha puradoLageMdeMdu
AvAsana mADi suKisabEkAdare| sEvisu vaiShNavara ||2||

dvArAvatiya gOpi caMdanadiMda| SrIramaNana vara nAmava nenederaDAru
Urdhva puMDragaLa dhariseMdu vIra vaiShNava guruva|
sEri saMtapta sudaruSana SaMKava dhAraNavanu BujayugadoLu mADi
murAriya maMtragaLa avariMdali kELi OraMte japisutali ||3||

kaMda bAreMdare naMdanigolidiha| kuMdu korate baMdare noMdukoLLanu
iMdireyarasa mukuMdane mukutiyAnaMdavanIva dEva|
saMdEhavillade oMde manadi gOviMdana neneda gajEMdranigolida upEMdrana 
shubhaguNasAMdrana yadukulachaMdrana vaMdisirO ||4||

tuShTanahanu eLLaShTu muMdiTTare| aShTiShTu ennade sakalEShTaMgaLa|
koTTu kAvanu Sakranige triviShTava| paTTava gaTTidava
niShTuranalla vishiShTarigolidiha duShTara taridaTTida jagajaTTi ariShTa
muShTikAdyara huDiguTTida viThThala balu diTTa ||5||

Avana pakSha balakkidirilla kELAvana kukShiyoLakku jagatraya|
Avanu rakShipa SikShipanO mattAvanu pAvananO Avana SikShege mikkavarilla|
kELAvanupEkShe kulakShayavenipudu| Avanurukrama vikramanenisidA dEvanigAvaneNeyE ||6||

ODuva aDaguva dEvare ballaru| kUDuva nODuva mukutare ballaru|
bEDuva munigaLe ballaru avanoDanADuva rame ballaLu|
UDuva pADuva yaSOde ballaLu kADuva KULara ADuta
keDaLiMnADoLu SaraNara kEDu kaLeva kRuShNagIDennadiru mUDha ||7||

hari nirmAlyava Siradi dharisutiru hari naivEdyava BuMjisutiru nitya|
iruLu hagalu hari smaraNeya biDadiru duruLara kUDadiru|
hari pada tIrthava biDadiru nitya hari paradEvate eMdodarutaliru|
gurumuKadiMda sacCAstra purANava nirutadi kELutiru ||8||

siridEviyAvanigarasi surara guru| viriMchi pavanaru Avana kuvararu|
uragAdhipanAvana maMca vihagESvaranAvana vAhana|
puraharanAvanuMguTa nIra potta nirjara patiyAvana caraNa sEvakanAda|
suraroLagA hayavadanaginnAranu sariyeMdusuruvenayya ||9||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru